Site icon Vistara News

PAN -Aadhaar linking : ಪ್ಯಾನ್-ಆಧಾರ್‌ ಲಿಂಕ್‌ ಮಾಡಲು ಮೂರೇ ದಿನ ಬಾಕಿ

PAN -Aadhaar

ಆದಾಯ ತೆರಿಗೆ ಇಲಾಖೆಯ ಪ್ರಕಾರ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ನಡುವೆ ಲಿಂಕ್‌ ಮಾಡಲು ಇನ್ನು ಮೂದು ದಿನ ಮಾತ್ರ ಬಾಕಿ ಇದೆ. ಜೂನ್‌ 30 ಕೊನೆಯ ದಿನ. ತಪ್ಪಿದರೆ ಪ್ಯಾನ್‌ ನಿಷ್ಕ್ರಿಯ ಎನ್ನಿಸುತ್ತದೆ. ಒಂದು ವೇಳೆ ಪ್ಯಾನ್‌ – ಆಧಾರ್‌ ಲಿಂಕ್‌ ಮಾಡುವಾಗ ಕೆಲ ಕಾರಣಗಳಿಂದ ಲಿಂಕ್‌ ಆಗದಿರಬಹುದು. (PAN -Aadhaar linking) ಈ ಎಲ್ಲ ವಿವರಗಳನ್ನು ನೋಡೋಣ.

ಇದುವರೆಗೆ ಯಾರು ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡಿಲ್ಲವೋ, ಅವರು 1000 ರೂ. ದಂಡವನ್ನು ಕಟ್ಟಿ ಲಿಂಕ್‌ ಮಾಡಿಕೊಳ್ಳಬಹುದು. ಹೀಗಿದ್ದರೂ, ಅನೇಕ ಮಂದಿ ನಾನಾ ಕಾರಣಗಳಿಂದಾಗಿ ಆಧಾರ್-ಪ್ಯಾನ್‌ ಲಿಂಕ್‌ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಗೂ ಈ ಸಂಬಂಧ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಮಾಡಿರುವ ಟ್ವೀಟ್‌ನಲ್ಲಿ ಮಿಸ್‌ ಮ್ಯಾಚ್‌ ಆಗಲು ಕಾರಣ ಏನು ಎಂಬ ವಿವರಗಳನ್ನು ಕೊಟ್ಟಿದೆ.

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಪ್ಯಾನ್ – ಆಧಾರ್‌ ಲಿಂಕ್‌ ಮಾಡುವಾಗ ಹೆಸರು, ಜನ್ಮ ದಿನಾಂಕ ಮತ್ತು ಲಿಂಗ ವಿವರ ಸರಿಯಾಗಿರಬೇಕು. ತಪ್ಪಿದರೆ ಲಿಂಕ್‌ ಆಗದಿರಬಹುದು. ಒಂದು ವೇಳೆ ಅಷ್ಟಾಗಿಯೂ ಲಿಂಕ್‌ ಆಗದಿದ್ದರೆ ನೀವು ಬಯೊಮೆಟ್ರಿಕ್‌ ಆಧಾರಿತ ಅಥೆಂಟಿಫಿಕೇಶನ್‌ ಅನ್ನು ಮಾಡಬಹುದು. ಪ್ಯಾನ್‌ ಕಾರ್ಡ್‌ ಸೇವೆ ನೀಡುವ ಸೆಂಟರ್‌ಗಳಲ್ಲಿ 50 ರೂ. ಶುಲ್ಕ ಕೊಟ್ಟು ಪ್ಯಾನ್ – ಆಧಾರ್‌ ಲಿಂಕ್‌ ಮಾಡಬಹುದು.

ಯಾರಿಗೆ ವಿನಾಯಿತಿ ಇದೆ? 80 ವರ್ಷ ಮೇಲ್ಪಟ್ಟ ವಯಸ್ಸಿನವರು. ಆದಾಯ ತೆರಿಗೆ ಇಲಾಖೆ ಪ್ರಕಾರ ನಾನ್-ರೆಸಿಡೆಂಟ್ಸ್‌, ನಾನ್ -ಇಂಡಿಯನ್ ಸಿಟಿಜನ್ಸ್‌ ಆಧಾರ್-ಪ್ಯಾನ್‌ ಲಿಂಕ್‌ ಮಾಡುವುದರಿಂದ ವಿನಾಯಿತಿ ಪಡೆದಿದ್ದಾರೆ.

