2000 Notes Withdrawn: ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ ಬರೀ 2 ಸಾವಿರ ರೂ. ನೋಟು; ಇದು ನೋಟು ವಾಪಸ್‌ ಎಫೆಕ್ಟ್ - Vistara News

ದೇಶ

2000 Notes Withdrawn: ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ ಬರೀ 2 ಸಾವಿರ ರೂ. ನೋಟು; ಇದು ನೋಟು ವಾಪಸ್‌ ಎಫೆಕ್ಟ್

2000 Notes Withdrawn: ಬ್ಯಾಂಕ್‌ಗಳಿಗೆ ಹೋಗಿ ಎರಡು ಸಾವಿರ ರೂಪಾಯಿ ನೋಟುಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವ ಗ್ರಾಹಕರು, ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ ನೀಡುವ ಮೂಲಕ ‘ಅಡ್ಡ’ದಾರಿ ಕಂಡುಕೊಂಡಿದ್ದಾರೆ.

VISTARANEWS.COM


on

Zomato
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ‌’ಮನುಷ್ಯನ ಅವಶ್ಯಕತೆಯೇ ಸಂಶೋಧನೆ, ಅನ್ವೇಷಣೆ, ಆವಿಷ್ಕಾರದ ಮೂಲ’ ಎಂಬ ಮಾತಿದೆ. ಆದರೆ, ಆಧುನಿಕ ಜಗತ್ತಿನಲ್ಲಿ, ‘ಸೋಮಾರಿತನವೇ ಹೊಸ ಉಪಾಯಗಳಿಗೆ ರಹದಾರಿ’ ಎಂಬಂತಾಗಿದೆ. ಈ ಮಾತಿಗೆ ನಿದರ್ಶನ ಎಂಬಂತೆ, ದೇಶದಲ್ಲಿ 2 ಸಾವಿರ ರೂ. ನೋಟು ವಾಪಸ್‌ ಪಡೆದ ಕಾರಣ ಜನ ಬ್ಯಾಂಕ್‌ಗೆ (2000 Notes Withdrawn) ಹೋಗಿ ಎಕ್ಸ್‌ಚೇಂಜ್‌ ಮಾಡಲು ಸೋಮಾರಿತನ ಪ್ರದರ್ಶಿಸುತ್ತಿದ್ದಾರೆ. ಅದಕ್ಕಾಗಿ, ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆ ಮಾಡಿಕೊಂಡು ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ 2 ಸಾವಿರ ರೂ. ನೋಟು ಕೊಡುತ್ತಿದ್ದಾರೆ. ಇದರಿಂದ ಚಿಲ್ಲರೆಗಾಗಿ ಜೊಮ್ಯಾಟೋ ಡೆಲಿವರಿ ಬಾಯ್ಸ್‌ ಪರದಾಡುವಂತಾಗಿದೆ.

ಹೌದು, ದೇಶದಲ್ಲಿ 2 ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಆರ್‌ಬಿಐ ಹಿಂಪಡೆದಿದೆ. 2 ಸಾವಿರ ರೂ. ನೋಟುಗಳು ಇರುವವರು ಬ್ಯಾಂಕ್‌ಗಳಿಗೆ ತೆರಳಿ ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದಾಗಿದೆ. ಆದರೆ, ಹೀಗೆ ಬ್ಯಾಂಕ್‌ಗೆ ತೆರಳಲು ಜನ ಸೋಮಾರಿತನ ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರು, ಮುಂಬೈ ಸೇರಿ ದೇಶದ ಹಲವು ನಗರಗಳಲ್ಲಿ ಜನ ಡೆಲಿವರಿ ಬಾಯ್ಸ್‌ಗೆ 2 ಸಾವಿರ ರೂ. ನೋಟು ನೀಡಿದ್ದಾರೆ. ಸೋಮವಾರ ಒಂದೇ ದಿನ ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆ ಮಾಡಿಕೊಂಡ ಶೇ.72ರಷ್ಟು ಜನ 2 ಸಾವಿರ ರೂ. ನೋಟುಗಳನ್ನೇ ನೀಡಿದ್ದಾರೆ ಎಂದು ಜೊಮ್ಯಾಟೋ ಮಾಹಿತಿ ನೀಡಿದೆ.

