Viral Video: ಚಲಿಸುವ ರೈಲೇ ಈ ಜೋಡಿಗೆ ಮದುವೆ ಮಂಟಪ; ವಿಶಿಷ್ಟ ವಿವಾಹದ ವಿಡಿಯೊ ಇಲ್ಲಿದೆ - Vistara News

ವೈರಲ್ ನ್ಯೂಸ್

Viral Video: ಚಲಿಸುವ ರೈಲೇ ಈ ಜೋಡಿಗೆ ಮದುವೆ ಮಂಟಪ; ವಿಶಿಷ್ಟ ವಿವಾಹದ ವಿಡಿಯೊ ಇಲ್ಲಿದೆ

Viral Video: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಶಿಷ್ಟ ವಿವಾಹ ಶೈಲಿಗೆ ಇದು ಹೊಸ ಸೇರ್ಪಡೆ. ಚಲಿಸುತ್ತಿರುವ ರೈಲಿನಲ್ಲಿ ಜೋಡಿಯೊಂದು ಮದುವೆಯಾಗಿದೆ.

VISTARANEWS.COM


on

train marriage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಾಲದ ಜತೆಗೆ ಜೀವನ ಶೈಲಿಯೂ ಬದಲಾಗುತ್ತಿದೆ. ಆಹಾರ ಪದ್ಧತಿ, ಉಡುಗೆ ತೊಡುಗೆ ಮಾತ್ರವಲ್ಲ ಆಚರಣೆಗಳಲ್ಲಿಯೂ ಬದಲಾವಣೆ ಕಂಡು ಬರುತ್ತಿದೆ. ಇದೀಗ ಬದಲಾವಣೆಯ ಗಾಳಿ ಮದುವೆ ಪದ್ಧತಿ ಮೇಲೂ ಬೀಸಲಾರಂಭಿಸಿದೆ. ಸಾಂಪ್ರದಾಯಿಕ ಮಂಟಪದಲ್ಲಿ ವಿವಾಹವಾಗುವ ಬದಲು ಬೆಟ್ಟದ ಮೇಲೆ, ಗಾಳಿಯಲ್ಲಿ, ನೀರಿನಾಳದಲ್ಲಿ ಹೀಗೆ ಬೇರೆ ಬೇರೆ ವಿಧಾನಗಳಲ್ಲಿ ಸಪ್ತಪದಿ ತುಳಿಯುವವರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೋಡಿಯೊಂದು ಚಲಿಸುತ್ತಿರುವ ರೈಲಿನಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸದ್ಯ ಈ ವಿಡಿಯೊ ವೈರಲ್‌ (Viral Vieo) ಆಗಿದೆ.

ವಿಡಿಯೊದಲ್ಲಿ ಏನಿದೆ?

ಈ ವಿಡಿಯೊದಲ್ಲಿ ಜೋಡಿಯೊಂದು ರೈಲಿನಲ್ಲಿ ಹೂಮಾಲೆಗಳನ್ನು ವಿನಿಮಯ ಮಾಡಿಕೊಳ್ಳುವುದು ಕಂಡು ಬಂದಿದೆ. ರೈಲಿನ ಬೋಗಿಯೊಂದನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಯುವಕ ಮೊದಲು ಯುವತಿಯ ಹಣೆಗೆ ಸಿಂಧೂರ ಹಚ್ಚುತ್ತಾನೆ. ಹೂಮಾಲೆಗಳ ವಿನಿಮಯದ ನಂತರ ಭಾವುಕ ವಧು ವರನನ್ನು ಅಪ್ಪಿಕೊಳ್ಳುತ್ತಾಳೆ. ಬಳಿಕ ಸುತ್ತಲಿದ್ದವರ ಹರ್ಷೋದ್ಗಾರದ ನಡುವೆ ಆ ಯುವಕ ಅವಳ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟುತ್ತಾನೆ. ಅಸನ್ಸೋಲ್-ಜಸಿದಿಹ್ ರೈಲು ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾಗಿದೆ ಎಂದು ಕೆಲವು ವರದಿಗಳು ತಿಳಿಸಿದೆ. ಅದಾಗ್ಯೂ ಯಾವ ರೈಲು ಎನ್ನುವುದರ ಬಗ್ಗೆ ಖಚಿತತೆ ಇಲ್ಲ.

ನೆಟ್ಟಿಗರು ಏನಂದ್ರ?

