Site icon Vistara News

Covid news | ದೇಶದಲ್ಲಿ ಒಂದೇ ದಿನ 12 ಸಾವಿರ ಕೊರೊನಾ ಪ್ರಕರಣ, ಎಲ್ಲೆಲ್ಲಿ ಹೆಚ್ಚಳ?

corona

ನವದೆಹಲಿ : ದೇಶದಲ್ಲಿ ಹಂತ ಹಂತವಾಗಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 12 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಫೆಬ್ರವರಿ ಬಳಿಕ ಇದು ಅತಿ ಹೆಚ್ಚು ಕೊರೊನಾ ಪ್ರಕರಣ ದಾಖಲಾದ ದಿನ. ನಿನ್ನೆ (ಬುಧವಾರ) 8,822 ಕೊರೊನಾ ಕೇಸ್‌ಗಳು ಪತ್ತೆಯಾಗಿದ್ದವು ಅದರೆ, ಇಂದು (ಗುರುವಾರ) 12,213 ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿದೆ.

ಒಂದೇ ದಿನದಲ್ಲಿ ಮಹಾಮಾರಿ ಸೋಂಕಿಗೆ 11 ಮಂದಿ ಮೃತಪಟ್ಟಿದ್ದು, ಪಾಸಿಟಿವಿಟಿ ದರ 2.35% ಏರಿಕೆಯಾಗಿದೆ. ಈವರೆಗೂ ದೇಶದಲ್ಲಿ 58,215 ಸಕ್ರಿಯ ಪ್ರಕರಣಗಳಿದ್ದು, ಒಂದೇ ದಿನದಲ್ಲಿ 7,624 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ವಾರ್ಜ್‌ ಆಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 4,26,74,712 ಕ್ಕೆ ಏರಿಕೆಯಾಗಿದ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನು ಓದಿ| ದೇಶದಲ್ಲಿ ಮತ್ತೆ ಕೊರೊನಾರ್ಭಟ, ಒಂದೇ ದಿನ ಹೊಸದಾಗಿ 8,822 ಕೊರೊನಾ ಪ್ರಕರಣ ಪತ್ತೆ

ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣದಲ್ಲಿ ಕೊರೊನಾ ಆರ್ಭಟ ಶುರುವಾಗಿದ್ದು, ಮುಂಬೈನಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದು, ದೆಹಲಿಯಲ್ಲೂ ಕೂಡ ನಿನ್ನೆ ಒಂದೇ ದಿನ (ಬುಧವಾರ) 1.375 ಕೊರೊನಾ ಪ್ರಕರಣ ದಾಖಲಾಗಿವೆ. ದೇಶದಲ್ಲಿ ಮತ್ತೆ ನಾಲ್ಕನೇ ಅಲೆ ಭೀತಿ ಶುರುವಾಗಿದ್ದು ಆಯಾ ರಾಜ್ಯ ಸರಕಾರಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಆರಂಭಿಸಿವೆ.

Exit mobile version