oxygen shortage Cancer patient dies due to lack of oxygen at Kidwai HospitalOxygen Shortage: ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಕ್ಯಾನ್ಸರ್‌ ರೋಗಿ ಸಾವು Vistara News

ಆರೋಗ್ಯ

Oxygen Shortage: ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಕ್ಯಾನ್ಸರ್‌ ರೋಗಿ ಸಾವು

Oxygen Shortage: ಕೋವಿಡ್‌ (Covid) ಸಮಯದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಉಂಟಾಗಿತ್ತು. ಇದೀಗ ಮತ್ತೆ ಲಿಕ್ವಿಡ್ ಆಕ್ಸಿಜನ್ ಕೊರತೆಯಿಂದಾಗಿ ಕ್ಯಾನ್ಸರ್ ರೋಗಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ.

VISTARANEWS.COM


on

Kidwai Hospital
ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆ ಆರೋಪ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಲಬುರಗಿ: ಇಲ್ಲಿನ ಕಿದ್ವಾಯಿ ಆಸ್ಪತ್ರೆಯಲ್ಲಿ (Kidwai Hospital) ಚಿಕಿತ್ಸೆ ಪಡೆಯುತ್ತಿದ್ದ ಕ್ಯಾನ್ಸರ್‌ ರೋಗಿಯೊಬ್ಬರು (Cancer patient) ಲಿಕ್ವಿಡ್ ಆಕ್ಸಿಜನ್ (Liquid Oxygen) ಕೊರತೆಯಿಂದಾಗಿ ಮೃತಪಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ. ಬೀದರ್ ಮೂಲದ ಝಕೀರಾ ಬೇಗಂ (50) ಮೃತ ದುರ್ದೈವಿ.

Oxygen shortage at Kidwai Hospital
ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆ

ಕಿದ್ವಾಯಿ ಆಸ್ಪತ್ರೆಯ ಐಸಿಯುನಲ್ಲಿ‌ ಮೂರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇದರಲ್ಲಿ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಝಕೀರಾ ಬೇಗಂ ಆಕ್ಸಿಜನ್ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಉಳಿದ ರೋಗಿಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Oxygen shortage at Kidwai Hospital
ಕಿದ್ವಾಯಿ ಆಸ್ಪತ್ರೆಯ ಐಸಿಯು ವಾರ್ಡ್‌

ಇದನ್ನೂ ಓದಿ: Praveen Nettaru: ಹೊಸ ಸರ್ಕಾರ ಅಸ್ತಿತ್ವದ ಬೆನ್ನಲ್ಲೇ ಪ್ರವೀಣ್‌ ನೆಟ್ಟಾರ್ ಪತ್ನಿ ಕೆಲಸಕ್ಕೆ ಕೊಕ್

ಕಿದ್ವಾಯಿ ಆಸ್ಪತ್ರೆಯಲ್ಲಿ ಬೆಳಗ್ಗೆ ಎರಡು ಗಂಟೆಗಳ ಕಾಲ ಆಕ್ಸಿಜನ್ ಖಾಲಿ ಆಗಿತ್ತು. ಆಕ್ಸಿಜನ್ ಖಾಲಿಯಾಗಿದ್ದರಿಂದಲೇ ಝಕೀರಾ ಬೇಗಂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಆಕ್ಸಿಜನ್ ಖಾಲಿಯಾಗಿರುವ ಬಗ್ಗೆ ಆಸ್ಪತ್ರೆ ವೈದ್ಯರು ಬೇರೆಯದ್ದೆ ಸಬೂಬು ಹೇಳುತ್ತಿದ್ದಾರೆ. 15 ರಿಂದ 20 ನಿಮಿಷದಲ್ಲಿ ಆಕ್ಸಿಜನ್ ಬರುತ್ತಿತ್ತು. ಆದರೆ ಝಕೀರಾ ಬೇಗಂ ಕ್ಯಾನ್ಸರ್‌ ತೀವ್ರತೆಯಿಂದ ಮೃತಪಟ್ಟಿದ್ದು ಎಂದು ವೈದ್ಯ ನವೀನ್ ಮಾಹಿತಿ ನೀಡಿದ್ದಾರೆ.‌

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Winter Foods: ಚಳಿಯಲ್ಲಿ ಮೆದುಳಿನ ಆರೈಕೆಗೆ ಬೇಕು ಈ ಆಹಾರಗಳು

ಚಳಿಗಾಲಕ್ಕೆ ಮೆದುಳಿಗೂ ಒಂದಿಷ್ಟು ಆರೈಕೆ ಬೇಕು. ಮಸ್ತಿಷ್ಕವನ್ನು ಪೋಷಿಸುವ ಆಹಾರಗಳು (foods to boost brain health) ಹೊಟ್ಟೆ ಸೇರಿದರೆ ಮಾತ್ರವೇ, ಈ ಋತುವನ್ನು ನಿರುಮ್ಮಳವಾಗಿ ಕಳೆಯಲು ಸಾಧ್ಯ. ಯಾವ ಆಹಾರಗಳವು?

