PAN Aadhaar Linking: ಸರ್ಕಾರ 2023ರ ಜೂನ್ 30ರೊಳಗೆ ಕಡ್ಡಾಯವಾಗಿ ಪ್ಯಾನ್- ಆಧಾರ್ ಲಿಂಕ್ ಮಾಡಲು ಗಡುವನ್ನು ನಿಗದಿಪಡಿಸಿದೆ. (Permanent Account Number-PAN) ತಪ್ಪಿದರೆ 2023ರ ಜುಲೈ 1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಈ ಹಿಂದೆ 2023ರ ಮಾರ್ಚ್ 31 ಗಡುವು ನಿಗದಿಪಡಿಸಲಾಗಿತ್ತು. ಹೀಗಿದ್ದರೂ ಮತ್ತೆ ಮೂರು ತಿಂಗಳಿಗೆ, ಅಂದರೆ ಜೂನ್ 30 ಕ್ಕೆ ವಿಸ್ತರಿಸಲಾಗಿತ್ತು.
ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?
2023ರ ಜುಲೈ 1ರಿಂದ ಆಧಾರ್ ಜತೆಗೆ ಪ್ಯಾನ್ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗುತ್ತದೆ. ಇದರ ಪರಿಣಾಮ ಪ್ಯಾನ್ ದಾಖಲೆ ಅಗತ್ಯವಿರುವ ರಿಫಂಡ್‌ಗಳು ನೆರವೇರುವುದಿಲ್ಲ. ಬಡ್ಡಿ ಪಾವತಿ ನಡೆಯುವುದಿಲ್ಲ. ಟಿಡಿಎಸ್ ಮತ್ತು ಟಿಸಿಎಸ್ ಕಡಿತದ ಪ್ರಮಾಣ ಹೆಚ್ಚಲಿದೆ. ನಿಮಗೆ ಐರಿ ರಿಟರ್ನ್ ಮಾಡಲು ಕಷ್ಟವಾಗಬಹುದು. ಅದಕ್ಕೆ ಮತ್ತೆ ದಂಡ ಕಟ್ಟಬೇಕಾಗಿ ಬರಬಹುದು. ತೆರಿಗೆ ಬೆನಿಫಿಟ್ ಸಿಗದೆ ಹೋಗಬಹುದು.
ಹೊಸ ಬ್ಯಾಂಕ್ ಅಕೌಂಟ್ ತೆರೆಯಲು ಕಷ್ಟವಾಗಬಹುದು. ಕಾರು, ಗೃಹಸಾಲವನ್ನು, ಕ್ರೆಡಿಟ್ ಕಾರ್ಡ್ ಅನ್ನು ಬ್ಯಾಂಕ್‌ಗಳಿಂದ ಪಡೆಯಲು ಕಷ್ಟ ಸಾಧ್ಯವಾಗಬಹುದು.
ಪ್ಯಾನ್-ಆಧಾರ್ ಲಿಂಕ್ ಹೇಗೆ?
- ಆದಾಯ ತೆರಿಗೆ ಇಲಾಖೆಯು ಪ್ಯಾನ್ ಅನ್ನು ಆಧಾರ್ ಜತೆಗೆ ಲಿಂಕ್ ಮಾಡಲು ಹಲವು ವಿಧಾನಗಳನ್ನು ಕಲ್ಪಿಸಿದೆ.
- ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in ಮೂಲಕ ಲಿಂಕ್ ಮಾಡಬಹುದು.
- ಈ ವೆಬ್ ಸೈಟ್ನಲ್ಲಿ ರಿಜಿಸ್ಟರ್ ಆಗದಿದ್ದಲ್ಲಿ ರಿಜಿಸ್ಟರ್ ಆಗಿ. ನಿಮ್ಮ ಪ್ಯಾನ್ ನಂಬರ್ ಯೂಸರ್ ಐಡಿ ಆಗಿರುತ್ತದೆ. ಜನ್ಮ ದಿನಾಂಕ ಪಾಸ್ ವರ್ಡ್ ಆಗಿರುತ್ತದೆ.
