Site icon Vistara News

NPS Vatsalya Scheme: ಏನಿದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆ? ನಮ್ಮ ಮಕ್ಕಳಿಗೆ ಇದರಿಂದೇನು ಪ್ರಯೋಜನ?

NPS Vatsalya Yojana

ಮಕ್ಕಳಿಗಾಗಿ ರಾಷ್ಟ್ರೀಯ ಪಿಂಚಣಿ ವಾತ್ಸಲ್ಯ ಯೋಜನೆಯನ್ನು (NPS Vatsalya scheme) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (finance minister Nirmala Sitharaman) ಅವರು 2024ರ ಕೇಂದ್ರ ಬಜೆಟ್‌ನಲ್ಲಿ (Union Budget 2024) ಘೋಷಿಸಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆಯು (National Pension Scheme) ನಿವೃತ್ತಿ ಯೋಜನೆಯಾಗಿದ್ದು, ಇದರಲ್ಲಿ 18ನೇ ವಯಸ್ಸಿನಿಂದಲೇ ಹೂಡಿಕೆಯನ್ನು ಪ್ರಾರಂಭಿಸಿ 70ನೇ ವಯಸ್ಸಿನವರೆಗೆ ಹೂಡಿಕೆಯನ್ನು ಮಾಡಬಹುದು.

ಇದೀಗ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ವಾತ್ಸಲ್ಯವನ್ನು ಘೋಷಿಸಲಾಗಿದೆ. ಎನ್‌ಪಿಎಸ್-ವಾತ್ಸಲ್ಯ ಯೋಜನೆಯನ್ನು ಅಪ್ರಾಪ್ತ ವಯಸ್ಕ ಮಕ್ಕಳಿಗೆ ಪೋಷಕರು ಮಾಡಬಹುದಾದ ಉಳಿತಾಯ ಯೋಜನೆಯಾಗಿದೆ. ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಮ್ಯಾಕ್ಸ್ ಲೈಫ್ ಪಿಂಚಣಿ ನಿಧಿ ನಿರ್ವಹಣೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಣಭೀರ್ ಸಿಂಗ್ ಧರಿವಾಲ್, ನಿವೃತ್ತಿ ಉಳಿತಾಯ ಮತ್ತು ದೀರ್ಘಾವಧಿಯ ಆರ್ಥಿಕ ಭದ್ರತೆಯನ್ನು ಉತ್ತೇಜಿಸುವಲ್ಲಿ ಕೇಂದ್ರ ಬಜೆಟ್‌ನ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ವಾತ್ಸಲ್ಯವು ಶ್ಲಾಘನೀಯ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಗುವಿನ ಎನ್‌ಪಿಎಸ್ ಖಾತೆಯನ್ನು ಪ್ರಾರಂಭಿಸಲು ಅವಕಾಶ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಜವಾಬ್ದಾರಿಯುತ ಹಣಕಾಸು ನಿರ್ವಹಣೆಗೆ ಅಡಿಪಾಯವನ್ನು ಹೊಂದಿಸಿದಂತಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಈ ಖಾತೆಗಳು ನಿಯಮಿತ ಎನ್ ಪಿ ಎಸ್ ಯೋಜನೆಗಳಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಮಕ್ಕಳ ಪ್ರೌಢಾವಸ್ಥೆಯಲ್ಲಿ ಉಳಿತಾಯ ಅಭ್ಯಾಸಗಳ ಸುಗಮವಾಗಿ ಮುಂದುವರಿಯುತ್ತದೆ.

ಎನ್‌ಪಿಎಸ್ ವಾತ್ಸಲ್ಯ ಯೋಜನೆಗೆ ಯಾರು ಅರ್ಹರು, ಯಾರು ಅರ್ಜಿ ಸಲ್ಲಿಸಬಹುದು ಮತ್ತು ಮೆಚ್ಯೂರಿಟಿಯನ್ನು ಪಡೆದ ಅನಂತರ ಖಾತೆಗೆ ಏನಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.


ಎನ್ ಪಿ ಎಸ್ ಎಂದರೇನು?

ಎನ್‌ಪಿಎಸ್ ನಿವೃತ್ತಿ ಯೋಜನೆಯಾಗಿದ್ದು, ಆರ್ಥಿಕ ವರ್ಷದಲ್ಲಿ ಒಮ್ಮೆಯಾದರೂ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು.

ಎನ್ ಪಿ ಎಸ್ ಅನ್ನು ಮಾರುಕಟ್ಟೆಗೆ ಲಿಂಕ್ ಮಾಡಲಾಗಿದ್ದು, ಇದರಲ್ಲಿ ನಿಧಿ ಯೋಜನೆ ಮತ್ತು ಈಕ್ವಿಟಿ ಮಾನ್ಯತೆಯ ಶೇಕಡಾವಾರು ಪ್ರಮಾಣವನ್ನು ಆಯ್ಕೆ ಮಾಡಬಹುದು.

