Money Guide: ಪಿಪಿಎಫ್‌, ಎಸ್‌ಸಿಎಸ್‌ಎಸ್‌, ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌ ನಿಯಮದಲ್ಲಿ ಬದಲಾವಣೆ - Vistara News

ಮನಿ-ಗೈಡ್

Money Guide: ಪಿಪಿಎಫ್‌, ಎಸ್‌ಸಿಎಸ್‌ಎಸ್‌, ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌ ನಿಯಮದಲ್ಲಿ ಬದಲಾವಣೆ

Money Guide: ಇದೀಗ ಸರ್ಕಾರ ಕೆಲವೊಂದು ಸಣ್ಣ ಉಳಿತಾಯ ಖಾತೆಗಳ ನಿಯಮಗಳಲ್ಲಿ ಬದಲಾವಣೆ ತಂದಿದೆ. ಪಬ್ಲಿಕ್‌ ಪ್ರೊವಿಡೆಂಟ್‌ ಫಂಡ್‌, ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಮ್‌ ಮತ್ತು ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌ನಲ್ಲಿ ಈ ಬದಲಾವಣೆ ತರಲಾಗಿದೆ. ಆ ಕುರಿತಾದ ಮಾಹಿತಿ ಇಲ್ಲಿದೆ.

VISTARANEWS.COM


on

savings new
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಣ್ಣ ಉಳಿತಾಯ ಯೋಜನೆಗಳ ಹೂಡಿಕೆಯು ತೆರಿಗೆ ಪ್ರಯೋಜನಗಳನ್ನು ಪಡೆಯಲು ನೆರವಾಗುತ್ತವೆ. ಆದ್ದರಿಂದಲೇ ಹಲವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಇದೀಗ ಸರ್ಕಾರ ಕೆಲವೊಂದು ಸಣ್ಣ ಉಳಿತಾಯ ಖಾತೆಗಳ ನಿಯಮಗಳಲ್ಲಿ ಬದಲಾವಣೆ ತಂದಿದೆ. ಪಬ್ಲಿಕ್‌ ಪ್ರೊವಿಡೆಂಟ್‌ ಫಂಡ್‌ (PPF), ಸೀನಿಯರ್‌ ಸಿಟಿಜನ್ಸ್‌ ಸೇವಿಂಗ್ಸ್‌ ಸ್ಕೀಮ್‌ (SCSS) ಮತ್ತು ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌ (Post Office Savings Account)ನಲ್ಲಿ ಈ ಬದಲಾವಣೆ ತರಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮನಿಗೈಡ್‌ (Money Guide)ನಲ್ಲಿದೆ.

ಸಣ್ಣ ಉಳಿತಾಯ ಖಾತೆಗಳನ್ನು ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಡಿಪಾರ್ಟ್‌ಮೆಂಟ್‌ ಆಫ್‌ ಎಕಾನಿಮಿಕ್‌ ಅಫೈರ್ಸ್‌ (DEA) ಮೇಲ್ವಿಚಾರಣೆ ನಡೆಸುತ್ತಿದೆ. ಪ್ರಸ್ತುತ ಸರ್ಕಾರ ಒಂಬತ್ತು ರೀತಿಯ ಸಣ್ಣ ಉಳಿತಾಯ ಖಾತೆಗಳನ್ನು ಒದಗಿಸುತ್ತಿದೆ. ರಿಕರಿಂಗ್‌ ಡೆಪಾಸಿಟ್‌ (RD), ಪಿಪಿಎಫ್‌, ಸುಕನ್ಯಾ ಸಮೃದ್ಧಿ ಯೋಜನೆ (SSY), ಮಹಿಳಾ ಸಮ್ಮಾನ್‌ ಸೇವಿಂಗ್‌ ಸರ್ಟಿಫಿಕೆಟ್‌ (MSSC), ಕಿಸಾನ್‌ ವಿಕಾಸ್‌ ಪತ್ರ (KVP), ನ್ಯಾಷನಲ್‌ ಸೇವಿಂಗ್ಸ್‌ ಸರ್ಟಿಫಿಕೆಟ್‌ (NSC) ಮತ್ತು ಎಸ್‌ಸಿಎಸ್‌ಎಸ್‌ ಯೋಜನೆಗಳನ್ನು ಜಾರಿಗೊಳಿಸಿದೆ.

ಬದಲಾವಣೆಗಳೇನು?

ಎಸ್‌ಸಿಎಸ್‌ಎಸ್‌ ಯೋಜನೆಯಲ್ಲಿ ಸರ್ಕಾರ ಹಲವು ಬದಲಾವಣೆಗಳನ್ನು ತಂದಿದೆ. ಅವುಗಳೇನು ಎನ್ನುವುದರ ವಿವರ ಇಲ್ಲಿದೆ.

ಹೊಸ ನಿಯಮದ ಪ್ರಕಾರ ಖಾತೆಯನ್ನು ತೆರೆಯಲು ಪ್ರಸ್ತುತ ಒಂದು ತಿಂಗಳ ಸಮಯದ ಬದಲು ಮೂರು ತಿಂಗಳ ಅವಕಾಶವನ್ನು ಒದಗಿಸಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿಯು ನಿವೃತ್ತಿ ಹೊಂದಿದ ದಿನಾಂಕದಿಂದ ಮೂರು ತಿಂಗಳೊಳಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಹಿಂದೆ ನಿವೃತ್ತಿ ಹೊಂದಿದ ಬಳಿಕ ಆ ಹಣವನ್ನು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಒಂದು ತಿಂಗಳೊಳಗೆ ಹೂಡಿಕೆ ಮಾಡಬೇಕಿತ್ತು. ಅಲ್ಲದೆ ಹೊಸ ಅಧಿಸೂಚನೆಯು, ಸರ್ಕಾರಿ ಉದ್ಯೋಗಿಯ ಸಂಗಾತಿಯೂ ಯೋಜನೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಹೂಡಿಕೆಯ ಒಂದು ವರ್ಷದ ಮುಕ್ತಾಯದ ಮೊದಲು ಖಾತೆಯನ್ನು ಮುಚ್ಚಿದರೆ ಠೇವಣಿಯ ಒಂದು ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ.