ಜೊಮ್ಯಾಟೋ ಪೇಚಾಟ ಹೇಗಿದೆ ನೋಡಿ

ಆನ್‌ಲೈನ್‌ನಲ್ಲಿ ಆಹಾರ ಆರ್ಡರ್‌ ಮಾಡುವವರು ಡೆಲಿವರಿ ಬಾಯ್‌ಗಳಿಗೆ 2 ಸಾವಿರ ರೂ. ನೋಟುಗಳನ್ನೇ ಜಾಸ್ತಿ ನೀಡುತ್ತಿದ್ದಾರೆ. ಒಂದೆಡೆ ಚಿಲ್ಲರೆ ಸಮಸ್ಯೆ, ಮತ್ತೊಂದೆಡೆ 2 ಸಾವಿರ ರೂ. ನೋಟುಗಳನ್ನು ತಿರಸ್ಕರಿಸುವಂತಿಲ್ಲ. ಇದರಿಂದಾಗಿ ಜೊಮ್ಯಾಟೊ ಡೆಲಿವರಿ ಬಾಯ್ಸ್‌ ಪೇಚಾಡುವಂತಾಗಿದೆ. ಕೊಡಲು ಚಿಲ್ಲರೆ ಇರುವುದಿಲ್ಲ, ಆರ್ಡರ್‌ ಮಾಡಿದವರು ನೀಡಿದ ದುಡ್ಡು ಸ್ವೀಕರಿಸದಿರಲು ಸಾಧ್ಯವಿಲ್ಲ. ಇದು ಜೊಮ್ಯಾಟೋ ಕಂಪನಿಗಿಂತ ಡೆಲಿವರಿ ಬಾಯ್‌ಗಳಿಗೆ ಭಾರಿ ಪೇಚಾಟ ತಂದಿದೆ.

ಇದನ್ನೂ ಓದಿ: 2000 Notes Withdrawn : ಹೊರಬಿದ್ದ 2,000 ರೂ. ನೋಟು, ಚಲಾವಣೆಯಾಗುತ್ತಿರುವುದು ಎಲ್ಲಿ?!

ಜೊಮ್ಯಾಟೋ ಮಾಡಿದ ಟ್ವೀಟ್‌ಗೆ ತುಂಬ ಜನ ಪ್ರತಿಕ್ರಿಯಿಸಿದ್ದಾರೆ. ಹಾಸ್ಯಭರಿತವಾಗಿ ಉತ್ತರ ನೀಡಿದ್ದಾರೆ. ಇನ್ನೂ ಕೆಲವರು, ಜೊಮ್ಯಾಟೋ ಹಾಗೂ ಕ್ಯಾಶ್‌ ಆನ್‌ ಡೆಲಿವರಿಯನ್ನು ಮರೆತಿದ್ದೆವು. ನೀಡುವ ಐಡಿಯಾ ಕೊಟ್ಟು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದೂ ಪ್ರತಿಕ್ರಿಯಿಸಿದ್ದಾರೆ. ಸಾವಿರಾರು ಜನ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ಮೂಲಕ ಜೊಮ್ಯಾಟೋ ಕಾಲೆಳೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Rahul Gandhi: ಅಮೇಥಿಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆ ಖಚಿತ; ಸ್ಮೃತಿ ಇರಾನಿಗೆ ಕೈ ನಾಯಕ ಸವಾಲು!

Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಲೋಕಸಭೆ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ಎಂಬುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ರಾಹುಲ್‌ ಗಾಂಧಿ ಅವರು ವಯನಾಡು ಲೋಕಸಭೆ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲಿದ್ದಾರೆ. ಅಮೇಥಿಯಲ್ಲಿ ಅವರು ಸ್ಪರ್ಧಿಸುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

VISTARANEWS.COM


on

Rahul Gandhi
Koo

ಲಖನೌ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಹುಲ್‌ ಗಾಂಧಿ (Rahul Gandhi) ಅವರು ಉತ್ತರ ಪ್ರದೇಶದ ಅಮೇಥಿ (Amethi) ಕ್ಷೇತ್ರದಲ್ಲೂ ಸ್ಪರ್ಧಿಸುವುದು ಖಚಿತವಾಗಿದೆ. ರಾಹುಲ್‌ ಗಾಂಧಿ ಅವರು ಅಮೇಥಿ ಕ್ಷೇತ್ರದಿಂದಲೂ ಸ್ಪರ್ಧಿಸುವ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ (Akhilesh Yadav) ಅವರು ಸ್ಪಷ್ಟಪಡಿಸಿದ್ದಾರೆ. ಸಮಾಜವಾದಿ ಪಕ್ಷವು ಇಂಡಿಯಾ ಒಕ್ಕೂಟದ ಭಾಗವಾಗಿರುವ ಕಾರಣ ಅಖಿಲೇಶ್‌ ಯಾದವ್‌ ಅವರ ಹೇಳಿಕೆಯು ಪ್ರಾಮುಖ್ಯತೆ ಪಡೆದಿದೆ.