VISTARANEWS.COM


on

Winter Foods
Koo

ಚಳಿಗಾಲದಲ್ಲಿ ಎಲ್ಲೆಡೆ (foods to boost brain health) ಮಬ್ಬು ಆವರಿಸಿದಂತೆ, ಮೆದುಳಿಗೂ ಮೋಡ ಕವಿದ ವಾತಾವರಣವೇ. ಬೆಳಗಾದರೂ ಹೆಬ್ಬಾವಿನಂತೆ ಬಿದ್ದುಗೊಂಡಿರುವುದು, ಎದ್ದರೂ ಚಟುವಟಿಕೆಯಿಲ್ಲದಿರುವುದು ಇಂಥವೆಲ್ಲ ಮಾಮೂಲಿಯಾಗುತ್ತದೆ. ಆದರೆ ನಮ್ಮ ಶರೀರ ಮತ್ತು ಮೆದುಳು ಎಂದಿಗಿಂತಲೂ ಹೆಚ್ಚಿಗೆ ಕೆಲಸ ಮಾಡಬೇಕು. ಹೊರಗಿನ ಚಳಿಗೆ ಪ್ರತಿಯಾಗಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಲು, ಆಗಾಗ ದಾಳಿ ಮಾಡುವ ಸೋಂಕುಗಳಿಗೆ ಪ್ರತಿರೋಧವಾಗಿ ಶರೀರ ಹೆಚ್ಚು ಕೆಲಸ ಮಾಡಬೇಕು. ಈ ಎಲ್ಲಾ ಕೆಲಸಗಳ ಜೊತೆಗೆ ದೇಹ-ಮನಸ್ಸುಗಳು ಮಬ್ಬು, ಜಡತೆಯತ್ತ ಜಾರದಿರುವಂತೆ ಮಾಡಲು ಮೆದುಳು ಇನ್ನೂ ಚುರುಕಾಗಬೇಕು. ಚಳಿಗಾಲದಲ್ಲಿ ಇದಕ್ಕಾಗಿಯೇ ಮೆದುಳಿಗೆ ಹೆಚ್ಚಿನ ಪೋಷಣೆ ಬೇಕು. ವರ್ಷಾಂತ್ಯದ ಪ್ರವಾಸ ಮತ್ತು ರಜೆಯ ನೆವದಲ್ಲಿ ಸುಲಭಕ್ಕೆ ದೊರೆಯುವಂಥದ್ದು ಮತ್ತು ಬಾಯಿಗೆ ರುಚಿಸುವಂಥ ಆಹಾರಗಳತ್ತ ಮನಸ್ಸು ಹರಿಯುವುದು ಸಹಜ. ಆದರೆ ಇಂಥ ದಿನಗಳಲ್ಲಿ ದೇಹಕ್ಕೆ ಅಗತ್ಯವಾದ ಆಹಾರಗಳನ್ನು ಒದಗಿಸಿದರೆ, ಚಳಿಗಾಲದ ಸೋಂಕುಗಳೊಂದಿಗೆ ಹೋರಾಡಲು ಶರೀರ ಸಿದ್ಧವಿರುತ್ತದೆ. ಜೊತೆಗೆ ಮೆದುಳು ಸಹ ಚೈತನ್ಯಪೂರ್ಣವಾಗಿ ಇರುತ್ತದೆ. ಈ ಸತ್ವಗಳನ್ನು ಪೂರೈಸುವುದಕ್ಕೆ ಎಂಥ ಆಹಾರಗಳು ಅಗತ್ಯ?

Mackerel fish on ice

ಕೊಬ್ಬಿನ ಮೀನುಗಳು

ಮೆದುಳಿನ ಟಾನಿಕ್‌ ಎಂದೇ ಕರೆಸಿಕೊಳ್ಳುವ ಸತ್ವವೆಂದರೆ ಒಮೇಗಾ ೩ ಕೊಬ್ಬಿನಾಮ್ಲ. ಇದು ಮೆದುಳಿನ ಕಾರ್ಯ ಮತ್ತು ಕ್ಷಮತೆಯನ್ನು ವೃದ್ಧಿಸುತ್ತದೆ. ಇದರಿಂದ ಮೆದುಳಿಗೆ ಬೇಕಾದ ಆಮ್ಲಜನಕದ ಪೂರೈಕೆ ಸಮೃದ್ಧವಾಗಿ ನಡೆದು, ಮೆದುಳು ಚುರುಕಾಗುತ್ತದೆ. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಸಾಲ್ಮನ್‌ನಂಥ ಕೊಬ್ಬಿನ ಮೀನುಗಳು ಈ ಹೊತ್ತಿಗೆ ಉಪಯುಕ್ತ.

Various Edible Nuts and Seeds

ಕಾಯಿ-ಬೀಜಗಳು

ಎಲ್ಲಿಗೆ ಪ್ರಯಾಣಿಸುವಾಗಲೂ ಇವುಗಳನ್ನು ಒಯ್ಯುವುದು ಕಷ್ಟವಲ್ಲ. ಬಾದಾಮಿ, ವಾಲ್‌ನಟ್‌, ಶೇಂಗಾ, ಸೂರ್ಯಕಾಂತಿ ಮತ್ತು ಕುಂಬಳಕಾಯಿ ಬೀಜಗಳು, ಪಿಸ್ತಾ ಇತ್ಯಾದಿ ನಿಮ್ಮಿಷ್ಟ ಬೀಜಗಳನ್ನು ಇರಿಸಿಕೊಳ್ಳಬಹುದು. ಇದರಿಂದ ಮೆದುಳಿಗೆ ಬೇಕಾದ ಒಮೇಗಾ ೩ ಕೊಬ್ಬಿನಾಮ್ಲ ಹಾಗೂ ದೇಹಕ್ಕೆ ಬೇಕಾದ ಪ್ರೊಟೀನ್‌ ಮತ್ತು ಖನಿಜಗಳು ಸುಲಭವಾಗಿ ದೊರೆಯುತ್ತವೆ. ಪೌಷ್ಟಿಕವಾದ ಈ ಆಹಾರವನ್ನು ಹಸಿವಾದಾಗೆಲ್ಲ ಬಾಯಾಡಬಹುದು, ಗುಜರಿ ತಿಂಡಿಗಳ ಅಗತ್ಯವೇ ಬೀಳುವುದಿಲ್ಲ.