ಪಿಪಿಎಫ್‌ ಯೋಜನೆಯಲ್ಲಿನ ಬದಲಾವಣೆ

ಪಿಪಿಎಫ್‌ ಖಾತೆಗಳನ್ನು ಅಕಾಲಿಕವಾಗಿ ಮುಚ್ಚುವಾಗ ಇರುವ ನಿಯಮಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಇದು ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಯೋಜನೆಯಡಿ ಅಕಾಲಿಕ ಹಿಂಪಡೆಯುವಿಕೆಗೆ ಸಂಬಂಧಿಸಿದ ಹೊಂದಾಣಿಕೆಗಳನ್ನು ತಿಳಿಸುತ್ತದೆ. ಪಿಪಿಎಫ್ ಮೆಚ್ಯೂರಿಟಿ ಅವಧಿಗೆ ಮುನ್ನ ಒಬ್ಬ ಖಾತೆದಾರ ಮೂರು ಕಾರಣಗಳಿಗೆ ಹಣ ಹಿಂಪಡೆಯಲು ಅವಕಾಶ ನೀಡಲಾಗಿದೆ. ಖಾತೆದಾರ ಅಥವಾ ಅವಲಂಬಿತರಿಗೆ ಮಾರಕ ಕಾಯಿಲೆ ಬಂದಿದ್ದರೆ, ಉನ್ನತ ಶಿಕ್ಷಣ ಪಡೆಯಬೇಕಿದ್ದರೆ ಅಥವಾ ಹೊರದೇಶಕ್ಕೆ ವಲಸೆ ಹೋಗುತ್ತಿದ್ದರೆ ಪಿಪಿಎಫ್ ಹಣವನ್ನು ಮೆಚ್ಯೂರಿಟಿಗೆ ಮುನ್ನ ವಿತ್​ಡ್ರಾ ಮಾಡಿಕೊಳ್ಳಬಹುದು.

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದೀರಾ? ಈ ತಂತ್ರ ಅನುಸರಿಸಿ

ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಅಕೌಂಟ್‌

ಐದು ವರ್ಷದ ಅವಧಿಯ ಪೋಸ್ಟ್‌ ಆಫೀಸ್‌ ಠೇವಣಿಯನ್ನು ನಾಲ್ಕು ವರ್ಷದ ಬಳಿಕ ಹಿಂಪಡೆದರೆ ಹೊಸ ನಿಯಮದ ಪ್ರಕಾರ ಐದು ವರ್ಷದ ಸ್ಕೀಮ್​ಗೆ ಇರುವ ಬಡ್ಡಿಯೇ ಈ ಪ್ರೀಮೆಚ್ಯೂರ್ ವಿತ್​ಡ್ರಾಯಲ್ ಮೊತ್ತಕ್ಕೂ ಅನ್ವಯವಾಗುತ್ತದೆ. ಹಿಂದಿನ ನಿಯಮದ ಪ್ರಕಾರ ಮೂರು ವರ್ಷದ ಸ್ಕೀಮ್​ನಲ್ಲಿರುವಷ್ಟು ಬಡ್ಡಿ ಮಾತ್ರವೇ ಅನ್ವಯ ಆಗುತ್ತಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಎಟಿಎಂ ಬಳಸುತ್ತೀರಾ? ಹಾಗಾದರೆ ಈ ಅಂಶ ನಿಮಗೆ ತಿಳಿದಿರಲೇ ಬೇಕು

Money Guide: ತಂತ್ರಜ್ಞಾನ ಮುಂದುವರಿದಂತೆ ವಂಚಕರ ಸಂಖ್ಯೆಯೂ ಹೆಚ್ಚುತ್ತಿದೆ. ಎಲ್ಲಿಯೋ ಕುಳಿತ ವಂಚಕರು ಇನ್ನೆಲ್ಲಿಯೋ ತಮ್ಮ ಬಲೆಯನ್ನು ಬೀಸುತ್ತಾರೆ. ಇದಕ್ಕೆ ಎಟಿಎಂ ಕೂಡ ಹೊರತಲ್ಲ. ಹೀಗಾಗಿ ಎಟಿಎಂ ಬಳಸುವಾಗ ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎನ್ನುವ ವಿವರ ಇಲ್ಲಿದೆ.

VISTARANEWS.COM


on

atm
Koo

ಬೆಂಗಳೂರು: ಸದ್ಯ ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ (Digital Payment) ವಿಧಾನ ಜನಪ್ರಿಯಗೊಂಡಿದೆ. ಮಾಲ್‌ಗಳಿಂದ ಹಿಡಿದು ತಳ್ಳುಗಾಡಿಯವರೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (UPI) ಮೂಲಕ ವ್ಯವಹಾರ ನಡೆಸಲಾಗುತ್ತದೆ. ನಗರ, ಗ್ರಾಮಾಂತರ ಪ್ರದೇಶವೆಂಬ ಬೇಧವಿಲ್ಲದೆ ಬಹುತೇಕರು ಡಿಜಿಟಲ್‌ ಪೇಮೆಂಟ್‌ ಬಳಸುತ್ತಿದ್ದಾರೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಅಮೆಜಾನ್ ಪೇ ಹಾಗೂ ಇತರ ಪಾವತಿ ವ್ಯವಸ್ಥೆಗಳು ಭಾರತದಲ್ಲಿ ಯುಪಿಐ ಬಳಕೆಯನ್ನು ವ್ಯಾಪಕಗೊಳಿಸಿವೆ. ಅದಾಗ್ಯೂ ಕೆಲವೊಂದು ಕಡೆ ನಗದು ಬಳಕೆ ಅನಿವಾರ್ಯ. ಈ ಹಿನ್ನೆಲೆಯಲ್ಲಿ ನಾವು ಎಟಿಎಂ ಬಳಸುವಾಗ ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎನ್ನುವುದರ ವಿವರ ಇಲ್ಲಿದೆ (Money Guide).

ಎಟಿಎಂ ವಹಿವಾಟಿನ ಸಮಯದಲ್ಲಿನ ನಮ್ಮ ಅತೀ ಚಿಕ್ಕ ನಿರ್ಲಕ್ಷ್ಯ ಮುಂದೆ ಅತೀ ದೊಡ್ಡ ನಷ್ಟಕ್ಕೆ ಕಾರಣವಾಗಬಲ್ಲದು. ಅದರಲ್ಲೂ ಇತ್ತೀಚೆಗೆ ಸೈಬರ್‌ ಅಪರಾಧ ಹೆಚ್ಚಿಸುವ ಹಿನ್ನಲೆಯಲ್ಲಿ ಎಟಿಎಂ ಬಳಸುವಾಗ ಸುರಕ್ಷತೆ ಮತ್ತು ಭದ್ರತೆಯತ್ತ ಗಮನ ಹರಿಸುವುದು ಅತೀ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಜತೆಗೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎನ್ನುವ ಬಗ್ಗೆ ಟಿಪ್ಸ್‌ ಅನ್ನೂ ನೀಡುತ್ತಾರೆ.

