Site icon Vistara News

Money Guide: ಗಮನಿಸಿ; ಏ. 1ರಿಂದ ಎನ್‌ಪಿಎಸ್ ವಹಿವಾಟಿಗೆ ಆಧಾರ್ ದೃಢೀಕರಣ ಕಡ್ಡಾಯ: ಏನಿದು ಹೊಸ ನಿಯಮ ? ಯಾಕಾಗಿ ?

money guide

money guide

ನವದೆಹಲಿ: ದೇಶಾದ್ಯಂತ ಆನ್‌ಲೈನ್‌ ವಂಚನೆ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Pension Fund Regulatory and Development Authority)ವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System)ಯ ಖಾತೆಗಳ ಲಾಗಿನ್ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದೆ. ಏಪ್ರಿಲ್ 1ರಂದು ಹೊಸ ನಿಯಮ- ಕಡ್ಡಾಯ ಆಧಾರ್ ಅಥೆಂಟಿಕೇಷನ್‌ (Aadhaar authentication) ಜಾರಿಗೆ ಬರಲಿದೆ. ಈ ಬಗೆಗಿನ ಸಂಪೂರ್ಣ ಮಾಹಿತಿ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಯಾಕಾಗಿ ಈ ನಿಯಮ?

ಹೆಚ್ಚಿನ ಭದ್ರತೆ ಒದಗಿಸಲು ಮತ್ತು ಎನ್‌ಪಿಎಸ್‌ ಚಂದಾದಾರರ ಹಿತಾಸಕ್ತಿಗಳನ್ನು ಕಾಪಾಡಲು ಪಿಂಚಣಿ ನಿಯಂತ್ರಣ ಪ್ರಾಧಿಕಾರವು ಹೆಚ್ಚು ಸುರಕ್ಷಿತವಾದ ಈ ವಿಧಾನವನ್ನು ಘೋಷಿಸಿದೆ. ಇದಕ್ಕಾಗಿ ಎರಡು ಅಂಶಗಳ ಆಧಾರ್ ದೃಢೀಕರಣ(ಅಥೆಂಟಿಕೇಷನ್‌) ಅನ್ನು ಪರಿಚಯಿಸಿದೆ. ಇನ್ನು ಮುಂದೆ ಪಾಸ್‌ವರ್ಡ್‌ನೊಂದಿಗೆ ಆಧಾರ್ ದೃಢೀಕರಣವನ್ನೂ ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗುತ್ತದೆ. ಇದರಿಂದ ಅನಧಿಕೃತ ಎನ್‌ಪಿಎಸ್‌ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್‌ ಆಗುವ ಬದಲು ಆಧಾರ್ ಆಧಾರಿತ ಲಾಗಿನ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಪಿಎಫ್‌ಆರ್‌ಡಿಎ ಹೇಳಿದೆ. ಹೊಸ ಭದ್ರತಾ ಕಾರ್ಯವಿಧಾನದ ಅಡಿಯಲ್ಲಿ ಎನ್‌ಪಿಎಸ್‌ ಚಂದಾದಾರರು ಮೊದಲು ತಮ್ಮ ಆಧಾರ್ ಆಧಾರಿತ ಗುರುತನ್ನು ನೀಡಬೇಕು. ನಂತರ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿದ ನಂತರವೇ ಖಾತೆಗಳನ್ನು ಪ್ರವೇಶಿಸಬಹುದು.

ಉಪಯೋಗವೇನು?

ಮೊದಲೇ ಹೇಳಿದಂತೆ ಆಧಾರ್ ಆಧಾರಿತ ಲಾಗಿನ್ ದೃಢೀಕರಣದ ಅನುಷ್ಠಾನವು ಎನ್‌ಪಿಎಸ್‌ ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತವಾಗಿದುತ್ತದೆ. ಮಾರ್ಚ್ 15ರ ಪಿಎಫ್‌ಆರ್‌ಡಿಎ ಪ್ರಕಟಣೆಯು, ಈ ಹೊಸ ಭದ್ರತಾ ವ್ಯವಸ್ಥೆಯು ಹೆಚ್ಚಿನ ಭದ್ರತೆ ಮತ್ತು ವರ್ಧಿತ ರಕ್ಷಣೆಯನ್ನು ನೀಡುತ್ತದೆ. ಜತೆಗೆ ಚಂದಾದಾರರು ಮತ್ತು ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ತಿಳಿಸಿದೆ.

ಪಿಎಫ್‌ಆರ್‌ಡಿಎ ಸೂಚನೆಯ ಪ್ರಕಾರ, ಆಧಾರ್ ಆಧಾರಿತ ಲಾಗಿನ್ ದೃಢೀಕರಣವನ್ನು ಪ್ರಸ್ತುತ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್‌ ಆಧಾರಿತ ಲಾಗಿನ್ ವಿಧಾನದೊಂದಿಗೆ ವಿಲೀನಗೊಳಿಸಲಾಗುವುದು. ಆಧಾರ್ ದೃಢೀಕರಣದೊಂದಿಗೆ ಎನ್‌ಪಿಎಸ್‌ ಖಾತೆಯನ್ನು ಲಾಗಿನ್‌ ಆಗುವ ವಿಧಾನ ಇಲ್ಲಿದೆ.

ತಪ್ಪು ಪಾಸ್‌ವರ್ಡ್‌ ಬಳಸಿದರೆ ಏನಾಗುತ್ತದೆ?

ಹೊಸ ಆಧಾರ್ ಅಥೆಂಟಿಕೇಷನ್‌ ನಿಯಮದ ಪ್ರಕಾರ, ಬಳಕೆದಾರರು ಸತತ ಐದು ಬಾರಿ ತಪ್ಪು ಪಾಸ್‌ವರ್ಡ್‌ ನಮೂದಿಸಿದರೆ, ಎನ್‌ಪಿಎಸ್‌ ಖಾತೆಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಈ ಖಾತೆಯನ್ನು ಲಾಕ್ ಮಾಡಿದ ನಂತರವೂ ಬಳಕೆದಾರರು ರಹಸ್ಯ ಪ್ರಶ್ನೆಗೆ ಉತ್ತರಿಸುವ ಮೂಲಕ ಪಾಸ್‌ವರ್ಡ್ ಅನ್ನು ಮರುಹೊಂದಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Money Guide: ಏ. 1ರಿಂದ ಹೊಸ ತೆರಿಗೆ ನಿಯಮಗಳ ಜಾರಿ; ಏನೆಲ್ಲ ಬದಲಾವಣೆ ?

Exit mobile version