Site icon Vistara News

Vehicle Insurance : ವಿಸ್ತಾರ Money Guide: ಅಪಘಾತದ ಬಳಿಕ ಬೈಕ್‌ ಇನ್ಷೂರೆನ್ಸ್‌ ಕ್ಲೇಮ್‌ ಮಾಡಿಕೊಳ್ಳುವುದು ಹೇಗೆ?

BIKE INSURANCE

BIKE INSURANCE

ಅಕಸ್ಮಾತ್‌ ನಿಮ್ಮ ಬೈಕ್‌ಗೆ ಏನಾದರೂ ಅಪಘಾತ ಸಂಭವಿಸಿ ಹಾನಿಯಾದರೆ, ಹವಾಮಾನ ವೈಪರೀತ್ಯ ಅಥವಾ ಬೈಕ್‌ ಕಳ್ಳತನವಾದರೆ ನೀವು ಇನ್ಷೂರೆನ್ಸ್‌ ಪರಿಹಾರವನ್ನು ಕ್ಲೇಮ್‌ ಮಾಡಿಕೊಳ್ಳಬಹುದು. (Vehilce Insurence) ಆದರೆ ವಿಮೆ ಪರಿಹಾರವನ್ನು ಯಾವುದೇ ಅಡಚಣೆ ಇಲ್ಲದೆ ಸುಲಭವಾಗಿ ಪಡೆಯುವುದು ಹೇಗೆ? ಇಲ್ಲಿದೆ ವಿವರ. ಅಪಘಾತ ಅಥವಾ ಇತರ ಕಾರಣಗಳಿಂದ ವಾಹನ ವಿಮೆ ಪಡೆಯಲು ಬಯಸುವುದಿದ್ದರೆ, ಕ್ಲೇಮ್‌ ಮಾಡಿಕೊಳ್ಳುವುದು ಮುಖ್ಯ.

ಭಾರತದಲ್ಲಿ ಬೈಕ್‌ ಅಪಘಾತ ಕುರಿತ ವಿಮೆ ಕ್ಲೇಮ್‌ ಹೇಗೆ?

ಭಾರತದಲ್ಲಿ ವಾಹನ ವಿಮೆ ಪರಿಹಾರ ಪಡೆಯುವ ಪ್ರಕ್ರಿಯೆಯು ಕಾಲಾಂತರದಲ್ಲಿ ವಿಕಸನವಾಗಿದೆ. ಸಾಂಪ್ರದಾಯಿಕವಾಗಿ ಅರ್ಜಿಗಳನ್ನು ಭರ್ತಿಗೊಳಿಸಿ ದಾಖಲೆಗಳನ್ನು ಸಲ್ಲಿಸುವ ವಿಧಾನ ಇತ್ತು. ಆದರೆ ಡಿಜಿಟಲೀಕರಣದಿಂದ ಕ್ಲೇಮ್‌ ದಾಖಲಾತಿ ಪ್ರಕ್ರಿಯೆಯನ್ನು (registration process) ಸುಲಭ ಮತ್ತು ತ್ವರಿತವಾಗಿ ಮಾಡಬಹುದು. ಕೆಲವು ನಿಮಿಷಗಳಲ್ಲಿಯೇ ಕ್ಲೇಮ್‌ ದಾಖಲಿಸಬಹುದು. ACKO ಸಂಸ್ಥೆ ಆನ್‌ಲೈನ್‌ನಲ್ಲಿ ಕಾರ್‌, ಬೈಕ್‌ , ಹೆಲ್ತ್‌ ಇನ್ಷೂರೆನ್ಸ್‌ ಸೇವೆ ನೀಡುತ್ತದೆ. ಇವುಗಳ ಮೂಲಕ ಆನ್‌ಲೈನ್‌ನಲ್ಲಿ ಕ್ಲೇಮ್‌ ಮಾಡಬಹುದು.

ಏನಿದು ಬೈಕ್‌ ಇನ್ಷೂರೆನ್ಸ್ ಕ್ಲೇಮ್?

ನಿಮ್ಮ ಬೈಕ್‌ ಇನ್ಷೂರೆನ್ಸ್‌ ಪಾಲಿಸಿಯ ಅಡಿಯಲ್ಲಿ ಪರಿಹಾರ ಪಡೆಯುವ ಪ್ರಕ್ರಿಯೆಗೆ ಬೈಕ್‌ ಇನ್ಷೂರೆನ್ಸ್‌ ಕ್ಲೇಮ್‌ ಎನ್ನುತ್ತಾರೆ. ನಿಮ್ಮ ಬೈಕ್‌ಗೆ ಹಾನಿಯಿಂದ ಹಣಕಾಸು ಪರಿಹಾರ ಪಡೆಯಲು ಬಯಸಿದರೆ, ವಿಮೆ ಪರಿಹಾರವನ್ನು ಪಡೆಯಬಹುದು. ಉದಾಹರಣೆಗೆ ಅಪಘಾತವಾಗಿ ಬೈಕ್‌ನ ಮಡ್‌ಗಾರ್ಡ್‌ ಮತ್ತು ಹೆಡ್‌ ಲೈಟ್‌ಗೆ ಹಾನಿಯಾದರೆ, ದುರಸ್ತಿ ವೆಚ್ಚಕ್ಕೆ ವಿಮೆ ಪರಿಹಾರ ಪಡೆಯಬಹುದು.

