Site icon Vistara News

2024 Election : 2024ರ ಚುನಾವಣೆಯಲ್ಲಿ ಮೋದಿ ವಿಜಯಕ್ಕೆ ಶಿವಸೇನೆ, ಜೆಡಿಯು ಅಡ್ಡಗಾಲು? ಹೀಗಿದೆ ಲೆಕ್ಕಾಚಾರ

#image_title

ಮುಂಬೈ: 2014ರಲ್ಲಿ ಲೋಕಸಭಾ ಚುನಾವಣೆ (2024 Election) ನಡೆಯಲಿದೆ. ಅದಕ್ಕೂ ಮೊದಲು ಕರ್ನಾಟಕದ ವಿಧಾನಸಭಾ ಚುನಾವಣೆ ಹತ್ತಿರದಲ್ಲಿದೆ. ಕರ್ನಾಟಕದ ಚುನಾವಣೆ ಮುಗಿಯುತ್ತಿದ್ದಂತೆಯೇ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿಯೂ ಚುನಾವಣೆ ನಡೆಯಲಿದೆ. ಈ ನಾಲ್ಕು ರಾಜ್ಯಗಳಲ್ಲಿ ಒಟ್ಟು 93 ಲೋಕಸಭಾ ಕ್ಷೇತ್ರಗಳಿವೆ. ಆ ಪೈಕಿ ಬಿಜೆಪಿಯು 2019ರ ಚುನಾವಣೆಯಲ್ಲಿ 86 ಸ್ಥಾನ ಗಳಿಸಿದ್ದರೆ, 2014ರ ಚುನಾವಣೆಯಲ್ಲಿ 79 ಸ್ಥಾನ ಗಳಿಸಿತ್ತು.

ಇದನ್ನೂ ಓದಿ: Karnataka Election: ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಪೂರ್ವ ತಯಾರಿ ಸಂಪೂರ್ಣ: ಜಿಲ್ಲಾಧಿಕಾರಿ ಕವಳಿಕಟ್ಟಿ

ಈ ನಾಲ್ಕು ರಾಜ್ಯಗಳಿಗಿಂತ ಬಿಜೆಪಿಗೆ ಪ್ರಮುಖವಾಗುವುದು ಬಿಹಾರ ಮತ್ತು ಮಹಾರಾಷ್ಟ್ರ. 2019ರ ಚುನಾವಣೆ ವೇಳೆ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ವಾತಾವರಣ ಚೆನ್ನಾಗಿಯೇ ಇತ್ತು. ಆದರೆ ಈಗ ಹಾಗಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಕೈ ಹಿಡಿದಿದ್ದ ಉದ್ಧವ್ ಠಾಕ್ರೆ ಅವರ ಶಿವಸೇನೆಯು ಈಗ ಅವರಿಂದ ದೂರಾಗಿದೆ. ಹಾಗೆಯೇ ಬಿಹಾರದಲ್ಲಿ ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ರಚಿಸಿದ್ದ ಜೆಡಿಯು ಪಕ್ಷದ ನಿತೀಶ್ ಕುಮಾರ್ ಅವರು ಬಿಜೆಪಿ ಸಾಥ್ ಬಿಟ್ಟು ಕಾಂಗ್ರೆಸ್, ಆರ್.ಜೆ.ಡಿ ಮತ್ತು ಬೇರೆ ಬೇರೆ ಎಡ ಪಕ್ಷಗಳ ಜತೆ ಸೇರಿಕೊಂಡು ಸರ್ಕಾರ ರಚಿಸಿಕೊಂಡಿದ್ದಾರೆ.

ಅಂಕಿ ಅಂಶ ಏನು ಹೇಳುತ್ತದೆ?

ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಒಟ್ಟು 88 ಲೋಕಸಭಾ ಕ್ಷೇತ್ರಗಳಿವೆ. ಅದರಲ್ಲಿ ಬಿಜೆಪಿಯು 2019ರ ಚುನಾವಣೆಯಲ್ಲಿ 40 ಹಾಗೂ 20114ರ ಚುನಾವಣೆಯಲ್ಲಿ 45 ಕ್ಷೇತ್ರದಲ್ಲಿ ಗೆಲುವು ಸಾಧಿಸಿಕೊಂಡಿತ್ತು. ಬಿಜೆಪಿಗೆ ಶಿವಸೇನೆ, ಜೆಡಿಯು ಸೇರಿ ಅನೇಕ ಪಕ್ಷಗಳು ಸಾಥ್ ಕೊಟ್ಟಿದ್ದವು. ಹಾಗಾಗಿ ಎನ್.ಡಿ.ಎ ಒಕ್ಕೂಟವು ಈ ಎರಡು ರಾಜ್ಯಗಳಲ್ಲಿ ಒಟ್ಟು 80 (2019), 71 (2014) ಸ್ಥಾನ ಗೆದ್ದಿದ್ದವು. ಇದೀಗ ಈ ಎರಡೂ ರಾಜ್ಯದಲ್ಲಿ ಎನ್.ಡಿ.ಎ ಒಕ್ಕೂಟ ಛಿದ್ರವಾಗಿದೆ. ಹಾಗಾಗಿ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿಯ ಲೆಕ್ಕಾಚಾರವನ್ನೇ ತೆಗೆದುಕೊಂಡರೆ ಈ ಎರಡು ರಾಜ್ಯಗಳ ಕ್ಷೇತ್ರಗಳು ಬಿಜೆಪಿ ಪಾಲಿಗೆ ದಕ್ಕದೇ ಹೋದರೆ ಬಿಜೆಪಿ 272ರ ಮ್ಯಾಜಿಕ್ ನಂಬರ್ ದಾಟುವುದು ಕಷ್ಟ ಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗೆಯೇ ಎನ್.ಡಿ.ಎ ಒಕ್ಕೂಟಕ್ಕೂ ಹೊಡೆತ ಬಿದ್ದಿರುವುದರಿಂದ ಈ ಎರಡು ರಾಜ್ಯಗಳ ಗೆಲುವು ಬಿಜೆಪಿಗೆ ಅತಿ ಮುಖ್ಯವಾಗಿದೆ.