ಭಾರತದಲ್ಲಿ ಪ್ರತಿ ದಿನ ಲಕ್ಷಾಂತರ ಮಂದಿ ನಗದು ವಹಿವಾಟಿಗಾಗಿ ಎಟಿಎಂ ಬಳಸುತ್ತಾರೆ. ಹೀಗಾಗಿ ಈ ಸಂಬಂಧಿತ ವಂಚನೆಯ ಅಪಾಯವು ಗಮನಾರ್ಹವಾಗಿ ಅಧಿಕ. ಕೆಲವು ಬಾರಿ ಹೀಗೆ ಕಳವಾದ ನಗದು ಮರಳಿ ಪಡೆಯಲು ಸಾಧ್ಯವಾಗುತ್ತದೆಯಾದರೂ ಇದರ ಪ್ರಕ್ರಿಯೆ ದೀರ್ಘ ಮತ್ತು ಸವಾಲಿನಿಂದ ಕೂಡಿರುತ್ತದೆ. ಇದು ಮತ್ತಷ್ಟು ಒತ್ತಡ ಮತ್ತು ಅನಾನುಕೂಲತೆಯನ್ನು ಉಂಟು ಮಾಡುತ್ತದೆ.

ಹೀಗೆ ಮಾಡಿ

 • ಸುರಕ್ಷಿತ ಪ್ರದೇಶವನ್ನು ಆಯ್ದುಕೊಳ್ಳಿ: ಜನ ಸಂಚಾರ ಅಧಿಕವಿರುವ ಪ್ರದೇಶದಲ್ಲಿನ ಎಟಿಎಂಗಳನ್ನೇ ಆಯ್ದುಕೊಳ್ಳಿ. ಅದರಲ್ಲೂ ಸೆಕ್ಯುರಿಟಿ ಗಾರ್ಡ್‌ ಇರುವ ಎಟಿಎಂ ನಿಮ್ಮ ಆದ್ಯತೆಯಾಗಿರಲಿ. ಜನ ಸಂಚಾರ ಅಷ್ಟಾಗಿ ಇರದ, ಮಂದ ಬೆಳಕಿರುವ ಪ್ರದೇಶದ ಎಟಿಎಂಗೆ ಅದರಲ್ಲೂ ತಡರಾತ್ರಿಯಲ್ಲಿ ತೆರಳಲೇಬೇಡಿ.
 • ಪರಿಶೀಲಿಸಿ: ಎಟಿಎಂ ಯಂತ್ರವನ್ನು ಹ್ಯಾಕ್‌ ಮಾಡಿರುವ ಸಾಕಷ್ಟು ಉದಾಹರಣೆ ಈ ಹಿಂದೆ ವರದಿಯಾಗಿದೆ. ಹೀಗಾಗಿ ಎಟಿಎಂ ಬಳಸುವ ಮುನ್ನ ಯಂತ್ರದ ಬಳಿ ಅನುಮಾನಾಸ್ಪದ ವಸ್ತುಗಳಿವೆಯೇ ಎನ್ನುವುದು ಪರಿಶೀಲಿಸಿ. ಯಂತ್ರಕ್ಕೆ ಹಾನಿಯಾಗಿದ್ದರೆ ಬಳಸಲೇ ಬೇಡಿ. ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತನ್ನಿ.
 • ಪಿನ್‌ ಗೌಪ್ಯವಾಗಿರಲಿ: ಯಾವತ್ತೂ ಕೈಯಿಂದ ಮರೆಮಾಡಿ, ಯಾರಿಗೂ ಕಾಣಿಸದಂತೆ ಪಿನ್‌ ನಂಬರ್‌ ನಮೂದಿಸಿ. ಯಾವುದೇ ಕಾರಣಕ್ಕೂ, ಯಾರ ಬಳಿಯೂ ಪಿನ್‌ ನಂಬರ್‌ ಹಂಚಿಕೊಳ್ಳಬೇಡಿ.
 • ಸಮೀಪ ಯಾರೂ ಇರದಂತೆ ನೋಡಿಕೊಳ್ಳಿ: ನೀವು ನಗದು ಪಡೆಯಲು ತೆರೆಳುವಾಗ ನಿಮ್ಮ ತೀರಾ ಸಮೀಪದಲ್ಲಿ ಯಾರೂ ಇಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಿ.
 • ವಹಿವಾಟು ವಿವರ ಗೌಪ್ಯವಾಗಿರಲಿ: ನಿಮ್ಮ ವಹಿವಾಟಿನ ವಿವರಗಳನ್ನು ಚರ್ಚಿಸುವುದನ್ನು ಅಥವಾ ಎಟಿಎಂನಿಂದ ಪಡೆದ ಹಣವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ತಪ್ಪಿಸಿ. ನಿಮ್ಮ ವಹಿವಾಟಿನ ರಸೀದಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಿ.
 • ಕಾರ್ಡ್‌ ಮರೆಯದೇ ಕಲೆಕ್ಟ್‌ ಮಾಡಿ: ನಗದು ಪಡೆದ ಬಳಿಕ ಮರೆಯದೇ ಕಾರ್ಡ್‌ ಕಲೆಕ್ಟ್‌ ಮಾಡಿ.
 • ಬ್ಯಾಂಕ್‌ ಮೆಸೇಜ್‌ ನಿರ್ಲಕ್ಷಿಸಬೇಡಿ: ನಿಮಗೆ ಗೊತ್ತಿಲ್ಲದಂತೆ ನಗದು ವ್ಯವಹಾರ ನಡೆದಿರುವ ಬಗ್ಗೆ ಮೆಸೇಜ್‌ ಬಂದರೆ ಕೂಡಲೇ ಬ್ಯಾಂಕ್‌ನ ಗಮನಕ್ಕೆ ತನ್ನಿ.
 • ಅಲರ್ಟ್‌ ಸೌಲಭ್ಯ ಪಡೆದುಕೊಳ್ಳಿ: ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ನೀಡುವ ಎಸ್‌ಎಂಎಸ್‌, ಇಮೇಲ್‌ ಅಲರ್ಟ್‌ ಸೌಲಭ್ಯ ಪಡೆದುಕೊಳ್ಳಿ.
 • ಕಳೆದು ಹೋದರೆ ಬ್ಲಾಕ್‌ ಮಾಡಿ: ಒಂದು ವೇಳೆ ನಿಮ್ಮ ಡೆಬಿಟ್‌ ಕಾರ್ಡ್‌ ಕಳೆದು ಹೋದರೆ ಅಥವಾ ಕಳವಾದರೆ ಕೂಡಲೆ ಬ್ಯಾಂಕ್‌ನವರ ಗಮನಕ್ಕೆ ತಂದು ಬ್ಲಾಕ್‌ ಮಾಡಿ.