ಬೈಕ್‌ ಇನ್ಷೂರೆನ್ಸ್‌ ಕ್ಲೇಮ್‌ ವಿಧಗಳು:

ನಿಮ್ಮ ವಾಹನ ಅಪಘಾತಕ್ಕೀಡಾದಾಗ ವಿಮೆ ಕಂಪನಿಗೆ ತಕ್ಷಣ ತಿಳಿಸುವುದು ಮುಖ್ಯ. ಎರಡು ವಿಧದ ಬೈಕ್‌ ಇನ್ಷೂರೆನ್ಸ್‌ ಕ್ಲೇಮ್‌ಗಳು ಇವೆ.

ಕ್ಯಾಶ್‌ಲೆಸ್‌ ಕ್ಲೇಮ್:‌ ಬೈಕ್‌ ಅಪಘಾತಕ್ಕೀಡಾದ ಬಳಿಕ ವೃತ್ತಿಪರ ದುರಸ್ತಿ ಗ್ಯಾರೇಜ್‌ನ ಅಗತ್ಯ ಇದ್ದರೆ, ನೀವು ACKO ನೆಟ್‌ವರ್ಕ್‌ನಲ್ಲಿರುವ ಗ್ಯಾರೇಜ್‌ ಅನ್ನು ಬಳಸಬಹುದು. ಈ ಪದ್ಧತಿಯಲ್ಲಿ ACKO ನೇರವಾಗಿ ದುರಸ್ತಿಯ ಬಿಲ್‌ ಅನ್ನು ಭರಿಸುತ್ತದೆ. ಕಡ್ಡಾಯವಾಗಿ ಕಡಿತವಾಗುವ ಮೊತ್ತವನ್ನು ನೀವು ಪಾವತಿಸಿದರೆ ಸಾಕಾಗುತ್ತದೆ (compulsory deductible)

ರಿಯಂಬರ್ಸ್‌ಮೆಂಟ್‌ ಕ್ಲೇಮ್:‌ (Reimbursement claim) ನಿಮ್ಮ ಬೈಕ್‌ ಅಪಘಾತವಾದ ಬಳಿಕ ನಿಮ್ಮ ಇಷ್ಟದ ಗ್ಯಾರೇಜ್‌ನಲ್ಲಿ ದುರಸ್ತಿಪಡಿಸಬಹುದು. ಬಳಿಕ ವೆಚ್ಚವನ್ನು ಹಿಂಪಡೆದುಕೊಳ್ಳಬಹುದು. ಒರಿಜಿನಲ್‌ ರಿಪೇರಿ ಬಿಲ್‌, ಪೇಮೆಂಟ್‌ ರಿಸಿಪ್ಟ್‌ ಇತ್ಯಾದಿ ದಾಖಲೆಗಳನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ಪ್ರವಾಹದ ಪರಿಣಾಮ ನಿಮ್ಮ ಬೈಕ್‌ಗೆ ಹಾನಿಯಾಯಿತು ಎಂದು ಇಟ್ಟುಕೊಳ್ಳಿ. ನೀವು ನಿಮ್ಮ ಇಷ್ಟದ ಗ್ಯಾರೇಜಿನಲ್ಲಿ ದುರಸ್ತಿ ಮಾಡಿಕೊಳ್ಳುತ್ತೀರಿ. ಅದಕ್ಕೆ 12,000 ರೂ. ವೆಚ್ಚವಾಗುತ್ತದೆ. ನೀವು ಒರಿಜಿನಲ್‌ ಬಿಲ್‌, ಪೇಮೆಂಟ್‌ ರಿಸಿಪ್ಟ್‌ ಅನ್ನು ACKO ಗೆ ಸಲ್ಲಿಸಿ ವಿಮೆ ಪರಿಹಾರ ಪಡೆಯಬಹುದು.