ನಿಧಿಯಲ್ಲಿ ಹೂಡಿಕೆಯಾಗಿರುವ ಮೊತ್ತದ ಕಾರ್ಯಕ್ಷಮತೆಯ ಆಧಾರದ ಮೇಲೆ ಎನ್ ಪಿ ಎಸ್ ಖಾತೆದಾರರು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತವನ್ನು ಪಡೆಯುತ್ತಾರೆ ಮತ್ತು ಮಾಸಿಕ ಪಿಂಚಣಿಗಾಗಿ ವರ್ಷಾಶನವನ್ನು ಖರೀದಿಸುವ ಆಯ್ಕೆ ಇದರಲ್ಲಿದೆ.

60 ವರ್ಷಗಳ ನಿವೃತ್ತಿ ವಯಸ್ಸಿನಲ್ಲಿ ನಿವೃತ್ತಿ ಮೊತ್ತದ ಗರಿಷ್ಠ ಶೇ. 60ರಷ್ಟನ್ನು ಹಿಂತೆಗೆದುಕೊಳ್ಳುವ ಇನ್ನೊಂದು ಆಯ್ಕೆ ಇದರಲ್ಲಿದೆ. ಇದರಲ್ಲಿ ಉಳಿದ ಶೇ. 40ರಷ್ಟನ್ನು ವರ್ಷಾಶನವಾಗಿ ಖರೀದಿ ಮಾಡಬಹುದು. ಈ ರೀತಿಯ ನಿವೃತ್ತಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.

ಎನ್‌ಪಿಎಸ್ ವಾತ್ಸಲ್ಯ ಯೋಜನೆ ಎನ್‌ಪಿಎಸ್‌ಗಿಂತ ಏಕೆ ಭಿನ್ನ?

ಎನ್ ಪಿ ಎಸ್‌ನಲ್ಲಿ 18 ವರ್ಷ ವಯಸ್ಸಿನಲ್ಲೇ ಖಾತೆಯನ್ನು ತೆರೆಯಬಹುದು. ಎನ್ ಪಿ ಎಸ್ ವಾತ್ಸಲ್ಯದಲ್ಲಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಖಾತೆಯನ್ನು ತೆರೆಯಬಹುದು. ಇದರಲ್ಲಿ ಅಪ್ರಾಪ್ತರ ಕನಿಷ್ಠ ವಯಸ್ಸನ್ನು ಹಣಕಾಸು ಸಚಿವರು ತಿಳಿಸಿಲ್ಲ.


ಮುಕ್ತಾಯದ ಅನಂತರ ಖಾತೆ ಏನಾಗುತ್ತದೆ?

ಅಪ್ರಾಪ್ತ ವಯಸ್ಸಿನವರು ಪ್ರಾಪ್ತ ವಯಸ್ಸಿಗೆ ಬಂದಾಗ ಅವರ ಖಾತೆ ಎನ್‌ಪಿಎಸ್ ವಾತ್ಸಲ್ಯ ಯೋಜನೆಯಿಂದ ಸಾಮಾನ್ಯ ಎನ್‌ಪಿಎಸ್ ಖಾತೆಯಾಗಿ ಪರಿವರ್ತಿಸಬಹುದು ಎಂದಿದ್ದಾರೆ ಹಣಕಾಸು ಸಚಿವರು.

ಇದನ್ನೂ ಓದಿ: Ayushamn Card: 5 ಲಕ್ಷದವರೆಗೆ ಉಚಿತ ಚಿಕಿತ್ಸೆ; ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?

ಎನ್ ಪಿ ಎಸ್ ಪ್ರಯೋಜನವೇನು?

ಎನ್‌ಪಿಎಸ್ ಯೋಜನೆಯಡಿ ಖಾತೆದಾರರು ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಪಡೆಯುತ್ತಾರೆ. ಪೂರ್ಣ ಎನ್ ಪಿ ಎಸ್ ಖಾತೆಯಾಗಿ ಪರಿವರ್ತನೆಯಾದ ಬಳಿಕ ಖಾತೆದಾರನು 60ರ ನಿವೃತ್ತಿ ವಯಸ್ಸನ್ನು ತಲುಪಿದ ಮೇಲೆ ಖಾತೆಯಲ್ಲಿರುವ ಸಂಗ್ರಹ ಮೊತ್ತದೊಂದಿಗೆ ಬಡ್ಡಿ ಸೇರಿ ಗಣನೀಯ ಮೊತ್ತವನ್ನು ಪಡೆಯಬಹುದು.

Exit mobile version