“ನೀವು ಕನೌಜ್‌ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೀರಿ. ನಿಮ್ಮ ಗೆಳೆಯ ರಾಹುಲ್‌ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುತ್ತಿದ್ದಾರೆ” ಎಂದು ಸುದ್ದಿಗಾರರು ಕೇಳಿದ್ದಕ್ಕೆ ಅಖಿಲೇಶ್‌ ಯಾದವ್‌ ಪ್ರತಿಕ್ರಿಯಿಸಿದರು. “ಹೌದು, ಖಂಡಿತವಾಗಿಯೂ ಎಲ್ಲರೂ ಬರುತ್ತೇವೆ. ಉತ್ತರ ಪ್ರದೇಶದಲ್ಲಿ ಎಲ್ಲರೂ ಒಗ್ಗೂಡಿ ಹೋರಾಡುತ್ತೇವೆ. ಚುನಾವಣಾ ಬಾಂಡ್‌ ಕೇಸ್‌ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ಬರುತ್ತಲೇ ಬಿಜೆಪಿಯವರ ಬಣ್ಣ ಬಯಲಾಗಿದೆ” ಎಂದು ಅಖಿಲೇಶ್‌ ಯಾದವ್‌ ಹೇಳಿದರು. ಆ ಮೂಲಕ ಅಮೇಥಿಯಿಂದಲೂ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂಬುದರ ಸುಳಿವು ನೀಡಿದರು.

ರಾಹುಲ್‌ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದು, ಏಪ್ರಿಲ್‌ 26ರಂದು ಮತದಾನ ನಡೆಯಲಿದೆ. ಇನ್ನು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಥವಾ ಅವರ ಪತಿ ರಾಬರ್ಟ್‌ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಹುಲ್‌ ಗಾಂಧಿ ಅವರು ಅಮೇಥಿಯಿಂದ 2004ರಿಂದಲೂ ಸ್ಪರ್ಧಿಸಿ, ಗೆಲುವು ಸಾಧಿಸುತ್ತಿದ್ದರು. ಆದರೆ, 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಅವರು ಸೋಲನುಭವಿಸಿದ ಕಾರಣ ವಯನಾಡು ಅವರ ಲೋಕಸಭೆ ಕ್ಷೇತ್ರವಾಗಿದೆ. ಈ ಬಾರಿಯೂ ರಾಹುಲ್‌ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಕೂಡ 2004ರಿಂದ ಸ್ಪರ್ಧಿಸುತ್ತಿದ್ದರು. ಈಗ ಮತ್ತೆ ರಾಹುಲ್‌ ಗಾಂಧಿ ಹಾಗೂ ಸ್ಮೃತಿ ಇರಾನಿ ಅವರ ಮಧ್ಯೆ ವಯನಾಡಿನಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ರಾಮಮಂದಿರಕ್ಕೆ ಭೇಟಿ?

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶ್ರೀರಾಮನ ವಿರೋಧಿ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ರಾಮಮಂದಿರಕ್ಕೆ ಭೇಟಿ ನೀಡುವ ಮೂಲಕ ಕಾಂಗ್ರೆಸ್‌ ರಾಮಮಂದಿರ ವಿರೋಧಿ ಅಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶವಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್‌ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!

Continue Reading

ದೇಶ

ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್‌ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!

ದ್ವೇಷ ಭಾಷಣ, ಧರ್ಮ, ಜಾತಿ, ಸಮುದಾಯಗಳನ್ನು ಪ್ರಸ್ತಾಪಿಸಿ ಮತಯಾಚನೆ, ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ಚುನಾವಣಾ ಆಯೋಗವು ನೋಟಿಸ್‌ ನೀಡಿದೆ. ಏಪ್ರಿಲ್‌ 29ರ ಬೆಳಗ್ಗೆ 11 ಗಂಟೆಯೊಳಗೆ ಇಬ್ಬರೂ ನಾಯಕರು ಪ್ರತಿಕ್ರಿಯೆ ನೀಡಬೇಕು ಎಂಬುದಾಗಿ ಸೂಚನೆ ನೀಡಿದೆ.

VISTARANEWS.COM


on

Election Commission
Koo

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಮಾದರಿ ನೀತಿ ಸಂಹಿತೆ ಉಲ್ಲಂಘನೆ (MCC Violations) ಮಾಡಿದ ಕುರಿತಂತೆ ಚುನಾವಣೆ ಆಯೋಗವು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ಪ್ರತಿಕ್ರಿಯೆ ಕೇಳಿದೆ. ಏಪ್ರಿಲ್‌ 29ರ ಬೆಳಗ್ಗೆ 11 ಗಂಟೆಯೊಳಗೆ ಇಬ್ಬರೂ ನಾಯಕರು ಪ್ರತಿಕ್ರಿಯೆ ನೀಡಬೇಕು ಎಂಬುದಾಗಿ ಚುನಾವಣೆ ಆಯೋಗವು (Election Commission) ಸೂಚನೆ ನೀಡಿದೆ.

