Site icon Vistara News

Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide

Money Guide

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ, ದುಬಾರಿ ಜೀವನ ಶೈಲಿಯಿಂದಾಗಿ ಹಣಕಾಸಿನ ವಿಚಾರದಲ್ಲಿ ಎಲ್ಲರೂ ಎಚ್ಚರಿಕೆ ವಹಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಉಳಿತಾಯ ಮಾಡುವತ್ತ ಗಮನ ಹರಿಸಬೇಕು ಎನ್ನುವುದು ಆರ್ಥಿಕ ತಜ್ಞರ ಸಲಹೆ. ಹಾಗಾದರೆ ಉಳಿತಾಯ, ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದಾದರೆ ಯಾವುದು ಉತ್ತಮ? ಎನ್ನುವ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಇದಕ್ಕೆ ತಜ್ಞರು ನೀಡುವ ಉತ್ತರ ಸಾರ್ವಜನಿಕ ಭವಿಷ್ಯ ನಿಧಿ (Public Provident Fund). ಇದು ಕೇಂದ್ರ ಸರ್ಕಾರ ಬೆಂಬಲಿತ ಪ್ಲಾನ್‌ ಆಗಿದ್ದು, ಸಣ್ಣ ಹೂಡಿಕೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಬೆಂಬಲಿತ ಪ್ಲಾನ್‌ ಆದ ಕಾರಣ ಇಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಅಲ್ಲ ಎನ್ನುವುದು ಬಹು ದೊಡ್ಡ ಪ್ಲಸ್‌ ಪಾಯಿಂಟ್‌. ಪಿಪಿಎಫ್‌ ಖಾತೆ ತೆರೆಯುವವರಿಗೆ ವಾರ್ಷಿಕ ಶೇ. 7.1ರಷ್ಟು ಬಡ್ಡಿ ದೊರೆಯಲಿದೆ. ಅಲ್ಲದೆ ಈ ಹೂಡಿಕೆಯ ಮೂಲಕ ಸಾಲವನ್ನೂ ಪಡೆಯಬಹುದು. ಜತೆಗೆ ತೆರಿಗೆ ವಿನಾಯಿತಿಯೂ ಲಭಿಸುತ್ತದೆ. ವಿಶೇಷ ಎಂದರೆ ನಿಯತಕಾಲಿಕ ಹೂಡಿಕೆಗಳು ಮತ್ತು ಸಂಯೋಜನೆಯ ಮೂಲಕ ನೀವು ಪಿಪಿಎಫ್‌ನಿಂದ 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ (Money Guide).

1 ಕೋಟಿ ರೂ. ಪಡೆಯುವ ವಿಧಾನ

ಹೂಡಿಕೆ ಅವಧಿಒಟ್ಟು ಪಿಪಿಎಫ್‌
ಹೂಡಿಕೆ
ಒಟ್ಟು ಬಡ್ಡಿಮೆಚ್ಯೂರಿಟಿ ಮೊತ್ತ
15 ವರ್ಷ1.5 ಲಕ್ಷ ರೂ.18.18 ಲಕ್ಷ ರೂ.40.68 ಲಕ್ಷ ರೂ.
20 ವರ್ಷ1.5 ಲಕ್ಷ ರೂ.36.58 ಲಕ್ಷ ರೂ.66.58 ಲಕ್ಷ ರೂ.
30 ವರ್ಷ1.5 ಲಕ್ಷ ರೂ.1.09 ಕೋಟಿ ರೂ.1.54 ಕೋಟಿ ರೂ.

ವಿವಿಧ ಅವಧಿಗಳಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ ನಿಮ್ಮ ಮೆಚ್ಯೂರಿಟಿ ಮೊತ್ತವು 40 ಲಕ್ಷ ರೂ.ಯಿಂದ 1.5 ಕೋಟಿ ರೂ.ಗೆ ಹೇಗೆ ಬೆಳೆಯಬಹುದು ಎಂಬುದನ್ನು ಮೇಲಿನ ಉದಾಹರಣೆ ವಿವರಿಸುತ್ತದೆ.

ತೆರಿಗೆ ವಿನಾಯಿತಿ

ಇನ್ನು ಸೆಕ್ಷನ್‌ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಸಿಗಲಿದೆ. ಅಂದರೆ ಯೋಜನೆಯಲ್ಲಿ ಮಾಡಿದ ಸಂಪೂರ್ಣ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಇದಲ್ಲದೆ, ಹೂಡಿಕೆಯಿಂದ ಪಡೆದ ಬಡ್ಡಿಗೂ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಅಲ್ಲದೆ ಯೋಜನೆ ಮುಕ್ತಾಯವಾದ ಬಳಿಕ ಪಡೆದಯುವ ಮೊತ್ತವೂ ತೆರಿಗೆಮುಕ್ತವಾಗಿರುತ್ತದೆ.

ಸಾಲ ಪಡೆಯಲಿರುವ ಅರ್ಹತೆ

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ನಲ್ಲಿ ನೀವು ಮಾಡುವ ಇನ್ವೆಸ್ಟ್‌ಮೆಂಟ್‌ ಮೇಲೆ ಸಾಲ ಪಡೆಯಬಹುದು. ಖಾತೆ ತೆರೆದ 3-6ನೇ ವರ್ಷದಲ್ಲಿ ಸಾಲ ಪಡೆಯಲು ನೀವು ಅರ್ಹರಾಗಿರುತ್ತೀರಿ. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಮೊತ್ತವನ್ನು ಮಾತ್ರ ಸಾಲಕ್ಕಾಗಿ ಕ್ಲೈಮ್‌ ಮಾಡಿಕೊಳ್ಳಬಹುದು.‌

ಯಾರೆಲ್ಲ ತೆರೆಯಬಹುದು?

ಭಾರತೀಯ ನಾಗರಿಕರು ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯುವ ಸೌಕರ್ಯವಿದೆ. ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ. ಆದರೆ 5 ವರ್ಷಗಳ ಹೆಚ್ಚುವರಿ ಅವಧಿ ಇರುವುದಿಲ್ಲ. ಈ ಯೋಜನೆಯಲ್ಲಿ ನೀವು ವರ್ಷಕ್ಕೆ ಕನಿಷ್ಠ 500 ರೂ ಮತ್ತು ಗರಿಷ್ಠ 1.5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು. ಒಂದು ಹಣಕಾಸು ವರ್ಷದಲ್ಲಿ ನೀವು ಗರಿಷ್ಠ 12 ಕಂತುಗಳಲ್ಲಿ ಹಣವನ್ನು ಠೇವಣಿ ಇಡುವ ಸೌಲಭ್ಯವೂ ಇದೆ. ಆಫ್‌ಲೈನ್‌ ಹಾಗೂ ಆನ್‌ಲೈನ್‌ ವಿಧಾನದಲ್ಲಿ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. 

ಇದನ್ನೂ ಓದಿ: Money Guide: ತೆರಿಗೆ ವಿನಾಯಿತಿ ಪಡೆಯಬೇಕೆ? ಮಾ. 31ರೊಳಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ

Exit mobile version