ಇದನ್ನೂ ಮರೆಯಬೇಡಿ

 • ನಿಯಮಿತವಾಗಿ ಪಿನ್‌ ನಂಬರ್‌ ಬದಲಾಯಿಸಿ.
 • ಡೆಬಿಟ್‌ ಕಾರ್ಡ್‌ ಅಥವಾ ಬೇರೆಲ್ಲೂ ಯಾವ ಕಾರಣಕ್ಕೂ ಪಿನ್‌ ನಂಬರ್‌ ಬರೆದಿಡಬೇಡಿ. ಪಿನ್‌ ನಂಬರ್‌ ನಿಮ್ಮ ನೆನಪಿನಲ್ಲಿರಲಿ.
 • ನೆನಪಿರಲಿ ಬ್ಯಾಂಕ್‌ / ಆರ್‌ಬಿಐ / ಸರ್ಕಾರ ಯಾವತ್ತೂ, ಯಾವ ಕಾರಣಕ್ಕೂ ನಿಮ್ಮ ಪಿನ್‌ ನಂಬರ್‌ ಕೇಳುವುದಿಲ್ಲ. ಸೈಬರ್‌ ವಂಚಕರು ಕರೆ ಮಾಡಿ ಪಿನ್‌ / ಒಟಿಪಿ ಕೇಳಿದರೆ ಯಾವ ಕಾರಣಕ್ಕೂ ನೀಡಬೇಡಿ.
 • ನಗದು ಎನ್‌ಕ್ಯಾಶ್‌ ಮಾಡಲು ತೆರಳಿದಾಗ ಅಪರಿಚಿತರು ಸಮೀಪ ಬರದಂತೆ ನೋಡಿಕೊಳ್ಳಿ.
 • ಮಾಲ್‌ / ಹೋಟೆಲ್‌ / ಅಂಗಡಿಗಳಲ್ಲಿ ನಿಮ್ಮ ಉಪಸ್ಥಿತಿಯಲ್ಲೇ ಕಾರ್ಡ್‌ ಸ್ಲೈಪ್‌ ಮಾಡುವಂತಿರಬೇಕು.

ಇದನ್ನೂ ಓದಿ: Money Guide: 436 ರೂ. ಪ್ರೀಮಿಯಂ ಮೊತ್ತಕ್ಕೆ 2 ಲಕ್ಷ ರೂ. ಕವರ್‌; ಏನಿದು ಪಿಎಂಜೆಜೆಬಿ ಯೋಜನೆ? ಯಾರಿಗೆಲ್ಲ ಅನುಕೂಲ?

Continue Reading

ಮನಿ-ಗೈಡ್

Money Guide: ನಿಮ್ಮ ಮಕ್ಕಳ ಭವಿಷ್ಯ ಸುಭದ್ರಗೊಳಿಸಲಿದೆ ಎಲ್‌ಐಸಿಯ ಅಮೃತ್‌ಬಾಲ್ ಪಾಲಿಸಿ; ಏನಿದು ಯೋಜನೆ?

Money Guide: ಮಕ್ಕಳ ಉನ್ನತ ಶಿಕ್ಷಣ ಮತ್ತು ಇತರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಎಲ್‌ಐಸಿ ಇತ್ತೀಚೆಗೆ ಪರಿಚಯಿಸಿದ ಯೋಜನೆ ಅಮೃತ್‌ಬಾಲ್ ಪಾಲಿಸಿ. ಇದರ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

VISTARANEWS.COM


on

Amritbaal
Koo

ಬೆಂಗಳೂರು: ಆಧುನಿಕ ಕಾಲಘಟ್ಟದಲ್ಲಿ ಜೀವ ವಿಮೆ ಮಾಡಿಸುವುದು ಅತೀ ಮುಖ್ಯ ಎಂದು ಆರ್ಥಿಕ ತಜ್ಞರು ಪದೇ ಪದೆ ಹೇಳುತ್ತಿರುತ್ತಾರೆ. ಅನಿರೀಕ್ಷಿತ ಆಘಾತ, ಖರ್ಚಿನಿಂದ ಇದು ನಮ್ಮನ್ನು ರಕ್ಷಿಸುತ್ತದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ಇನ್ಶೂರೆನ್ಸ್‌ ಹೊಂದಿರಬೇಕು ಎಂದು ಸಲಹೆ ನೀಡಲಾಗುತ್ತದೆ. ಅದಕ್ಕೆ ತಕ್ಕಂತೆ ವಿವಿಧ ಕಂಪೆನಿಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿವಿಧ ಯೋಜನೆಗಳನ್ನು ಪರಿಚಯಿಸುತ್ತವೆ. ದೊಡ್ಡವರು ಮಾತ್ರವಲ್ಲ ಮಕ್ಕಳೂ ಇನ್ಶೂರೆನ್‌ ಹೊಂದಿರಬೇಕು ಎನ್ನುವ ಉದ್ದೇಶದಿಂದ ಇದೀಗ ಭಾರತೀಯ ಜೀವ ವಿಮಾ ನಿಗಮ (LIC) ಪಾಲಿಸಿಯೊಂದನ್ನು ಪರಿಚಯಿಸಿದೆ. ಅಮೃತ್‌ಬಾಲ್ (Amritbaal) ಹೆಸರಿನ ಈ ಯೋಜನೆಯನ್ನು ಮಕ್ಕಳ ಉನ್ನತ ಶಿಕ್ಷಣ ಮತ್ತು ಇತರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಮಕ್ಕಳ ಭವಿಷ್ಯವನ್ನು ಭದ್ರಪಡಿಸುವ ಈ ಪಾಲಿಸಿಯು ವೈಯಕ್ತಿಕ ಉಳಿತಾಯ ಜೀವ ವಿಮಾ ಯೋಜನೆಯಾಗಿದೆ. ಇದರ ವಿಶಿಷ್ಟ್ಯ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಯಾರೆಲ್ಲ ಅರ್ಹರು?

ಮಕ್ಕಳಿಗೆಂದೇ ರೂಪಿಸಿರುವ ಅಮೃತ್‌ಬಾಲ್ ಯೋಜನೆಯಲ್ಲಿ 1 ತಿಂಗಳ ಹಸುಳೆಯ ಹೆಸರನ್ನೂ ನೋಂದಾಯಿಸಬಹುದು ಎನ್ನುವುದು ವಿಶೇಷ. ಗರಿಷ್ಠ ವಯೋಮಿತಿ 13 ವರ್ಷ. ಇದು ವಿಮಾ ಸುರಕ್ಷತೆ ಜತೆಗೆ ಖಾತರಿಯ ಆದಾಯವನ್ನೂ ನೀಡುತ್ತದೆ. ಮೆಚ್ಯೂರಿಟಿ ಅವಧಿ 18ರಿಂದ 25 ವರ್ಷ. ಬಯಸಿದಲ್ಲಿ ಮೆಚ್ಯೂರಿಟಿ ಮೊತ್ತವನ್ನು ಕಂತುಗಳಲ್ಲಿ ಸ್ವೀಕರಿಸಲು ಅವಕಾಶವೂ ಇದೆ.