- ಲಾಗಿನ್ ಆದ ಬಳಿಕ ಪೇಜ್‌ನಲ್ಲಿ ಲಿಂಕ್ ಯುವರ್ ಪ್ಯಾನ್ ವಿತ್ ಆಧಾರ್ ಲಭಿಸುತ್ತದೆ. ಸಿಗದಿದ್ದರೆ ಪ್ರೊಫೈಲ್ ಸೆಟ್ಟಿಂಗ್ಸ್ಗೆ ಹೋಗಿ ಲಿಂಕ್ ಆಧಾರ್ ಮೇಲೆ ಕ್ಲಿಕ್ಕಿಸಿ.
- ಪ್ಯಾನ್ ವಿವರಗಳನ್ನು ಪರಿಶೀಲಿಸಿ. ಹೊಂದಾಣಿಕೆ ಆಗದಿದ್ದರೆ ಸರಿಪಡಿಸಬೇಕಾಗುತ್ತದೆ. ಹೊಂದಾಣಿಕೆ ಆಗುವುದಿದ್ದರೆ ಲಿಂಕ್ ನೌ ಬಟನ್ ಒತ್ತಿರಿ.
- ಯಶಸ್ವಿಯಾಗಿ ಲಿಂಕ್ ಆದ ಬಳಿಕ ಮೆಸೇಜ್ ಸಿಗುತ್ತದೆ.
- NSDL/UTIIL ಕಚೇರಿಗೆ ತೆರಳಿ ಪ್ಯಾನ್- ಆಧಾರ್ ಲಿಂಕ್ ಮಾಡಬಹುದು.
- ಪ್ಯಾನ್ -ಆಧಾರ್ ಲಿಂಕ್ ಮಾಡಲು ಗಡುವು ತಪ್ಪಿದರೆ ಬಳಿಕ ಪ್ಯಾನ್ ನಿಷ್ಕ್ರಿಯ ಎನ್ನಿಸುವುದು
ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
ಆಧಾರ್ ಜತೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಆನ್‌ಲೈನ್ ಮೂಲಕ ಪರಿಶೀಲಿಸಬಹುದು. ಅದು ಹೀಗಿದೆ-
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ತೆರಳಿ ಈ ಲಿಂಕ್ ಕ್ಲಿಕ್ ಮಾಡಿ (www.incometax.gov.in)
ಲಿಂಕ್ ಆಧಾರ್ ಸ್ಟೇಟಸ್ ಆಯ್ಕೆ ಮಾಡಿಕೊಳ್ಳಿ. ಪ್ಯಾನ್ ಮತ್ತು ಆಧಾರ್ ಸಂಖ್ಯೆ ನಮೂದಿಸಿ.
ವ್ಯೂ ಲಿಂಕ್ ಆಧಾರ್ ಸ್ಟೇಟಸ್ ಕ್ಲಿಕ್ಕಿಸಿ. (view link aadhaar status)
ಆಧಾರ್-ಪ್ಯಾನ್ ಸ್ಟೇಟಸ್ ಪೇಜ್‌ನಲ್ಲಿ ಕಾಣಿಸುತ್ತದೆ. ಉದಾಹರಣೆಗೆ ಆಧಾರ್-ಪ್ಯಾನ್ ಲಿಂಕ್ ಆಗಿದ್ದರೆ Your PAN is linked to Aadhaar number. ಎಂಬ ಸಂದೇಶ ಕಾಣಿಸುತ್ತದೆ.
Taxpayers are advised to link their PAN with Aadhaar at E-filing portal before 1st July 2023 to avoid below mentioned consequences of PAN becoming inoperative pic.twitter.com/XBRdqHUDgy
— Taxation Updates (Mayur J Sondagar) (@TaxationUpdates) June 9, 2023