Site icon Vistara News

Tax Saving Tips: 10 ಲಕ್ಷ ರೂ. ಆದಾಯ ಇದ್ದರೂ ತೆರಿಗೆಯಿಂದ ಪಾರಾಗಲು ಸಾಧ್ಯ! ಇಲ್ಲಿದೆ ಸರಳ ಲೆಕ್ಕಾಚಾರ!

Tax Saving Tips

ಕೇಂದ್ರ ಬಜೆಟ್‌ನಲ್ಲಿ (Union Budget 2024) ಈ ಬಾರಿ (Tax Saving Tips) ಹಣಕಾಸು (Money Guide) ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಹೊಸ ತೆರಿಗೆ ಪದ್ಧತಿಯಡಿ (New Tax Regime) ಬಹುದೊಡ್ಡ ತೆರಿಗೆ ವಿನಾಯಿತಿಯನ್ನು ನೀಡಿದ್ದಾರೆ. ಪ್ರಮಾಣಿತ ತೆರಿಗೆ ಕಡಿತವನ್ನು (standard tax deduction) 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಿದ್ದಾರೆ. ಹೀಗಾಗಿ ಸಾಮಾನ್ಯ ಭಾರತೀಯ ನಾಗರಿಕರು 7.75 ಲಕ್ಷ ರೂ.ವರೆಗಿನ ಆದಾಯವನ್ನು (Money Guide) ತೆರಿಗೆ (tax free) ಮುಕ್ತಗೊಳಿಸಬಹುದು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯ 3.0ರ ಮೊದಲ ಬಜೆಟ್‌ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಜನರಿಗೆ ಬಹುದೊಡ್ಡ ಪ್ರಯೋಜನವನ್ನು ನೀಡಲಾಗಿದೆ. ಇದರಲ್ಲಿ ಹೊಸ ತೆರಿಗೆ ಪದ್ಧತಿಯಡಿ ದೊಡ್ಡ ರಿಯಾಯಿತಿ ನೀಡಿದ್ದು, ಪ್ರಮಾಣಿತ ಆದಾಯ ತೆರಿಗೆ ಕಡಿತವನ್ನು 50,000 ರೂ. ನಿಂದ 75,000 ರೂ.ಗೆ ಹೆಚ್ಚಿಸಲಾಗಿದೆ.

ಇದರೊಂದಿಗೆ ತೆರಿಗೆ ಸ್ಲ್ಯಾಬ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. 7.75 ಲಕ್ಷ ರೂ. ಆದಾಯವು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಈಗ ಸಂಪೂರ್ಣ ತೆರಿಗೆ ಮುಕ್ತವಾಗಿದೆ. ಆದರೆ ಯಾರೊಬ್ಬರ ವಾರ್ಷಿಕ ಆದಾಯ 10 ಲಕ್ಷ ರೂ.ಗಳಿದ್ದರೆ ಅವರೂ ಆದಾಯ ತೆರಿಗೆಯಿಂದ ಮುಕ್ತರಾಗಿ ಇರಬಹುದು. ಇದಕ್ಕಾಗಿ ಕೆಲವು ಲೆಕ್ಕಾಚಾರಗಳನ್ನು ಇಲ್ಲಿ ನೀಡಲಾಗಿದೆ.

Money Guide


ತೆರಿಗೆ ಉಳಿಸುವುದು ಹೇಗೆ?

1. 10 ಲಕ್ಷ ರೂ.ವರೆಗಿನ ಆದಾಯದ ಮೇಲೆ ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಲು ತೆರಿಗೆ ರಿಟರ್ನ್ ಸಲ್ಲಿಕೆ ಮಾದರಿಯನ್ನು ಹಳೆಯ ತೆರಿಗೆ ಪದ್ಧತಿಗೆ ಬದಲಾಯಿಸಬೇಕಾಗುತ್ತದೆ. ಇದರಲ್ಲಿ ಅನೇಕ ರೀತಿಯ ಕಡಿತಗಳನ್ನು ಕ್ಲೈಮ್ ಮಾಡಬಹುದು ಮತ್ತು ಅನೇಕ ರೀತಿಯ ಆದಾಯದ ಮೇಲೆ ತೆರಿಗೆಯನ್ನು ಉಳಿಸಬಹುದು.

