ಬೆಂಗಳೂರು: 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ, ಇಂದಿನಿಂದ ನೋಟುಗಳ ವಿನಿಮಯಕ್ಕೆ ಬ್ಯಾಂಕ್‌ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ತಕ್ಕ ಸಿದ್ಧತೆಗಳನ್ನು ಬ್ಯಾಂಕ್‌ಗಳಲ್ಲಿ ಮಾಡಿಕೊಳ್ಳಲಾಗಿದೆ.
2000 ರೂ. ನೋಟುಗಳನ್ನು ಮೇ 19ರಂದು ಚಲಾವಣೆಯಿಂದ ಆರ್‌ಬಿಐ ಹಿಂಪಡೆದಿತ್ತು. ಇಂದಿನಿಂದ ಅವುಗಳನ್ನು ಮರಳಿ ಪಡೆಯಲಾಗುತ್ತಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಈ ಪ್ರಕ್ರಿಯೆ ನಡೆಯಲಿದೆ.
ಈ ಮುಖಬೆಲೆಯ ನೋಟುಗಳನ್ನು ಯಾವುದೇ ಪ್ರಮಾಣದಲ್ಲಿ ನಿಮ್ಮ ಖಾತೆಗೆ ಜಮಾ ಮಾಡಬಹುದು. ಅಥವಾ 20,000 ರೂ. ವರೆಗಿನ ನೋಟುಗಳಿಗೆ ಕಡಿಮೆ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇದಕ್ಕೆ ರಿಕ್ವಿಸಿಷನ್ ಸ್ಲಿಪ್ ಅಥವಾ ಗುರುತು ಕಾರ್ಡ್ ಬೇಕಿಲ್ಲ. ಆದರೆ ಕೆಲವು ಬ್ಯಾಂಕ್‌ಗಳು, ತಾವು ಗುರುತಿನ ಕಾರ್ಡ್ ಕೇಳುತ್ತೇವೆ ಎಂದಿವೆ.
ನೋಟು ಜಮಾ ಮಾಡುವ ಅಥವಾ ಬದಲಾಯಿಸಿಕೊಳ್ಳುವವರ ಬಗ್ಗೆ ಆರ್‌ಬಿಐ ನಿಗಾ ಇರಿಸುವುದಿಲ್ಲ. 2000 ರೂ. ಮುಖಬೆಲೆಯ ನೋಟುಗಳು ಸೆಪ್ಟೆಂಬರ್ 30ರ ನಂತರ ಚಲಾವಣೆಯಲ್ಲಿ ಇರುವುದಿಲ್ಲ. ನೋಟುಗಳ ವಿನಿಮಯ ಹಾಗೂ ಠೇವಣಿಗೆ ಆರ್‌ಬಿಐ ನಾಲ್ಕು ತಿಂಗಳು ಅವಕಾಶ ನೀಡಿದೆ. ಜನ ಬ್ಯಾಂಕ್‌ಗಳಲ್ಲಿ ದಿನಕ್ಕೆ 10 ನೋಟು (20 ಸಾವಿರ ರೂ.) ಗಳಂತೆ ವಿನಿಮಯ ಮಾಡಿಕೊಳ್ಳಬಹುದು.
2000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅರ್ಜಿ ತುಂಬುವ ಅಗತ್ಯವಿಲ್ಲ. ಜಮಾ ಮಾಡುವ ಯಾವುದೇ ನಮೂನೆಗಳ ಮೂಲಕ ಖಾತೆಗಳಿಗೆ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ತುಂಬಬಹುದು.
ಕೆಲವು ಬ್ಯಾಂಕ್‌ಗಳು ಕ್ಯೂ ನಿಯಂತ್ರಿಸಲು ಹಾಗೂ ಅನವಶ್ಯಕ ಗೊಂದಲ ತಪ್ಪಿಸಲು ಪೊಲೀಸರ ನೆರವು ಕೇಳಿವೆ. 2000 ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಿನಿಮಯ ಮಾಡಲು ಬರುವವರ ಮೇಲೆ ಕೇಸು ದಾಖಲಿಸುತ್ತೇವೆ ಎಂದಿವೆ.
ಇದನ್ನೂ ಓದಿ: 2000 Notes Withdrawn: ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ ಬರೀ 2 ಸಾವಿರ ರೂ. ನೋಟು; ಇದು ನೋಟು ವಾಪಸ್ ಎಫೆಕ್ಟ್