ಹಿರಿಯ ನಾಗರಿಕರಲ್ಲಿ ಬಹುತೇಕ ಮಂದಿಗೆ ಸಾಮಾನ್ಯವಾಗಿ ಲಾಂಗ್ ಟರ್ಮ್ ಫಿಕ್ಸೆಡ್ ಡೆಪಾಸಿಟ್ ಒಂದು ಆದಾಯದ ಮೂಲವಾಗಿರುತ್ತದೆ. ನಿಗದಿತ ಆದಾಯ ಮತ್ತು ಹೂಡಿಕೆಯ ಸುರಕ್ಷತೆಗೆ ಅವರು ಆದ್ಯತೆ ನೀಡುವುದು ಸಹಜ. ಇಳಿ ವಯಸ್ಸಿನಲ್ಲಿ ರಿಸ್ಕ್ ತೆಗೆದುಕೊಂಡು (Senior citizen long term fixed deposit interest rates) ಅಪಾಯಕಾರಿ ಹೂಡಿಕೆಗೆ ಅವರು ಮುಂದಾಗುವುದಿಲ್ಲ. ಹಾಗಾದರೆ ಹಿರಿಯ ನಾಗರಿಕರಿಗೆ ನಿಫ್ಟಿ ಬ್ಯಾಂಕ್ ಇಂಡೆಕ್ಸ್‌ನಲ್ಲಿ ಗುರುತಿಸಿರುವ, ಪ್ರಮುಖ ಬ್ಯಾಂಕ್‌ಗಳಲ್ಲಿ ಸಿಗುವ ಎಫ್‌ಡಿ ಬಡ್ಡಿ ದರಗಳ ಬಗ್ಗೆ ನೋಡೋಣ. ದೀರ್ಘಾವಧಿಯ ನಿಶ್ಚಿತ ಅವಧಿಯ ಠೇವಣಿಗಳು 5-10 ವರ್ಷ ಅವಧಿಯನ್ನು ಒಳಗೊಂಡಿರುತ್ತದೆ.
ಈ ವರ್ಷ ನಾನಾ ಅವಧಿಯ ಫಿಕ್ಸೆಡ್ ಡೆಪಾಸಿಟ್ ದರಗಳು ಏರಿಕೆಯಾಗಿವೆ. ಹೀಗಿದ್ದರೂ 5-10 ವರ್ಷ ಅವಧಿಯ ಎಫ್‌ಡಿಗಳ ಇಂಟರೆಸ್ಟ್ ದರಗಳಲ್ಲಿ ಅಂಥ ವ್ಯತ್ಯಾಸವಾಗಿಲ್ಲ. ನಿಫ್ಟಿ ಬ್ಯಾಂಕ್ ಇಂಡೆಕ್ಸ್ (Nifty Bank Index) ಅಡಿಯಲ್ಲಿ ನೋಂದಾಯಿತ ಐದು ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರಿಗೆ 5-10 ವರ್ಷ ಅವಧಿಯ ನಿಶ್ಚಿತ ಅವಧಿಯ ಠೇವಣಿಗಳಿಗೆ 7.5% ಬಡ್ಡಿ ದರ ಇದೆ. ಈ ಬ್ಯಾಂಕ್‌ಗಳಲ್ಲಿ ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್ ಇದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ ಅತಿ ಹೆಚ್ಚು ಬಡ್ಡಿ ದರವನ್ನು ಒದಗಿಸುತ್ತದೆ. ಇದು ಲಾಂಗ್ ಟರ್ಮ್ ಫಿಕ್ಸೆಡ್ ಡೆಪಾಸಿಟ್ ಮೇಲೆ 7.75% ಬಡ್ಡಿಯನ್ನು ಸೀನಿಯರ್ ಸಿಟಿಜನ್ಸ್‌ಗೆ ನೀಡುತ್ತದೆ. ಇದು ನಿಫ್ಟಿ ಬ್ಯಾಂಕ್ ಇಂಡೆಕ್ಸ್‌ನಲ್ಲಿ ನೋಂದಣಿಯಾಗಿದೆ. ಇದಾದ ಬಳಿಕ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ (7.71%) ಬಡ್ಡಿ ನೀಡುತ್ತದೆ. ಇದು ಕೂಡ ನಿಫ್ಟಿ ಬ್ಯಾಂಕ್ ಇಂಡೆಕ್ಸ್‌ನಲ್ಲಿ ಲಿಸ್ಟೆಡ್ ಆಗಿದೆ. ಎಯು ಬ್ಯಾಂಕ್ ಈ ಇಂಡೆಕ್ಸ್‌ನಲ್ಲಿ ಲಿಸ್ಟೆಡ್ ಆಗಿರುವ ಏಕೈಕ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇನ್ನೆರಡು ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ದೀರ್ಘಾವಧಿಯ ಡೆಪಾಸಿಟ್‌ಗಳಿಗೆ 7%ಕ್ಕಿಂತ ಕಡಿಮೆ ಬಡ್ಡಿಯನ್ನು ನೀಡುತ್ತದೆ. ಈ ಎಲ್ಲ ಬ್ಯಾಂಕ್‌ಗಳು 2 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಎಫ್‌ಡಿಗಳಿಗೆ ಈ ಬಡ್ಡಿ ದರಗಳನ್ನು ನೀಡುತ್ತವೆ.