ನರೇಂದ್ರ ಮೋದಿ ಹಾಗೂ ರಾಹುಲ್‌ ಗಾಂಧಿ ಅವರು ಚುನಾವಣೆ ಪ್ರಚಾರದ ವೇಳೆ ಜಾತಿ, ಧರ್ಮ, ಸಮುದಾಯ ಹಾಗೂ ಭಾಷೆ ಆಧಾರದ ಮೇಲೆ ಮತಗಳನ್ನು ಕೇಳಿದ್ದಾರೆ. ದ್ವೇಷ ಹರಡುವ ರೀತಿಯಲ್ಲಿ ಇವರು ಮಾತನಾಡಿದ್ದಾರೆ ಎಂಬ ಕುರಿತು ಆರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಇಬ್ಬರು ನಾಯಕರ ಪ್ರತಿಕ್ರಿಯೆ ಕೇಳಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಆಸ್ತಿ ಹಂಚಿಕೆ ವಿಷಯ ಪ್ರಸ್ತಾಪಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವನ್ನು ಮುಸ್ಲಿಮರಿಗೆ ನೀಡುತ್ತದೆ ಎಂದಿದ್ದರು. “ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣಗಳ ರೂಪದಲ್ಲಿ ಧರಿಸಲು ಮಾತ್ರವಲ್ಲ, ಅದನ್ನು ರಸಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈಗ ಅವರ ಕಣ್ಣು ಮಹಿಳೆಯರ ಮಂಗಳಸೂತ್ರದ ಮೇಲೆ ನೆಟ್ಟಿದೆ. ತಾಯಿ ಮತ್ತು ಸಹೋದರಿಯರ ಚಿನ್ನವನ್ನು ದೋಚುವುದು ಇವರ ಉದ್ದೇಶ. ಹೀಗಾಗಿ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲʼʼ ಎಂದು ಮೋದಿ ಹೇಳಿದ್ದರು.

ನರೇಂದ್ರ ಮೋದಿ ಅವರ ಹೇಳಿಕೆಗೆ ದೇಶಾದ್ಯಂತ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ನರೇಂದ್ರ ಮೋದಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಪ್ರತಿಪಕ್ಷಗಳ ನಾಯಕರು ಆಗ್ರಹಿಸಿದ್ದರು. ಇದಕ್ಕೂ ಮೊದಲು ಮೋದಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಬೇಕು ಚುನಾವಣೆ ಆಯೋಗವು ನಿರಾಕರಿಸಿತ್ತು. ರಾಹುಲ್‌ ಗಾಂಧಿ ಅವರ ಕೆಲ ಹೇಳಿಕೆಗಳ ಕುರಿತು ಕೂಡ ಅಸಮಾಧಾನ ವ್ಯಕ್ತವಾಗಿತ್ತು. ಹಾಗಾಗಿ, ಚುನಾವಣಾ ಆಯೋಗವು ಇಬ್ಬರೂ ನಾಯಕರಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ರಾಜಕೀಯ ಭಾಷಣ ತೆರವಿಗೆ ಆಯೋಗ ಆದೇಶ

ರಾಜಕೀಯ ನಾಯಕರು ನೀಡುವ ವಿವಾದಾತ್ಮಕ ಹೇಳಿಕೆಗಳ ಭಾಷಣಗಳ ವಿಡಿಯೊ, ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಇದಕ್ಕೂ ಮೊದಲು ಚುನಾವಣಾ ಆಯೋಗವು ಎಕ್ಸ್‌ ಸಾಮಾಜಿಕ ಜಾಲತಾಣಕ್ಕೆ ಸೂಚಿಸಿದೆ. ಈ ಮಧ್ಯೆ ಚುನಾವಣಾ ಆಯೋಗ ಆದೇಶದಂತೆ ಸಾಮಾಜಿಕ ಜಾಲತಾಣ ಎಕ್ಸ್‌ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಭಾಷಣವನ್ನು ಒಳಗೊಂಡಿರುವ ಕೆಲವು ಪೋಸ್ಟ್‌ಗಳನ್ನು ತೆಗೆದು ಹಾಕಿದೆ.