ಸಹಜವಾಗಿಯೇ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಸ್ಮರಣೀಯ ಮದುವೆಗೆ ಅಲಂಕಾರಿಕ ಹೋಟೆಲ್‌, ಸಭಾಂಗಣಗಳು ಅಥವಾ ಅಥವಾ ಔತಣಕೂಟವೇ ಆಗಬೇಕೆಂದಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಹಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ʼʼವಿವಿಧೋದ್ದೇಶದ ಭಾರತೀಯ ರೈಲ್ವೆ” ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು “ಬಜೆಟ್ ಸೀಮಿತವಾಗಿದ್ದಿರಬೇಕು. ಇಲ್ಲದಿದ್ದರೆ ಅವರು ವಿಮಾನದಲ್ಲಿ ವಿವಾಹವಾಗುತ್ತಿದ್ದರುʼʼ ಎಂದು ಊಹಿಸಿದ್ದಾರೆ.

ಈ ಎಲ್ಲ ತಮಷೆಯ ನಡುವೆ ನೆಟ್ಟಿಗರೊಬ್ಬರು ಗಂಭೀರ ಪ್ರಶ್ನೆಯೊಂದನ್ನು ಎತ್ತಿದ್ದಾರೆ. “ಮದುವೆಯಾಗುವುದು ಹೀಗೆ ತುಂಬ ಸುಲಭವಾಗಿರುವಾಗ ವಿಚ್ಛೇದನವನ್ನು ಏಕೆ ನೋವಿನ ಪ್ರಕ್ರಿಯೆಯನ್ನಾಗಿ ಮಾಡಬೇಕು? ಜೋಡಿಯೊಂದು ಚಲಿಸುವ ರೈಲಿನಲ್ಲಿ ಮದುವೆಯಾಗಬಹುದಾಗಿದ್ದರೆ ವಿಚ್ಛೇದನಕ್ಕಾಗಿ ನ್ಯಾಯಾಲಯವನ್ನು ಏಕೆ ಸಂಪರ್ಕಿಸಬೇಕು? ವಿಚ್ಛೇದನವನ್ನು ಮದುವೆಯಷ್ಟೇ ಸುಲಭಗೊಳಿಸಿʼʼ ಎಂದು ಸಲಹೆ ನೀಡಿದ್ದಾರೆ. ಹಲವರು ಇದಕ್ಕೆ ಪರ-ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ವಿವಾಹ ಹಲವು ಚರ್ಚೆಯನ್ನು ಹುಟ್ಟು ಹಾಕಿದ್ದಂತೂ ಸತ್ಯ.

ಸರಳವಾಗಿ ಹಸೆಮಣೆಗೇರಿದ ಪೂಜಾ ಗಾಂಧಿ

ಈ ಮಧ್ಯೆ ನವೆಂಬರ್‌ 29ರಂದು ನಟಿ, ʼಮಳೆ ಹುಡುಗಿʼ ಪೂಜಾ ಗಾಂಧಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿ ಪ್ರಕಾರ ವಿವಾಹಿತರಾಗಿದ್ದು ಗಮನ ಸೆಳೆದಿದೆ. ಆಡಂಬರದ ಮದುವೆಗಳ ಭರಾಟೆ ನಡುವೆ ಅವರು ಸರಳವಾಗಿ ಉದ್ಯಮಿ ವಿಜಯ್ ಘೋರ್ಪಡೆ ಅವರ ಕೈ ಹಿಡಿದಿದ್ದು ಮೆಚ್ಚುಗೆ ಗಳಿಸಿದೆ. ತನ್ನ ಕನ್ನಡ ಪ್ರೇಮದಿಂದ ಈಗಾಗಲೇ ಹಲವರ ಮನಸ್ಸು ಕದ್ದಿದ್ದ ಪೂಜಾ ಗಾಂಧಿ ಮದುವೆಯಲ್ಲಿಯೂ ಸರಳತೆ ಮೆರೆದಿದ್ದು ಮಾದರಿ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Viral News: ಗೂಗಲ್‌ ಉದ್ಯೋಗ ತೊರೆದು ಉಬರ್‌ ಚಾಲಕನಾದ; ಇದರ ಹಿಂದಿದೆ ಅಚ್ಚರಿಯ ಕಾರಣ