ಅವಧಿ

ಈ ಯೋಜನೆಯು ಏಕ ಪ್ರೀಮಿಯಂ ಮತ್ತು ಸೀಮಿತ ಪ್ರೀಮಿಯಂ ಪಾವತಿ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ. ಪಾಲಿಸಿ ಅವಧಿಯು 5ರಿಂದ 25 ವರ್ಷ. ಸಣ್ಣ ಪ್ರೀಮಿಯಂ ಪಾವತಿಗಾಗಿ 5, 6 ಮತ್ತು 7 ವರ್ಷಗಳ ಆಯ್ಕೆಗಳು ಲಭ್ಯ. ದೀರ್ಘ ಪ್ರೀಮಿಯಂ ಪಾವತಿಯನ್ನು 25 ವರ್ಷಗಳವರೆಗೆ ವಿಸ್ತರಿಸಬಹುದು. ಇಲ್ಲಿ ಬೇಸಿಕ್ ಸಮ್ ಅಶೂರ್ಡ್ ಮೊತ್ತ ಕನಿಷ್ಠ 2 ಲಕ್ಷ ರೂ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪಾಲಿಸಿ ಮಾಡಿಸಬಹುದು. ಅದಕ್ಕೆ ಮಿತಿ ಇಲ್ಲ.

ಫೆಬ್ರವರಿ 17ರಿಂದ ಆರಂಭವಾದ ಈ ವೈಯಕ್ತಿಕ ಉಳಿತಾಯದ ಜೀವ ವಿಮಾ ಯೋಜನೆಯನ್ನು ಆಫ್‌ಲೈನ್‌ ಮತ್ತು ಆನ್‌ಲೈನ್‌ ಮೂಲಕವೂ ಖರೀದಿಸಬಹುದು. ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ರಿಯಾಯಿತಿ ಲಭ್ಯವಿದೆ. ʼʼಅಮೃತ್‌ಬಾಲ್ ಪಾಲಿಸಿಯು ಮಗುವಿನ ಅಗತ್ಯತೆಗಳನ್ನು ಪೂರೈಸಲು ಸಾಕಷ್ಟು ಹಣ ಒದಗಿಸಲಿದೆʼʼ ಎಂದು ಎಲ್‌ಐಸಿ ತಿಳಿಸಿದೆ. ಹೆಚ್ಚುವರಿಯಾಗಿ ಪಾಲಿಸಿಯು ಮರಣ ನಂತರದ ಪ್ರಯೋಜನವನ್ನು ನೀಡುತ್ತದೆ.

ಸಾಲ ಸೌಲಭ್ಯ

ವಿಶೇಷ ಎಂದರೆ ಈ ಪಾಲಿಸಿ ಮುಖಾಂತರ ಸಾಲ ಪಡೆದುಕೊಳ್ಳುವ ಆಯ್ಕೆಯೂ ಲಭ್ಯ. ಕನಿಷ್ಠ 2 ಪೂರ್ಣ ವರ್ಷಗಳ ಪ್ರೀಮಿಯಂ ಪಾವತಿಸಿದ್ದರೆ ಪಾಲಿಸಿ ಅವಧಿಯ ಯಾವುದೇ ಸಮಯದಲ್ಲಿ ಸಾಲವನ್ನು ಪಡೆಯಬಹುದು ಎಂದು ಎಲ್‌ಐಸಿ ತಿಳಿಸಿದೆ.

ಇದನ್ನೂ ಓದಿ: Money Guide: ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿವರೆಗೆ; ಈ ತಿಂಗಳಿನಿಂದ ಏನೆಲ್ಲ ಬದಲಾವಣೆ?

ನೀವು ಹತ್ತಿರದ ಎಲ್ಐಸಿಯ ಶಾಖಾ ಕಚೇರಿಗೆ ಭೇಟಿ ನೀಡಿ ಅಗತ್ಯವಿರುವ ಎಲ್ಲ ಮಾಹಿತಿ, ಡಾಕ್ಯುಮೆಂಟ್‌ ನೀಡಿ ಮಗುವಿನ ಹೆಸರು ನೋಂದಾಯಿಸಬಹುದು. ಏಜೆಂಟರು ಅಥವಾ ಮಧ್ಯವರ್ತಿಗಳ ಮೂಲಕವೂ ಪಾಲಿಸಿಯನ್ನು ಖರೀದಿಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: 436 ರೂ. ಪ್ರೀಮಿಯಂ ಮೊತ್ತಕ್ಕೆ 2 ಲಕ್ಷ ರೂ. ಕವರ್‌; ಏನಿದು ಪಿಎಂಜೆಜೆಬಿ ಯೋಜನೆ? ಯಾರಿಗೆಲ್ಲ ಅನುಕೂಲ?

Money Guide: ಪ್ರಧಾನ ಮಂತ್ರಿ ನರೇಂದ್ರ ಮೋದಿ 2015ರಲ್ಲಿ ಪರಿಚಯಿಸಿದ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯಿಂದ ಜನ ಸಾಮಾನ್ಯರಿಗೆ ಅನುಕೂಲವಾಗಿದೆ. ಹಾಗಾದರೆ ಏನಿದು ಯೋಜನೆ? ಯಾರೆಲ್ಲ ಸೇರಬಹುದು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

insurence
Koo

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ 2015ರಲ್ಲಿ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ (Pradhan Mantri Jeevan Jyoti Bima Yojana)ಯನ್ನು ಪರಿಚಯಿಸಿದ್ದು, ಸಾವಿರಾರು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಜೀವ ವಿಮೆ ಯೋಜನೆ ಪಾಲಿಸಿದಾರ ಆಕಸ್ಮಿಕವಾಗಿ ಮರಣ ಹೊಂದಿದರೆ ನಾಮಿನಿಗೆ 2 ಲಕ್ಷ ರೂ. ಸಿಗುತ್ತದೆ. ಒಂದು ವರ್ಷ ಅವಧಿಯ ಈ ಯೋಜನೆಯನ್ನು ಪ್ರತಿ ವರ್ಷ ನವೀಕರಿಸಲೂ ಬಹುದು. ಈ ಯೋಜನೆಯನ್ನು ಬ್ಯಾಂಕ್‌ / ಅಂಚೆ ಕಚೇರಿ ಮೂಲಕ ಆರಂಭಿಸಬಹುದು. ಜೀವ ವಿಮಾ ಕಂಪೆನಿಗಳು ಇವುಗಳನ್ನು ನಿರ್ವಹಿಸುತ್ತವೆ. 18ರಿಂದ 50 ವರ್ಷದೊಳಗಿನ ಎಲ್ಲರೂ ಈ ಯೋಜನೆಗೆ ಅರ್ಹರು. ಈ ಬಗ್ಗೆ ವಿವರವಾದ ಮಾಹಿತಿ ಮನಿಗೈಡ್‌ (Money Guide)ನಲ್ಲಿದೆ.