ಇದನ್ನೂ ಓದಿ: Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

Continue Reading

ವೈರಲ್ ನ್ಯೂಸ್

Arunachal Pradesh landslide: ಅರುಣಾಚಲದಲ್ಲಿ ಭೂಕುಸಿತ, ಚೀನಾ ಗಡಿ ಪ್ರದೇಶಕ್ಕೆ ಸಂಪರ್ಕ ಬಂದ್‌

Arunachal Pradesh landslide: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಿನ್ನೆ ರಾಷ್ಟ್ರೀಯ ಹೆದ್ದಾರಿ-313ರಲ್ಲಿ ಹುನ್ಲಿ ಮತ್ತು ಅನಿನಿ ನಡುವೆ ಭಾರೀ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತ ಹಾಗೂ ಕತ್ತರಿಸಿಹೋದ ರಸ್ತೆಯ ಮೂಲಕ ನೀರಿನ ಪ್ರವಾಹ ಹರಿಯುತ್ತಿರುವ ಹಲವು ವೀಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (viral video) ಆಗಿವೆ.

VISTARANEWS.COM


on

arunachal pradesh landslide
Koo

ಗುವಾಹಟಿ: ಮಳೆಯಿಂದ (Rain) ಉಂಟಾದ ಭಾರೀ ಭೂಕುಸಿತದಿಂದ (Landslide) ಅರುಣಾಚಲ ಪ್ರದೇಶದ ಹೆದ್ದಾರಿಯ ಪ್ರಮುಖ ಭಾಗ ಕೊಚ್ಚಿ (Arunachal Pradesh landslide) ಹೋಗಿದ್ದು, ಚೀನಾ ಗಡಿಗೆ (China Border) ಹೊಂದಿಕೊಂಡಿರುವ ಜಿಲ್ಲೆ ದಿಬಾಂಗ್ ಕಣಿವೆಯೊಂದಿಗೆ ರಸ್ತೆ ಸಂಪರ್ಕ ಕತ್ತರಿಸಿಹೋಗಿದೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಿನ್ನೆ ರಾಷ್ಟ್ರೀಯ ಹೆದ್ದಾರಿ-313ರಲ್ಲಿ ಹುನ್ಲಿ ಮತ್ತು ಅನಿನಿ ನಡುವೆ ಭಾರೀ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತ ಹಾಗೂ ಕತ್ತರಿಸಿಹೋದ ರಸ್ತೆಯ ಮೂಲಕ ನೀರಿನ ಪ್ರವಾಹ ಹರಿಯುತ್ತಿರುವ ಹಲವು ವೀಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (viral video) ಆಗಿವೆ. ಹೆದ್ದಾರಿಯ ಒಂದು ಭಾಗ ಕಾಣೆಯಾಗಿರುವುದನ್ನು ಇವು ತೋರಿಸಿವೆ.

ರಸ್ತೆ ತುಂಡಾಗಿದ್ದು, ವಾಹನಗಳು ಇನ್ನೊಂದು ಬದಿಗೆ ದಾಟಲು ಅಸಾಧ್ಯವಾಗಿದೆ. ಈ ಕಷ್ಟಕರವಾದ ಭೂಪ್ರದೇಶದಲ್ಲಿ ಹೆದ್ದಾರಿಯನ್ನು ಜೀವನಾಡಿ ಎಂದು ಪರಿಗಣಿಸುವ ಸ್ಥಳೀಯರು ಮತ್ತು ಭದ್ರತಾ ಪಡೆಗಳಿಗೆ ಇದರಿಂದ ಭಾರೀ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಈ ಹೆದ್ದಾರಿಯ ಹಾನಿಗೊಳಗಾದ ಭಾಗವನ್ನು ಸರಿಪಡಿಸಲು ಮುಂದಾಗಿದೆ.

