Site icon Vistara News

Viral News : ನಿಮಗೆ ನೀವೇ ಮಾಸ್ಟರ್​ಡೇಟಿಂಗ್ ಮಾಡಿಕೊಳ್ಳಿ!

Masterdating

ಬೆಂಗಳೂರು: ಟಿಕ್ ಟಾಕ್ ಭಾರತದಲ್ಲಿ ಬ್ಯಾನ್ ಆಗಿ ವರ್ಷಗಳಾಯ್ತು. ಆದರೆ, ಅದು ಜಗತ್ತಿನಾದ್ಯಂತ ಹುಟ್ಟು ಹಾಕಿರುವ ರೀಲ್ಸ್​ ಮತ್ತು ವೈರಲ್​ಗಳ ಟ್ರೆಂಡ್​ ಇನ್ನೂ ಮುಂದುವರಿದಿದೆ. ಅಂತೆಯೇ ಇದೀಗ ಹೊಸ ಮಾದರಿಯ ಡೇಟಿಂಗ್ ಒಂದು ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Socail Media)​ ಆಗಿದೆ. ಅ ಅದುವೇ ಮಾಸ್ಟರ್​ಡೇಟಿಂಗ್ (Masterdating)​. ಅಂದ ಹಾಗೆ ಇಂಗ್ಲಿಷ್​ನಲ್ಲಿ ಹಸ್ತ ಮೈಥನಕ್ಕೆ ಮಾಸ್ಟರ್​ಬೇಟಿಂಗ್​ (Masterbating) ಎಂದು ಕರೆಯುತ್ತಾರೆ. ಹೀಗಾಗಿ ಮಾಸ್ಟರ್​ಡೇಟಿಂಗ್ (Masterdating) ಎಂಬ ಪದ ಕೇಳಿದ ತಕ್ಷಣ ಕಿವಿ ಸಣ್ಣ ಮಟ್ಟಿಗೆ ‘ನಿಮಿರುತ್ತದೆ’. ಹಾಗಾದರೆ ಈ ಹೊಸ ಮಾದರಿಯ ಡೇಟಿಂಗ್ ಏನು ಮತ್ತು ಅದು ವೈರಲ್ (Viral News) ಆಗುವುದಕ್ಕೆ ಕಾರಣವೇನು ಎಂಬುದೇ ಅಚ್ಚರಿ.

ಮೇಲೆ ಹೇಳಿದಂತೆ ಮಾಸ್ಟರ್​ಬೇಟಿಂಗ್ ಎಂದರೆ ಹಸ್ತಮೈಥುನ. ಅಂದರೆ ಸಂಗಾತಿಯಿಲ್ಲದೇ ಲೈಂಗಿಕ ಸುಖವನ್ನು ಕಾಣುವುದು. ಸ್ವಯಂ ಲೈಂಗಿಕ ಸುಖವನ್ನು ಪಡೆಯುವುದು. ಅದೇ ಮಾದರಿಯಲ್ಲಿ ಮಾಸ್ಟರ್​ಡೇಟಿಂಗ್ ನಡೆಯುತ್ತದೆ. ಒಬ್ಬರೇ ಡೇಟಿಂಗ್​ಗೆ ಹೋಗುವುದು. ಇಲ್ಲಿ ಪ್ರಿಯತಮನಿಗೆ ಪ್ರಿಯತಮೆ ಇರುವುದಿಲ್ಲ, ಪ್ರಿಯತಮೆಯ ಜತೆ ಪ್ರಿಯಕರನೂ ಇರುವುದಿಲ್ಲ. ಒಬ್ಬರೇ ಹೋಟೆಲ್​, ರೆಸ್ಟೋರೆಂಟ್​, ಬಾರ್, ಪಬ್​ಗಳಿಗೆ ಹೋಗಿ ಡೇಟಿಂಗ್ ಮಾಡುವುದು. ಹೀಗಾಗಿ ಮಾಸ್ಟರ್​ಬೇಟಿಂಗ್​ ರೀತಿಯಲ್ಲಿ ಕೈಚಳಕ’ ಇಲ್ಲವಾದರೂ ಆ ಪದಕ್ಕೆ ಹತ್ತಿರವಾಗಿರುವ ಕಾರಣ ಬೇಗ ಟ್ರೆಂಡ್ ಆಗಿದೆ.

ತಮಗೆ ತಾವೇ ಲವರ್​

ಮಾಸ್ಟರ್​ಡೇಟಿಂಗ್ ಮಾಡುವವರು ತಮ್ಮನ್ನು ತಾವೇ ಐಷಾರಾಮಿ ರೆಸ್ಟೋರೆಂಟ್ ಗಳು, ಬಾರ್, ಮ್ಯೂಸಿಯಂ ಅಥವಾ ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಪ್ರವೃತ್ತಿ ಸ್ವಾವಲಂಬನೆಯ ಪ್ರಜ್ಞೆಯನ್ನು ಮೂಡಿಸುವ ಜತೆಗೆ ಲೋನ್ ವಾಕಿಂಗ್​, ವಿಶೇಷ ಉಡುಗೊರೆಗಳನ್ನು ನೀಡುವುದು, ಇಷ್ಟದ ಊಟವನ್ನು ಮಾಡುವುದು ಹಾಗೂ ತನ್ನನ್ನು ತಾನೇ ಮುದ್ದಿಸುವುದು ಕೂಡ ಸೇರಿಕೊಂಡಿರುತ್ತದೆ.

