Site icon Vistara News

Money Guide: ಎಫ್‌ಡಿಗಳಿಂದ ಹೆಚ್ಚಿನ ಆದಾಯ ಬೇಕೇ? ಲ್ಯಾಡರಿಂಗ್ ತಂತ್ರದಂತೆ ಹೂಡಿಕೆ ಮಾಡಿ ನೋಡಿ!

Money Guide, If you want more return on bank FD and then use Bank FD laddering

ಳಿತಾಯ ಯೋಜನೆ ಮತ್ತು ಸಾಂಪ್ರದಾಯಿಕ ಹೂಡಿಕೆದಾರರಲ್ಲಿ ಬ್ಯಾಂಕ್ ಸ್ಥಿರ ಠೇವಣಿಗಳು (Fixed Deposits) ಅತ್ಯಂತ ಜನಪ್ರಿಯ ಹಣಕಾಸು ಯೋಜನೆಗಳಾಗಿವೆ. ವರ್ಷಗಳ ಬಳಿಕ ನಿಶ್ಚಿತ ಲಾಭದ ಖಾತ್ರಿಯನ್ನು ಒದಗಿಸುವ ಈ ಪ್ಲ್ಯಾನ್‌ಗಳ ನಿತ್ಯ ಹರಿದ್ವರ್ಣ ಎನಿಸಿಕೊಂಡಿವೆ. ಅಲ್ಲದೇ ಹೆಚ್ಚು ಸುರಕ್ಷಿತವಾಗಿರುವ ಈ ಬ್ಯಾಂಕ್ ಎಫ್‌ಡಿಗಳನ್ನು (Bank Fixed Deposits) ಯಾವಾಗ ಬೇಕಿದ್ದರೂ ನಗದಾಗಿ ಪರಿವರ್ತಿಸಬಹುದು. ಹೀಗಿದ್ದೂ, ಅವಧಿ ಪೂರ್ವ ನಗದು ಮಾಡಿದ್ರೆ ಒಂದಿಷ್ಟು ದಂಡವನ್ನು ಬ್ಯಾಂಕುಗಳ ಪಾವತಿಸಿಕೊಳ್ಳುತ್ತವೆ. ಆದರೆ, ಬಳಕೆದಾರರಿಗೆ ಬ್ಯಾಂಕ್ ಎಫ್‌ಡಿ ಲ್ಯಾಡರಿಂಗ್ (Bank FD Laddering) ತಂತ್ರ ಗೊತ್ತಿದ್ದರೆ, ಅವಧಿ ಪೂರ್ವ ಠೇವಣಿ ಹಿಂತೆಗೆತದ ವೇಳೆಯೂ ನಷ್ಟವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಆ ಕುರಿತು ನಿಮಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ ಓದಿ(Money Guide).

ಏನಿದು ಬ್ಯಾಂಕ್ ಎಫ್‌ಡಿ ಲ್ಯಾಡರಿಂಗ್?

ಬ್ಯಾಂಕ್ ಎಫ್‌ಡಿ ಲ್ಯಾಡರಿಂಗ್ ಎನ್ನುವುದು ವಿವಿಧ ಕಾಲಾವಧಿಯಲ್ಲಿ ಮೆಚ್ಯೂರ್ ಆಗುವ ಬಹು ಎಫ್‌ಡಿಗಳನ್ನು ಖರೀದಿಸುವುದನ್ನು ಒಳಗೊಂಡಿರುವ ಒಂದು ತಂತ್ರವಾಗಿದೆ. ದೀರ್ಘಾವಧಿಯವರೆಗೆ ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರು ಈ ಲ್ಯಾಡರ್ ತಂತ್ರವನ್ನು ಪರಿಗಣಿಸಬಹುದಾಗಿದೆ. ಹೀಗೆ ಮಾಡುವುದರಿಂದ ಹೂಡಿಕೆದಾರರಿಗೆ ನಷ್ಟವನ್ನು ತಪ್ಪಿಸಬಹುದಾಗಿದೆ.