ಪ್ರಸ್ತುತ, ಕತ್ತರಿಸಿಹೋಗಿರುವ ಪ್ರದೇಶಕ್ಕೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ಆಗಿಲ್ಲ. “ಹುನ್ಲಿ ಮತ್ತು ಅನಿನಿ ನಡುವಿನ ಹೆದ್ದಾರಿಗೆ ವ್ಯಾಪಕವಾದ ಹಾನಿಯಿಂದಾಗಿ ಪ್ರಯಾಣಿಕರಿಗೆ ಉಂಟಾಗುತ್ತಿರುವ ಅನನುಕೂಲತೆಯನ್ನು ನಿವಾರಿಸಲು ಯತ್ನಿಸಲಾಗುತ್ತಿದೆ. ಈ ರಸ್ತೆಯು ದಿಬಾಂಗ್ ಕಣಿವೆಯನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ. ಹೀಗಾಗಿ ಶೀಘ್ರವಾಗಿ ಸಂಪರ್ಕವನ್ನು ಮರುಸ್ಥಾಪಿಸಲು ಸೂಚನೆಗಳನ್ನು ನೀಡಲಾಗಿದೆ” ಎಂದು ಅರುಣಾಚಲ ಪ್ರದೇಶದ ಸಚಿವ ಪೆಮಾ ಖಂಡು ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ದಿಬಾಂಗ್ ವ್ಯಾಲಿ ಆಡಳಿತದ ಪ್ರಕಾರ ಹೆದ್ದಾರಿ ಮರುಸ್ಥಾಪನೆಗೆ ಕನಿಷ್ಠ ಮೂರು ದಿನಗಳು ಬೇಕಾಗಬಹುದು. ಭೂಕುಸಿತ ಉಂಟಾಗುವ ಪ್ರದೇಶಗಳಲ್ಲಿ ಮತ್ತು ಜಲಮೂಲಗಳಿಂದ ಹಾಗೂ ಮೀನುಗಾರಿಕೆಯಂತಹ ಚಟುವಟಿಕೆಗಳಿಂದ ದೂರವಿರಲು ಆಡಳಿತವು ಜನರಿಗೆ ಮನವಿ ಮಾಡಿದೆ. ರಾತ್ರಿಯಲ್ಲಿ ಪ್ರಯಾಣಿಸುವುದರ ವಿರುದ್ಧ ಮತ್ತು ಮಳೆಗಾಲದಲ್ಲಿ ಮಣ್ಣನ್ನು ಕತ್ತರಿಸದಂತೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Viral video: ಸೇನಾ ಹೆಲಿಕಾಪ್ಟರ್‌ಗಳ ಭಯಾನಕ ಡಿಕ್ಕಿ; 10 ಸಾವು

Continue Reading

ಅಂಕಣ

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

JEE Main 2024 Result: ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು.

VISTARANEWS.COM


on

Nilkrishna Gajare JEE main 2024 result AIR 1
Koo

ಹೊಸದಿಲ್ಲಿ: ಮಹಾರಾಷ್ಟ್ರದ ವಾಶಿಮ್‌ನ ರೈತರ ಮಗ (farmer’s son) ನೀಲಕೃಷ್ಣ ಗಜರೆ (Nilkrishna Gajare) ಅವರು ಜೆಇಇ ಮೇನ್ 2024 ಪರೀಕ್ಷೆಯಲ್ಲಿ (JEE Main 2024 Result) ದೇಶಕ್ಕೇ ಅಗ್ರಸ್ಥಾನ (AIR 1, First Rank) ಪಡೆದಿದ್ದಾರೆ. ಪರೀಕ್ಷೆಯಲ್ಲಿ ಪರಿಪೂರ್ಣ ಅಂಕಗಳನ್ನು (100) ಗಳಿಸಿದ್ದಾರೆ. ದಕ್ಷೇಶ್ ಸಂಜಯ್ ಮಿಶ್ರಾ ಮತ್ತು ಆರವ್ ಭಟ್ ಕ್ರಮವಾಗಿ AIR 2 ಮತ್ತು 3 ಪಡೆದಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 56 ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿದ್ದಾರೆ.

ರೈತನ ಮಗನಾದ ಗಜರೆ ತಮ್ಮ ಗ್ರಾಮವನ್ನು ಬಿಟ್ಟು ನಾಗಪುರದಲ್ಲಿ ಜೆಇಇಗಾಗಿ ಕೋಚಿಂಗ್‌ ಪಡೆದಿದ್ದರು. ಅವರು ತಮ್ಮ 10ನೇ ತರಗತಿ ಪರೀಕ್ಷೆಗಳಲ್ಲಿ 97% ಅಂಕಗಳನ್ನು ಗಳಿಸಿದರು. “ಪರೀಕ್ಷೆಯನ್ನು ತೆಗೆದುಕೊಂಡ ನಂತರ, ನಾನು ಪ್ರಶ್ನೆ ಪತ್ರಿಕೆಯನ್ನು ವಿಶ್ಲೇಷಿಸಿದೆ. ನಾನು ದುರ್ಬಲ ವಿಷಯಗಳ ಮೇಲೆ ವಿಶೇಷ ಗಮನವನ್ನು ನೀಡುತ್ತಿದ್ದೇನೆ. JEEಯಂತಹ ಪರೀಕ್ಷೆಯನ್ನು ಉತ್ತರಿಸಲು ಸ್ಪಷ್ಟ ಪರಿಕಲ್ಪನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಇದಲ್ಲದೆ ನಾನು ಒಂದಕ್ಕಿಂತ ಹೆಚ್ಚು ಬಾರಿ ಪ್ರಶ್ನೆಗಳನ್ನು ಅಭ್ಯಾಸ ಮಾಡುತ್ತೇನೆ” ಎಂದು ಗಜರೆ ಹೇಳಿದ್ದಾರೆ.

