ಮುಂಬೈ: ಮಹಾರಾಷ್ಟ್ರದ ಮುಂಬೈ ಉಪನಗರವಾಗಿರುವ (Mumbai Fire Accident) ಗೋರೆಗಾಂವ್‌ನಲ್ಲಿ ಶುಕ್ರವಾರ (ಅಕ್ಟೋಬರ್ 6) ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಏಳು ಜನ ಮೃತಪಟ್ಟಿದ್ದಾರೆ. ಹಾಗೆಯೇ, 46 ಜನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ, ಕಟ್ಟಡದಲ್ಲಿ ಇನ್ನೂ ಹಲವು ಜನ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಜೈ ಭವಾನಿ ಎಂಬ ಕಟ್ಟಡದ ನೆಲಮಹಡಿಯಲ್ಲಿರುವ ಪುಟ್ಟ ಅಂಗಡಿಯಲ್ಲಿ ಬಂಕಿ ಕಾಣಿಸಿಕೊಂಡಿದೆ. ಇದಾದ ಬಳಿಕ ನೆಲಮಹಡಿಯಲ್ಲಿ ಪಾರ್ಕ್ ಮಾಡಲಾದ ವಾಹನಗಳಿಗೆ ಅಗ್ನಿಯ ಕೆನ್ನಾಲಗೆ ಚಾಚಿದೆ. ಬಳಿಕ ಇಡೀ ಕಟ್ಟಡಕ್ಕೆ ಅಗ್ನಿ ಆವರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Mumbai | Goregaon fire | Till now, out of a total of 46 people injured in the fire, 7 of them have lost their lives and 39 are under treatment in HBT and Cooper Hospital: Mumbai Police
— ANI (@ANI) October 6, 2023
Details from other private hospitals where the injured were taken are awaited.
ಅಗ್ನಿ ಅವಘಡ ಸಂಭವಿಸುತ್ತಲೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಅಷ್ಟೊತ್ತಿಗಾಗಲೇ ಬೆಂಕಿಯ ಕೆನ್ನಾಲಗೆ ಚಾಚಿಕೊಂಡಿತ್ತು. ಇಷ್ಟಾದರೂ ಕೂಡಲೇ 46 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳಿಗೆ ಎಚ್‌ಬಿಟಿ ಹಾಗೂ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
#MumbaiFire
— मुंबई Matters™ (@mumbaimatterz) October 6, 2023
6 dead, 40 injured in Mumbai’s Goregaon fire
The blaze was reported at 3.05 am on Friday at the Jay Sandesh building situated near Azad Maidan in Goregaon West.pic.twitter.com/HZpxIrnDKc
ಏಳು ಮಹಡಿಯ ಕಟ್ಟಡವಾದ ಕಾರಣ ಇನ್ನೂ ಹಲವು ಜನ ಕಟ್ಟಡದಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಮೃತಪಟ್ಟವರಲ್ಲಿ ಐವರು ಮಹಿಳೆಯರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ, ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ: Fire Incident: ಮೈಸೂರು ರಸ್ತೆಯಲ್ಲಿ ಅಗ್ನಿ ಅವಘಡ; 3 ಮನೆ, 2 ಗೋಡೌನ್, ಬೈಕ್‌ಗಳು ಬೆಂಕಿಗಾಹುತಿ