ಅಂದ ಹಾಗೆ ಇದೊಂದು ವ್ಯಾಯಾಮ ಎನ್ನುತ್ತಾರೆ ಟ್ರೆಂಡ್ ಸೆಟ್ಟರ್​ಗಳು. ನಿಮ್ಮ ಬಗ್ಗೆ ನಿಮಗೆ ಯಾವುದೇ ಕಾಳಜಿ ಇರುವುದಿಲ್ಲ. ಹೀಗಾಗಿ ನೀವು ನಿಜವಾಗಿಯೂ ಯಾರು ಎಂಬುದರ ಬಗ್ಗೆ ಕಲಿಯಲು, ನಿಮ್ಮ ಯೋಗಕ್ಷೇಮವನ್ನು ವಿಚಾರಿಸಲು ಮತ್ತು ನಿಮ್ಮ ಏಕಾಂತವನ್ನು ಧೈರ್ಯದಿಂದ ಎದುರಿಸಲು ಈ ವ್ಯಾಯಾಮ ಎಂದು ಹೇಳುತ್ತಾರೆ ಅವರು.

“ಡೇಟಿಂಗ್ಗೆ ನಿಮ್ಮನ್ನು ಕರೆದೊಯ್ಯುವುದು ಸ್ವಯಂ-ಪ್ರೀತಿ ಮತ್ತು ಸ್ವಯಂ-ಸಹಾನುಭೂತಿಯ ವ್ಯಾಯಾಮವಾಗಿದೆ. ನಿಮ್ಮ ಸ್ವಂತ ಅಗತ್ಯಗಳು, ಅವಶ್ಯಕತೆಗಳು ಮತ್ತು ನಿಮಗೆ ಸಂತೋಷವನ್ನು ತರುವ ವಿಷಯಗಳ ಬಗ್ಗೆ ನೀವು ನಿಮಗೆ ಕಲಿಸಬಹುದು ಸ್ವಂತ ಭಾವೋದ್ರೇಕಗಳನ್ನು ಬಹಿರಂಗಪಡಿಸುವ ಅವಕಾಶ ಎಂದು ಡೇಟಿಂಗ್ ತರಬೇತುದಾರ ಆಮಿ ನೊಬಿಲ್ ದಿ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Viral News : ತನ್ನ ಹಾಸಿಗೆಯಲ್ಲಿ ಒಂದಿಷ್ಟು ಜಾಗ ಹಂಚಿಕೊಂಡು ಈ ಮಹಿಳೆ ಸಂಪಾದಿಸಿದೆಷ್ಟು ನೋಡಿ!

2010 ರಲ್ಲಿ, ಅರ್ಬನ್ ಡಿಕ್ಷನರಿಯಲ್ಲಿ ಈ ಪದವನ್ನು ಹೀಗೆ ವ್ಯಾಖ್ಯಾನಲಾಗಿದೆ. ಒಬ್ಬ ವ್ಯಕ್ತಿಯು ಸಿನಿಮಾ ನೋಡಲು ಹೊರಗೆ ಹೋದಾಗ ಅಥವಾ ಥೀಮ್ ಪಾರ್ಕ್ ಗೆ ಭೇಟಿ ನೀಡಿದಾಗ, ಜೋಡಿಗಳು ಅಥವಾ ಸ್ನೇಹಿತರು ಇರುವ ಸ್ಥಳಕ್ಕೆ ಭೇಟಿ ನೀಡಿದಾಗ ಅವರು ಏಕಾಂಗಿ ಎನಿಸಿಕೊಳ್ಳುತ್ತಾರೆ. ಅಂಥ ವ್ಯಕ್ತಿ ಇತರರ ಅಪಹಾಸ್ಯಕ್ಕೆ ಅಥವಾ ಸಹಾನುಭೂತಿಗೆ ಒಳಪಡಬಹುದು. ಒಬ್ಬ ವ್ಯಕ್ತಿಯು ಒಂದು ಕಪ್ ಕಾಫಿ ತೆಗೆದುಕೊಂಡಾಗ ಅಥವಾ ಕೆಲವು ನಿಮಿಷಗಳ ಕಾಲ ಕಾಫಿ ಅಂಗಡಿಯಲ್ಲಿ ಏಕಾಂಗಿಯಾಗಿ ಕುಳಿತಾಗ, ಅಥವಾ ಚಲನಚಿತ್ರವನ್ನು ಬಾಡಿಗೆಗೆ ಪಡೆದಾಗ ಅಥವಾ ಫಾಸ್ಟ್ ಫುಡ್ ತಿನ್ನುವುದಕ್ಕಿಂತ ಇದು ಭಿನ್ನವಾಗಿರುತ್ತಾರೆ. ಹೀಗಾಗಿ ಮಾಸ್ಟರ್​ಡೇಟಿಂಗ್​ಗೆ ಮೌಲ್ಯ ಬಂದಿದೆ.

ಪರಸ್ಪರ ಸಂಬಂಧದಲ್ಲಿರುವ ಜನರು ಸಹ ಮಾಸ್ಟರ್​ಡೇಟಿಂಗ್ ಮಾಡಿಕೊಂಡು ಅನುಭವ ಪಡೆಯಬಹುದು ಎಂದು ಹೇಳಲಾಗಿದೆ.

MasterDating ಹ್ಯಾಶ್​ಟ್ಯಾಗ್ ಟಿಕ್​ಟಾಕ್​​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಈ ವೀಡಿಯೊಗಳಲ್ಲಿ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ ಎಂದು ಪೋಸ್ಟ್ ವರದಿ ಮಾಡಿದೆ. ನಿಮ್ಮೊಂದಿಗೆ ಸಮಯ ಕಳೆಯಲು ಮತ್ತೊಂದು ಹೊಸ ಲೋಕವನ್ನು ಕರಗತ ಮಾಡಿಕೊಳ್ಳುವುದು ಇದರ ಆಲೋಚನೆಯಾಗಿದೆ.

Exit mobile version