Site icon Vistara News

SBI FD vs Post office Term Deposit Scheme: 5 ವರ್ಷಗಳ ಅವಧಿಗೆ ಎಲ್ಲಿ ಹೂಡಿಕೆ ಮಾಡಬಹುದು?

cash

ಇವತ್ತಿನ ದಿನಗಳಲ್ಲಿ ಹೂಡಿಕೆಯ ಆಯ್ಕೆಗಳು ಹಲವು ಲಭ್ಯ. ಹೀಗಿದ್ದರೂ ದೇಶದಲ್ಲಿ ಗಣನೀಯ ಸಂಖ್ಯೆಯಲ್ಲಿ ಜನತೆ ನಿಶ್ಚಿತ ಠೇವಣಿಗಳಲ್ಲಿ (Fixed Deposit -FD) ಹೂಡಿಕೆ ಮಾಡುತ್ತಾರೆ. ಅದು (SBI FD vs Post office Term Deposit Scheme) ಅವರ ನೆಚ್ಚಿನ ಹೂಡಿಕೆಯ ಆಯ್ಕೆಯಾಗಿ ಪರಿಣಮಿಸಿದೆ. ಅನೇಕ ಮಂದಿ ಹಿರಿಯ ನಾಗರಿಕರು, ಮುಖ್ಯವಾಗಿ ಸೇವೆಯಿಂದ ನಿವೃತ್ತರಾದವರು ಫಿಕ್ಸೆಡ್‌ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. (fixed deposit schemes)

ದೇಶದ ಅತಿ ದೊಡ್ಡ ಬ್ಯಾಂಕ್‌ ಸಾರ್ವಜನಿಕ ವಲಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India) ಇಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಯೋಜನೆಗಳು ಇವೆ. ಅಂಚೆ ಇಲಾಖೆಯಲ್ಲೂ ನಿಶ್ಚಿತ ಅವಧಿಯ ಠೇವಣಿಗಳಲ್ಲಿ ಹೂಡಿಕೆ ಮಾಡಬಹುದು. ಹಾಗಾದರೆ ಈ ಎರಡು ಭಿನ್ನ ಆಯ್ಕೆಗಳನ್ನು ಹೋಲಿಸೋಣ. ಯಾವುದು ಉತ್ತಮ ಎಂಬುದನ್ನು ನೀವು ನಿರ್ಧರಿಸಿ.

ಎಸ್‌ಬಿಐ ಎಫ್‌ಡಿ ಸ್ಕೀಮ್‌ಗಳು 7 ದಿನಗಳಿಂದ 10 ವರ್ಷದ ತನಕ ಇರುತ್ತದೆ. ಇಲ್ಲಿ ಬಡ್ಡಿ ದರ 3.00% ಮತ್ತು 6.50% ತನಕ ಸಾಮಾನ್ಯ ಗ್ರಾಹಕರಿಗೆ ಸಿಗುತ್ತದೆ. ಹೀಗಿದ್ದರೂ ಹಿರಿಯ ನಾಗರಿಕರು (senior citizens) ಹೆಚಿನ ಬಡ್ಡಿ ದರ ಪಡೆಯಬಹುದು. ಎಸ್‌ಬಿಐ ಹಿರಿಯ ನಾಗರಿಕರಿಗೆ 3.50%ಯಿಂದ 7.50% ಬಡ್ಡಿ ನೀಡುತ್ತದೆ. ಎಸ್‌ಬಿಐನ ಸ್ಪೆಶಲ್‌ ಎಫ್‌ಡಿ ಸ್ಕೀಮ್‌ ಅಮೃತ್‌ ಕಲಾಶ್‌ ( 444 ದಿನಗಳ ಎಫ್‌ಡಿ) ಸಾಮಾನ್ಯ ನಾಗರಿಕರಿಗೆ 7.10% ಮತ್ತು ಹಿರಿಯ ನಾಗರಿಕರಿಗೆ 7.60% ಬಡ್ಡಿ ನೀಡುತ್ತದೆ. ( ಆಗಸ್ಟ್‌ 15, 2023ಕ್ಕೆ ಈ ಸ್ಕೀಮ್‌ ವ್ಯಾಲಿಡಿಟಿ ಮುಗಿಯಲಿದೆ)