Green fruits and vegetables

ಹಸಿರು ತರಕಾರಿ-ಸೊಪ್ಪು

ಮೆದುಳಿಗೆ ಪೂರಕವಾದ ಆಹಾರಗಳಲ್ಲಿ ಫೋಲೇಟ್‌ ಮತ್ತು ವಿಟಮಿನ್‌ ಇ ಸಹ ಹೌದು. ದೇಹದಲ್ಲಿ ಮುಕ್ತ ಕಣಗಳು ಉಪಟಳ ಕೊಡದಂತೆ ಕಾಯುವಂಥ ಸೈನಿಕರಂತೆ, ಈ ಹಸಿರಿನಲ್ಲಿರುವ ಉತ್ಕರ್ಷಣ ನಿರೋಧಕಗಳು ವರ್ತಿಸುತ್ತವೆ. ಯಾವುದೇ ಹಸಿರು ಸೊಪ್ಪುಗಳು, ನುಗ್ಗೆಕಾಯಿ, ಬೆಂಡೆಕಾಯಿ, ಬ್ರೊಕೊಲಿ, ಎಲೆಕೋಸಿನಂಥ ಹಸಿರು ಬಣ್ಣದ ತರಕಾರಿಗಳು ಊಟದ ತಟ್ಟೆ ಮತ್ತು ಹೊಟ್ಟೆ ಸೇರಲಿ.

Avocado slices

ಅವಕಾಡೊ

ಅಥವಾ ಬೆಣ್ಣೆ ಹಣ್ಣು ಹೆಚ್ಚಾಗಿ ಸೇವಿಸಿದಂತೆ, ದೇಹ ಮತ್ತು ಮೆದುಳು ನಮಗೆ ಧನ್ಯವಾದ ಹೇಳುತ್ತದೆ. ಚಳಿಗಾಲದಲ್ಲಿ ಶರೀರಕ್ಕೆ ಅವಶ್ಯವಾಗಿ ಬೇಕಾದ ಕೆಲವು ಸೂಕ್ಷ್ಮ ಪೋಷಕಾಂಶಗಳು ಮತ್ತು ನಾರು ಇದರಲ್ಲಿ ಹೇರಳವಾಗಿದೆ. ಜೊತೆಗೆ ವಿಟಮಿನ್‌ ಇ ಮತ್ತು ಒಮೇಗಾ ೩ ಕೊಬ್ಬಿನಾಮ್ಲವಂತೂ ಇದ್ದೇಇದೆ. ಹಾಗಾಗಿ ಬೆಣ್ಣೆ ಹಣ್ಣು ಸಿಕ್ಕಾಗೆಲ್ಲಾ ಸೇವಿಸಿ. ಇದರಿಂದ ಹಲವು ರೀತಿಯಲ್ಲಿ ದೇಹ, ಮೆದುಳಿಗೆ ಪೋಷಣೆ ದೊರೆಯುತ್ತದೆ.

Tumeric Rhizome with Green Leaf and Turmeric Powder

ಅರಿಶಿನ

ಹಸಿಯಾದ ಅರಿಶಿನದ ಗಡ್ಡೆಗಳು ಅಥವಾ ಬೇರುಗಳು ಈ ಕಾಲದಲೂ ದೊರೆಯುತ್ತವೆ. ಇದರಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಮೆದುಳನ್ನು ಗಂಭೀರ ಹಾನಿಯಿಂದ ರಕ್ಷಿಸುತ್ತದೆ. ಸೋಂಕುಗಳಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ಇದು ಪರಿಣಾಮಕಾರಿಯಾಗಿ ಶಮನ ಮಾಡುತ್ತದೆ. ಹಾಗಾಗಿ ಚಳಿಗಾಲದ ಅನಾರೋಗ್ಯಕ್ಕೆ ಅರಿಶಿನ ಒಳ್ಳೆಯ ಮದ್ದು. ಜೊತೆಗೆ ಮೆದುಳಿನ ಜಡತೆಗೂ ನೀಡುತ್ತದೆ ಗುದ್ದು!

Berries

ಬೆರ್ರಿಗಳು

ಬ್ಲೂಬೆರಿ, ಸ್ಟ್ರಾಬೆರಿ ಮುಂತಾದ ಎಲ್ಲಾ ಬೆರ್ರಿಗಳಲ್ಲೂ ವಿಟಮಿನ್‌ ಸಿ ಅಧಿಕವಾಗಿದೆ. ಈ ಉತ್ಕರ್ಷಣ ನಿರೋಧಕವು ದೇಹ, ಮೆದುಳುಗಳ ಪೋಷಣೆಗೆ ಅಗತ್ಯವಾದದ್ದು. ನೆನಪಿನ ಶಕ್ತಿ ಹೆಚ್ಚಿಸಿ, ಒತ್ತಡ ನಿವಾರಿಸಿ, ಮೆದುಳನ್ನು ಚಟುವಟಿಕೆಯಿಂದಿಡುವ ಈ ಪುಟ್ಟ ಹಣ್ಣುಗಳು ಬಾಯಿಯ ಚಪಲವನ್ನೂ ತಣಿಸುತ್ತವೆ.

Fenugreek Seeds

ಮೆಂತೆ

ಇದನ್ನು ಸೊಪ್ಪಿನ ರೂಪದಲ್ಲಾದರೂ ತಿನ್ನಿ ಅಥವಾ ಕಾಳುಗಳನ್ನಾದರೂ ಸೇವಿಸಿ. ದೇಹದ ಉರಿಯೂತಗಳನ್ನು ಶಮನ ಮಾಡುವಲ್ಲಿ ಮೆಂತೆ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿಯೇ ನೋವು ನಿವಾರಕ ಗುಣವನ್ನೂ ಮೆಂತೆ ಬೀಜಗಳು ಹೊಂದಿವೆ.

ಇದನ್ನೂ ಓದಿ: Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

Continue Reading

ಆರೋಗ್ಯ

Health Card: ಸರ್ಕಾರದ ಹೊಸ ಹೆಲ್ತ್‌ ಕಾರ್ಡ್‌; ದೇಶದ ಎಲ್ಲೆಡೆ ಸಿಗಲಿದೆ Treatment! ಏನಿದರ ವಿಶೇಷತೆ?

