ಬೆಂಗಳೂರು: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ (Employees Provident Fund-EPF) ಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಾಗ್ಯೂ ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಪಿಎಫ್ ಅಕೌಂಟ್ನಿಂದ ಒಂದಷ್ಟು ದುಡ್ಡು ಹಿಂಪಡೆಯಬಹುದು. ಹೀಗ ಹಣ ಹಿಂಪಡೆಯುವುದು ಈಗ ಸುಲಭ. ಕೂತಲ್ಲಿಯೇ, ಮೊಬೈಲ್ ಮೂಲಕವೇ ಅಪ್ಲೈ ಮಾಡಬಹುದು. ಆ ಕುರಿತಾದ ವಿವರ ಇಲ್ಲಿದೆ (Money Guide).
ಇ-ನಾಮಿನೇಷನ್ ಮಾಡಿಕೊಂಡಿರುವ ಪಿಎಫ್ ಸದಸ್ಯರು ತಮ್ಮ ಖಾತೆಯಿಂದ ಒಂದಷ್ಟು ಮೊತ್ತ, ಅಡ್ವಾನ್ಸ್ ಮತ್ತು ಪೆನ್ಶನ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಇಪಿಎಫ್ಒ ವೆಬ್ಸೈಟ್ ಅಥವಾ ಉಮಾಂಗ್ ಆ್ಯಪ್ ಬಳಸಬಹುದು. ಅದರಲ್ಲಿಯೂ ಉಮಂಗ್ ಆ್ಯಪ್ ಅನ್ನು ಹೆಚ್ಚು ಅನುಕೂಲ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಇದರ ಬಳಕೆಗೆ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಹಣ ವಿತ್ಡ್ರಾ ಮಾತ್ರವಲ್ಲ ಉಮಾಂಗ್ ಆ್ಯಪ್ ಮೂಲಕ ಬ್ಯಾಲೆನ್ಸ್ ಕೂಡ ಚೆಕ್ ಮಾಡಬಹುದು ಎನ್ನುವುದು ವಿಶೇಷ.
ಉಮಾಂಗ್ ಆ್ಯಪ್ ಬಳಕೆಯ ವಿಧಾನ
- ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ನಿಂದ ಉಮಂಗ್ ಆ್ಯಪ್ ಡೌನ್ಲೋಡ್ ಮಾಡಿ.
- ಆ್ಯಪ್ ಓಪನ್ ಮಾಡಿ ಆಧಾರ್ ನಂಬರ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ.
- ಲಾಗಿನ್ ಆದ ಬಳಿಕ ಸರ್ವಿಸ್ ಲಿಸ್ಟ್ನಲ್ಲಿನ EPFO ಆಯ್ಕೆ ಸೆಲೆಕ್ಟ್ ಮಾಡಿ.
- ಈಗ ಪಿಎಫ್ ಬ್ಯಾಲನ್ಸ್, ನಾಮಿನೇಷನ್ ಅಥವಾ ಕೆವೈಸಿ ಅಪ್ಡೇಟ್ ಆಯ್ಕೆ ಕಾಣಿಸಿಕೊಳ್ಳಲಿದ್ದು, ನಿಮಗೆ ಅಗತ್ಯವಿರುವುದನ್ನು ಸೆಲೆಕ್ಟ್ ಮಾಡಿ.
- ಬಳಿಕ ಸ್ಕ್ರೀನ್ನಲ್ಲಿ ಕಾಣಿಸುವ ಸ್ಟೆಪ್ ಫಾಲೋ ಮಾಡಿ.
ಹಣ ವಿತ್ಡ್ರಾ ಮಾಡುವ ವಿಧಾನ
- ಉಮಂಗ್ ಆ್ಯಪ್ ಓಪನ್ ಮಾಡಿ ಆಧಾರ್ ನಂಬರ್, ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
- ಸರ್ವಿಸ್ ಲಿಸ್ಟ್ನಲ್ಲಿನ EPFO ಆಯ್ಕೆ ಸೆಲೆಕ್ಟ್ ಮಾಡಿ.
- Raise Claim ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ಈಗ UAN ನಂಬರ್ ನಮೂದಿಸಿ. ಅದಾದ ಬಳಿಕ ನಿಮ್ಮ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ನಮೂದಿಸಿ.
- ಯಾವ ರೀತಿಯ ವಿತ್ಡ್ರಾ ಅಗತ್ಯ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ
- ಅಗತ್ಯ ಮಾಹಿತಿಗಳನ್ನು ತುಂಬಿ.
ಉಮಾಂಗ್ ಆ್ಯಪ್ ಮೂಲಕ ನೀವು ಪಡೆಯಬಹುದಾದ ಇತರ ಸೇವೆಗಳು
- ಪಿಎಫ್ ಬ್ಯಾಲನ್ಸ್ ಪರಿಶೀಲನೆ
- ಕೆವೈಸಿ ಮಾಹಿತಿಯ ಅಪ್ಡೇಟ್
- ಪಾಸ್ಬುಕ್ ಪರಿಶೀಲನೆ
- ಜೀವನ್ ಪ್ರಮಾಣ್ ಸರ್ಟಿಫಿಕೆಟ್ ಪಡೆಯಲು
- ಪೆನ್ಶನ್ ಪೇಮೆಂಟ್ ಆರ್ಡರ್ (PPO) ಡೌನ್ಲೋಡ್ ಮಾಡಲು
ಇಪಿಎಫ್ ಖಾತೆಯ ವೈಶಿಷ್ಟ್ಯ
- ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
- ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
- ಹೀಗೆ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆಗಳೊಂದಿಗೆ ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ಮೀಸಲಿಡಲಾಗುತ್ತದೆ. ಇದು ಭಾರತದಲ್ಲಿ ಕಡ್ಡಾಯ.
ಇದನ್ನೂ ಓದಿ: Money Guide: ಮೊಬೈಲ್ನಲ್ಲಿಯೇ ಪಿಎಫ್ ಮೊತ್ತ ಪರಿಶೀಲಿಸಬೇಕೆ?; ಜಸ್ಟ್ ಹೀಗೆ ಮಾಡಿ ಸಾಕು