ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಬ್ಯಾಂಕಿನ ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ. ಹಾಗಾದರೆ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಪಿಎನ್‌ಬಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಗಳಿಗೆ ಎಷ್ಟು ಬಡ್ಡಿ ದರ ಸಿಗುತ್ತದೆ? (ವಿಸ್ತಾರ Money Guide) ಇಲ್ಲಿದೆ ವಿವರ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) : ಎಸ್‌ಬಿಐ ಈಗ 10 ಕೋಟಿ ರೂ.ಗಿಂತ ಕಡಿಮೆ ಮೊತ್ತವಿರುವ ಉಳಿತಾಯ ಖಾತೆಗೆ ವಾರ್ಷಿಕ 2.7% ಬಡ್ಡಿ ದರ ನೀಡುತ್ತದೆ. 10 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ವಾರ್ಷಿಕ 3% ಬಡ್ಡಿ ನಿಗದಿಪಡಿಸಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್: ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ 50 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಬ್ಯಾಲೆನ್ಸ್ ಇರುವ ಉಳಿತಾಯ ಖಾತೆಗೆ 3% ಬಡ್ಡಿ ದರ ನೀಡುತ್ತದೆ. 50 ಲಕ್ಷ ರೂ.ಗಿಂತ ಹೆಚ್ಚಿನ ಬ್ಯಾಲೆನ್ಸ್‌ಗೆ 3.50% ಬಡ್ಡಿ ನೀಡುತ್ತದೆ. ನಿಮ್ಮ ಖಾತೆಯಲ್ಲಿ ದಿನವಹಿ ಕ್ಲೋಸಿಂಗ್ ಬ್ಯಾಲೆನ್ಸ್ ಎಷ್ಟಿರುತ್ತದೆ ಎಂಬುದನ್ನು ಪರಿಗಣಿಸಿ ಉಳಿತಾಯ ಖಾತೆಯ ಬಡ್ಡಿ ದರ ಲೆಕ್ಕಾಚಾರ ಮಾಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕ್‌ನಲ್ಲಿ 50 ಲಕ್ಷ ರೂ.ಗಿಂತ ಕೆಳಗಿನ ಬ್ಯಾಲೆನ್ಸ್‌ಗೆ 3% ಹಾಗೂ 50 ಲಕ್ಷ ರೂ.ಗಿಂತ ಹೆಚ್ಚಿನ ಬ್ಯಾಲೆನ್ಸ್‌ಗೆ 3.50% ಬಡ್ಡಿ ದರ ಸಿಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್ 10 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಉಳಿತಾಯ ಖಾತೆಗೆ 2.7% ಬಡ್ಡಿ ದರ ನೀಡುತ್ತದೆ. ಹೆಚ್ಚಿನ ಮೊತ್ತಕ್ಕೆ 2.75% ಬಡ್ಡಿ ಆದಾಯ ಕೊಡುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್: ಖಾಸಗಿ ವಲಯದ ಕೋಟಕ್ ಮಹೀಂದ್ರಾ ಬ್ಯಾಂಕ್ 50 ಲಕ್ಷ ರೂ. ತನಕದ ಬ್ಯಾಲೆನ್ಸ್‌ಗೆ ವಾರ್ಷಿಕ 3.50% ಬಡ್ಡಿ ನೀಡುತ್ತದೆ. 50 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ 4% ಬಡ್ಡಿ ನೀಡುತ್ತದೆ.
ಯೆಸ್ ಬ್ಯಾಂಕ್: ಖಾಸಗಿ ವಲಯದ ಯೆಸ್ ಬ್ಯಾಂಕ್ 1 ಲಕ್ಷ ರೂ.ಗಿಂತ ಕಡಿಮೆ ಬ್ಯಾಲೆನ್ಸ್ ಇರುವ ಉಳಿತಾಯ ಖಾತೆಗೆ 4% ಬಡ್ಡಿ ನೀಡುತ್ತದೆ. 1 ರಿಂದ 5 ಲಕ್ಷ ರೂ. ಬ್ಯಾಲೆನ್ಸ್‌ಗೆ 4.25% ಬಡ್ಡಿ ಒದಗಿಸುತ್ತದೆ. 5ರಿಂದ 10 ಲಕ್ಷ ರೂ. ಬ್ಯಾಲೆನ್ಸ್‌ಗೆ 5% ಬಡ್ಡಿ ಒದಗಿಸುತ್ತದೆ. 10 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗೆ 5.50% ಬಡ್ಡಿ ನೀಡುತ್ತದೆ. 25 ಲಕ್ಷ ರೂ.ಗಳಿಂದ 1 ಕೋಟಿ ರೂ. ಬ್ಯಾಲೆನ್ಸ್‌ಗೆ 6% ಬಡ್ಡಿ ಒದಗಿಸುತ್ತದೆ.