Site icon Vistara News

Money Guide: ಮಕ್ಕಳಿಗೆ ಉಡುಗೊರೆ ಕೊಡಬೇಕೆ? ಅವರ ಹೆಸರಿನಲ್ಲಿ ಪಿಪಿಎಫ್‌ ಖಾತೆ ಆರಂಭಿಸಿ; ಇಲ್ಲಿದೆ ಸಂಪೂರ್ಣ ವಿವರ

Money Guide

Money Guide

ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು ಎನ್ನುವುದು ಎಲ್ಲರ ಆಗ್ರಹ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ, ದುಬಾರಿ ಜೀವನ ಶೈಲಿಯಿಂದಾಗಿ ಹಣಕಾಸಿನ ವಿಚಾರದಲ್ಲಿ ಎಲ್ಲರೂ ಎಚ್ಚರಿಕೆ ವಹಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಒಂದಷ್ಟು ಉಳಿತಾಯ ಮಾಡಿಕೊಂಡಿರಲೇಬೇಕು ಎನ್ನುವುದು ಆರ್ಥಿಕ ತಜ್ಞರು ನೀಡುವ ಸಲಹೆ. ಜತೆಗೆ ಸರ್ಕಾರ ಕೂಡ ಉಳಿತಾಯ, ನಿವೃತ್ತಿ ಯೋಜನೆಗಳಿಗೆ ಉತ್ತೇಜನ ನೀಡುತ್ತದೆ. ಈ ಪೈಕಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಯೋಜನೆ ಪ್ರಮುಖವಾದುದು. ಪಿಪಿಎಫ್‌ ಸರ್ಕಾರ ನಿರ್ವಹಿಸುವ ಉಳಿತಾಯ ಯೋಜನೆಯಾಗಿರುವುದರಿಂದ ಇದರಲ್ಲಿ ಅಪಾಯ ಕಡಿಮೆ. ಜತೆಗೆ ತೆರಿಗೆ ಪ್ರಯೋಜವೂ ಲಭ್ಯ. ಇದೇ ಕಾರಣದಿಂದ ಪಿಪಿಎಫ್‌ ಜನಪ್ರಿಯವಾಗಿದೆ. ಹಾಗಾದರೆ ಪಿಪಿಎಫ್‌ ಖಾತೆಯನ್ನು ಮಕ್ಕಳ ಹೆಸರಿನಲ್ಲಿಯೂ ತೆರೆಯಬಹುದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಇಲ್ಲಿದೆ ಉತ್ತರ (Money Guide).

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಯೋಜನೆಯು ಮೊದಲೇ ಹೇಳಿದಂತೆ ಕೇಂದ್ರ ಸರ್ಕಾರ ಬೆಂಬಲಿತ ಪ್ಲಾನ್‌ ಆಗಿದ್ದು, ಸಣ್ಣ ಹೂಡಿಕೆದಾರರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು. ಪಾಲಕರು ತಮ್ಮ ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯುವ ಆಯ್ಕೆಯನ್ನು ಹೊಂದಿದ್ದಾರೆ. ಇದನ್ನು ಅವರ ಭವಿಷ್ಯಕ್ಕಾಗಿ ಉಳಿತಾಯವನ್ನು ಪ್ರಾರಂಭಿಸಲು ಇರುವ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ. ಆಕರ್ಷಕ ಬಡ್ಡಿದರಗಳು ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ಪಿಪಿಎಫ್ ಖಾತೆಯು ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಹೂಡಿಕೆ ಆಯ್ಕೆಗಳಲ್ಲಿ ಒಂದು.

ಅಪ್ರಾಪ್ತ ಮಗುವಿಗೆ 18 ವರ್ಷ ತುಂಬುವವರೆಗೆ ಪಿಪಿಎಫ್ ಖಾತೆಯನ್ನು ಪಾಲಕರು ನಿರ್ವಹಿಸುತ್ತಾರೆ. ಬಳಿಕ ಆತ / ಅವಳು ತನ್ನ ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಬಹುದಾಗಿದೆ.

ಪಿಪಿಎಫ್‌ನ ವೈಶಿಷ್ಟ್ಯ

ಅಪ್ರಾಪ್ತರ ಖಾತೆಯ ವಿಶೇಷತೆ

ಅವಧಿಪೂರ್ವ ಹಿಂಪಡೆಯುವಿಕೆ

ಕೆಲವು ಅನಿವಾರ್ಯ ಸಂದರ್ಭದಲ್ಲಿ ಪಿಪಿಎಫ್‌ ಖಾತೆಯಲ್ಲಿನ ಹಣವನ್ನು ವಿತ್‌ಡ್ರಾ ಮಾಡಬಹುದು. ಯಾವೆಲ್ಲ ಸಂದರ್ಭಗಳೆಂದರೆ:

ಇದನ್ನೂ ಓದಿ: Money Guide: EPF vs PPF; ಈ ಎರಡು ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ವಿವರ

ಪಿಪಿಎಫ್‌ ಖಾತೆ ತೆರೆಯುವುದು ಹೇಗೆ?

ಪಿಪಿಎಫ್ ಖಾತೆಗಳನ್ನು ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಯಾವುದೇ ಶಾಖೆಯಲ್ಲಿ ತೆರೆಯಬಹುದು. ಪಿಪಿಎಫ್ ಖಾತೆಯನ್ನು ತೆರೆಯಲು ನೀವು ನಿರ್ಧಿಷ್ಟ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಐಡಿ ಪುರಾವೆ ಮತ್ತು ವಿಳಾಸ ಪುರಾವೆಯಂತಹ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಒಮ್ಮೆ ನೀವು ಪಿಪಿಎಫ್ ಖಾತೆಯನ್ನು ತೆರೆದ ನಂತರ ಯಾವುದೇ ಸಮಯದಲ್ಲಿ ಡೆಪಾಸಿಟ್‌ ಮಾಡಬಹುದು. ಆನ್‌ಲೈನ್‌ ಅಥವಾ ನಗದು ರೂಪದಲ್ಲಿ ಪಾವತಿಸಬಹುದು. ಹೀಗಾಗಿ ನಿಮ್ಮ ಮಕ್ಕಳಿಗೆ ಏನಾದರೂ ಉಡುಗೊರೆ ನೀಡಬೇಕು ಎನಿಸಿದರೆ ಅವರ ಹೆಸರಿನಲ್ಲಿ ಪಿಪಿಎಫ್‌ ಖಾತೆ ತೆರೆಯುವುದು ಉತ್ತಮ ಆಯ್ಕೆ ಎನ್ನುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ತಜ್ಞರು.

Exit mobile version