ಸರ್ಕಾರ 2023ರ ಜೂನ್‌ 30ರೊಳಗೆ ಕಡ್ಡಾಯವಾಗಿ ಪ್ಯಾನ್- ಆಧಾರ್‌ ಲಿಂಕ್‌ ಮಾಡಲು ಗಡುವನ್ನು ನಿಗದಿಪಡಿಸಿದೆ. (Permanent Account Number-PAN) ತಪ್ಪಿದರೆ 2023ರ ಜುಲೈ 1ರಿಂದ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಲಿದೆ. ಈ ಹಿಂದೆ 2023ರ ಮಾರ್ಚ್‌ 31 ಗಡುವು ನಿಗದಿಪಡಿಸಲಾಗಿತ್ತು. ಹೀಗಿದ್ದರೂ ಮತ್ತೆ ಮೂರು ತಿಂಗಳಿಗೆ, ಅಂದರೆ ಜೂನ್‌ 30 ಕ್ಕೆ ವಿಸ್ತರಿಸಲಾಗಿತ್ತು.

ಜಾಲತಾಣಗಳಲ್ಲಿ ಬಳಕೆದಾರರ ಅಳಲು: ಪ್ಯಾನ್ – ಆಧಾರ್‌ ಲಿಂಕ್‌ ವಿಷಯದಲ್ಲಿ 1000 ರೂ. ದಂಡ ಪಾವತಿ ಪ್ರಕ್ರಿಯೆ ಸಂಕೀರ್ಣವಾಗಿದೆ. ಕೆಲವು ಬ್ಯಾಂಕ್‌ಗಳ ಆಯ್ಕೆಯನ್ನು ಮಾತ್ರ ನೀಡಲಾಗಿದೆ. ಯುಪಿಐ, ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಪೇಮೆಂಟ್‌ ಮಾಡಿದ ಬಳಿಕವೂ ತಕ್ಷಣ ಲಿಂಕ್‌ ಆಗುತ್ತಿಲ್ಲ, ಎಂದು ಹಲವರು ದೂರಿದ್ದಾರೆ.

ಆನ್‌ಲೈನ್‌ ವ್ಯವಹಾರಗಳಲ್ಲಿ ಯೂಸರ್‌ ಇಂಟರ್‌ಫೇಸ್‌ ಎನ್ನುವುದು ಒಂದು ವಿಜ್ಞಾನ. ಅದನ್ನು ಡಿಸೈನ್‌ ಮಾಡುವವರು ಬಳಕೆದಾರರಾಗಿ ಅದನ್ನು ರಚನೆ ಮಾಡಬೇಕು. ಹೇಗೇಗೋ ಸಂಕೀರ್ಣವಾಗಿ ರಚಿಸಿ ಬಳಕೆಆರರು ಒದ್ದಾಡುವಂತೆ ಅದು ಇರಕೂಡದು. ಯಾವಾಗ ಬಳಕೆದಾರರಿಗೆ ಸ್ನೇಹಿಯಾಗಿ ಇರುವುದಿಲ್ಲವೋ, ಆಗ ಸೈಬರ್‌ ಸೇವಾ ಕೇಂದ್ರಗಳಿಗೆ ಸುಗ್ಗಿ. ದೇಟಾ ಸೇಫ್ಟಿ ಬಗ್ಗೆಯೂ ಕೇಳಬೇಡಿ ಎನ್ನುತ್ತಾರೆ ಡಾ. ಕಿರಣ್‌ ಆಚಾರ್ಯ ಅವರು.

ರಂಗಸ್ವಾಮಿ ಮೂಕನಹಳ್ಳಿ ಏನೆನ್ನುತ್ತಾರೆ?

ಜೂನ್‌ ಮಾತ್ರವಲ್ಲ, ಡಿಸೆಂಬರ್‌ ಕೊನೆಯವರೆಗೆ ಟೈಮ್‌ ಕೊಟ್ಟರೂ ಈ ಜೋಡಣೆ ಕ್ರಿಯೆ ಮುಗಿಯುವುದಿಲ್ಲ. ಏಕೆಂದರೆ ಈ ಪ್ರಕ್ರಿಯೆ ಸುಲಭವಿಲ್ಲ. ವಿದ್ಯಾವಂತರೂ, ಟೆಕ್ನಾಲಜಿ ಜ್ಞಾನ ಇರುವವರಿಗೂ ಇದು ಸಾಧ್ಯವಾಗುತ್ತಿಲ್ಲ. ಇನ್ನು ಜನ ಸಾಮಾನ್ಯರ ಪಾಡೇನು? ಎಂದು ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಅವರು ಹೇಳಿದ್ದಾರೆ. ಸರ್ಕಾರ ಹೆಲ್ಪ್‌ ಡೆಸ್ಕ್‌ ಶುರು ಮಾಡಿ ಸಮಸ್ಯೆ ಬಗೆಹರಿಸಬಹುದಿತ್ತು. ಇನ್ನಾದರೂ ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಮನಸ್ಸು ಮಾಡಲಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Viral video: ನಾನೊಬ್ಳೇ ಎಷ್ಟೂಂತ ಮಾಡ್ಲಿ, ಆಗಲ್ಲ ನಂಗೆ; ಆಧಾರ್‌ ಕೇಂದ್ರದ ಒತ್ತಡಕ್ಕೆ ಮಹಿಳಾ ಸಿಬ್ಬಂದಿ ಕಣ್ಣೀರು