ಆಸ್ಪತ್ರೆಯಲ್ಲೇ ಮದುವೆಯಾದ ಜೋಡಿ

ಇದರ ಜತೆಗೆ ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಜೋಡಿಯೊಂದು ಆಸ್ಪತ್ರೆಯಲ್ಲೇ ಮದುವೆಯಾದ ವಿಡಿಯೊ ವೈರಲ್‌ ಆಗಿತ್ತು. ವಿವಾಹ ನಿಶ್ಚಯವಾಗಿದ್ದ ವರನಿಗೆ ಡೆಂಗ್ಯೂ ಕಾಣಿಸಿಕೊಂಡಿತ್ತು. ಹೀಗಾಗಿ ಆತ ಆಸ್ಪತ್ರೆಗೆ ದಾಖಲಾಗಿದ್ದ. ಮೊದಲೇ ನಿಗದಿ ಪಡಿಸಿದ ದಿನದಂದೇ ವಿವಾಹ ನೆರವೇರಿಸಲು ವಧು-ವರರ ಕುಟುಂಬದವರು ತೀರ್ಮಾನಿಸಿದ್ದರು. ಅದರಂತೆ ವರ ದಾಖಲಾಗಿರುವ ಕೋಣೆಯನ್ನೇ ಮಂಟಪದಂತೆ ಶೃಂಗರಿಸಿ ಅಲ್ಲೇ ಮದುವೆ ನೆರವೇರಿಸಿದ್ದರು. ಸದ್ಯ ಈ ವಿಚಾರವೂ ಗಮನ ಸೆಳೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್‌ ಆದೇಶ!

Viral news: ವಿಚ್ಛೇದನ ಸಂದರ್ಭದಲ್ಲಿ ಪತ್ನಿಗೆ ಪತಿ ಜೀವನಾಂಶ ನೀಡುವುದು ವಾಡಿಕೆ. ಆದರೆ ಇಂದೋರ್‌ನ ಕೋರ್ಟ್‌ ಮಹತ್ವದ ತೀರ್ಪು ನೀಡಿ ಪತ್ನಿಯೇ ಪತಿಗೆ ಜೀವನಾಂಶ ಕೊಡಬೇಕು ಎಂದು ಆದೇಶ ಹೊರಡಿಸಿದೆ.

VISTARANEWS.COM


on

divorce
Koo

ಭೋಪಾಲ್‌: ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯ (Indore family court)ವು ಮಹತ್ವದ ತೀರ್ಪು ನೀಡಿ, ವಿಚ್ಛೇದನದ ಬಳಿಕ ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5 ಸಾವಿರ ರೂ. ಜೀವನಾಂಶ ನೀಡುವಂತೆ ಬ್ಯೂಟಿ ಪಾರ್ಲರ್‌ ಹೊಂದಿರುವ ಪತ್ನಿಗೆ ಆದೇಶಿಸಿದೆ (Viral news).

ʼʼಪತ್ನಿಯ ಒತ್ತಾಯದ ಮೇರೆಗೆ ಕಾಲೇಜು ತೊರೆದು ನಿರುದ್ಯೋಗಿಯಾಗಿದ್ದೆ. ಆದರೆ ತನ್ನ ಪತ್ನಿ ನಂದಿನಿ (22) ಇಂದೋರ್‌ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆʼʼ ಎಂದು 23 ವರ್ಷದ ಅಮನ್ ಕುಮಾರ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಈ ವಿಶೇಷ ತೀರ್ಪು ಪ್ರಕಟಿಸಿದೆ.

ಅಮನ್‌ ಪರ ವಾದ ಮಂಡಿಸಿದ ವಕೀಲ ಮನೀಷ್‌ ಝರೋಲಾ ಈ ಬಗ್ಗೆ ಮಾತನಾಡಿ, ʼʼನಾವು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಜೀವನಾಂಶವಲ್ಲದೆ ವ್ಯಾಜ್ಯ ಮುಂದುವರಿಸುವುದಕ್ಕೆ ಸಂಬಂಧಿಸಿದ ವೆಚ್ಚವನ್ನೂ ನೀಡುವಂತೆ ನಂದಿನಿಗೆ ಸೂಚಿಸಿದೆʼʼ ಎಂದು ತಿಳಿಸಿದ್ದಾರೆ.

