Site icon Vistara News

ದೇಶದಲ್ಲಿ ಮತ್ತೆ ಏರಿದ ಪೆಟ್ರೋಲ್‌, ಡೀಸೆಲ್‌ ಬೆಲೆ: ಇಂದಿನ ದರ ಹೇಗಿದೆ?

petrol

ನವದೆಹಲಿ: ಪಂಚರಾಜ್ಯ ಚುನಾವಣೆ ಬಳಿಕ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ ಆರನೇ ಬಾರಿ ತೈಲ ದರ ಹೆಚ್ಚಾಗಿದ್ದು, ಇಂದು ಕೂಡ ಪೆಟ್ರೋಲ್ ದರ 30 ಪೈಸೆ ಮತ್ತು ಡೀಸೆಲ್ ದರ 35 ಪೈಸೆ ಏರಿಕೆ ಕಂಡಿದೆ.

ಒಂದು ವಾರದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 6 ಬಾರಿ ಏರಿಕೆ ಕಂಡಿದೆ. ಕಳೆದ 6 ದಿನದಲ್ಲಿ ಪೆಟ್ರೋಲ್ 3.95 ರೂ., ಡೀಸೆಲ್ 4.10 ರೂ. ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು ಲೀಟರ್ ಪೆಟ್ರೋಲ್ 32 ಪೈಸೆ ಏರಿಕೆಯಾಗಿದ್ದು, ಲೀಟರ್ ಡೀಸೆಲ್‌ 35 ಪೈಸೆಯಷ್ಟು ಹೆಚ್ಚಾಗಿದೆ. ಅದರಂತೆ, ನಗರದಲ್ಲಿ ಲೀಟರ್ ಪೆಟ್ರೋಲ್ ದರ 104.78 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.02 ರೂಪಾಯಿ ದಾಖಲಾಗಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ 99.41 ರೂ., ಲೀಟರ್ ಡೀಸೆಲ್ ಬೆಲೆ 90.44 ರೂಪಾಯಿಗೆ ತಲುಪಿದೆ.  ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 114.19 ರೂಪಾಯಿ ಹಾಗೂ ಡೀಸೆಲ್ 98.50 ರೂಪಾಯಿ ಆಗಿದೆ. 

ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 105.18 ರೂಪಾಯಿ, ಲೀಟರ್ ಡೀಸೆಲ್ ದರ 95.33 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 108.85 ಮತ್ತು 93.92 ರೂಪಾಯಿಯಷ್ಟಿದೆ.

Exit mobile version