ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ (New Delhi) ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗ ಸಭೆ (G20 Summit 2023) ನಡೆಯಲಿದೆ. ವಿಶ್ವದ ಪ್ರಮುಖ ನಾಯಕರೆಲ್ಲರೂ ಪಾಲ್ಗೊಳ್ಳಲಿರುವ ಈ ಸಭೆಗೆ ಭಾರೀ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸುಮಾರು 1,30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ(Security personnel). ಈ ಪೈಕಿ 80 ಸಾವಿರ ದಿಲ್ಲಿ ಪೊಲೀಸರು (Delhi Police) ಇರಲಿದ್ದಾರೆ. ದಿಲ್ಲಿ ಪೊಲೀಸ್ ಮತ್ತು ಕೇಂದ್ರ ಭದ್ರತಾ ಪಡೆಗಳು ಸುಮಾರು 45 ಸಾವಿರ ಭದ್ರತಾ ಸಿಬ್ಬಂದಿ ಖಾಕಿ ವೇಷದಲ್ಲಿ ಇರದೇ ನೀಲಿ ಯೂನಿಫಾರ್ಮ್‌ನಲ್ಲಿ ಇರಲಿದ್ದಾರೆ. ಈ 45 ಸಾವಿರ ಭದ್ರತಾ ಪಡೆಯಲ್ಲಿ ಕಮಾಂಡೋಗಳಿದ್ದು(Commandos), ಅವರು ಹೆಲಿಕಾಪ್ಟರ್‌ಗಳಿಂದ ಇಳಿಯುವ ತರಬೇತಿ ಪಡೆದುಕೊಂಡಿದ್ದಾರೆ. ನಿಖರವಾದ ಚಾಲನಾ ಕೌಶಲ್ಯದೊಂದಿಗೆ ವೈಯಕ್ತಿಕ ಭದ್ರತಾ ಅಧಿಕಾರಿಗಳಂತೆ ಕಾರ್ಯನಿರ್ವಹಿಸಲಿದ್ದಾರೆ. ಭಾರತವು ತನ್ನ ಅತಿಥಿಗಳನ್ನು ರಕ್ಷಿಸುವ ಕರ್ತವ್ಯವನ್ನು ಪೂರೈಸಲು ಇವರು ಸಹಾಯ ಮಾಡಲಿದ್ದಾರೆ.
ದಿಲ್ಲಿ ಆಗಸದಲ್ಲಿ ಭಾರತೀಯ ವಾಯು ಪಡೆ ಹದ್ದಿನ ಕಣ್ಣು ಇಡಲಿದೆ. ಯಾವುದೇ ಅನುಮಾನಾಸ್ಪದ ಹಾರಾಟ ವಸ್ತು ಕಂಡು ಬಂದರೂ ಹೊಡೆದುರುಳಿಸುವ ಆದೇಶ ನೀಡಲಾಗಿದೆ. ಆಕಾಶದಿಂದ ಎದುರಾಗುವ ಯಾವುದೇ ಬೆದರಿಕೆಯನ್ನು ಎದುರಿಸಲು ಭಾರತೀಯ ಸೇನೆ, ದಿಲ್ಲಿ ಪೊಲೀಸ್ ಮತ್ತು ಅರೆ ಸೇನಾ ಪಡೆಗಳೊಂದಿಗೆ ಆ್ಯಂಟಿ ಡ್ರೋನ್ ಸಿಸ್ಟಮ್ ನಿಯೋಜಿಸಲಾಗಿದೆ. ಜತೆಗೆ ಸುಮಾರು 400 ಅಗ್ನಿಶಾಮಕ ವಾಹನಗಳ ಸನ್ನದ್ಧ ಸ್ಥಿತಿಯಲ್ಲಿ ಇರಲಿವೆ.
ಈ ಸುದ್ದಿಯನ್ನೂ ಓದಿ: G20 Summit 2023: ದೆಹಲಿಯಲ್ಲಿ ಕಾರಂಜಿಗಾಗಿ ಶಿವಲಿಂಗ ಬಳಕೆ; ಬಿಜೆಪಿ-ಆಪ್ ವಾಕ್ಸಮರ ಶುರು
ವಿಶ್ವ ನಾಯಕರ ಭದ್ರತೆಗಾಗಿ ಕೇಂದ್ರ ಸರ್ಕಾರವು 18 ಕೋಟಿ ರೂ. ವೆಚ್ಚದಲ್ಲಿ 20 ಬುಲೆಟ್ ಪ್ರೂಫ್ ವಾಹನ(ಲಿಮೋಸಿನ್)ಗಳನ್ನು ಗುತ್ತಿಗೆಗೆ ಪಡೆದುಕೊಂಡಿದೆ. ವಾರಾಂತ್ಯದ ಸಮಯದಲ್ಲಿ ದಿಲ್ಲಿಯ ಗಡಿಯಲ್ಲಿ ಸಾಕಷ್ಟು ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ತೀವ್ರ ನಿಗಾ ಇಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಅಮೆರಿಕದ ನಾಯಕರು ಸಮುಾರ 20 ವಿಮಾನಗಳೊಂದಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಶೃಂಗಸಭೆ ನಡೆಯುವ, ಪುನರ್ ನಿರ್ಮಾಣಗೊಂಡಿರುವ ಪ್ರಗತಿ ಮೈದಾನದಲ್ಲಿ ಭದ್ರತಾ ಕೋಠಡಿಯನ್ನು ಸ್ಥಾಪಿಸಲಾಗಿದೆ. ಇದೇ ವೇಳೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಉಳಿದುಕೊಳ್ಳಲಿರುವ ಐಟಿಸಿ ಮೌರ್ಯ ಹೊಟೇಲ್‌ನಲ್ಲಿ ವಿಶೇಷ ಭದ್ರತೆಯನ್ನು ಕೈಗೊಳ್ಳಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.