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಮತ್ತೊಂದು ಕಡೆ ಅಂಚೆ ಇಲಾಖೆ ಕೂಡ 1 ವರ್ಷದಿಂದ 5 ವರ್ಷದ ತನಕದ ಅವಧಿಯ ಸ್ಕೀಮ್‌ಗಳನ್ನು ಹೊಂದಿದೆ. ಗ್ರಾಹಕರು 6.9% ಬಡ್ಡಿ ಪಡೆಯಬಹುದು. ಹೆಚ್ಚುವರಿಯಾಗಿ 2 ವರ್ಷ ಅವಧಿಯ ಎಫ್‌ಎಗ 7%, 5 ವರ್ಷ ಎಫ್‌ಡಿಗೆ 7.5% ಬಡ್ಡಿ ಪಡೆಯಬಹುದು. 5 ವರ್ಷ ಮೀರಿದ ಎಫ್‌ ಡಿ ಹೂಡಿಕೆ ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ 1.50 ಲಕ್ಷ ರೂ. ತನಕ ತೆರಿಗೆ ರಿಬೇಟ್‌ ಪಡೆಯಬಹುದು.

5 ವರ್ಷಗಳ ಅವಧಿಯ ಎಫ್‌ಡಿ ಸ್ಕೀಮ್‌ಗಳಿಗೆ ಅಂಚೆ ಕಚೇರಿಯ ಸ್ಕೀಮ್‌ಗಳು ಆಕರ್ಷಣೆ ಉಳಿಸಿಕೊಂಡಿವೆ. 7.50% ಬಡ್ಡಿ ಪಡೆಯಬಹುದು. ಹೂಡಿಕೆದಾರರು ಎಚ್ಚರಿಕೆಯಿಂದ ಹೂಡಿಕೆಯ ಗುರಿಗಳನ್ನು ಲೆಕ್ಕಾಚಾರ ಮಾಡಿ ಇನ್ವೆಸ್ಟ್‌ ಮಾಡಬಹುದು.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಲಾಕರ್‌ ಅಗ್ರಿಮೆಂಟ್‌ ಕುರಿತ ನಿಯಮಾವಳಿಗಳನ್ನು ಪರಿಷ್ಕರಿಸಿದೆ. ಹಾಲಿ ಬಳಕೆದಾರರು ಲಾಕರ್‌ ಹೋಲ್ಡಿಂಗ್‌ ಬ್ರಾಂಚ್‌ ಅನ್ನು ಸಂಪರ್ಕಿಸಿ ಒಪ್ಪಂದವನ್ನು ಪರಿಷ್ಕರಿಸಿಕೊಳ್ಳಲು ಬ್ಯಾಂಕ್‌ ಮನವಿ ಮಾಡಿದೆ. ಕನಿಷ್ಠ 50% ಲಾಕರ್‌ಗಳು ಹೊಸ ಅಗ್ರಿಮೆಂಟ್‌ ವ್ಯಾಪ್ತಿಗೆ ಬರಬೇಕು ಎಂದು ಆರ್‌ಬಿಐ ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಿದೆ. ಸೆಪ್ಟೆಂಬರ್‌ 30ರ ವೇಳೆಗೆ 30%, ಡಿಸೆಂಬರ್‌ 30 ವೇಳೆಗೆ 100% ಆಗಬೇಕು ಎಂದು ಆರ್‌ಬಿಐ ತಿಳಿಸಿದೆ. ಎಸ್‌ಬಿಐ ಲಾಕರ್‌ ಸೇವೆಯ ನೋಂದಣಿ ಶುಲ್ಕ ಪರಿಷ್ಕರಣೆಯಾಗಿದ್ದು, ಸಣ್ಣ ಮತ್ತು ಮಧ್ಯಮ ಸೈಜ್‌ ಲಾಕರ್‌ಗೆ 500 ರೂ, ದೊಡ್ಡ ಲಾಕರ್‌ಗೆ 1,000 ರೂ. ನೋಂದಣಿ ಶುಲ್ಕ ಅನ್ವಯಿಸಲಿದೆ. ಸ್ಥಳ ಮತ್ತು ಗಾತ್ರವನ್ನು ಆಧರಿಸಿ ಲಾಕರ್‌ ಬಾಡಿಗೆ ಶುಲ್ಕ ವ್ಯತ್ಯಾಸವಾಗುತ್ತದೆ.

Exit mobile version