Site icon Vistara News

ವಿಸ್ತಾರ Money Guide : ಹಿರಿಯ ನಾಗರಿಕರು ಬಡ್ಡಿ ಆದಾಯಕ್ಕೆ ತೆರಿಗೆ ಡಿಡಕ್ಷನ್‌ ಕ್ಲೇಮ್‌ ಮಾಡುವುದು ಹೇಗೆ?

cash

ಹಿರಿಯ ನಾಗರಿಕರು ತಾವು ಬ್ಯಾಂಕ್‌ಗಳಲ್ಲಿ ಇಟ್ಟಿರುವ ನಿಶ್ಚಿತ ಠೇವಣಿಗಳಿಗೆ (FD), ಅಂಚೆ ಕಚೇರಿಯಲ್ಲಿನ ಉಳಿತಾಯ ಯೋಜನೆಗಳಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಟಿಟಿಬಿ ಅಡಿಯಲ್ಲಿ ತೆರಿಗೆ ಡಿಡಕ್ಷನ್‌ ಅನ್ನು ನಿರೀಕ್ಷಿಸಬಹುದು. ಈ ಬಗ್ಗೆ ವಿವರಗಳನ್ನು ( Section 8TTB deduction for senior citizens) ತಿಳಿದುಕೊಳ್ಳೋಣ.

ಸೆಕ್ಷನ್‌ 80ಟಿಟಿಬಿ: ನೀವು ತಿಳಿದುಕೊಳ್ಳಬೇಕಾಗಿರುವುದು ಏನು? : ಆದಾಯ ತೆರಿಗೆ ಕಾಯಿದೆ 1961 ರ 80 ಟಿಟಿಬಿ ಸೆಕ್ಷನ್ ಪ್ರಕಾರ ಹಿರಿಯ ನಾಗರಿಕರು ಠೇವಣಿ ಮೇಲಿನ ಬಡ್ಡಿ ಆದಾಯಕ್ಕೆ ಡಿಡಕ್ಷನ್‌ ಕ್ಲೇಮ್‌ ಮಾಡಿಕೊಳ್ಳಬಹುದು. ಸೆಕ್ಷನ್‌ 80ಟಿಟಿಬಿ ಮತ್ತು ಅದನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ನೋಡೋಣ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಟಿಟಿಬಿ ಅಡಿಯಲ್ಲಿ 60 ವರ್ಷ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ನಿರ್ದಿಷ್ಟ ಬಡ್ಡಿ ಆದಾಯಕ್ಕೆ 50,000 ರೂ. ತನಕ ಡಿಡಕ್ಷನ್‌ ಕ್ಲೇಮ್‌ ಮಾಡಿಕೊಳ್ಳಬಹುದು. ಉದಾಹರಣೆಗೆ ಹಿರಿಯ ನಾಗರಿಕರು ಬ್ಯಾಂಕಿನಿಂದ ವಾರ್ಷಿಕ 60,000 ಎಫ್‌ಡಿ ಬಡ್ಡಿ ಆದಾಯ ಪಡೆಯುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಆಗ 50,000 ರೂ. ಮೊತ್ತಕ್ಕೆ ತೆರಿಗೆ ಡಿಡಕ್ಷನ್‌ ಕ್ಲೇಮ್‌ ಮಾಡಬಹುದು.

ಈ ನಿಯಮವನ್ನು ತಿಳಿಯಿರಿ: ಸೆಕ್ಷನ್‌ 80 ಟಿಟಿಬಿ ಅಡಿಯಲ್ಲಿ ಹಿರಿಯ ನಾಗರಿಕರು ಆರ್ಥಿಕ ವರ್ಷದಲ್ಲಿ ಕೆಳಗಿನ ಯಾವುದೇ ಮೂಲದ ಬಡ್ಡಿ ಆದಾಯಕ್ಕೆ ತರಿಗೆ ಡಿಡಕ್ಷನ್‌ ಕ್ಲೇಮ್‌ ಮಾಡಿಕೊಳ್ಳಬಹುದು. ಅವುಗಳೆಂದರೆ- ಬ್ಯಾಂಕ್‌ಗಳಲ್ಲಿ ಠೇವಣಿಗಳ ಮೇಲೆ ಗಳಿಸಿದ ಬಡ್ಡಿ ಆದಾಯ, ಸೇವಿಂಗ್ಸ್‌ ಅಕೌಂಟ್‌, ರಿಕರಿಂಗ್‌ ಡಿಪಾಸಿಟ್‌ ಇತ್ಯಾದಿ. ಯಾವುದೇ ನೋಂದಾಯಿತ ಕೋಪರೇಟಿವ್‌ ಸೊಸೈಟಿಯಿಂದ ಲಭಿಸುವ ಠೇವಣಿ ಕುರಿತ ಆದಾಯ, ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಡೆಪಾಸಿಟ್‌ಗೆ ಸಿಕ್ಕಿದ ಬಡ್ಡಿ ಆದಾಯ.