ʼʼಉಜ್ಜಯಿನಿ ಮೂಲದ ಅಮನ್‌ಗೆ ಸ್ನೇಹಿತರೊಬ್ಬರ ಮುಖಾಂತರ 2020ರಲ್ಲಿ ನಂದಿನಿಯ ಪರಿಚಯವಾಗಿತ್ತು. ಆ ಪರಿಚಯ ಬಳಿಕ ಸಲುಗೆಗೆ ತಿರುಗಿತ್ತು. ನಂತರ ನಂದಿನಿ ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ ಅಮನ್‌ ಇದಕ್ಕೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿರಲಿಲ್ಲ. ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕ‍್ಳಳುವುದಾಗಿ ನಂದಿನಿ ಬೆದರಿಕೆ ಒಡ್ಡಿದ್ದರು. ಹೀಗಾಗಿ ಅನಿವಾರ್ಯವಾಗಿ ಅಮನ್‌ 2021ರ ಜುಲೈಯಲ್ಲಿ ಆರ್ಯ ಸಮಾಜ ಮಂದಿರದಲ್ಲಿ ನಂದಿನಿಯನ್ನು ವರಿಸಿದ್ದರು. ಬಳಿಕ ಅವರು ಇಂದೋರ್‌ನಲ್ಲಿ ಜೀವನ ಸಾಗಿಸಲು ಆರಂಭಿಸಿದ್ದರುʼʼ ಎಂದು ಮನೀಷ್‌ ಪ್ರಕರಣದ ಹಿನ್ನೆಲೆ ವಿವರಿಸಿದ್ದಾರೆ.

ʼʼಮದುವೆ ಬಳಿಕ ನಂದಿನಿಯ ಮನೆಯವರು ತೊಂದರೆ ಕೊಡಲಾರಂಭಿಸಿದರು. ಮಾತ್ರವಲ್ಲ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳ್ಳುವಂತೆ ಮಾಡಿದರು. ಹೀಗಾಗಿ ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್‌ನಲ್ಲಿ ಪೋಷಕರ ಮನೆಗೆ ಮರಳಿದೆ. ಬಳಿಕ ಇಬ್ಬರು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದೆವುʼʼ ಎಂದು ಅಮನ್‌ ತಿಳಿಸಿದ್ದಾರೆ.

ಅತ್ತ ಅಮನ್‌ ಪೋಷಕರ ಮನೆಗೆ ತೆರಳಿದಾಗ ನಂದಿನಿ ನಾಪತ್ತೆಯ ದೂರು ದಾಖಲಿಸಿದ್ದರು. ಇತ್ತ ಅಮನ್‌ ಉಜ್ಜಯಿನಿ ಪೊಲೀಸ್‌ ಠಾಣೆಗೆ, ನಂದಿನಿ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಜತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶವನ್ನು ಕೋರಿದ್ದರು. ಇದಕ್ಕೆ ಪ್ರತಿಯಾಗಿ 2021ರ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಂದಿನಿ ಅಮನ್‌ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ನೀಡಿದ್ದರು. 2023ರ ಡಿಸೆಂಬರ್‌ನಲ್ಲಿ ಅಮನ್‌ ಇಂದೋರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತನ್ನ ಮದುವೆಯನ್ನು ಅಸಿಂಧು ಎಂದು ಪರಿಗಣಿಸುವಂತೆ ಕೋರಿದ್ದರು. ಫೆಬ್ರವರಿ 21ರಂದು ನಡೆದ ವಿಚಾರಣೆಯ ಸಮಯದಲ್ಲಿ ನಂದಿನಿ ತಾನು ಅಮನ್ ಅವರೊಂದಿಗೆ ವಾಸಿಸಲು ಇಚ್ಛಿಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: Viral News: ಅಂಗವೈಕಲ್ಯತೆ ಇದ್ದರೂ ಸ್ವಾಭಿಮಾನದ ಬದುಕು; ಈ ಫುಡ್‌ ಡೆಲಿವರಿ ಏಜೆಂಟ್‌ ವಿಲ್‌ ಪವರ್‌ಗೆ ನೆಟ್ಟಿಗರ ಬಹುಪರಾಕ್‌

ʼʼತಾನು ನಿರುದ್ಯೋಗಿ ಮತ್ತು ಅಮನ್‌ ಉದ್ಯೋಗದಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ನಂದಿನಿ ಸುಳ್ಳು ಮಾಹಿತಿ ನೀಡಿದ್ದರು. ಅಲ್ಲದೆ ಅವರ ಹೇಳಿಕೆಯಲ್ಲಿ ಅನೇಕ ಗೊಂದಲಗಳಿರುವುದನ್ನು ಗಮನಿಸಿ ನ್ಯಾಯಾಲಯ ನಂದಿನಿ ಅರ್ಜಿಯನ್ನು ತಳ್ಳಿ ಹಾಕಿದೆ. ಅಲ್ಲದೆ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆʼʼ ಎಂದು ಮನೀಷ್‌ ಹೇಳಿದ್ದಾರೆ.