ಇದನ್ನೂ ಓದಿ: Viral Video: ಹೇ ಅಲ್ಲಾ, ನಮಗೆ ಮೋದಿಯನ್ನು ಕೊಡು, ಅವರೇ ಈ ದೇಶವನ್ನು ಸರಿ ಮಾಡಲಿ ಎಂದು ಬೇಡಿಕೊಂಡ ಪಾಕಿಸ್ತಾನಿ ಯುವಕ

ವಿರೋಧ ಪಕ್ಷಗಳಿಗೂ ಸುಲಭವಲ್ಲ

ಈ ರಾಜ್ಯಗಳಲ್ಲಿ ಚುನಾವಣೆ ಸ್ಪರ್ಧಿಸುವುದು ಮತ್ತು ಗೆಲ್ಲುವುದು ಬಿಜೆಪಿಗೆ ಮಾತ್ರವೇ ಸವಾಲಿನ ಕೆಲಸವಲ್ಲ. ವಿರೋಧ ಪಕ್ಷಗಳೂ ಕೂಡ ಅದಕ್ಕಾಗಿ ಹೆಣಗಾಡಬೇಕಿದೆ. ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿವೆ. ಕಳೆದ ಬಾರಿ ಜೆಡಿಯು 19 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ ಇನ್ನುಳಿದ ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿತ್ತು. ಆದರೆ ಈ ಬಾರಿ ಜೆಡಿಯು ಪಕ್ಷವು ಕಾಂಗ್ರೆಸ್, ಆರ್.ಜೆ.ಡಿ ಸೇರಿ ಅನೇಕ ಪಕ್ಷಗಳೊಂದಿಗೆ ಮೈತ್ರಿಯಲ್ಲಿದೆ. ಹಾಗಾಗಿ ಪಕ್ಷವು ಒಂದಿಷ್ಟು ಸೀಟನ್ನು ಬೇರೆ ಪಕ್ಷಗಳಿಗೆ ಬಿಟ್ಟುಕೊಡಬೇಕಾಗಬಹುದು. ಹಾಗೆಯೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೂಡ ಸೀಟಿನ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುವುದು. ಅದೇ ರೀತಿ ಮಹಾರಾಷ್ಟ್ರದಲ್ಲಿ ಇದುವರೆಗೆ ಉದ್ಧವ್ ಅವರ ಶಿವಸೇನೆಯು ಬಿಜೆಪಿ ಜತೆ ಸೇರಿಕೊಂಡು ಲೋಕಸಭಾ ಚುನಾವಣೆ ಎದುರಿಸಿತ್ತು. ಆದರೆ ಈಗ ಪಕ್ಷವೇ ಇಬ್ಭಾಗ ಆಗಿರುವುದರಿಂದಾಗಿ ಶಿವಸೇನೆಗೆ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಕಷ್ಟವಾಗಲಿದೆ.

ಮಹಾರಾಷ್ಟ್ರ, ಬಿಹಾರದಲ್ಲಿ ಏನಾಗಿತ್ತು?

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಒಟ್ಟಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದವು. ಆದರೆ ಅದರ ಬೆನ್ನಲ್ಲೇ ಶಿವಸೇನೆಯು ಬಿಜೆಪಿಯೊಂದಿಗೆ ಜಗಳಕ್ಕೆ ನಿಂತಿತ್ತು. ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್.ಸಿ.ಪಿ ಜತೆ ಸೇರಿಕೊಂಡು ಸರ್ಕಾರ ರಚಿಸಿತ್ತು. ಆದರ ಅದು ಹೆಚ್ಚು ಕಾಲ ನಡೆಯಲು ಬಿಜೆಪಿ ಬಿಡಲಿಲ್ಲ. 2022ರಲ್ಲಿ ಶಿವಸೇನೆಯಲ್ಲೇ ಏಕನಾಥ ಶಿಂಧೆ ಅವರ ಬಣವನ್ನು ಬೇರೆ ಮಾಡಿ ಅವರೊಂದಿಗೆ ಸೇರಿಕೊಂಡು ಬಿಜೆಪಿ ಸರ್ಕಾರ ರಚಿಸಿತು. ಇದೀಗ ಶಿವಸೇನೆಯಲ್ಲಿಯೂ ಎರಡು ಭಾಗಗಳಿವೆ. ಏಕನಾಥ ಶಿಂಧೆ ಅವರು ಮುಖ್ಯಮಂತ್ರಿಯಾಗಿದ್ದಾರೆ.

ಬಿಹಾರದಲ್ಲಿಯೂ ಕೂಡ ನಿತೀಶ್ ಅವರ ಜೆಡಿಯು ಹಾಗೂ ಬಿಜೆಪಿ ಒಟ್ಟಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಆದರೆ 2022ರಲ್ಲಿ ನಿತೀಶ್ ಅವರು ಮತ್ತೆ ಮೈತ್ರಿ ಬದಲಿಸಿ ರಾಷ್ಟ್ರೀಯ ಜನತಾ ದಳ(ಆರ್.ಜೆ.ಡಿ), ಕಾಂಗ್ರೆಸ್ ಮತ್ತು ಬೇರೆ ಎಡ ಪಕ್ಷಗಳೊಂದಿಗೆ ಸೇರಿಕೊಂಡಿತು.

Exit mobile version