ಆಧಾರ್-ಪ್ಯಾನ್‌ ಲಿಂಕ್‌ ಮಾಡದಿದ್ದರೆ ಏನಾಗುತ್ತದೆ?

2023ರ ಜುಲೈ 1ರಿಂದ ಆಧಾರ್‌ ಜತೆಗೆ ಪ್ಯಾನ್‌ ಲಿಂಕ್‌ ಮಾಡದಿದ್ದರೆ, ಪ್ಯಾನ್‌ ನಿಷ್ಕ್ರಿಯವಾಗುತ್ತದೆ. ಇದರ ಪರಿಣಾಮ ಪ್ಯಾನ್‌ ದಾಖಲೆ ಅಗತ್ಯವಿರುವ ರಿಫಂಡ್‌ಗಳು ನೆರವೇರುವುದಿಲ್ಲ. ಟಿಡಿಎಸ್‌ ಮತ್ತು ಟಿಸಿಎಸ್‌ ಕಡಿತದ ಪ್ರಮಾಣ ಹೆಚ್ಚಲಿದೆ. ನಿಮಗೆ ಐರಿ ರಿಟರ್ನ್‌ ಮಾಡಲು ಕಷ್ಟವಾಗಬಹುದು. ಅದಕ್ಕೆ ಮತ್ತೆ ದಂಡ ಕಟ್ಟಬೇಕಾಗಿ ಬರಬಹುದು. ತೆರಿಗೆ ಬೆನಿಫಿಟ್‌ ಸಿಗದೆ ಹೋಗಬಹುದು. ಹೊಸ ಬ್ಯಾಂಕ್‌ ಅಕೌಂಟ್‌ ತೆರೆಯಲು ಕಷ್ಟವಾಗಬಹುದು. ಕಾರು, ಗೃಹಸಾಲವನ್ನು, ಕ್ರೆಡಿಟ್‌ ಕಾರ್ಡ್‌ ಅನ್ನು ಬ್ಯಾಂಕ್‌ಗಳಿಂದ ಪಡೆಯಲು ಕಷ್ಟ ಸಾಧ್ಯವಾಗಬಹುದು.

ಪ್ಯಾನ್-ಆಧಾರ್‌ ಲಿಂಕ್‌ ಹೇಗೆ?

ಲಿಂಕ್‌ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಆಧಾರ್‌ ಜತೆ ಪ್ಯಾನ್‌ ಕಾರ್ಡ್‌ ಲಿಂಕ್‌ ಆಗಿದೆಯೇ ಎಂದು ಆನ್‌ಲೈನ್‌ ಮೂಲಕ ಪರಿಶೀಲಿಸಬಹುದು. ಅದು ಹೀಗಿದೆ-

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ತೆರಳಿ ಈ ಲಿಂಕ್‌ ಕ್ಲಿಕ್‌ ಮಾಡಿ (www.incometax.gov.in)

ಲಿಂಕ್‌ ಆಧಾರ್‌ ಸ್ಟೇಟಸ್‌ ಆಯ್ಕೆ ಮಾಡಿಕೊಳ್ಳಿ. ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆ ನಮೂದಿಸಿ.

ವ್ಯೂ ಲಿಂಕ್‌ ಆಧಾರ್‌ ಸ್ಟೇಟಸ್‌ ಕ್ಲಿಕ್ಕಿಸಿ. (view link aadhaar status)

ಆಧಾರ್-ಪ್ಯಾನ್‌ ಸ್ಟೇಟಸ್‌ ಪೇಜ್‌ನಲ್ಲಿ ಕಾಣಿಸುತ್ತದೆ. ಉದಾಹರಣೆಗೆ ಆಧಾರ್-ಪ್ಯಾನ್‌ ಲಿಂಕ್‌ ಆಗಿದ್ದರೆ Your PAN is linked to Aadhaar number. ಎಂಬ ಸಂದೇಶ ಕಾಣಿಸುತ್ತದೆ.

Exit mobile version