IIT- JEEಗೆ ತಯಾರಾಗಲು ಗಜರೆ 11ನೇ ತರಗತಿಯಲ್ಲಿ ALLEN ವೃತ್ತಿ ಸಂಸ್ಥೆಗೆ ಸೇರಿದರು. ಅವರು ತಮ್ಮ ಪ್ರಯಾಣದ ಅಡೆತಡೆಗಳನ್ನು ಹೇಗೆ ನಿವಾರಿಸಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.

“ನನ್ನ ಜೆಇಇ ಪ್ರಯಾಣ 11ನೇ ತರಗತಿಯಲ್ಲಿ ಪ್ರಾರಂಭವಾದ ಮೊದಲ ಒಂದು ಅಥವಾ ಎರಡು ತಿಂಗಳುಗಳಲ್ಲಿ ನಾನು ಸ್ವಲ್ಪ ತೊಂದರೆಗಳನ್ನು ಎದುರಿಸಿದೆ. ಅಂದರೆ, 10ನೇ ತರಗತಿಗೆ ಹೋಲಿಸಿದರೆ 11 ಮತ್ತು 12ನೇ ತರಗತಿಗಳ ಪಠ್ಯಕ್ರಮವು ಸಾಕಷ್ಟು ವಿಸ್ತಾರವಾಗಿದೆ. ಆದ್ದರಿಂದ ನಾನು ಆರಂಭದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದೆ. ಆದರೆ ನಾನು ಕೈಬಿಡಲಿಲ್ಲ. ನನ್ನ ಅಧ್ಯಯನವನ್ನು ನಿರಂತರವಾಗಿ ಮುಂದುವರಿಸಿದೆ. ನಾನು ವಿದ್ಯಾರ್ಥಿಗಳಿಗೆ ನೀಡಲು ಬಯಸುವ ಸಂದೇಶ ಏನೆಂದರೆ, ನೀವು ಅಂತಹ ತೊಂದರೆಗಳನ್ನು ಎದುರಿಸಿದರೆ ಅಥವಾ ನನ್ನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಕೈಬಿಡಬೇಡಿ. ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮುಂದುವರಿಸಿ. ಒಳ್ಳೆಯ ಫಲಿತಾಂಶ ದಕ್ಕುತ್ತದೆ” ಎಂದು ಅವರು ಇನ್‌ಸ್ಟಿಟ್ಯೂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೇಳೆ ಹೇಳಿದರು.

“ಜೆಇಇ ಅಡ್ವಾನ್ಸ್ಡ್‌ನಲ್ಲಿ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಸೀಟು ಪಡೆಯುವುದು ನನ್ನ ಗುರಿ. ಪ್ರಸ್ತುತ ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ” ಎಂದು ಗಜರೆ ಹೇಳಿದ್ದಾರೆ. ಐಐಟಿ-ಜೆಇಇ ಆಕಾಂಕ್ಷಿಗಳಿಗೆ ಗಜರೆ ಸಲಹೆಯನ್ನೂ ಹಂಚಿಕೊಂಡಿದ್ದಾರೆ. “ನಿಮ್ಮ ಗುರಿಯನ್ನು ಖಚಿತಪಡಿಸಿ. ಅದರ ಪ್ರಕಾರ ನಿಮ್ಮ ಸಿದ್ಧತೆಯನ್ನು ನಿರಂತರವಾಗಿ ಮಾಡಿ. ವಿಷಯಗಳನ್ನು ನಿಜವಾದ ಆಸಕ್ತಿಯಿಂದ ಅಧ್ಯಯನ ಮಾಡಿ. ಇದರಿಂದ ಅವು ಹೊರೆಯಾಗುವುದಿಲ್ಲ. ನಿಮ್ಮ ಸಿದ್ಧತೆಯನ್ನು ಸ್ಥಿರವಾಗಿ ಮತ್ತು ನಿರಂತರವಾಗಿ ಮಾಡಿ.”

56 ಅಭ್ಯರ್ಥಿಗಳಿಗೆ ಶೇ.100 ಅಂಕ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಜೆಇಇ ಮುಖ್ಯ 2024 ಸೆಷನ್ 2 ಪರೀಕ್ಷಾ ಫಲಿತಾಂಶ (JEE Main 2024 Result session 2) ಪ್ರಕಟವಾಗಿದೆ. ಒಟ್ಟು 56 ಅಭ್ಯರ್ಥಿಗಳು (Students) ಶೇ.100 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿಗಿಂತ 13 ಹೆಚ್ಚು ವಿದ್ಯಾರ್ಥಿಗಳು ಇದನ್ನು ಪಡೆದಿದ್ದಾರೆ. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಕಟ್‌ಆಫ್‌ (Cut off marks) ಅಂಕಗಳನ್ನು ಕೂಡ 2.45%ರಷ್ಟು ಹೆಚ್ಚಿಸಲಾಗಿದೆ.

