Site icon Vistara News

Black Hole: ಸೂರ್ಯನಕ್ಕಿಂತ 6.5 ಶತಕೋಟಿ ಪಟ್ಟು ದೊಡ್ಡ ‘ಕಪ್ಪು ಕುಳಿ’ ಗರಗರನೆ ತಿರುಗುತ್ತಿದೆ! ಹೊಸ ಆವಿಷ್ಕಾರ

A black hole 6.5 billion times bigger than the sun is spinning

ನವದೆಹಲಿ: ಮೊಟ್ಟ ಮೊದಲ ಬಾರಿಗೆ ಕ್ಯಾಮೆರಾ ಮೂಲಕ ಸೆರೆಹಿಡಿಯಲಾದ (captured on camera) ಕಪ್ಪು ಕುಳಿ (Black Hole) ತಿರುಗುತ್ತಿದೆ. ಇದೊಂದು ಹೊಸ ಆವಿಷ್ಕಾರವಾಗಿದೆ. ಪ್ರಸಿದ್ಧ ಡೋನಟ್(ವಡೆ) ಆಕಾರದ ಎಂ87 (M87*) ಕಪ್ಪು ಕುಳಿ, ಸೂರ್ಯನಿಗಿಂತ (Sun) 6.5 ಶತಕೋಟಿ ಪಟ್ಟು ಹೆಚ್ಚು ದೊಡ್ಡದಾಗಿದ್ದು, 2019ರಲ್ಲಿ ಮೊದಲ ಬಾರಿಗೆ ಇದು ಗಮನ ಸೆಳೆಯಲ್ಪಟ್ಟಿತು ಎಂದು ವಿಜ್ಞಾನಿಗಳು (Scientists) ಹೇಳಿದ್ದಾರೆ. ಈ ಕಪ್ಪು ಕುಳಿ ತಿರುಗುತ್ತಿರುವುದು (Spinning) ಈಗ ಖಚಿತವಾಗಿದೆ. ಆದರೆ, ಇದು ಎಷ್ಟು ವೇಗದಲ್ಲಿ ತಿರುಗುತ್ತಿದೆ ಎಂಬುದನ್ನು ನಿರ್ಧರಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಎಂ87 ಕಪ್ಪು ಕುಳಿ ತಿರುತ್ತಿದೆ ಎಂದು ಸೆಪ್ಟೆಂಬರ್ 27ರಂದು ಘೋಷಣೆ ಮಾಡಲಾಯಿತು.

ಎಂ87 ಕಪ್ಪು ಕುಳಿಯನ್ನು ಕಳೆದ ಎರಡು ದಶಕಗಳಿಂದ ರೇಡಿಯೋ ದೂರದರ್ಶಕಗಳ ಜಾಲದ ಮೂಲಕ ಗಮನಿಸಲಾಗುತ್ತಿದೆ. ಇದು ಮೆಸ್ಸಿಯರ್ 87 (M87) ನಕ್ಷತ್ರಪುಂಜದಲ್ಲಿದೆ, ಇದು ಕನ್ಯಾರಾಶಿ ನಕ್ಷತ್ರಪುಂಜದಲ್ಲಿ ಭೂಮಿಯಿಂದ ಸುಮಾರು 55 ಮಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿದೆ ಎನ್ನುತ್ತಾರೆ ವಿಜ್ಞಾನಿಗಳು.

ಕಪ್ಪು ಕುಳಿಯನ್ನು ಮೇಲ್ವಿಚಾರಣೆ ಮಾಡುವ ವಿಕಿರಣದ ಶಕ್ತಿಯುತ ಜೆಟ್ ಉಪಕರಣಗಳು, ಅದರ ಧ್ರುವಗಳಿಂದ ಹೊರಹಾಕಲ್ಪಟ್ಟ ಕಣಗಳನ್ನು ಗಮನಿಸಿವೆ. ಸಂಶೋಧನೆಯ ಪ್ರಕಾರ, ಸಾಪೇಕ್ಷತೆಯ ಜೆಟ್‌ಗಳು ಪ್ರತಿ 11 ವರ್ಷಗಳಿಗೊಮ್ಮೆ ಸ್ವಿಂಗ್ ಆಗುವ ಒಂದು ರೀತಿಯ ಲೋಲಕದ ಮೇಲೆ ಕಾಣಿಸಿಕೊಂಡವು. ಈ ಒಟ್ಟಾರೆ ಪ್ರಕ್ರಿಯೆಯನ್ನು ದಶಕಗಳಿಂದ ಗಮನಿಸಿಕೊಂಡು ಬರಲಾಗುತ್ತಿದೆ.

ಕಪ್ಪು ಕುಳಿ ಮತ್ತು ಅದರ ಸುತ್ತಲಿನ ಡಿಸ್ಕ್ ಅನ್ನು ರಚಿಸುವ ವಸ್ತುಗಳ ನಡುವಿನ ಗುರುತ್ವಾಕರ್ಷಣೆಯ ಪರಸ್ಪರ ಕ್ರಿಯೆಗಳಿಂದ ಬ್ಲ್ಕಾಯ್ ಹೋಲ್ ತಿರುಗುತ್ತಿದೆ ಎಂದು ತಜ್ಞರು ಭಾವಿಸಿದ್ದಾರೆ. ಹಾಗಾಗಿ, ಕಪ್ಪು ಕುಳಿ ತಿರುಗುತ್ತಿದೆ ಎಂಬುದಕ್ಕೆ ಇದು ಪುರಾವೆಗಳನ್ನು ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: ಮಕ್ಕಳ ಕಥೆ: ದರ್ಜಿ ಮತ್ತು ರಾಜಕುಮಾರಿ

ಈ ಮಹತ್ವದ ಸಂಶೋಧನೆಯಿಂದ ನಾವು ರೋಮಾಂಚನಗೊಂಡಿದ್ದೇವೆ. ಕಪ್ಪು ಕುಳಿ ಮತ್ತು ಡಿಸ್ಕ್ ನಡುವಿನ ಜೋಡಣೆಯು ತುಲನಾತ್ಮಕವಾಗಿ ಚಿಕ್ಕದಾಗಿದೆ ಮತ್ತು ಇದರ ಪೂರ್ವಭಾವಿ ಅವಧಿಯು ಸುಮಾರು 11 ವರ್ಷಗಳಾಗಿವೆ. ಎರಡು ದಶಕಗಳಲ್ಲಿ M87 ಸಂರಚನೆಯನ್ನು ಪತ್ತೆಹಚ್ಚುವ ಹೆಚ್ಚಿನ ರೆಸಲ್ಯೂಶನ್ ಡೇಟಾವನ್ನು ಸಂಗ್ರಹಿಸುವುದು ಮತ್ತು ಸಂಪೂರ್ಣ ವಿಶ್ಲೇಷಣೆಯಿಂದಾಗಿ ಈ ಹೊಸ ಆವಿಷ್ಕಾರವನ್ನು ಗುರುತಿಸಲು ಸಾಧ್ಯವಾಯಿತು ಎಂದು ಚೀನಾದ ಝೆಜಿಯಾಂಗ್ ಲ್ಯಾಬ್‌ನ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕರಾದ ಕುಯಿ ಯುಝು ಹೇಳಿದ್ದಾರೆ.

ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version