ಅಪಘಾತದ ಬಳಿಕ ಕ್ಲೇಮ್‌ ಪ್ರಕ್ರಿಯೆ ಹೀಗೆ:

ಅಪಘಾತ ಸಂಭವಿಸಿದಾಗ ಎರಡು ಸಂದರ್ಭಗಳು ಉಂಟಾಗುತ್ತವೆ. ನೀವು ಅಪಘಾತಕ್ಕೆ ಸಿಲುಕಿ ಸಂತ್ರಸ್ತರಾಗಿರಬಹುದು. ಎರಡನೆಯದಾಗಿ ನೀವು ಅಪಘಾತಕ್ಕೆ ಕಾರಣರಾಗಿರಬಹುದು. ಮೊದಲ ಪ್ರಕರಣದಲ್ಲಿ ನೀವು (ಥರ್ಡ್‌ ಪಾರ್ಟಿ) ಎಫ್‌ಐಆರ್‌ ದಾಖಲಿಸಿ ಮತ್ತೊಂದು ಪಾರ್ಟಿಯ ವಿಮೆ ಕಂಪನಿಯಲ್ಲಿ ಕ್ಲೇಮ್‌ ಮಾಡಿಕೊಳ್ಳಬಹುದು. ಎರಡನೆಯ ಪ್ರಕರಣದಲ್ಲಿ ನೀವು ನಿಮ್ಮ ವಿಮೆದಾರರಿಂದ (ಈ ಉದಾಹರಣೆಯಲ್ಲಿ ACKO) ಪರಿಹಾರ ಪಡೆಯಬಹುದು. ಮೊದಲನೆಯ ಕೇಸ್‌ನಲ್ಲಿ ನೀವು ACKO ಕಂಪನಿಯಿಂದ ಪರಿಹಾರವನ್ನು ಕ್ಲೇಮ್‌ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ನೀವು ಥರ್ಡ್‌ ಪಾರ್ಟಿ ವಿಮೆದಾರಿಂದ ಪರಿಹಾರ ಪಡೆಯಲು ಸಾಧ್ಯವಿದೆ. ಆನ್‌ಲೈನ್‌ನಲ್ಲಿ ಕ್ಲೇಮ್‌ ಮಾಡುವುದರಿಂದ ಭೌತಿಕ ಕಾಗದಪತ್ರಗಳ ದಾಖಲಾತಿ ಸಲ್ಲಿಕೆಯ ಅಗತ್ಯ ಇರುವುದಿಲ್ಲ.

ACKO ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ವಾಹನ ವಿಮೆ ಕ್ಲೇಮ್‌ ಹೀಗೆ ಮಾಡಿಕೊಳ್ಳಬಹುದು.

Step : 1 : ವೆಬ್‌ಸೈಟ್‌ ಅಥವಾ ಮೊಬೈಲ್‌ ಆ್ಯಪ್ ಮೂಲಕ ನಿಮ್ಮ ಅಕೌಂಟ್‌ಗೆ ಲಾಗಿನ್‌ ಆಗಿ.

Step : 2: ಪಾಲಿಸಿ ಕಾರ್ಡ್‌ ಅನ್ನು ಆಯ್ಕೆ ಮಾಡಿಕೊಳ್ಳಿ. Claim Now ಆಯ್ಕೆ ಮಾಡಿಕೊಳ್ಳಿ.

Step : 3 : ಹಾನಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿ. ಬೇಕಾಗಿರುವ ದಾಖಲೆಗಳನ್ನು ಅಪ್‌ಲೋಡ್‌ ಮಾಡಿಕೊಳ್ಳಿ.

ಬೇಕಾಗುವ ದಾಖಲೆಗಳು: ಎಫ್‌ಐಆರ್‌, ಕಳ್ಳತನವಾಗಿದ್ದರೆ ಪೊಲೀಸ್‌ ರಿಪೋರ್ಟ್‌, ದುರಸ್ತಿಯ ಬಿಲ್‌, ಪೇಮೆಂಟ್‌ ರಿಸಿಪ್ಟ್‌, ಡ್ರೈವಿಂಗ್‌ ಲೈಸೆನ್ಸ್‌, ‌ಬೈಕ್‌ನ ರಿಜಿಸ್ಟ್ರೇಶನ್‌ ಸರ್ಟಿಫಿಕೇಟ್.

ಬೈಕ್‌ ಅಪಘಾತವಾದಾಗ ಏನು ಮಾಡಬೇಕು?

ಬೈಕ್‌ ಅಪಘಾತವಾದಾಗ ವಾಹನವನ್ನು ನಿಲ್ಲಿಸಿ. ನೀವು ಪೊಲೀಸರಿಗೆ ಶೀಘ್ರ ರಿಪೋರ್ಟ್‌ ಮಾಡಿ. ಸ್ಥಳದಿಂದ ಪರಾರಿಯಾಗದಿರಿ. ಇತರರು ಗಾಯಾಳುಗಳಾಗಿದ್ದಲ್ಲಿ ಅವರಿಗೆ ಸಹಕರಿಸಿ.

ಅಪಘಾತದಲ್ಲಿ ಥರ್ಡ್‌ ಪಾರ್ಟಿ ಇದ್ದಲ್ಲಿ ನೀವು ಸ್ಥಳೀಯ ಪೊಲೀಸರಿಗೆ ತಿಳಿಸಿ ಎಫ್‌ಐಆರ್‌ ದಾಖಲಿಸಿ.

ವಿಮೆ ಸಂಸ್ಥೆಗೂ ವಿಳಂಬ ಮಾಡದೆಯೇ ತಿಳಿಸಿ.

Exit mobile version