Site icon Vistara News

Money Guide: ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗುವ ಇ-ಶ್ರಮ ಯೋಜನೆ; ಹೀಗೆ ಹೆಸರು ನೋಂದಾಯಿಸಿ

Money Guide

Money Guide

ಬೆಂಗಳೂರು: ಅಸಂಘಟಿತ ವಲಯ (Unorganised sectors)ದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಶ್ರಮ (e-Shram) ಯೋಜನೆ ಜಾರಿಗೆ ತಂದಿದೆ. ಇ-ಶ್ರಮ ಕಾರ್ಡ್ ಮೂಲಕ ಅವರಿಗೆ ಸರ್ಕಾರಗಳ ಕಲ್ಯಾಣ ಯೋಜನೆಗಳನ್ನು ತಲುಪಿಸಿ, ಸಾಮಾಜಿಕ ಭದ್ರತೆ ಕಲ್ಪಿಸಲಾಗುತ್ತಿದೆ. 2021ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಇ-ಶ್ರಮ ಯೋಜನೆ ಮೂಲಕ ದೇಶದ ಸುಮಾರು 38 ಕೋಟಿ ಅಸಂಘಟಿತ ಕಾರ್ಮಿಕರಿಗೆ ನೆರವಾಗುವ ಗುರಿ ಹೊಂದಿದೆ. ರಾಜ್ಯದಲ್ಲೂ ಇ-ಶ್ರಮ ಕಾರ್ಡ್ ವಿತರಿಸಲಾಗುತ್ತಿದೆ. ಹಾಗಾದರೆ ಇ-ಶ್ರಮ ಕಾರ್ಡ್‌ ಎಂದರೇನು? ಹೆಸರು ನೋಂದಾಯಿಸುವುದು ಹೇಗೆ? ಯಾರೆಲ್ಲ ಅರ್ಹರು? ಮುಂತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಏನಿದು ಈ-ಶ್ರಮ ಕಾರ್ಡ್‌?

ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ರಾಷ್ಟೀಯ ದತ್ತಾಂಶವೇ ಈ ಇ-ಶ್ರಮ ಕಾರ್ಡ್. ಅಂದರೆ ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ವೇದಿಕೆ ಇದಾಗಿದೆ. ಇದು ವಿಶಿಷ್ಟ 12-ಅಂಕಿಯ ಗುರುತಿನ ಸಂಖ್ಯೆಯನ್ನು ಒಳಗೊಂಡಿದೆ. ಇದರಲ್ಲಿ ಹೆಸರು, ವಯಸ್ಸು, ಲಿಂಗ, ಉದ್ಯೋಗ ಮತ್ತು ಕೆಲಸಗಾರನ ಕುರಿತು ಇತರ ಅಗತ್ಯ ಮಾಹಿತಿ ಇರುತ್ತದೆ.

ಯಾರೆಲ್ಲ ಅರ್ಹರು?

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‌ಗಳು, ಬೀದಿಬದಿ ವ್ಯಾಪಾರಿಗಳು, ಪತ್ರಿಕೆ ಮಾರಾಟಗಾರರು, ಇಟ್ಟಿಗೆ ಗೂಡು ಕೆಲಸಗಾರರು, ವಲಸೆ ಕಾರ್ಮಿಕರು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸಿರುವ ಸುಮಾರು 379 ವರ್ಗಗಳ ಕಾರ್ಮಿಕರು ತಮ್ಮ ಹೆಸರನ್ನು ಇದರಲ್ಲಿ ನೋಂದಾಯಿಸಬಹುದು. ಜತೆಗೆ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕಾರ್ಮಿಕರು ʼಇತರೆ ವರ್ಗʼಗಳಡಿ ನೋಂದಾಯಿಸಬಹುದು. 16ರಿಂದ 59 ವಯೋಮಾನದವರು, ಆದಾಯ ತೆರಿಗೆ ಪಾವತಿಸದವರು, ಭವಿಷ್ಯನಿಧಿ ಹಾಗೂ ಇಎಸ್​ಐ ಫಲಾನುಭವಿಯಾಗಿರದವರು ಇದಕ್ಕೆ ಅರ್ಹರು.

ಪ್ರಯೋಜನಗಳೇನು?

ಆನ್‌ಲೈನ್‌ ಮೂಲಕ ಮಾಡುವ ವಿಧಾನ

ಆಫ್‌ಲೈನ್‌ನಲ್ಲಿ ನೋಂದಣಿ ಮಾಡುವ ವಿಧಾನ

ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC)ಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಯಶಸ್ವಿ ನೋಂದಣಿಯ ಬಳಿಕ ಫಲಾನುಭವಿಗೆ ಸ್ಥಳದಲ್ಲಿಯೇ ಗುರುತಿನ ಚೀಟಿ ವಿತರಿಸಲಾಗುತ್ತದೆ. ಗಮನಿಸಿ ನೋಂದಣಿಗೆ ಹೆಸರು, ವಿಳಾಸ ಪುರಾವೆ, ವೃತ್ತಿ, ಶೈಕ್ಷಣಿಕ ಮಾಹಿತಿ, ಕುಟುಂಬದ ವಿವರ, ಆಧಾರ್‌ ಕಾರ್ಡ್‌, ವಿದ್ಯುತ್‌ ಬಿಲ್‌, ಜನನ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್‌ ಪಾಸ್‌ಬುಕ್‌ ಮಾಹಿತಿ, ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಮಾಡಿದ ಮೊಬೈಲ್‌ ಸಂಖ್ಯೆ ಇದ್ಯಾದಿ ದಾಖಲೆ ಒದಗಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌-14434ಕ್ಕೆ ಕರೆ ಮಾಡಿ. ಇಮೇಲ್‌ ಐಡಿ- eshramcare-mole@gov.in ಸಂಪರ್ಕಿಸಿ.

ಇದನ್ನೂ ಓದಿ: Money Guide : ತಿಂಗಳಿಗೆ 12 ಸಾವಿರಕ್ಕೂ ಹೆಚ್ಚು ಪಿಂಚಣಿ; ಎಲ್​​ಐಸಿ ಪರಿಚಯಿಸಿದೆ ಹೊಸ ಯೋಜನೆ

Exit mobile version