ಈ ಸಂಗತಿಗಳ ಬಗ್ಗೆ ಗೊತ್ತಿರಲಿ

-ಬ್ಯಾಂಕ್ ಎಫ್‌ಡಿ ಲ್ಯಾಂಡರಿಂಗ್ ‌ತಂತ್ರದ ಅನ್ವಯ ಹೂಡಿಕೆದಾರರು ಹೂಡಿಕೆ ಮಾಡಬಹುದಾದ ಮೊತ್ತವನ್ನು ಮೂರು ಅಥವಾ ನಾಲ್ಕು ಪಾಲು ಮಾಡಿ, ವಿವಿಧ ಮೆಚ್ಯೂರ್ ಅವಧಿಯ ಹೂಡಿಕೆ ಮಾಡಿಕೊಳ್ಳಬೇಕಾಗುತ್ತದೆ.
-ಹೂಡಿಕೆದಾರರು ತಮ್ಮ ನಿರೀಕ್ಷೆಗೆ ಅನುಗುಣವಾಗಿ ಮೊತ್ತ ಮತ್ತು ಮೆಚ್ಯೂರ್ ಆಗುವ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
-ಹೀಗೆ ಮಾಡುವುದರಿಂದ ನೀವು ಮೆಚ್ಯೂರಿಟಿ ಡೇಟ್ಸ್, ನಗದು ಮಾಡುವ ಅವಕಾಶ ಮತ್ತು ಅಗತ್ಯ ಬಿದ್ದಾಗ ಹೆಚ್ಚಿನ ಬಡ್ಡಿ ದರಕ್ಕೆ ಮರು ಹೂಡಿಕೆಯ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತೀರಿ.
-ಮರುಹೂಡಿಕೆಗೆ ಸೂಕ್ತ ಸಮಯವನ್ನು ಗುರುತಿಸಲು ಬಡ್ಡಿದರದ ಪ್ರವೃತ್ತಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ತಂತ್ರವು ನಿಮಗೆ ಅವಕಾಶವನ್ನು ಒದಗಿಸುತ್ತದೆ.
-ಪ್ರತಿ ಎಫ್‌ಡಿ ಮೆಚ್ಯೂರ್ ಆದಂತೆ ನೀವು ದೀರ್ಘಾವಧಿಯ ಅವಧಿಯೊಂದಿಗೆ ಹೊಸ ಎಫ್‌ಡಿಯಲ್ಲಿ ಆದಾಯವನ್ನು ಮರುಹೂಡಿಕೆ ಮಾಡಬಹುದು. ಇದರಿಂದ ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯವಾಗಲಿದೆ.
-ನಿಮ್ಮ ಲಿಕ್ವಿಡಿಟಿ ಅಗತ್ಯತೆಗಳು ಮತ್ತು ಹಣಕಾಸಿನ ಗುರಿಗಳೊಂದಿಗೆ ಹೊಂದಿಸಲು ನಿಮ್ಮ ಎಫ್‌ಡಿ ಹಂಚಿಕೆಯನ್ನು ಸರಿಹೊಂದಿಸುವುದು ಸಹ ನಿರ್ಣಾಯಕವಾಗಿರುತ್ತದೆ.

ಎಫ್‌ಡಿ ಲ್ಯಾಂಡರಿಂಗ್ ಲಾಭಗಳು

ವೈವಿಧ್ಯತೆ, ಸುಲಭವಾಗಿ ನಗದಾಗಿ ಪರಿವರ್ತಿಸುವುದು, ಹೆಚ್ಚಿನ ಲಾಭ, ಬದಲಾದ ಬಡ್ಡಿ ದರಕ್ಕೆ ಹೊಂದಾಣಿಕೆ ಮಾಡುವುದು ಸೇರಿದಂತೆ ಅನೇಕ ಲಾಭಗಳು ಎಫ್‌ಡಿ ಲ್ಯಾಡರಿಂದ್ ತಂತ್ರವು ಒದಗಿಸುತ್ತದೆ. ನಿಮ್ಮ ತೆರಿಗೆ ಪ್ಲ್ಯಾನಿಂಗ್‌ಗೂ ಈ ತಂತ್ರವು ಹೆಚ್ಚು ಲಾಭದಾಯಕವಾಗಿರುತ್ತದೆ.
ಸ್ಥಿರವಾದ ಮೆಚುರಿಟಿಗಳ ಮೂಲಕ ನಗದಿಗೆ ಪರಿವರ್ತಿಸುವಾಗ ಆದಾಯವನ್ನು ಹೆಚ್ಚಿಸುತ್ತದೆ. ಈ ತಂತ್ರವು ಹೂಡಿಕೆದಾರರಿಗೆ ವಿವಿಧ ಬಡ್ಡಿದರಗಳಿಂದ ಲಾಭ ಪಡೆಯಲು, ಬಡ್ಡಿದರದ ಏರಿಳಿತಗಳನ್ನು ತಗ್ಗಿಸಲು ಅಧಿಕಾರ ನೀಡುತ್ತದೆ ಎಂದು ಹೇಳಬಹುದು.

ಲ್ಯಾಡರಿಂಗ್ ತಂತ್ರ ಬಳಸುವಾಗ ಹುಷಾರ್

-ಬ್ಯಾಂಕ್‌ ಎಫ್‌ಡಿ ಲ್ಯಾಡರಿಂಗ್ ತಂತ್ರ ಬಳಸುವಾಗ ಸದ್ಯದ ಬಡ್ಡಿ ದರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
-ರಿಸರ್ವ್ ಬ್ಯಾಂಕ್ ಇಂಡಿಯಾ ಕೈಗೊಳ್ಳುವ ನಿರ್ಣಯಗಳ ಬಗ್ಗೆ ಗೊತ್ತಿರಬೇಕು.
-ಆರ್‌ಬಿಐ ನಿಯಮಗಳ ಅನುಸಾರ ನಿಮ್ಮ ಎಫ್‌ಡಿ ಲ್ಯಾಡರಿಂಗ್ ವ್ಯವಸ್ಥೆಯನ್ನು ಹೊಂದಿಸಿಕೊಳ್ಳಬೇಕು.
-ಈ ಸ್ಮಾರ್ಟ್‌ ಹೂಡಿಕೆಯು ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ.
-ಹೆಚ್ಚು ಎಚ್ಚರಿಕೆಯ ಮೂಲಕ ಹೆಚ್ಚು ಆದಾಯ ಮತ್ತು ಅಪಾಯಗಳಿಲ್ಲದೇ ವ್ಯವಹಾರ ಮಾಡಬಹುದು.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version