ನಿಯಮ ಏನು ಹೇಳುತ್ತದೆ?

ಹಿಂದೂ ವಿವಾಹ ಕಾಯ್ದೆ 1955 (Hindu Marriage Act, 1955)ರ ಅಡಿಯಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಜೀವನಾಂಶವನ್ನು ಕೋರಬಹುದಾಗಿದೆ. ಜೀವನಾಂಶಕ್ಕಾಗಿ ಲಿಂಗ ಮತ್ತು ಧರ್ಮ ತಟಸ್ಥ ಏಕರೂಪದ ನಿಬಂಧನೆಯನ್ನು ಕೋರಿ 2020ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರಿಕೆಟ್

Akash Deep: ಮೊದಲ ಪಂದ್ಯದಲ್ಲೇ ಕ್ಲೀನ್‌ಬೌಲ್ಡ್‌ ಮಾಡಿದರೂ ಔಟ್‌ ಕೊಡದ ಅಂಪೈರ್;‌ ತಪ್ಪು ಯಾರದ್ದು?

Akash Deep: ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಪದಾರ್ಪಣೆ ಪಂದ್ಯದಲ್ಲಿಯೇ ಆಕಾಶ್‌ ದೀಪ್‌ ಎಸೆದ ನೋ ಬಾಲ್‌ ಅವರಿಗೆ ದುಬಾರಿ ಎನಿಸಿತು.

VISTARANEWS.COM


on

Akash Deep
Koo

ರಾಂಚಿ: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ನಡುವಿನ ನಾಲ್ಕನೇ ಟೆಸ್ಟ್‌ (Test Match) ಪಂದ್ಯವು ಶುಕ್ರವಾರ (ಫೆಬ್ರವರಿ 23) ಆರಂಭವಾಗಿದ್ದು, ವೇಗಿ ಆಕಾಶ್‌ ಪದಾರ್ಪಣೆ ಮಾಡಿದ್ದಾರೆ. ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್‌ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಆರಂಭವಾದ ಪಂದ್ಯದಲ್ಲಿ ಆಕಾಶ್‌ ದೀಪ್‌ (Akash Deep) ಅವರು ನೋ ಬಾಲ್‌ ಎಸೆದಿದ್ದು ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಇಂಗ್ಲೆಂಡ್‌ ಆರಂಭಿಕ ಆಟಗಾರ ಜಾಕ್‌ ಕ್ರಾವ್ಲೆ (Zak Crawley) ಅವರನ್ನು ಆಕಾಶ್‌ ದೀಪ್‌ ಕ್ಲೀನ್‌ ಬೌಲ್ಡ್‌ (Clean Bowled) ಮಾಡಿದರೂ ನೋ ಬಾಲ್‌ ಎಸೆದ ಕಾರಣ ಪ್ರಮುಖ ವಿಕೆಟ್‌ ಕೈ ತಪ್ಪಿತು. ಈ ವಿಡಿಯೊ ಈಗ ವೈರಲ್‌ ಆಗಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡಕ್ಕೆ ಜಾಕ್‌ ಕ್ರಾವ್ಲೆ ಹಾಗೂ ಬೆನ್‌ ಡಕೆಟ್‌ ಅವರು ಉತ್ತಮ ಆರಂಭ ಒದಗಿಸಿದರು. ವಿಕೆಟ್‌ ನಷ್ಟವಿಲ್ಲದೆ ಇಂಗ್ಲೆಂಡ್‌ 47 ರನ್‌ ಗಳಿಸಿತ್ತು. ಆಗ, ಆಕಾಶ್‌ ದೀಪ್‌ ಎಸೆದ ಮೋಡಿಯ ಎಸೆತಕ್ಕೆ ಜಾಕ್‌ ಕ್ರಾವ್ಲೆ ನಿರುತ್ತರರಾದರು. ಕ್ಲೀನ್‌ಬೌಲ್ಡ್‌ ಆದ ಕಾರಣ ಸ್ಟಂಪ್‌ ಮಾರುದ್ದ ಬಿದ್ದಿತ್ತು. ಪದಾರ್ಪಣೆ ಮಾಡಿದ ಟೆಸ್ಟ್‌ ಪಂದ್ಯದಲ್ಲೇ ಮೊದಲ ವಿಕೆಟ್‌ ಪಡೆದ ಖುಷಿಯಲ್ಲಿ ಆಕಾಶ್‌ ದೀಪ್‌ ತೇಲಾಡುತ್ತಿದ್ದರು. ಆದರೆ, ಅಂಪೈರ್‌ ನೋ ಬಾಲ್‌ (Front Foot) ಎಂದು ಘೋಷಿಸಿದ ಕಾರಣ ಆಕಾಶ್‌ ದೀಪ್‌ ಖುಷಿ ಕಮರಿ ಹೋಯಿತು.

