Site icon Vistara News

Viral Video: ಹಿಂದೂ ದೇವಾಲಯವನ್ನು ಪ್ರಾಣಿಗಳ ದೊಡ್ಡಿ ಮಾಡಿದ ಪಾಪಿ ಪಾಕಿಗಳು

hindu temples in Pakistan

ಇಸ್ಲಾಮಾಬಾದ್: ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಪ್ರೀತಿ, ಕರುಣೆ, ಗೌರವದ ದೊಡ್ಡ ದೊಡ್ಡ ಮಾತುಗಳನ್ನಾಡುವ ಪಾಕಿಸ್ತಾನ, ಅಸಲಿಗೆ ಅಸಹಿಷ್ಣು ದೇಶ ಎಂಬುದು ಎಲ್ಲರಿಗೂ ಗೊತ್ತು. ಪಾಕ್‌ನ ಈ ಧಾರ್ಮಿಕ ಅಸಹಿಷ್ಣುತೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಇಲ್ಲಿನ ಸಾದಿಕಾಬಾದ್​ನ ಅಹ್ಮದ್ಪುರ ಲುಮ್ಮಾ ಪಟ್ಟಣದ ಹಿಂದೂ ದೇವಾಲಯವೊಂದನ್ನು(hindu temples in Pakistan) ಇಲ್ಲಿನ ಜನರು ಪ್ರಾಣಿಗಳ ಫಾರ್ಮ್ ಆಗಿ ಬಳಸಿಕೊಂಡಿದ್ದಾರೆ. ಜತೆಗೆ ದೇವಾಲಯವನ್ನು ನಾಶಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ದೇವಾಲಯದ ಒಳಭಾಗದಲ್ಲಿ ಪ್ರಾಣಿಗಳನ್ನು ಕಟ್ಟಿಹಾಕಿದ ವಿಡಿಯೊ ವೈರಲ್​(Viral Video) ಆಗಿದ್ದು ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವೈರಲ್​ ಆಗಿರುವ ವಿಡಿಯೊದಲ್ಲಿ ದನ, ಆಡು, ಬಾತುಕೋಳಿ ಮತ್ತು ಸಾಕು ಕೋಳಿಗಳಿಗೆ ದೇವಾಲಯದ ಕೆಲ ಕೊಠಡಿಗಳನ್ನು ನೆಲೆಯಾಗಿ ಮಾಡಲಾಗಿದೆ. ಇದು ಧಾರ್ಮಿಕ ಸ್ಥಳಗಳ ಗೌರವ ಮತ್ತು ಸಂರಕ್ಷಣೆಯ ಬಗ್ಗೆ ಮತ್ತಷ್ಟು ಕಳವಳಗಳನ್ನು ಹೆಚ್ಚಿಸಿದ್ದು ಕೆಲ ಹಿಂದೂ ಧಾರ್ಮಿಕ ಮುಖಂಡರುಗಳು ಸಾಮಾಜಿಕ ಜಾಲತಾಣದಲ್ಲಿ ಪಾಕಿಗಳ ಈ ಕೃತ್ಯ ಕಂಡಿ ಹಿಡಿ ಶಾಪ ಹಾಕಿದ್ದಾರೆ.

ವೈರಲ್​ ಆದ ವಿಡಿಯೊ

ಈ ವಿಡಿಯೊದಲ್ಲಿ ದೇವಾಲಯದ ಬಗ್ಗೆ ಕೆಲ ಮಾಹಿತಿಯನ್ನು ನೀಡಲಾಗಿದ್ದು ಅತ್ಯಂತ ಪುರಾತನ ದೇವಾಲಯ ಇದಾಗಿದೆ ಎಂದು ಹೇಳುತ್ತಿರುವುದು ಕಾಣಬಹುದಾಗಿದೆ. ಅಲ್ಲದೆ ಇಲ್ಲಿನ ಸ್ಥಳೀಯ ವ್ಯಕ್ತಿ ಕೂಡ ಈ ದೇವಾಲಯದ ಬಗ್ಗೆ ಕೆಲ ಮಾಹಿತಿಯನ್ನು ನೀಡಿದ್ದಾನೆ.

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ನಾಶಪಡಿಸುವ ಪ್ರಕ್ರಿಯೆ ಹೊಸತೇನಲ್ಲ. ಈ ಹಿಂದೆಯೂ ಹಲವು ಬಾರಿ ಅಲ್ಲಿ ಹಿಂದೂ ದೇವಾಲಯಗಳು ಹಾಗೂ ಇತರೆ ಧಾರ್ಮಿಕ ಸ್ಥಳಗಳನ್ನು ಇದೇ ರೀತಿ ನಾಶ ಮಾಡಲಾಗಿದೆ. 2020ರಲ್ಲಿ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ಧಾರ್ಮಿಕ ಮುಖಂಡರ ನೇತೃತ್ವದ ಉದ್ರಿಕ್ತ ಜನರ ಗುಂಪೊಂದು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿಯಿಟ್ಟಿರುವ ಘಟನೆ ನಡೆದಿತ್ತು.

ಇದನ್ನೂ ಓದಿ Viral Video: ಚಲಿಸುವ ರೈಲೇ ಈ ಜೋಡಿಗೆ ಮದುವೆ ಮಂಟಪ; ವಿಶಿಷ್ಟ ವಿವಾಹದ ವಿಡಿಯೊ ಇಲ್ಲಿದೆ

ಸ್ಥಳೀಯ ಆಡಳಿತದ ಸಮ್ಮುಖದಲ್ಲೇ ದೇವಾಲಯವನ್ನು ಕೆಡವಿ ಬೆಂಕಿ ಇಡಲಾಗಿತ್ತು. ಈ ವೇಳೆ ಸ್ಥಳೀಯ ಆಡಳಿತ ಹಾಗೂ ಪೊಲೀಸರು ಸ್ಥಳದಲ್ಲಿ ಹಾಜರಿದ್ದರೂ, ಉದ್ರಿಕ್ತ ಜನರ ಗುಂಪು ಮಂದಿರವನ್ನು ಧ್ವಂಸಗೊಳಿಸುವುದನ್ನು ಕೈಕಟ್ಟಿ ನೋಡುತ್ತಿದ್ದರು. ಪಾಕ್‌ನಲ್ಲಿ ಉದ್ರಿಕ್ತ ಜನರ ಗುಂಪು ಹಿಂದೂ ದೇವಾಲಯ ಧ್ವಂಸಗೊಳಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು ಜತೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Exit mobile version