ಪ್ರೀಮಿಯಂ ಮೊತ್ತ

ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯಲ್ಲಿ ಪ್ರತಿ ವರ್ಷ 436 ರೂ. ಪಾವತಿಸದರೆ ಸಾಕು. ಪಾಲಿಸಿದಾರ ಯಾವುದೇ ಕಾರಣಕ್ಕೂ ಮೃತಪಟ್ಟರೆ ನಾಮಿನಿಗೆ 2 ಲಕ್ಷ ರೂ. ಒದಗಿಸಲಾಗುತ್ತದೆ. ಯಾವುದೇ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ನಲ್ಲಿ ಈ ವಿಮೆಯನ್ನು ಮಾಡಿಬಹುದು. ಪ್ರತಿ ವರ್ಷ ಒಂದು ಕಂತಿನಲ್ಲಿ ‘ಆಟೋ ಡೆಬಿಟ್’ ಸೌಲಭ್ಯದ ಮೂಲಕ ಖಾತೆದಾರರ ಬ್ಯಾಂಕ್ / ಪೋಸ್ಟ್ ಆಫೀಸ್ ಖಾತೆಯಿಂದ ಪ್ರೀಮಿಯಂ ಅನ್ನು ಕಡಿತಗೊಳಿಸಲಾಗುತ್ತದೆ.

ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯ ಪ್ರಯೋಜನಗಳು

 • ಪಿಎಂಜೆಜೆಬಿವೈ ಒಂದು ವರ್ಷದ ಯೋಜನೆಯಾಗಿದ್ದು, 18-50 ವರ್ಷದೊಳಗಿನವರು ನೋಂದಾಯಿಸಬಹುದು.
 • ಸಾವು ಯಾವುದೇ ಕಾರಣಕ್ಕೆ ಸಂಭವಿಸಿದರೂ 2 ಲಕ್ಷ ರೂ. ನಾಮಿನಿಗೆ ಸಿಗಲಿದೆ.
 • ಪ್ರತಿ ವರ್ಷ 436 ರೂ. ಪಾವತಿಸಿದರೆ ಸಾಕು.
 • ಪಾಲಿಸಿದಾರರ ಅಕೌಂಟ್‌ನಿಂದ ನೇರ ದುಡ್ಡು ಪಾವತಿಯಾಗುವ ಅಟೋ-ಡೆಬಿಟ್‌ ಸೌಲಭ್ಯ ಲಭ್ಯ.
 • ನೀವು ಖಾತೆ ಹೊಂದಿರುವ ಯಾವುದೇ ಬ್ಯಾಂಕ್‌ / ಪೋಸ್ಟ್‌ ಆಫೀಸ್‌ನಲ್ಲಿ ಹೆಸರು ನೋಂದಾಯಿಸಬಹುದು.

ಅನಿವಾಸಿ ಭಾರತೀಯರು ಸೇರಬಹುದೆ?

ವಿಶೇಷ ಎಂದರೆ ಈ ಮಹತ್ವದ ಯೋಜನೆಯಲ್ಲಿ ಅನಿವಾಸಿ ಭಾರತೀಯರೂ (Non-Resident Indian) ಸೇರಬಹುದು. ಆದರೆ ಅವರಿಗೆ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಅವರು ಭಾರತದಲ್ಲಿರುವ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕಾಗುತ್ತದೆ. ಭಾರತ ಸರ್ಕಾರ ಅಳವಡಿಸಿದ ಎಲ್ಲ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಪಾಲಿಸಿದಾರ ಮೃತಪಟ್ಟರೆ ಭಾರತೀಯ ಕರೆನ್ಸಿಗಳಲ್ಲಿ ಮಾತ್ರ ಪರಿಹಾರದ ಮೊತ್ತ ಪಾವತಿಸಲಾಗುತ್ತದೆ.

ಯೋಜನೆಗೆ ಹೆಸರು ನೋಂದಾಯಿಸುವುದು ಹೇಗೆ?

ನೀವು ಖಾತೆ ಹೊಂದಿರುವ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ಗೆ ತೆರಳಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ ಯೋಜನೆಗೆ ಹೆಸರು ನೋಂದಾಯಿಸಬಹುದು. ಇಲ್ಲವೇ ಆನ್‌ಲೈನ್‌ ಮೂಲಕವೂ ಹೆಸರು ನೋಂದಾಯಿಸುವ ಸೌಲಭ್ಯವಿದೆ.

ಆನ್‌ಲೈನ್‌ ಮೂಲಕ ಹೀಗೆ ಹೆಸರು ನೋಂದಾಯಿಸಿ

 • ಅಪ್ಲಿಕೇಷನ್‌ ಫಾರಂಗಾಗಿ ಇಲ್ಲಿ ಕ್ಲಿಕ್‌ ಮಾಡಿ.
 • ಈಗ ತೆರೆದುಕೊಳ್ಳುವ ಅಪ್ಲಿಕೇಷನ್‌ ಫಾರಂನ ಪ್ರಿಂಟ್ಔಟ್‌ ತೆಗೆದುಕೊಳ್ಳಿ.
 • ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಬ್ಯಾಂಕ್‌ / ಪೋಸ್ಟ್‌ ಆಫೀಸ್‌ಗೆ ಸಲ್ಲಿಸಿ. ಆಗ ದೊರೆಯುವ Acknowledgement Slip Cum Certificate Of Insurance ಅನ್ನು ಸುರಕ್ಷಿತವಾಗಿಟ್ಟುಕೊಳ್ಳಿ.

ಇದನ್ನೂ ಓದಿ: Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Continue Reading

ಮನಿ-ಗೈಡ್

Money Guide: ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿವರೆಗೆ; ಈ ತಿಂಗಳಿನಿಂದ ಏನೆಲ್ಲ ಬದಲಾವಣೆ?

Money Guide: ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹಂತದಲ್ಲಿದ್ದೇವೆ. ಹೀಗಾಗಿ ಸರ್ಕಾರ ಕೆಲವೊಂದು ಹಣಕಾಸು ನಿಯಮಗಳಲ್ಲಿ ಭಾರೀ ಬದಲಾವಣೆಗೆ ಮುಂದಾಗಿದೆ. ಅವು ಏನೇನು ಎನ್ನುವ ವಿವರ ಇಲ್ಲಿದೆ.