Health Card : ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್‌ಗೆ ನೂತನ ಹೆಲ್ತ್ ಕಾರ್ಡ್‌ಗಳನ್ನು ಸಂಯೋಜನೆಗೊಳಿಸಲಾಗಿದ್ದು, ರಾಜ್ಯದ ಬಿಪಿಎಲ್ ಕಾರ್ಡುದಾರರು ದೇಶದ ಇತರೆ ರಾಜ್ಯಗಳಲ್ಲಿ ಹೆಲ್ತ್ ಕಾರ್ಡ್‌ನ ಅಡಿ ಚಿಕಿತ್ಸೆ ಪಡೆಯಬಹುದಾಗಿದೆ.

VISTARANEWS.COM


on

Arogya Karnataka New card Treatment
Koo

ಬೆಂಗಳೂರು: ಆಯುಷ್ಮಾನ್ ಭಾರತ್ (Ayushman Bharat) – ಆರೋಗ್ಯ ಕರ್ನಾಟಕ (Arogya Karnataka) ಹೆಲ್ತ್ ಕಾರ್ಡ್‌ಗಳಿಗೆ (Health Card) ಆರೋಗ್ಯ ಇಲಾಖೆ ಈಗ ಹೊಸ ರೂಪ ನೀಡಿದೆ. ಇದರ ಹೆಸರಿನಲ್ಲೂ ಅಲ್ಪ ಬದಲಾವಣೆಯಾಗಿದ್ದು, ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಎಂದು ಹೆಸರಿಡಲಾಗಿದೆ. ಇದರ ವೈಶಿಷ್ಟ್ಯತೆ ಎಂದರೆ ಈ ಕಾರ್ಡ್‌ ಹೊಂದಿದವರು ದೇಶದ ಯಾವುದೇ ಕಡೆ (ನೋಂದಾಯಿತ) ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಈ ನವೀಕೃತ ಹೆಲ್ತ್ ಕಾರ್ಡ್‌ಗಳನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಡಿಸೆಂಬರ್‌ 6ರಂದು ಬಿಡುಗಡೆ ಮಾಡಿದ್ದಾರೆ. ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಹೆಲ್ತ್ ಕಾರ್ಡ್‌ ಅನ್ನು ರಾಜ್ಯದ 5.9 ಕೋಟಿ ಜನರಿಗೆ ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ.‌

Ayushman Bharat Arogya Karnataka Health Card

ಇತರೆ ರಾಜ್ಯಗಳಲ್ಲಿ ಚಿಕಿತ್ಸೆ ಪಡೆಯಬಹುದು

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್‌ಗೆ ನೂತನ ಹೆಲ್ತ್ ಕಾರ್ಡ್‌ಗಳನ್ನು ಸಂಯೋಜನೆಗೊಳಿಸಲಾಗಿದ್ದು, ರಾಜ್ಯದ ಬಿಪಿಎಲ್ ಕಾರ್ಡುದಾರರು ದೇಶದ ಇತರೆ ರಾಜ್ಯಗಳಲ್ಲಿ ಹೆಲ್ತ್ ಕಾರ್ಡ್‌ನ ಅಡಿ ಚಿಕಿತ್ಸೆ ಪಡೆಯಬಹುದಾಗಿದೆ.

6 ತಿಂಗಳಲ್ಲಿ 5.09 ಕೋಟಿ ಮಂದಿಗೆ ಕಾರ್ಡ್‌ ವಿತರಣೆ ಗುರಿ

ರಾಜ್ಯದಲ್ಲಿರುವ ಒಟ್ಟು 5.09 ಕೋಟಿ ಫಲಾನುಭವಿಗಳಿಗೆ ಮುಂದಿನ 6 ತಿಂಗಳ ಒಳಗಾಗಿ “ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಕಾರ್ಡ್‌ ಸೃಜನೆ ಮತ್ತು ವಿತರಣಾ ಗುರಿಯನ್ನು ಹೊಂದಲಾಗಿದೆ.

ರಾಜ್ಯದ ಪಾಲು ಶೇ.66 ಮತ್ತು ಕೇಂದ್ರದ ಪಾಲು ಶೇ. 34

ಈ ಯೋಜನೆಯ ಒಟ್ಟು ಅನುದಾನದ ಪಾಲಿನಲ್ಲಿ ರಾಜ್ಯ ಸರ್ಕಾರವು ಶೇ.66 ರಷ್ಟು ನೀಡುತ್ತಿದ್ದರೆ, ಕೇಂದ್ರ ಸರ್ಕಾರವು 34% ನೀಡುತ್ತಿದೆ.

ವಾರ್ಷಿಕ 5 ಲಕ್ಷ ರೂ. ಮೌಲ್ಯದ ಚಿಕಿತ್ಸೆ ಪಡೆಯಬಹುದು

ಈ ಯೋಜನೆಯಡಿಯಲ್ಲಿ BPL ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ವಾರ್ಷಿಕ 5 ಲಕ್ಷ ರೂ. ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬರು ಅಥವಾ ಹಲವರು Family Floater ಆಧಾರದ ಮೇಲೆ ಬಳಸಿಕೊಳ್ಳಬಹುದು.‌

ಎಪಿಎಲ್‌ನವರಿಗೆ ಗರಿಷ್ಠ ರೂ.1.5 ಲಕ್ಷ ವೆಚ್ಚ ಪಾವತಿ

APL ಕುಟುಂಬದವರಿಗೂ ಸಹ ಯೋಜನೆಯಲ್ಲಿ ಅವಕಾಶ ಕಲ್ಪಿಸಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, APL ಕುಟುಂಬಗಳಿಗೆ 5 ಲಕ್ಷದ ರೂ. ಮೌಲ್ಯದ ಚಿಕಿತ್ಸೆಯಲ್ಲಿ ಗರಿಷ್ಠ ರೂ.1.5 ಲಕ್ಷ ವೆಚ್ಚವನ್ನು ರಾಜ್ಯ ಸರ್ಕಾರ ಪಾವತಿಸಲಿದೆ. ಎಪಿಎಲ್ ಕಾರ್ಡುದಾರರು ಶೇ. 70 ರಷ್ಟು ಚಿಕಿತ್ಸಾ ವೆಚ್ಚವನ್ನು ಪಾವತಿಸಿದರೆ, ಶೇ.30ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.\

