Site icon Vistara News

Kalwa hospital: 24 ಗಂಟೆಯಲ್ಲಿ 17 ರೋಗಿಗಳು ಸಾವು! ಆಸ್ಪತ್ರೆಯಲ್ಲಿ ಶುರುವಾಯಿತು ತನಿಖೆ

Kalwa Hospital

ನವದೆಹಲಿ: ಮಹಾರಾಷ್ಟ್ರದ (Maharashtra State) ಥಾಣೆ (Thane District) ಜಿಲ್ಲೆಯ ಕಳ್ವಾದಲ್ಲಿರುವ (Kalwa City) ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯಲ್ಲಿ (Chhatrapati Shivaji Maharaj Hospital) ಕಳೆದ 24 ಗಂಟೆಯಲ್ಲಿ 17 ರೋಗಿಗಳು ಮೃತಪಟ್ಟಿದ್ದಾರೆ(patients died). ಈ ಸಾವಿಗೆ ಕಾರಣವಾಗಿರುವ ವೈದ್ಯಕೀಯ ಸಂಗತಿಗಳನ್ನು ಕಂಡು ಹಿಡಿಯಲು ಆಸ್ಪತ್ರೆಯ ಅಧಿಕಾರಿಗಳ ತನಿಖಾ ತಂಡವನ್ನು ರಚಿಸಲಾಗಿದೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (Thane Municipal Corporation) ಈ ಆಸ್ಪತ್ರೆಯನ್ನು ನಿರ್ವಹಣೆ ಮಾಡುತ್ತದೆ. ಆಸ್ಪತ್ರೆಯ ಡೀನ್ ಡಾ. ರಾಕೇಶ್ ಬಾರೋಟ್ ಅವರು, 16 ರೋಗಿಗಳ ಸಾವನ್ನು ಖಚಿತಪಡಿಸಿದ್ದಾರೆ. ಈ ಪೈಕಿ ಬಹುತೇಕರು ವಯಸ್ಸಾದವರಾಗಿದ್ದಾರೆ. ಆಗಸ್ಟ್ 10ರಂದು ಐದು ಗಂಟೆಯಲ್ಲೇ ಐವರು ರೋಗಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ(Kalwa hospital).

ಈ ಮಧ್ಯೆ, ರೋಗಿಗಳ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಸಾವುಗಳಿಗೆ ವೈದ್ಯಕೀಯ ಕಾರಣಗಳು, ವೈದ್ಯಕೀಯ ಚಿಕಿತ್ಸೆಯಲ್ಲಿ ಯಾವುದೇ ಲೋಪದೋಷಗಳು ಮತ್ತು ಸಲಕರಣೆಗಳ ಕೊರತೆಯಿದ್ದರೆ ಅದನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಈ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲಿದೆ.

ಕಳ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯು ನಗರದಲ್ಲಿನ ಏಕೈಕ ತೃತೀಯ ಹಂತದ ವೈದ್ಯಕೀಯ ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ಸುತ್ತಮುತ್ತಲಿನ ಉಪನಗರಗಳು ಮತ್ತು ನೆರೆಯ ಜಿಲ್ಲೆಗಳಿಂದ ರೋಗಿಗಳು ಸಾಕಷ್ಟು ಪ್ರಮಾಣದಲ್ಲಿ ಈ ಆಸ್ಪತ್ರೆಯ ಲಾಭವನ್ನು ಪಡೆದುಕೊಳ್ಳುತ್ತಾರೆ.

ಸರಾಸರಿ ನಿತ್ಯ 16 ರೋಗಿಗಳು ಸಾವು!

ಕಳ್ವಾ ಆಸ್ಪತ್ರೆಗೆ ನಿತ್ಯ ಥಾಣೆ ಮತ್ತು ಪಾಲ್ಘಾರ್ ಜಿಲ್ಲೆಯ ಸಾಕಷ್ಟು ರೋಗಿಗಳು ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ಈ ಆಸ್ಪತ್ರೆಗೆ ದಾಖಲಾಗುವ ಬಹುತೇಕರ ಪೈಕಿ ಸ್ಥಿತಿ ಚಿಂತಾಜನಕವಾಗಿರುತ್ತದೆ. ಹಾಗಾಗಿ, ಮರಣ ಪ್ರಮಾಣ ಹೆಚ್ಚು ಎಂದು ಹೇಳಲಾಗುತ್ತದೆ. ಈ ಆಸ್ಪತ್ರೆಯಲ್ಲಿ ನಿತ್ಯ ಸರಾಸರಿ ಹತ್ತು ಸಾವುಗಳಾದರೂ ಸಂಭವಿಸುತ್ತವೆ. ಇದು ಆಲ್ಮೋಸ್ಟ್ ನೆರೆಯ ಮುಂಬೈನಲ್ಲಿರುವ ಕೆಇಎಂ ಆಸ್ಪತ್ರೆಗೆ ಸರಿಸಮಾನವಗಿದೆ. ಈ ಆಸ್ಪತ್ರೆಯಲ್ಲಿ ನಿತ್ಯ ಸರಾಸರಿ 16 ರೋಗಿಗಳ ಸಾವಿನಂತೆ 2022ರಲ್ಲಿ ಒಟ್ಟು 6,172 ರೋಗಿಗಳು ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Oxygen Shortage: ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಕ್ಯಾನ್ಸರ್‌ ರೋಗಿ ಸಾವು

ಆಸ್ಪತ್ರೆಯಲ್ಲಿ ರೋಗಿಗಳ ಸಾವು ಸಹಜ ಎಂದ ಅಧಿಕಾರಿಗಳು

ಕೆಲವು ದಿನಗಳಲ್ಲಿ ದಾಖಲಾದ ರೋಗಿಗಳ ಸ್ಥಿತಿಯನ್ನು ಅವಲಂಬಿಸಿ, ಸಾವಿನ ಸಂಖ್ಯೆ ಹೆಚ್ಚಾಗಬಹುದು. ಆದ್ದರಿಂದ, ಇದು ಸಹಜ ವಿದ್ಯಮಾನವಾಗಿದೆ. ಆದರೆ ಈ ವಿಷಯನ್ನು ರಾಜಕೀಕರಣಗೊಳಿಸಲಾಗಿದೆ ಎಂದು ಕಳ್ವಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಥಾಣೆ ಜಿಲ್ಲೆಯವರೇ ಆಗಿರುವ ಹಾಗೂ ಕಳೆದ 20 ವರ್ಷಗಳಿಂದ ಥಾಣೆ ಮುನ್ಸಿಪಲ್ ಕಾರ್ಪೋರೇಷನ್‌ ಮೇಲೆ ಹಿಡಿತ ಹೊಂದಿರುವ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ವಿರುದ್ಧ ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ (NCP) ವಾಗ್ದಾಳಿ ನಡೆಸಿದೆ. ಪಕ್ಷದ ಶಾಸಕ ಜಿತೇಂದ್ರ ಅಹವಾದ್ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದದ್ದಾರೆ. ಭಾನುವಾರ ಕೂಡ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮೃತ ರೋಗಿಗಳ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version