ಎಚ್‌ಡಿಎಫ್‌ಸಿ ಬ್ಯಾಂಕ್: ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7.75% ಬಡ್ಡಿ ದರ ನೀಡುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7.5% ಬಡ್ಡಿ ದರ ನೀಡುತ್ತದೆ.
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7.71% ಬಡ್ಡಿ ದರ ನೀಡುತ್ತದೆ.
ಎಕ್ಸಿಸ್ ಬ್ಯಾಂಕ್: ಎಕ್ಸಿಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7% ಬಡ್ಡಿ ದರ ನೀಡುತ್ತದೆ.
ಬಂಧನ್ ಬ್ಯಾಂಕ್: ಬಂಧನ್ ಬ್ಯಾಂಕ್ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 6.6% ಬಡ್ಡಿ ದರ ನೀಡುತ್ತದೆ.
ಬ್ಯಾಂಕ್ ಆಫ್ ಬರೋಡಾ: ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7.5% ಬಡ್ಡಿ ದರ ನೀಡುತ್ತದೆ.
ಫೆಡರಲ್ ಬ್ಯಾಂಕ್: ಫೆಡರಲ್ ಬ್ಯಾಂಕ್ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7.25% ಬಡ್ಡಿ ದರ ನೀಡುತ್ತದೆ.
ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7.5% ಬಡ್ಡಿ ದರ ನೀಡುತ್ತದೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್: ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7.5% ಬಡ್ಡಿ ದರ ನೀಡುತ್ತದೆ.
ಇದನ್ನೂ ಓದಿ:Milage Scooters in India : ಪೆಟ್ರೋಲ್ ಉಳಿತಾಯ ಮಾಡುವ ಕೆಲವು ಸ್ಕೂಟರ್ಗಳು
ಇಂಡಸ್ ಇಂಡ್ ಬ್ಯಾಂಕ್: ಇಂಡಸ್ ಇಂಡ್ ಬ್ಯಾಂಕ್ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7.5% ಬಡ್ಡಿ ದರ ನೀಡುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್, ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 7.3% ಬಡ್ಡಿ ದರ ನೀಡುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಹಿರಿಯ ನಾಗರಿಕರಿಗೆ 5 -10 ವರ್ಷ ಅವಧಿಯ ಠೇವಣಿಗೆ 6.7 % ಬಡ್ಡಿ ದರ ನೀಡುತ್ತದೆ.