Raja Marga Column : ಇಡೀ ಜಗತ್ತು ಎರಡು ವರ್ಷಗಳ ಕಾಲ ಕೊರೋನಾ ಪೀಡಿತವಾಗಿ ತತ್ತರಿಸುವ ಸಂದರ್ಭದಲ್ಲಿ ಯಾರಾದರೂ ಅದಕ್ಕೆ ಲಸಿಕೆ ಕಂಡುಹಿಡಿಯಲಿ ದೇವರೇ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದದ್ದು ನಮಗೆ ಮರೆಯಲು ಸಾಧ್ಯವೇ ಇಲ್ಲ. ಇಡೀ ಜಗತ್ತಿನಲ್ಲಿ ಆ ಮಹಾಮಾರಿ ಉಂಟುಮಾಡಿದ ತಲ್ಲಣವನ್ನು ನಾವು ಮರೆಯೋದಾದರೂ ಹೇಗೆ?
ಅದೇ ರೀತಿ ಲಂಡನ್‌ನಲ್ಲಿ 1750ರ ಹೊತ್ತಿಗೆ ಸಿಡುಬು ರೋಗವು (smallpox disease) ಸ್ಫೋಟ ಆಗಿತ್ತು. ಆಗ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆಗ ತನ್ನ ಮತ್ತು ತನ್ನ ಮಗನ ಪ್ರಾಣ ಒತ್ತೆಯಿಟ್ಟು ಸಿಡುಬು ಎಂಬ ಮಹಾವೈರಸ್ ರೋಗಕ್ಕೆ ಲಸಿಕೆ (smallpox vaccine) ಕಂಡು ಹಿಡಿದ ಎಡ್ವರ್ಡ್ ಜೆನ್ನರ್- Edward Jenner (1749-1823) ಎಂಬ ಮಹಾ ವಿಜ್ಞಾನಿಯನ್ನು (English physician and scientist) ಜಗತ್ತು ಮರೆಯಲು ಸಾಧ್ಯವೇ?
Raja Marga Column : ಕಲಿಕೆಯಲ್ಲಿ ಸಾಮಾನ್ಯ ಬುದ್ಧಿಮತ್ತೆಯ ಹುಡುಗ
ಇಂಗ್ಲೆಂಡ್ ದೇಶದ ಗ್ಲಾಸೆಷ್ಟರ್‌ಶೈರ್ ಎಂಬ ಪುಟ್ಟ ಗ್ರಾಮದಲ್ಲಿ ಎಡ್ವರ್ಡ್ ಜನಿಸಿದರು. 5ನೆಯ ವಯಸ್ಸಿಗೆ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡರು. ಶಾಲೆಯಲ್ಲಿ ಕಲಿಯುವುದರಲ್ಲಿ ಸಾಧಾರಣ ಬುದ್ಧಿಮತ್ತೆ. ಆದರೆ ವೀಕ್ಷಣಾ ಸಾಮರ್ಥ್ಯವು ಅದ್ಭುತ.
ಬಾಲ್ಯದಲ್ಲಿ ಒಮ್ಮೆ ಅವರಿಗೂ ಸಿಡುಬು ರೋಗ ಬಂದಿತ್ತು. ಅದಕ್ಕೆ ಲಸಿಕೆಯನ್ನು ಹುಡುಕಬೇಕು ಎನ್ನುವ ತೀವ್ರವಾದ ಪ್ರಯತ್ನ ಅವರು ಆರಂಭ ಮಾಡಿದ್ದರು. ಆ ಕಾಯಿಲೆಯಲ್ಲಿ ಇಡೀ ಇಂಗ್ಲೆಂಡ್ ನರಳುತ್ತಿತ್ತು. ಸಿಡುಬು ರೋಗ ಬಂದವರು ಯಾರೂ ಬದುಕುವ ಸಾಧ್ಯತೆ ಇರಲಿಲ್ಲ.
Raja Marga Column : ಎಡ್ವರ್ಡ್ ಜೆನ್ನರನ ಅದ್ಭುತ ವೀಕ್ಷಣೆ
ಆಗ ಮನುಷ್ಯರಿಗೆ ಸಿಡುಬು ಬಂದ ಹಾಗೆ ದನ, ಹಂದಿ, ಕುದುರೆಗಳಿಗೆ ಕೂಡ ಸಿಡುಬು ಬರುತ್ತಿತ್ತು. ಸಿಡುಬು ಬಂದ ದನಗಳ ಹಾಲು ಕರೆಯುವ ಹೆಂಗಸರಿಗೆ ದನದ ಸಿಡುಬಿನ ಗುಳ್ಳೆಗಳು ಕಾಣಿಸಿಕೊಂಡು ಮುಂದೆ ನಿಧಾನವಾಗಿ ಗುಣವಾಗಿ ಬಿಡುತ್ತಿದ್ದವು. ಆದರೆ ಅವರಿಗೆ ಮಾನವರ ಸಿಡುಬು ಬರುತ್ತಲೇ ಇರಲಿಲ್ಲ!