ಸಂಸ್ಥೆಯು ಇಂದು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ 2024 ಫಲಿತಾಂಶವನ್ನು ಬಿಡುಗಡೆ ಮಾಡಿದೆ. 2024ರ ಪರೀಕ್ಷೆಗಳಲ್ಲಿ ಒಟ್ಟು 9.24 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 8.2 ಲಕ್ಷ ಜನರು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದ JEE ಮುಖ್ಯ 2023 ಪರೀಕ್ಷೆಗಳಿಗೆ ಹಾಜರಾಗಿದ್ದರು. ಜೆಇಇ ಮುಖ್ಯ ಏಪ್ರಿಲ್ ಸೆಷನ್‌ಗೆ ಹಾಜರಾದವರು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು: jeemain.nta.ac.in.

ಇದನ್ನೂ ಓದಿ: JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಅಂಕ, ಕಟ್‌ಆಫ್‌ 2.45% ಹೆಚ್ಚಳ

Continue Reading
Advertisement
Rahul Gandhi
ದೇಶ13 mins ago

Rahul Gandhi: ಅಮೇಥಿಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆ ಖಚಿತ; ಸ್ಮೃತಿ ಇರಾನಿಗೆ ಕೈ ನಾಯಕ ಸವಾಲು!

DC vs GT
ಕ್ರೀಡೆ21 mins ago

DC vs GT: ಕೊಹ್ಲಿಯಂತೆ ಅದ್ಭುತ ಫೀಲ್ಡಿಂಗ್​ ನಡೆಸಿ ಡೆಲ್ಲಿಗೆ ಗೆಲುವು ತಂದ ಟ್ರಿಸ್ಟಾನ್ ಸ್ಟಬ್ಸ್

Heeramandi Premiere Farida Jalal rare public appearance
ಬಾಲಿವುಡ್21 mins ago

Heeramandi Premiere: ʻಹೀರಾಮಂಡಿʼ ಪ್ರೀಮಿಯರ್‌ನಲ್ಲಿ ಅಪರೂಪವಾಗಿ ಕಂಡ ʻಕಭಿ ಖುಷಿ ಕಭಿ ಗಮ್ʼ ಸಿನಿಮಾ ನಟಿ!

Murder case In davanagere
ದಾವಣಗೆರೆ22 mins ago

Murder Case : ಮನೆ ಹಾಳು ಮಾಡಿದ ಕುಡಿತ; ತಾಯಿ ಸಾವಿಗೆ, ತಂದೆಯ ಕೊಂದ ಮಗ!

Election Commission
ದೇಶ39 mins ago

ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್‌ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!

arunachal pradesh landslide
ವೈರಲ್ ನ್ಯೂಸ್57 mins ago

Arunachal Pradesh landslide: ಅರುಣಾಚಲದಲ್ಲಿ ಭೂಕುಸಿತ, ಚೀನಾ ಗಡಿ ಪ್ರದೇಶಕ್ಕೆ ಸಂಪರ್ಕ ಬಂದ್‌

Neha Murder case CID Officer
ಹುಬ್ಬಳ್ಳಿ1 hour ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Virender Sehwag
ಕ್ರೀಡೆ1 hour ago

Virender Sehwag: ಬಡ ದೇಶದ ಕ್ರಿಕೆಟ್​ ಲೀಗ್​ ಆಡಲ್ಲ ಎಂದ ವೀರೇಂದ್ರ ಸೆಹವಾಗ್; ಕಾರಣವೇನು?

Guru Raghavendra and Vasishta Co operative Bank fraud handed over to SIT says DK Shivakumar
ಬೆಂಗಳೂರು1 hour ago

Bank fraud: ಗುರು ರಾಘವೇಂದ್ರ, ವಸಿಷ್ಠ ಸಹಕಾರ ಬ್ಯಾಂಕ್‌ಗಳ ಹಗರಣ ಎಸ್‌ಐಟಿ ಹೆಗಲಿಗೆ; ಶೀಘ್ರ ಕ್ರಮವೆಂದ ಡಿಕೆಶಿ

Shakhahaari Movie In OTT amzon Prime
ಸ್ಯಾಂಡಲ್ ವುಡ್1 hour ago

Shakhahaari Movie: ಒಟಿಟಿಗೆ ಎಂಟ್ರಿ ಕೊಡ್ತಿದೆ ʻಶಾಖಾಹಾರಿʼ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder case CID Officer
ಹುಬ್ಬಳ್ಳಿ1 hour ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20243 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

ಟ್ರೆಂಡಿಂಗ್‌