ಐಟಿಆರ್‌ ಫೈಲಿಂಗ್‌ ವೇಳೆ ಡಿಡಕ್ಷನ್‌ ಕ್ಲೇಮ್‌ ಮಾಡಬಹುದೇ? ಹಿರಿಯ ನಾಗರಿಕರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80ಟಿಟಿಬಿ ಅಡಿಯಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ ಫೈಲ್‌ ಮಾಡುವ ವೇಳೆ ಡಿಡಕ್ಷನ್‌ ಕ್ಲೇಮ್‌ ಮಾಡಿಕೊಳ್ಳಬಹುದು. ಇತರ ಮೂಲಗಳಿಂದ ಆದಾಯ (Income from other sources) ವಿಭಾಗದಲ್ಲಿ ಸೆಕ್ಷನ್‌ 80ಟಿಟಿಬಿ ಅಡಿಯಲ್ಲಿ ಡಿಡಕ್ಷನ್‌ ಪಡೆಯಬಹುದು.

ಇದನ್ನೂ ಓದಿ: Direct tax collection : ನೇರ ತೆರಿಗೆ ಸಂಗ್ರಹ 3.8 ಲಕ್ಷ ಕೋಟಿ ರೂ.ಗೆ ಏರಿಕೆ, 11% ಹೆಚ್ಚಳ

ಸೆಕ್ಷನ್‌ 80ಟಿಟಿಬಿ ಮಿತಿ: ಸೆಕ್ಷನ್‌ 80 ಟಿಟಿಬಿ ಅಡಿಯಲ್ಲಿ ಬಡ್ಡಿ ಆದಾಯದ ಮೂಲದ ಬಗ್ಗೆ ತಿಳಿಸಬೇಕಾಗುತ್ತದೆ. ಬ್ಯಾಂಕ್‌ಗಳಲ್ಲಿ ಸೇವಿಂಗ್ಸ್‌ ಅಕೌಂಟ್ಸ್‌, ಫಿಕ್ಸೆಡ್‌ ಡೆಪಾಸಿಟ್‌, ರಿಕರಿಂಗ್‌ ಡೆಪಾಸಿಟ್‌, ಕೋಪರೇಟಿವ್‌ ಬ್ಯಾಂಕ್‌ ಡೆಪಾಸಿಟ್‌, ಅಂಚೆ ಕಚೇರಿ ಡೆಪಾಸಿಟ್‌ಗಳಲ್ಲಿ ಸಿಗುವ ಬಡ್ಡಿ ಆದಾಯಕ್ಕೆ ಡಿಡಕ್ಷನ್‌ ಕ್ಲೇಮ್‌ ಮಾಡಿಕೊಳ್ಳಬಹುದು. ಆದ್ದರಿಂದ ಇತರ ಕಂಪನಿಗಳ ಎಫ್‌ಡಿಗಳಿಂದ ಸಿಗುವ ಬಡ್ಡಿ ಆದಾಯದ ಮೇಲೆ ಡಿಡಕ್ಷನ್‌ ಕ್ಲೇಮ್‌ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಹಿರಿಯ ನಾಗರಿಕರಿಗೆ ಇದು ಏಕೆ ಮುಖ್ಯ? ಹಿರಿಯ ನಾಗರಿಕರಿಗೆ ವಯೋ ಸಹಜವಾದ ಕಾಯಿಲೆಗಳು ಸಾಮಾನ್ಯ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇದು ಅವರ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ತೆರಿಗೆ ಡಿಡಕ್ಷನ್‌ ಸೌಲಭ್ಯ ಪಡೆಯುವುದು ಉತ್ತಮ.

ಬೇಕಾಗುವ ದಾಖಲೆಗಳು: ಯಾವುದೇ ವಿಶೇಷ ದಾಖಲೆಯ ಅವಶ್ಯಕತೆ ಇಲ್ಲ. ಬ್ಯಾಂಕ್‌ ಸ್ಟೇಟ್‌ ಮೆಂಟ್‌, ಪ್ಯಾನ್‌ ಕಾರ್ಡ್‌ ಸಾಕಾಗುತ್ತದೆ.

Exit mobile version