ಈ ಸೂಕ್ಷ್ಮ ವೀಕ್ಷಣೆಯು ಮುಂದೆ ಸಿಡುಬಿನ ಲಸಿಕೆ ಸಂಶೋಧನೆಗೆ ದಾರಿ ಆಯಿತು. ದನದ ಸಿಡುಬಿನ ಗುಳ್ಳೆಯ ಕೀವು ತೆಗೆದು ಮನುಷ್ಯರಿಗೆ ಚುಚ್ಚಿದಾಗ ದೇಹದಲ್ಲಿ ಮಾನವ ಸಿಡುಬಿನ ವಿರುದ್ಧ ರಕ್ಷಣೆ ದೊರೆಯುವುದು ಖಾತ್ರಿಯಾಯಿತು. ನಿರಂತರ ಪ್ರಯೋಗ ನಡೆದು ಫಲಿತಾಂಶ ದೊರೆಯಿತು. ಲಸಿಕೆ ಸಂಶೋಧನೆ ಆಯಿತು.
ಆದರೆ ಲಸಿಕೆಯ ಪ್ರಯೋಗ ಮಾಡುವುದು ಯಾರ ಮೇಲೆ? ಇಬ್ಬರು ಹೆಂಗಸರು ಮುಂದೆ ಬಂದರಾದರೂ ಅಪನಂಬಿಕೆಯ ಮಾತಾಡಿದರು. ಆಗ ಮೊದಲು ಎಡ್ವರ್ಡ್ ಜೆನ್ನರ್ ತನ್ನ ಮುದ್ದಿನ ಮಗನ ಮೇಲೆ ಆ ಲಸಿಕೆ ಪ್ರಯೋಗ ಮಾಡಿದನು. ಲಸಿಕೆ ವರ್ಕ್ ಆಗದೆ ಇದ್ದರೆ ತನ್ನ ಮಗನ ಪ್ರಾಣಕ್ಕೆ ಅಪಾಯ ಇದೆ ಎಂದು ಜೆನ್ನರ್‌ಗೆ ಗೊತ್ತಿತ್ತು. ಆದರೆ ಲೋಕಕಲ್ಯಾಣದ ಸಂಕಲ್ಪದ ಮುಂದೆ ಸ್ವಾರ್ಥದ ಲವಲೇಶವೂ ಆತನಿಗೆ ಇರಲಿಲ್ಲ. ಯಶಸ್ಸು ದೊರೆತ ನಂತರ ಆ ಮಹಿಳೆಯರ ಮೇಲೆ ಲಸಿಕೆಯ ಪ್ರಯೋಗ ಮಾಡಿದನು. ಯಶಸ್ಸು ದೊರೆತಾಗ ಸ್ವರ್ಗಕ್ಕೆ ಮೂರೇ ಗೇಣು!
ಇದನ್ನೂ ಓದಿ : Raja Marga Column : ಅವರು ಕೇವಲ ಟಿ.ಎನ್ ಸೇಷನ್ ಅಲ್ಲ, ಪ್ರಜಾಪ್ರಭುತ್ವದ ಆಲ್ಸೇಷನ್!
ಮುಂದೆ ಜೇಮ್ಸ್ ಫೀಫ್ ಎಂಬ ಹುಡುಗನ ಮೇಲೆ ಈ ಲಸಿಕೆಯು 100% ಕೆಲಸ ಮಾಡಿದಾಗ( ಮೇ 14, 1796) ಇಡೀ ವೈದ್ಯ ಜಗತ್ತು ಆತನಿಗೆ ಜಯಕಾರ ಹಾಕಿತು. ಆತನ ದೂರದೃಷ್ಟಿ ಹಾಗೂ ಮುಂದೆ ವಿಶ್ವ ಆರೋಗ್ಯ ಸಂಸ್ಥೆಯ ಅವಿರತ ಪ್ರಯತ್ನಗಳ ಫಲವಾಗಿ ಜಗತ್ತಿನಾದ್ಯಂತ ಹುಟ್ಟಿದ ಪ್ರತೀ ಮಗುವಿಗೆ ಸಿಡುಬು ಲಸಿಕೆ ಕಡ್ಡಾಯವಾಗಿ ಹಾಕಲಾಯಿತು. ಜಗತ್ತಿನಲ್ಲಿ 1980ರ ನಂತರ ಸಿಡುಬಿನ ಯಾವ ಪ್ರಕರಣವೂ ದಾಖಲಾಗಿಲ್ಲ ಎನ್ನುವುದು ಎಡ್ವರ್ಡ್ ಜೆನ್ನರ್‌ಗೆ ದೊರೆತ ಮಹಾ ಪ್ರಶಸ್ತಿ ಅಲ್ವಾ?
ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದು ಜಗತ್ತಿಗೆ ಮಹದುಪಕಾರ ಮಾಡಿದ ಎಡ್ವರ್ಡ್ ಜೆನ್ನರ್ ಒಬ್ಬ ಲೆಜೆಂಡ್ ಅಲ್ವಾ?
(Geneva, Switzerland) A statue dedicated to the father of vaccination, Dr. Edward Jenner, stands in front of the WHO headquarters. Christof Plothe, DO, and I discuss the alarming reality of the first vaccine and those that followed…harmful ineffectiveness that hoodwinked… pic.twitter.com/x2qWBbCs1y
— Bright Light News (@BLNewsMedia) March 21, 2024
ವ್ಯಾಕ್ಸಿನ್‌ಗಳ ಒಂದು ಪುಟ್ಟ ಇತಿಹಾಸ ಇಲ್ಲಿದೆ