1650 ಚಿಕಿತ್ಸಾ ಪ್ಯಾಕೇಜ್‌ಗಳು ಲಭ್ಯ

ಪ್ರಸ್ತುತ ರಾಜ್ಯದಲ್ಲಿ 3450ಕ್ಕೂ ಹೆಚ್ಚಿನ ಆರೋಗ್ಯ ಸಂಸ್ಥೆಗಳು “ಆಯುಷ್ಮಾನ್‌ ಭಾರತ್- “ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಯೋಜನೆಯಲ್ಲಿ ಸೇವೆ ನೀಡಲು ನೋಂದಾಯಿಸಿಕೊಂಡಿರುತ್ತಾರೆ. ಸುಮಾರು 1650 ಚಿಕಿತ್ಸಾ ಪ್ಯಾಕೇಜ್‌ಗಳು ರಾಜ್ಯದ ಎಲ್ಲ ಸಾರ್ವಜನಿಕ ಆಸ್ಪತ್ರೆ ಮತ್ತು 540 ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. 171 ಅತ್ಯಂತ ತುರ್ತು ಚಿಕಿತ್ಸೆಯ ಮತ್ತು ಜೀವ ಉಳಿಸುವ ಪ್ಯಾಕೇಜ್‌ಗಳನ್ನು ಒಳಗೊಂಡಿದೆ.

60:40 ಅನುಪಾತದಲ್ಲಿ ಅನುದಾನ

ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್‌ ಕುಟುಂಬಗಳಿದ್ದು, ಇದರಲ್ಲಿ 69 ಲಕ್ಷ SECC 2011 ಸಮೀಕ್ಷೆಯಂತೆ ಬಡತನ ರೇಖೆಗಿಂತ ಕೆಳಗಿವೆ. ಕೇಂದ್ರ ಸರ್ಕಾರ ಈ ಕುಟುಂಬಗಳಿಗೆ 60:40 ಅನುಪಾತದಲ್ಲಿ ಅನುದಾನ ಒದಗಿಸುತ್ತಿದೆ. ರಾಜ್ಯ ಸರ್ಕಾರವು ಉಳಿದ 46 ಲಕ್ಷ ಬಿಪಿಎಲ್‌ ಹಾಗೂ 19 ಲಕ್ಷ ಎಪಿಎಲ್‌ ಕುಟುಂಬಗಳಿಗೆ 100% ಅನುದಾನ ಒದಗಿಸುತ್ತಿದೆ.

ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಲ್ವಾ? ಕೂಡಲೇ ಈ ಕೆಲಸ ಮಾಡಿ!

ಸುಲಭವಾಗಿ ನೋಂದಾಯಿಸಿ

ಆಯುಷ್ಮಾನ್‌ ಭಾರತ್‌ – ಪ್ರಧಾನ ಮಂತ್ರಿ ಜನಾರೋಗ್ಯ ಯೋಜನಾ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯ Co-branded ಗುರುತಿನ ಚೀಟಿಗಳಾಗಿದ್ದು, Co-branded ಗುರುತಿನ ಚೀಟಿಗಳನ್ನು ಉಚಿತವಾಗಿ ನೀಡಲಾಗುವುದು.‌ ಈ ಗುರುತಿನ ಚೀಟಿಗಳನ್ನು ರಾಷ್ಟ್ರೀಯ ಆರೋಗ್ಯ ID (ABHA ID) ಯೊಂದಿಗೆ ಜೋಡಿಸಲಾಗಿರುತ್ತದೆ. ಇದರಿಂದ ಫಲಾನುಭವಿಗಳ ವ್ಯೆದ್ಯಕೀಯ ದಾಖಲೆಗಳನ್ನು ಸಂರಕ್ಷಿಸಿ ಸುಲಭ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ನೆರವಾಗುತ್ತದೆ. ಪಡಿತರ ಚೀಟಿಯೊಂದಿಗೆ ಜೋಡಿಸಲಾದ ಮೂಲ ಆಧಾರ್‌ ಗುರುತಿನ ಚೀಟಿಯ ಸಹಾಯದಿಂದ ಹತ್ತಿರದ ಗ್ರಾಮ-1 ಕೇಂದ್ರಗಳು ಅಥವಾ ನಾಗರೀಕ ಸೇವಾ “ಆಯುಷ್ಮಾನ್‌ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಗುರುತಿನ ಚೀಟಿಗಳನ್ನು ಸುಲಭವಾಗಿ ನೋಂದಾಯಿಸಿ ಪಡೆಯಬಹುದಾಗಿರುತ್ತದೆ.

Continue Reading

ಆರೋಗ್ಯ

Guava For Weight Loss: ತೂಕ ಇಳಿಸಬೇಕೆ? ಪೇರಲೆ ಹಣ್ಣು ತಿನ್ನಿ!

ಮಿಡಿಗಾಯಿ, ಎಳೆಗಾಯಿ, ದೋರಗಾಯಿ, ಅರೆಹಂಪು, ಕಳಿತ ಹಣ್ಣು ಮುಂತಾದ ಯಾವುದನ್ನೂ ಬಿಡದಂತೆ ಪೇರಲೆ ಹಣ್ಣು ತಿನ್ನುವವರಿದ್ದಾರೆ. ತಿನ್ನಲು ಬಾಯಿಗೆ ರುಚಿ, ಮನಸ್ಸಿಗೆ ತೃಪ್ತಿ ಎನ್ನುವುದನ್ನು ಮೀರಿ ಬೇರೆ ಕಾರಣಗಳುಂಟೆ ಪೇರಲೆ ತಿನ್ನುವುದಕ್ಕೆ? ಇದನ್ನು ತಿಂದು (Guava for Weight Loss) ತೂಕ ಇಳಿಸಬಹುದೇ?