2. ಹಳೆಯ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡರೆ 50,000 ರೂ. ವರೆಗೆ ಪ್ರಮಾಣಿತ ಕಡಿತವನ್ನು ಪಡೆಯಬಹುದು. ಅಂದರೆ 50,000 ರೂ. ವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಇದು ಒಟ್ಟು ಆದಾಯದಿಂದ ಮುಂಚಿತವಾಗಿ ಕಡಿತಗೊಳಿಸಲಾಗುವ ಮೊತ್ತವಾಗಿದೆ. ಅಂದರೆ 10 ಲಕ್ಷ ರೂಪಾಯಿ ಗಳಿಸುವ ವ್ಯಕ್ತಿಯ ತೆರಿಗೆಯ ಆದಾಯವು 9.50 ಲಕ್ಷ ರೂಪಾಯಿ ಆಗುತ್ತದೆ.

3. ಇನ್ನು 80ಸಿಯ ಲಾಭವನ್ನು ನೀಡುವ ಪಿಪಿಎಫ್, ಇಪಿಎಫ್ ಮತ್ತು ಎನ್ ಎಸ್ ಸಿಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ 1.5 ಲಕ್ಷ ರೂ.ವರೆಗೆ ತೆರಿಗೆ ಉಳಿಸಬಹುದು. ಇದರಿಂದ 9.50 ಲಕ್ಷದಿಂದ 1.50 ಲಕ್ಷ ರೂ. ಕಡಿತಗೊಳಿಸಿದರೆ ತೆರಿಗೆಯ ಆದಾಯವು 8 ಲಕ್ಷ ರೂ.ಗಳಾಗುತ್ತದೆ.

4. ಅಲ್ಲದೇ ಎನ್ ಪಿ ಎಸ್ ನಲ್ಲಿ ವಾರ್ಷಿಕವಾಗಿ 50,000 ರೂ.ವರೆಗೆ ಹೂಡಿಕೆ ಮಾಡಿದರೆ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ 50,000 ರೂ. ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ 8 ಲಕ್ಷದಿಂದ 50 ಸಾವಿರವನ್ನು ಕಳೆದರೆ ತೆರಿಗೆಯ ಆದಾಯವು 7.50 ಲಕ್ಷ ರೂಪಾಯಿಗಳಾಗುತ್ತದೆ.

5. ಗೃಹ ಸಾಲ ಪಡೆದವರು ಆದಾಯ ತೆರಿಗೆಯ ಸೆಕ್ಷನ್ 24ಬಿ ಅಡಿಯಲ್ಲಿ 2 ಲಕ್ಷ ರೂಪಾಯಿಗಳವರೆಗೆ ಬಡ್ಡಿಯನ್ನು ಉಳಿಸಬಹುದು. ಈಗ 7.50 ಲಕ್ಷದಿಂದ 2 ಲಕ್ಷ ರೂಪಾಯಿ ಕಳೆದರೆ 5.50 ಲಕ್ಷ ರೂಪಾಯಿ ಉಳಿಯುತ್ತದೆ.

6. ವೈದ್ಯಕೀಯ ವಿಮೆಗಳನ್ನು ತೆಗೆದುಕೊಂಡಿದ್ದರೆ ಆದಾಯ ತೆರಿಗೆಯ ಸೆಕ್ಷನ್ 80ಡಿ ಅಡಿಯಲ್ಲಿ 25 ಸಾವಿರ ರೂಪಾಯಿಗಳವರೆಗೆ ತೆರಿಗೆ ಉಳಿಸಬಹುದು. ಜೊತೆಗೆ ಹೆಂಡತಿ, ಮಕ್ಕಳ ಹೆಸರಿನಲ್ಲಿ ಆರೋಗ್ಯ ವಿಮೆಯಲ್ಲಿದ್ದರೆ 50,000 ರೂಪಾಯಿಗಳವರೆಗೆ ಹೆಚ್ಚುವರಿ ವಿನಾಯಿತಿ ಪಡೆಯಬಹುದು. ಇದರಿಂದ 5.50 ಲಕ್ಷ ರೂಪಾಯಿಗಳಿಂದ 75,000 ರೂಪಾಯಿಗಳನ್ನು ಹೆಚ್ಚು ಕಳೆದರೆ ಆದಾಯವು 4.75 ಲಕ್ಷ ರೂಪಾಯಿಗಳಾಗಿರುತ್ತದೆ.

ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

ಹಳೆಯ ತೆರಿಗೆ ಪದ್ಧತಿಯಲ್ಲಿ 5 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲದಿರುವುದರಿಂದ ಈ ಸಂದರ್ಭದಲ್ಲಿ 10 ಲಕ್ಷ ರೂ. ಆದಾಯವಿದ್ದವರಿಗೂ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಈ ರೀತಿಯಾಗಿ 10 ಲಕ್ಷ ರೂ. ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಬಹುದು.

Exit mobile version