Site icon Vistara News

ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ಚೇಸ್‌ ಮಾಡಿ ಹಾಲಿವುಡ್ ಸಿನಿಮಾ ಸ್ಟೈಲಲ್ಲಿ ಕಳ್ಳತನ; ರೋಚಕ Video ಇಲ್ಲಿದೆ!

Viral Video

3 men on bike steal from moving truck filmy style, Madhya Pradesh Police reacts

ಭೋಪಾಲ್‌: ಚಲಿಸುತ್ತಿರುವ ವಾಹನದಿಂದಲೇ ಕಳ್ಳತನ ಮಾಡುವುದು, ಸಿಸಿಟಿವಿ, ಸೆಕ್ಯುರಿಟಿ ಇದ್ದರೂ ಬ್ಯಾಂಕ್‌ ದರೋಡೆ ಮಾಡುವುದು ಸೇರಿ ಹಲವು ಭೀಕರ ಕಳ್ಳತನಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಹಾಲಿವುಡ್‌ ಸಿನಿಮಾ ರೀತಿಯಲ್ಲಿಯೇ ಮೂವರು ಕಳ್ಳರು ಚಲಿಸುತ್ತಿದ್ದ ಟ್ರಕ್‌ನಿಂದ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಚಲಿಸುತ್ತಿದ್ದ ಟ್ರಕ್‌ಅನ್ನು ಬೈಕ್‌ ಮೇಲೆಯೇ ಚೇಸ್‌ ಮಾಡಿದ ಕಳ್ಳರು ಭಾರಿ ಪ್ರಮಾಣದ ವಸ್ತುಗಳನ್ನು ಕದ್ದಿದ್ದಾರೆ. ಸಿನಿಮೀಯ ರೀತಿಯ ಕಳ್ಳತನದ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ. ‌

ಹೌದು, ಆಗ್ರಾ-ಮುಂಬೈ ಹೆದ್ದಾರಿಯ ದೆವಾಸ್-ಶಾಜಾಪುರ್‌ ರಸ್ತೆಯಲ್ಲಿ ಟ್ರಕ್‌ ಒಂದು ಚಲಿಸುತ್ತಿರುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ವೇಗವಾಗಿ ಚಲಿಸುತ್ತದೆ. ಇದೇ ವೇಳೆ ಕಳ್ಳನೊಬ್ಬನು ಹಾಗೆಯೇ ಟ್ರಕ್‌ ಹತ್ತುತ್ತಾನೆ. ಬೆಲೆ ಬಾಳುವ ವಸ್ತುಗಳ ಮೂಟೆಯೊಂದನ್ನು ಅಲ್ಲಿಂದ ಕೆಳಗೆ ಎಸೆಯುತ್ತಾನೆ. ಅದಾದ ನಂತರ, ಚಲಿಸುತ್ತಿರುವ ಟ್ರಕ್‌ನಿಂದಲೇ ಚಲಿಸುತ್ತಿರುವ ಬೈಕ್‌ ಮೇಲೆ ಇಳಿಯುತ್ತಾನೆ. ಆತನು ಬೈಕ್‌ ಹತ್ತಲು ಉಳಿದ ಇಬ್ಬರು ಸಹಾಯ ಮಾಡುತ್ತಾರೆ. ಸ್ವಲ್ಪ ಸಮತೋಲನ ತಪ್ಪಿದರೂ ಬಿದ್ದು ಮೃತಪಡುವ ಸಾಧ್ಯತೆಗಳು ಜಾಸ್ತಿ ಇದ್ದರೂ ಸಿನಿಮೀಯ ರೀತಿಯಲ್ಲಿ ಮೂವರು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ನೂರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. “ಯಾವ ಸಿನಿಮಾದ ದೃಶ್ಯ ಇದು” ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಅವರ ಬ್ಯಾಲೆನ್ಸ್‌, ಧೈರ್ಯ, ಚಾಣಾಕ್ಷತನವನ್ನು ಖಂಡಿತವಾಗಿಯೂ ಮೆಚ್ಚಬೇಕು. ಇವರ ಕೌಶಲಗಳು ಎಲ್ಲರಿಗೂ ಬರುವುದಿಲ್ಲ” ಎಂದು ಮತ್ತೊಬ್ಬರು ಕಳ್ಳರ ಸಾಹಸವನ್ನು ಕೊಂಡಾಡಿದ್ದಾರೆ. “ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಇಂತಹ ಕಳ್ಳರು ಅಪಾಯಕಾರಿ. ಮೂವರನ್ನೂ ಒದ್ದು ಒಳಗೆ ಹಾಕಬೇಕು” ಎಂಬುದಾಗಿ ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ, ಕಳ್ಳರ ಸಾಹಸವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರು ಟ್ರಕ್‌ನಿಂದ ಯಾವೆಲ್ಲ ವಸ್ತುಗಳನ್ನು ಎಗರಿಸಿದರು ಎಂಬುದರ ಕುರಿತು ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಹೆದ್ದಾರಿಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ತುಂಬಿಕೊಂಡು ಸಾವಿರಾರು ಟ್ರಕ್‌ಗಳು ಚಲಿಸುತ್ತಲೇ ಇರುತ್ತವೆ. ಹೀಗೆ, ಸಿನಿಮಾ ರೀತಿಯಲ್ಲಿ ಸ್ಟಂಟ್‌ ಮಾಡಿ, ಆ ವಸ್ತುಗಳನ್ನು ಕಳ್ಳತನ ಮಾಡಿದರೆ, ಯಾರೂ ಟ್ರಕ್‌ಗಳ ಮೂಲಕ ವಸ್ತುಗಳನ್ನು ಸಾಗಿಸಲು ಧೈರ್ಯ ಮಾಡುವುದಿಲ್ಲ. ಇಂತಹ ಪ್ರಕರಣಗಳನ್ನು ಗಂಭೀರವಾಗ ಪರಿಗಣಿಸಿ, ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಇದನ್ನೂ ಓದಿ: Viral Video: ಚಲಿಸುವ ಬೈಕ್​ನಲ್ಲಿ ಆಲಿಂಗನ, ಬಿಸಿ ಚುಂಬನ; ಲಜ್ಜೆಯಿಲ್ಲದ ಜೋಡಿಯ ಸ್ಟಂಟ್​ ವಿಡಿಯೊ ವೈರಲ್​

Exit mobile version