VISTARANEWS.COM


on

Guava For Weight Loss
Koo

ಸೀಬೆ ಕಾಯಿ, ಪೇರಲೆ ಕಾಯಿ, ಚೇಪೆ ಕಾಯಿ (Guava for Weight Loss) ಮುಂತಾದ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈ ಕಾಯಿ ಮತ್ತು ಹಣ್ಣು ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಆಚೀಚೆ ಮನೆಗಳಲ್ಲಿ ಇದರ ಮರವಿದ್ದರೆ, ಅವರೆಷ್ಟೇ ಕರೆದು ಕೊಟ್ಟರೂ ಕದ್ದು ತಿಂದಿದ್ದು ಇನ್ನೂ ರುಚಿ! ಮಿಡಿಗಾಯಿ, ಎಳೆಗಾಯಿ, ದೋರಗಾಯಿ, ಅರೆಹಂಪು, ಕಳಿತ ಹಣ್ಣು- ಹೀಗೆ ಯಾವುದನ್ನೂ ಬಿಡದೆ ಬೋಳಿಸಿ ತಿನ್ನುವವರಿದ್ದಾರೆ. ತಿನ್ನಲು ಬಾಯಿಗೆ ರುಚಿ, ಮನಸ್ಸಿಗೆ ತೃಪ್ತಿ ಎನ್ನುವುದನ್ನು ಮೀರಿ ಬೇರೆ ಕಾರಣಗಳುಂಟೆ ಪೇರಲೆಕಾಯಿ ತಿನ್ನುವುದಕ್ಕೆ?

Guava Fruit

ಪೇರಲೆಕಾಯಿ ತೂಕ ಇಳಿಸುವವರಿಗೆ ಅವಶ್ಯವಾಗಿ ಬೇಕಾದ್ದು ಎಂದರೆ ಬಹಳಷ್ಟು ಜನರಿಗೆ ಖುಷಿಯಾದೀತು. ಹೌದು ತೂಕ ಇಳಿಸುವವರಿಗೆ ಅಗತ್ಯವಾಗಿ ಬೇಕಾದ್ದು ಪೌಷ್ಟಿಕ ಆಹಾರ ಮತ್ತು ಆ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬ ಅರಿವು. ಹಸಿವಾದಾಗ ಸುಲಭಕ್ಕೆ ಪ್ಯಾಕ್‌ ಕತ್ತರಿಸಿ ಕರಂಕುರುಂ ಮೆಲ್ಲುವುದರ ಬದಲಿಗೆ ಆರೋಗ್ಯಕರ ತಿನಿಸುಗಳನ್ನು ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ತಿನ್ನಬೇಕು. ಇಂಥ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುವುದು ಸೀಬೆ ಕಾಯಿ.

Two while guavas with guava slices

ಕ್ಯಾಲರಿ ಕಡಿಮೆ

ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆ, ಕೊಬ್ಬು ಬಹುತೇಕ ಇಲ್ಲವೇ ಇಲ್ಲ. ಇದರಲ್ಲಿ ಅಗತ್ಯ ಪ್ರಮಾಣದ ನಾರು ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ಕಳ್ಳ ಹಸಿವೆಯನ್ನು ನೀಗಿಸುತ್ತದೆ. ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಬಾಯಾಡುವುದಕ್ಕೆ ಇನ್ನೇನಿದೆ ಎಂದು ತಡಕುವುದನ್ನು ತಡೆಯುತ್ತದೆ. ಜೊತೆಗೆ, ದೇಹಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್‌ ಸಿ ಮತ್ತಿತರ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಹಾಗಾಗಿ ತೂಕ ಇಳಿಸುವ ಯೋಜನೆಯಿದ್ದರೆ ಪೇರಲೆ ಹಣ್ಣನ್ನು ಸಂತೋಷದಿಂದ ನಿಮ್ಮ ಆಹಾರಯೋಜನೆಯಲ್ಲಿ ಸೇರಿಸಿಕೊಳ್ಳಿ. ಆದರೆ ಇದನ್ನು ಆಹಾರದ ಭಾಗವಾಗಿ ಬಳಸಿಕೊಳ್ಳುವುದು ಹೇಗೆ? ಪೇರಲೆಯನ್ನು ಕಚ್ಚಿ ತಿನ್ನುವುದು ಮಾತ್ರವೇ ಎಲ್ಲರಿಗೂ ಪರಿಚಿತವಾದದ್ದು. ಹೀಗೆ ಎಷ್ಟು ತಿನ್ನಲು ಸಾಧ್ಯ? ದಿನವೂ ಅದನ್ನೇ ಮಾಡಿದರೆ ಬೋರಾಗುವುದಿಲ್ಲವೇ? ಇಲ್ಲಿದೆ ಪರಿಹಾರ.

