ಹೊಸ 2023-24ರ ಆರ್ಥಿಕ ವರ್ಷ ಆರಂಭವಾಗಿದೆ. ಹಣಕಾಸು ವಿಚಾರಗಳಲ್ಲಿ ಹಲವು ಹೊಸ ನಿಯಮಗಳು ಜಾರಿಯಾಗಿವೆ. ತೆರಿಗೆ, ಹೂಡಿಕೆ, ವೈಯಕ್ತಿಕ ಹಣಕಾಸು ವಿಷಯಗಳಲ್ಲಿ ಹೊಸ ಬದಲಾವಣೆಗಳು ಅನುಷ್ಠಾನವಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಕ್ರೆಡಿಟ್ ಕಾರ್ಡ್‌ಗಳ ಕ್ಯಾಶ್ ಬ್ಯಾಕ್ ಸೇವೆಗೆ ಸಂಬಂಧಿಸಿ ನಿಯಮಾವಳಿಗಳನ್ನು ಮೇ 1 ರಿಂದ ಅನ್ವಯಿಸುವಂತೆ ಬದಲಾಯಿಸಿದೆ. ವಿವರಗಳು ಇಲ್ಲಿದೆ.
- ಗ್ರಾಹಕರು AURUM Credit Card ಮೂಲಕ ಈಜೀ ಡಿನ್ನರ್ ಪ್ರೈಮ್ ( EazyDiner Prime and Lenskart Gold Membership) ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
- AURUM Credit Card ಹೊಂದಿರುವವರು RBL Luxe ನಿಂದ 5,00000 ರೂ. ವೆಚ್ಚಕ್ಕೆ 5000 ರೂ. ಕೂಪನ್ ಪಡೆಯಲು ಸಾಧ್ಯವಿಲ್ಲ. ಟಾಟಾ CLiQ Luxury ಪಡೆಯಬಹುದು.
- ಎಸ್‌ಬಿಐ ಸಿಂಪ್ಲಿ ಕ್ಲಿಕ್ ಎಸ್‌ಬಿಐ (Simply CLICK Advantage SBI) ಮತ್ತು ಸಿಂಪ್ಲಿ ಕ್ಲಿಕ್ ಅಡ್ವಾಂಟೇಜ್ ಎಸ್‌ಬಿಐ ಕಾರ್ಡ್ ( Simply CLICK Advantage SBI Card) ಅಡಿಯಲ್ಲಿ ರಿವಾರ್ಡ್ ಪಾಯಿಂಟ್‌ಗಳು ಕಡಿಮೆಯಾಗಿದೆ.
- ಕ್ಯಾಶ್‌ಬ್ಯಾಕ್ ಎಸ್‌ಬಿಐ ಕಾರ್ಡ್‌ಗಳು ಜ್ಯುವೆಲ್ಲರಿ, ಶಾಲೆ ಮತ್ತು ಶಿಕ್ಷಣ ಸೇವೆಗಳು, ಯುಟಿಲಿಟಿ, ವಿಮೆ ಸೇವೆಗಳನ್ನು ಪಡೆಯಲು ಬಳಕೆಯಾದರೆ ಆಗ ಕ್ಯಾಶ್ ಬ್ಯಾಕ್ ಸಿಗುವುದಿಲ್ಲ.
- ಮಾರ್ಚ್ 17ರಿಂದ ಕ್ರೆಡಿಟ್ ಕಾರ್ಡ್ Rent payment ಕುರಿತ ಸಂಸ್ಕರಣೆ ಶುಲ್ಕವನ್ನು ಎಸ್‌ಬಿಐ ಬದಲಾಯಿಸಿದೆ. ಈ ಹಿಂದಿನ 99 ರೂ.ಗಳ ಶುಲ್ಕ 199 ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ :SBI ATM : ಎಸ್‌ಬಿಐನಿಂದ ಮುಂದಿನ 3 ವರ್ಷಗಳಲ್ಲಿ ಅರ್ಧದಷ್ಟು ಎಟಿಎಂಗಳು ಬದಲು
ಎಸ್‌ಬಿಐ ಕಾರ್ಡ್ ವೆಬ್ ಸೈಟ್ ಪ್ರಕಾರ ಸಂಸ್ಥೆಯ ನಾನಾ ಕ್ರೆಡಿಟ್ ಕಾರ್ಡ್‌ಗಳ ವಾರ್ಷಿಕ ಶುಲ್ಕ ಇಂತಿದೆ. AURUM ಕ್ರೆಡಿಟ್ ಕಾರ್ಡ್‌ನ ವಾರ್ಷಿಕ ಶುಲ್ಕ 9,999 ರೂ, ಎಸ್‌ಬಿಐ ಕಾರ್ಡ್ ELITE ಶುಲ್ಕ 4,999 ರೂ, ಎಸ್‌ಬಿಐ ಕಾರ್ಡ್ ಪ್ರೈಮ್ 2999 ರೂ, ಎಸ್‌ಬಿಐ ಕಾರ್ಡ್ ಪ್ರೈಮ್ ಅಡ್ವಾಂಟೇಜ್ 2,999 ರೂ, ಶೌರ್ಯ ಎಸ್‌ಬಿಐ ಕಾರ್ಡ್ 250 ರೂ, ಎಸ್‌ಬಿಐ ಕಾರ್ಡ್ ಪಲ್ಸ್ 1499 ರೂ, ಕ್ಯಾಶ್‌ಬ್ಯಾಕ್ ಎಸ್‌ಬಿಐ ಕಾರ್ಡ್ 999 ರೂ, ಆದಿತ್ಯ ಬಿರ್ಲಾ ಎಸ್‌ಬಿಐ ಕಾರ್ಡ್ 499 ರೂ.