VISTARANEWS.COM


on

500 notes
Koo

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ಹಂತದಲ್ಲಿದ್ದೇವೆ. ಹೀಗಾಗಿ ಸರ್ಕಾರ ಕೆಲವೊಂದು ಹಣಕಾಸು ನಿಯಮಗಳಲ್ಲಿ ಭಾರೀ (Financial Rules Change) ಬದಲಾವಣೆಗೆ ಮುಂದಾಗಿದೆ. ಒಂದಷ್ಟು ನಿಯಮಗಳು ಜನರಿಗೆ ಅನುಕೂಲವಾಗಿದ್ದರೆ, ಮತ್ತೊಂದಿಷ್ಟು ನಿಯಮಗಳು ನಾಗರಿಕರ ಜೇಬಿಗೆ ಭಾರವಾಗಲಿವೆ. ಇನ್ನೂ ಒಂದಷ್ಟು ನಿಯಮಗಳನ್ನು ತಿಳಿದುಕೊಳ್ಳದಿದ್ದರೆ ನಮಗೇ ನಷ್ಟವಾಗುತ್ತದೆ. ಜತೆಗೆ ದಂಡವೂ ಬೀಳುತ್ತದೆ. ಹಾಗಾದರೆ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇವು ಹೇಗೆ ನಮ್ಮ ಮೇಲೆ ಬೀಳುತ್ತದೆ? ಮುಂತಾದ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಆಧಾರ್‌ ಕಾರ್ಡ್‌ ಉಚಿತ ಅಪ್‌ಡೇಟ್‌: ಮಾರ್ಚ್‌ 14

ಆಧಾರ್‌ ಕಾರ್ಡ್‌ನಲ್ಲಿ ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದಾದ ಅವಕಾಶ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India-UIDAI) ನೀಡಿದ್ದ ಅವಕಾಶ 2024ರ ಮಾರ್ಚ್‌ 14ಕ್ಕೆ ಮುಗಿಯಲಿದ್ದು, ಅದಕ್ಕಿಂತ ಮೊದಲೇ ಮಾಡಿಸಿಕೊಳ್ಳಬೇಕು. https://myaadhaar.uidai.gov.in/ ವೆಬ್‌ಸೈಟ್‌ ಭೇಟಿ ನೀಡಿ ಉಚಿತವಾಗಿ ನವೀಕರಿಸಿ.

ಎಸ್‌ಬಿಐ ಅಮೃತ್‌ ಕಲಶ್‌ ವಿಶೇಷ ಎಫ್‌ಡಿ: ಮಾರ್ಚ್‌ 31

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐಯ ವಿಶೇಷ ಯೋಜನೆ ಅಮೃತ್‌ ಕಲಶ್‌ ಎಫ್‌ಡಿ ಡೆಪಾಸಿಟ್‌ ಸ್ಕೀಮ್‌ನ ಅವಧಿ ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ.‌ ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್‌ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.

ಎಸ್‌ಬಿಐ ವಿಕೇರ್‌ ಸೀನಿಯರ್‌ ಸಿಟಿಜನ್‌ ಎಫ್‌ಡಿ: ಮಾರ್ಚ್‌ 31

ಎಸ್‌ಬಿಐ ವಿಕೇರ್‌ (SBI WeCare) 7.50% ಬಡ್ಡಿ ಒದಗಿಸುತ್ತದೆ. ಹಿರಿಯ ನಾಗರಿಕರು ಹೂಡಿಕೆ ಮಾಡಲು ಮಾರ್ಚ್‌ 31 ಕೊನೆಯ ದಿನ.

ಎಸ್‌ಬಿಐ ಗೃಹ ಸಾಲದ ಬಡ್ಡಿದರ ರಿಯಾಯಿತಿ: ಮಾರ್ಚ್ 31

ಎಸ್‌ಬಿಐ ಗೃಹ ಸಾಲಗಳ ಮೇಲಿನ ವಿಶೇಷ ಅಭಿಯಾನದ ರಿಯಾಯಿತಿ ಮಾರ್ಚ್ 31, 2024ರ ವರೆಗೆ ಅನ್ವಯವಾಗುತ್ತದೆ. ಎಲ್ಲ ಗೃಹ ಸಾಲಗಳಿಗೆ ಈ ರಿಯಾಯಿತಿ ಮಾನ್ಯವಾಗಿರುತ್ತದೆ. ಸಿಬಿಲ್ ಸ್ಕೋರ್ ಅನ್ನು ಅವಲಂಬಿಸಿ ಗೃಹ ಸಾಲದ ಮೇಲಿನ ಬಡ್ಡಿದರವು ಬದಲಾಗುತ್ತದೆ.

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ಗಡುವು: ಮಾರ್ಚ್‌ 15

ಮಾರ್ಚ್‌ 15ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್‌ ಪೇಮೆಂಟ್‌, ಫಾಸ್ಟ್‌ಟ್ಯಾಗ್‌ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ವಿಧಿಸಿದೆ. ಗ್ರಾಹಕರ ಖಾತೆಗಳಲ್ಲಿ ಠೇವಣಿ, ಸಾಲ ವಹಿವಾಟು ಮತ್ತು ಟಾಪ್-ಅಪ್​ಗಳನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನೀಡಿದ್ದ ಗಡುವನ್ನು ಮಾರ್ಚ್‌ 15ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಫೆಬ್ರವರಿ 29ರ ವರೆಗೆ ಗಡುವು ನೀಡಲಾಗಿತ್ತು.

ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿ: ಮಾರ್ಚ್‌ 31

ಐಡಿಬಿಐ ಬ್ಯಾಂಕ್ ಉತ್ಸವ್ ಕ್ಯಾಲಬಲ್ ಎಫ್‌ಡಿ 300 ದಿನಗಳು, 375 ದಿನಗಳು ಮತ್ತು 444 ದಿನಗಳ ವಿಶೇಷ ಅವಧಿಯ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಇದು ಕ್ರಮವಾಗಿ 7.05%, 7.10% ಮತ್ತು 7.25% ಬಡ್ಡಿದರಗಳನ್ನು ನೀಡುತ್ತದೆ. ಇದು ಮಾರ್ಚ್ 31, 2024ರ ವರೆಗೆ ಅನ್ವಯವಾಗುತ್ತದೆ.