Guava smoothie

ಸೀಬೆ ಸ್ಮೂದಿ

ತೂಕ ಇಳಿಸುವವರಿಗೆ ಸ್ಮೂದಿ ಉತ್ತಮ ಆಹಾರ. ಯಾವುದೇ ಹಣ್ಣುಗಳನ್ನು ಇಡಿಯಾಗಿ ಅಥವಾ ಉಳಿದೆಲ್ಲ ಹಣ್ಣುಗಳ ಜೊತೆಯಾಗಿ ಹಾಕಿ ಸ್ಮೂದಿ ಮಾಡಿಕೊಳ್ಳಬಹುದು. ಇದಕ್ಕೆ ಪೇರಲೆಯನ್ನೂ ಸೇರಿಸಿದರೆ ಉತ್ತಮ. ಇದು ಸ್ಮೂದಿಯ ರುಚಿ ಮತ್ತು ಘಮವನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಬಾಳೆಹಣ್ಣು, ಬೆರ್ರಿಗಳು ಮುಂತಾದ ನಿಮ್ಮ ಆಯ್ಕೆಯ ಹಣ್ಣುಗಳ ಜೊತೆಗೆ ಸೀಬೆಯನ್ನೂ ಸೇರಿಸಿ. ಜೊತೆಗೆ ಹಾಲು ಅಥವಾ ಮೊಸರು- ಯಾವುದು ಸರಿ ಹೊಂದುತ್ತದೆ ಎಂಬುದೂ ನಿಮ್ಮದೇ ಆಯ್ಕೆ. ಇದರ ಮೇಲೆ ಚಿಯಾ, ಅಗಸೆ ಮುಂತಾದ ಬೀಜಗಳನ್ನು ಉದುರಿಸಿದರೆ ಸತ್ವಯುತ ಸ್ಮೂದಿ ಸಿದ್ಧ.

Guava salad

ಸೀಬೆ ಸಲಾಡ್

ತೂಕ ಇಳಿಸುವವರಿಗೆ ಸಲಾಡ್‌ ಇಲ್ಲದೆ ಮುಂದೆ ಹೋಗುವುದೇ ಇಲ್ಲ. ಕಡಿಮೆ ಕೊಬ್ಬಿರುವ ಅಗತ್ಯ ಸತ್ವಗಳನ್ನು ಹೊಂದಿರುವ ಸಲಾಡ್‌ಗಳು ದೇಹಕ್ಕೆ ಚೈತನ್ಯ ನೀಡುವುದರ ಜೊತೆಗೆ ಕೊಬ್ಬು ಕರಗಿಸಲು ನೆರವಾಗುತ್ತವೆ. ಇಂಥ ಯಾವುದೇ ಸಲಾಡ್‌ಗೂ ಪೇರಲೆಯನ್ನು ಸೇರಿಸಬಹುದು. ತರಕಾರಿ ಸಲಾಡ್‌, ಹಣ್ಣುಗಳ ಸಲಾಡ್‌ ಎರಡಕ್ಕೂ ಪೇರಲೆಯ ರುಚಿ ಮತ್ತು ಪರಿಮಳ ಹೊಂದಿಕೊಳ್ಳುತ್ತದೆ. ಹೊತೆಗೆ ಒಂದಿಷ್ಟು ನಿಂಬೆ ರಸ ಅಥವಾ ನಿಮ್ಮಿಷ್ಟ ಯಾವುದೇ ಕಡಿಮೆ ಕೊಬ್ಬಿನ ಡ್ರೆಸ್ಸಿಂಗ್‌ ಬಳಸಬಹುದು.

ಪರ್ಯಾಯ ತಿನಿಸು

ಸಿಹಿ ತಿನ್ನಬೇಕೆಂಬ ಬಯಕೆ ಮೂಡಿದಾಗೆಲ್ಲಾ ಸಕ್ಕರೆ ಭರಿತ ತಿಂಡಿಗಳೇ ಬೇಕೆಂದಿಲ್ಲ. ರುಚಿಯಾದ ಪೇರಲೆ ಹಣ್ಣನ್ನೂ ಮೆಲ್ಲಬಹುದು. ತೂಕ ಇಳಿಸುವವರಿಗೆ ಸಕ್ಕರೆಯನ್ನು ಬಿಡುವುದು ಅತಿ ಮುಖ್ಯ. ಪುಟ್ಟದೊಂದು ಚಾಕಲೇಟ್‌ ಅಥವಾ ಕ್ಯಾಂಡಿ ಸಹ ತೂಕ ಇಳಿಸುವ ದಾರಿಯಲ್ಲಿ ಅಡಚಣೆಯನ್ನೇ ತರುತ್ತದೆ. ನೈಸರ್ಗಿಕವಾಗಿ ಸಿಹಿ ರುಚಿಯಿರುವ ತಿನಿಸುಗಳು ಕೃತಕ ಸಿಹಿಗಳಿಗಿಂತ ಯಾವಾಗಲೂ ಉತ್ತಮ. ಹಾಗಾಗಿ ಸಿಹಿ ತಿನ್ನುವ ಆಸೆಗೆ ಸಿಹಿಯಾದ ಪೇರಲೆ ಹಣ್ನು ಒಳ್ಳೆಯ ಪರ್ಯಾಯ

ಸೀಬೆ ಚಹಾ

ಹೌಹಾರಬೇಡಿ! ಇದರ ಹಣ್ಣಿನಿಂದಲ್ಲ, ಸೀಬೆಯ ಎಲೆಗಳಿಂದ ಚಹಾ ತಯಾರಿಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ದೇಹದ ಚಯಾಪಚಯ ಹೆಚ್ಚಿಸುವ ಸಾಮರ್ಥ್ಯ ಸೀಬೆಯ ಎಲೆಗಳಿಗಿವೆ. ಹಾಗಾಗಿ ತೂಕ ಇಳಿಸುವವರಿಗೆ ಸೀಬೆ ಎಲೆಯ ಚಹಾ ಅಥವಾ ಕಷಾಯ ಒಳ್ಳೆಯ ಆಯ್ಕೆ. ಒಂದು ಹಿಡಿ ಸೀಬೆಯ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಕಪ್‌ ನೀರಲ್ಲಿ ಕುದಿಸಿ. ಹತ್ತು ನಿಮಿಷಗಳ ನಂತರ ಇದನ್ನು ಸೋಸಿ ಬೆಚ್ಚಗಿರುವಾಗಲೇ ಕುಡಿಯಿರಿ. ರುಚಿಗೆ ಬೇಕಿದ್ದರೆ ನಿಂಬೆರಸ ಮತ್ತು ತುಸುವೇ ಜೇನುತುಪ್ಪ ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

Continue Reading

ಆರೋಗ್ಯ

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

ರಾಜ್ಯದಲ್ಲಿ ಡೆಂಗ್ಯು ಜ್ವರ (Dengue fever) ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಸೊಳ್ಳೆಗಳಿಂದ ದೂರವಿರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

VISTARANEWS.COM


on

dengue flue
Koo

ಬೆಂಗಳೂರು: ಬದಲಾದ ವಾತಾವರಣದ ಪರಿಣಾಮ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು (Dengue Fever) ಹೆಚ್ಚಾಗಿ ವರದಿಯಾಗುತ್ತಿದೆ. 15 ಸಾವಿರದ ಗಡಿಯತ್ತ ಸಾಗುತ್ತಿದ್ದು, ಆತಂಕ ಮೂಡಿಸಿದೆ. ಆರೋಗ್ಯ ಇಲಾಖೆ (Health department) ಈ ವಿಚಾರದಲ್ಲಿ ಅಲರ್ಟ್‌ ಆಗಿದೆ.

ರಾಜ್ಯದಲ್ಲಿ ಡೆಂಗ್ಯೂ 14,955 ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳ ಅವಧಿಯಲ್ಲಿ 1,829 ಪ್ರಕರಣಗಳು ದೃಢಪಟ್ಟಿವೆ. ಈವರೆಗೆ ರಾಜ್ಯದ 31 ಜಿಲ್ಲೆಗಳಿಂದ 7,282 ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 7,673 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಡೆಂಗ್ಯೂ ಜ್ವರ ಶಂಕಿತರ ತಪಾಸಣೆ ಮಾಡಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 9,620 ಮಂದಿ ಡೆಂಗ್ಯೂ ಜ್ವರದಿಂದ ಬಳಲಿದ್ದರು. ಕಳೆದ ವರ್ಷ ಡೆಂಗ್ಯೂನಿಂದ 9 ಮಂದಿ ಬಲಿಯಾಗಿದ್ದರು ಕೂಡ. ಈ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ಸೇರಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 52,721 ಡೆಂಗ್ಯು ಶಂಕಿತರನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ 33,326 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ 839 ಮಂದಿಯಲ್ಲಿ ಡೆಂಗ್ಯು ದೃಢಪಟ್ಟಿದೆ. ಡೆಂಗ್ಯೂ ಜೊತೆಗೆ 28 ಜಿಲ್ಲೆಗಳಲ್ಲಿ ಚಿಕೂನ್‌ ಗುನ್ಯಾ ಪ್ರಕರಣಗಳೂ ಪತ್ತೆಯಾಗಿದ್ದು, ತಲೆನೋವು ಮೂಡಿಸಿದೆ. 60 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ ಗುನ್ಯಾ ಶಂಕಿತರ ತಪಾಸಣೆ ಮಾಡಲಾಗಿದೆ.

ಸೊಳ್ಳೆಗಳನ್ನು ಆದಷ್ಟು ತಡೆಗಟ್ಟಲು ಸೂಚಿಸಲಾಗಿದೆ. ತೆರೆದ ಪ್ರದೇಶಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಹುಟ್ಟುತ್ತಿವೆ. ಇವುಗಳನ್ನು ನಿವಾರಿಸಬೇಕು. ಮನೆಗೆ ಹಾಗೂ ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದು, ಮಾಸ್ಕಿಟೋ ರಿಪೆಲ್ಲೆಂಟ್‌ಗಳನ್ನು ಬಳಸಲು ಸೂಚಿಸಲಾಗಿದೆ.

ಜಿಲ್ಲೆ- ಪ್ರಕರಣಗಳು
ಕಲಬುರಗಿ- 662
ಮೈಸೂರು – 646
ಉಡುಪಿ – 635
ದಕ್ಷಿಣ ಕನ್ನಡ – 492
ಶಿವಮೊಗ್ಗ – 404
ತುಮಕೂರು – 315
ಚಿತ್ರದುರ್ಗ – 300

ಚಿಕೂನ್ ಗುನ್ಯಾ ಪ್ರಕರಣಗಳು
ಮೈಸೂರು – 196
ವಿಜಯಪುರ – 163
ಕಲಬುರಗಿ – 132
ಶಿವಮೊಗ್ಗದಲ್ಲಿ 125
ಒಟ್ಟು 1,481 ಮಂದಿ

Continue Reading
Advertisement
Dina Bhavishya
ಪ್ರಮುಖ ಸುದ್ದಿ31 mins ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

Sphoorti Salu
ಸುವಚನ31 mins ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

HD Kumaraswamy
ಕರ್ನಾಟಕ6 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ6 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ6 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ6 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Central government bars onion export to curb inflation
ದೇಶ7 hours ago

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

Nat Sciver-Brunt celebrates dismissing Harmanpreet Kaur
ಕ್ರಿಕೆಟ್7 hours ago

INDW vs ENGW: ಹೀನಾಯವಾಗಿ ಸೋತು ಸರಣಿ ಕಳೆದುಕೊಂಡ ಭಾರತ ಮಹಿಳಾ ತಂಡ

Farmers Protest
ಕರ್ನಾಟಕ7 hours ago

Farmers Protest: ಸ್ವಾಮೀಜಿಗಳ ಸಂಧಾನ ಯಶಸ್ವಿ; ಕಿತ್ತೂರಲ್ಲಿ ಪ್ರತಿಭಟನೆ ಹಿಂಪಡೆದ 9 ಹಳ್ಳಿ ರೈತರು

Muslim woman beaten up for voting bjp
ದೇಶ7 hours ago

ಬಿಜೆಪಿಗೆ ಮತ ಹಾಕಿದ್ದಕ್ಕೆ ಮುಸ್ಲಿಂ ಮಹಿಳೆಗೆ ಮನೆಯವರಿಂದಲೇ ಹಲ್ಲೆ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ31 mins ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema1 day ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ2 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ2 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ಟ್ರೆಂಡಿಂಗ್‌