ತೆರಿಗೆ ಉಳಿತಾಯ ಯೋಜನೆ: ಮಾರ್ಚ್‌ 31

2023-2024ರ ಹಣಕಾಸು ವರ್ಷದ ತೆರಿಗೆ ಉಳಿತಾಯ ಯೋಜನೆ ಪೂರ್ಣಗೊಳಿಸುವ ಗಡುವು ಮಾರ್ಚ್ 31. ಏಪ್ರಿಲ್ 1, 2023ರಲ್ಲಿ ಹೊಸ ತೆರಿಗೆ ನಿಯಮ ಜಾರಿಯಾಗಿತ್ತು. ಹೊಸ ತೆರಿಗೆ ವ್ಯವಸ್ಥೆಯು ಹಣಕಾಸು ವರ್ಷ 2023-2024ರಿಂದ ಡೀಫಾಲ್ಟ್ ಆಗಿದೆ. ಆದ್ದರಿಂದ ಉದ್ಯೋಗಿಗಳು ಏಪ್ರಿಲ್ 2023ಕ್ಕಿಂತ ಮೊದಲು ತೆರಿಗೆ ಆಡಳಿತವನ್ನು ಆಯ್ಕೆ ಮಾಡಬೇಕು.

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ನ ಕನಿಷ್ಠ ಮೊತ್ತದ ನಿಯಮ: ಮಾರ್ಚ್‌ 15

ಎಸ್‌ಬಿಐ ಕ್ರೆಡಿಟ್ ಕಾರ್ಡ್ ದಿನಕ್ಕೆ ಕನಿಷ್ಠ ಬಿಲ್‌ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುತ್ತಿದೆ. ಹೊಸ ನಿಯಮಗಳು ಮಾರ್ಚ್ 15ರಿಂದ ಜಾರಿಗೆ ಬರಲಿವೆ. ಈ ಬದಲಾವಣೆಗಳ ಬಗ್ಗೆ ಕಾರ್ಡ್ ಹೊಂದಿರುವವರಿಗೆ ಮಾಹಿತಿ ನೀಡಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ಮುಂಗಡ ತೆರಿಗೆ ಪಾವತಿಯ ನಾಲ್ಕನೇ ಕಂತು ಕೊನೆಯ ದಿನ: ಮಾರ್ಚ್ 15

2023-24ರ ಹಣಕಾಸು ವರ್ಷಕ್ಕೆ ಮುಂಗಡ ತೆರಿಗೆಯ ನಾಲ್ಕನೇ ಕಂತನ್ನು ಠೇವಣಿ ಮಾಡಲು 2024ರ ಮಾರ್ಚ್ 15 ಕೊನೆಯ ದಿನಾಂಕ. ಮುಂಗಡ ತೆರಿಗೆಯನ್ನು ಜಮಾ ಮಾಡುವಂತೆ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ನಿರಂತರ ಸಂದೇಶ ಕಳುಹಿಸುತ್ತಿದೆ.

ಇದನ್ನೂ ಓದಿ: Money Guide: ಗುಡ್‌ನ್ಯೂಸ್‌: ಕಿಸಾನ್‌ ಸಮ್ಮಾನ್‌ ನಿಧಿಯ 16ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಯಾವಾಗ ಸಿಗಲಿದೆ?

Continue Reading
Advertisement
KPSC Secretary
ನೌಕರರ ಕಾರ್ನರ್3 mins ago

KPSC Transfer : ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಡಾ. ರಾಕೇಶ್‌ ಕುಮಾರ್‌ ನೇಮಕ; ಲತಾ ಕುಮಾರಿ ವರ್ಗ

Adi Shankara
ಪ್ರಮುಖ ಸುದ್ದಿ5 mins ago

ತತ್ತ್ವ ಶಂಕರ: ಶಂಕರ; ಲೋಕ ಕಲ್ಯಾಣಕ್ಕಾಗಿ ಬಂದ ಅವತಾರ ಪುರುಷ

Death Threat to Modi threatens to kill PM Nrendra Modi and Yogi Adityanath and Nasir Brother Khaja apologises
ಯಾದಗಿರಿ11 mins ago

Death Threat to Modi: ಮೋದಿ, ಯೋಗಿಗೆ ಜೀವ ಬೆದರಿಕೆ ಹಾಕಿದ್ದ ನಾಸಿರ್;‌ ಕ್ಷಮೆ ಕೋರಿದ ಸಹೋದರ ಖಾಜಾ

tpl
ಕಿರುತೆರೆ16 mins ago

TPL Seson 3: ಟಿಪಿಎಲ್ ಸೀಸನ್-3ಕ್ಕೆ ತೆರೆ; ಕಿರುತೆರೆ ಕ್ರಿಕೆಟ್ ಲೀಗ್‌ನ ಚಾಂಪಿಯನ್‌ ಪಟ್ಟ ಯಾರಿಗೆ?

Rohit Sharma
ಕ್ರೀಡೆ20 mins ago

IND vs ENG 5th Test: ವಿಶ್ವ ಟೆಸ್ಟ್​ನಲ್ಲಿ ದಾಖಲೆ ಬರೆಯಲು ರೋಹಿತ್​ಗೆ ಬೇಕು ಕೇವಲ ಒಂದು ಸಿಕ್ಸರ್​

Neetha Ambani Jewel Love
ಫ್ಯಾಷನ್20 mins ago

Neetha Ambani Jewel Love: ನೀತಾ ಅಂಬಾನಿಯ ದುಬಾರಿ ಜ್ಯುವೆಲರಿ ಪ್ರೇಮ!

Rahul Gandhi
ದೇಶ21 mins ago

Rahul Gandhi: ಇಡೀ ಭಾರತದ ಎಕ್ಸ್‌ರೇ ತೆಗೆಯಬೇಕು ಎಂದ ರಾಹುಲ್‌ ಗಾಂಧಿ; ಹೀಗೆ ಹೇಳಿದ್ದೇಕೆ?

ram charan
ಸಿನಿಮಾ41 mins ago

Ram Charan: ದಕ್ಷಿಣ ಭಾರತದ ಸ್ಟಾರ್‌ ರಾಮ್‌ ಚರಣ್‌ಗೆ ಶಾರುಖ್‌ ಖಾನ್‌ನಿಂದ ಅವಮಾನ? ಫ್ಯಾನ್ಸ್‌ ಗರಂ ಆಗಿದ್ದೇಕೆ?

Man harasses Wife for giving birth to girl child
ಚಿಕ್ಕಬಳ್ಳಾಪುರ42 mins ago

Baby Girl : ಹೆಣ್ಣು ಮಗುವೆಂದು ಗಂಡನ ತಾತ್ಸಾರ; ದಾನ ಮಾಡಲು ಮುಂದಾದ ನತದೃಷ್ಟ ತಾಯಿ

Guarantee Survey HD Kumarawamy
ಬೆಂಗಳೂರು45 mins ago

Guarantee Survey : ಗ್ಯಾರಂಟಿ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬಳಕೆ; ಎಸಿ ಗಿರಾಕಿಗಳೆಲ್ಲಿ ಎಂದ HDK

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ24 hours ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