ಮೂರು ವಿಕೆಟ್‌ ಕಿತ್ತಿದ ಆಕಾಶ್‌ ದೀಪ್

ನೋ ಬಾಲ್‌ ಆದ ಕಾರಣ ಮೊದಲ ವಿಕೆಟ್‌ ಖುಷಿಯಿಂದ ವಂಚಿತರಾದರೂ ಎದೆಗುಂದ ಆಕಾಶ್‌ ದೀಪ್‌, ಚಾಣಾಕ್ಷತನದಿಂದ ಬೌಲಿಂಗ್‌ ಮಾಡಿದರು. ಬೆನ್‌ ಡಕೆಟ್‌ ಅವರ ವಿಕೆಟ್‌ ಪಡೆಯುವ ಮೂಲಕ ಆಕಾಶ್‌ ದೀಪ್‌, ಟೆಸ್ಟ್‌ನಲ್ಲಿ ಖಾತೆ ತೆರೆದರು. ಅಲ್ಲದೆ, ನಂತರ ಜಾಕ್‌ ಕ್ರಾವ್ಲಿ ಹಾಗೂ ಒಲಿ ಪೋಪ್‌ ಅವರ ವಿಕೆಟ್‌ ಪಡೆಯುವ ಮೂಲಕ ಪದಾರ್ಪಣೆ ಪಂದ್ಯದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಅದರಲ್ಲೂ, ಬೌಲ್ಡ್‌ ಮಾಡುವ ಮೂಲಕವೇ ಜಾಕ್‌ ಕ್ರಾವ್ವಿ ವಿಕೆಟ್‌ ಪಡೆದಿದ್ದು ವಿಶೇಷವಾಗಿದೆ.

ಇದನ್ನೂ ಓದಿ: ಕೊಹ್ಲಿಗೆ ಮಗ ಹುಟ್ಟಿದ್ದೇ ತಡ‌, ನಿವೃತ್ತಿಯ ಭವಿಷ್ಯ ನುಡಿದ ಜ್ಯೋತಿಷಿ; ಏನಿದು ವೈರಲ್‌ ಪೋಸ್ಟ್?

ಬಿಹಾರದವರಾದ ಆಕಾಶ್‌ ದೀಪವ್‌ ಅವರಿಗೆ ಭಾರತ ಕ್ರಿಕೆಟ್‌ ತಂಡದ ಕ್ಯಾಪ್‌ ಸಿಗುತ್ತಲೇ ಅವರು ಭಾವುಕರಾದರು. ಬಳಿಕ ತಾಯಿ ಬಳಿ ಹೋಗಿ, ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಭಾರತ ಹಾಗೂ ಇಂಗ್ಲೆಂಡ್‌ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯುತ್ತಿದ್ದು, ಈಗಾಗಲೇ ಭಾರತವು 2-1ರ ಮುನ್ನಡೆ ಪಡೆದಿದೆ. ನಾಲ್ಕನೇ ಪಂದ್ಯವನ್ನು ಗೆದ್ದರೆ ಸರಣಿಯು ರೋಹಿತ್‌ ಶರ್ಮಾ ಪಡೆಯ ವಶವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಗೆದ್ದರೆ, ನಂತರದ ಎರಡು ಪಂದ್ಯಗಳನ್ನು ಭಾರತ ಗೆದ್ದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Rahul Gandhi: ʼರಾಹುಲ್‌ ಗಾಂಧಿ ಭೇಟಿ ಮಾಡ್ಬೇಕಾ? ಹಾಗಾದ್ರೆ 10 ಕಿಲೋ ತೂಕ ಇಳಿಸು!ʼ

Rahul Gandhi: ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಜೀಶನ್‌ ಸಿದ್ದಿಕ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

VISTARANEWS.COM


on

zeshan siddique rahul gandhi
Koo

ಹೊಸದಿಲ್ಲಿ: ಮಾಜಿ ಕಾಂಗ್ರೆಸ್ ನಾಯಕ (Congress leader) ಬಾಬಾ ಸಿದ್ದಿಕ್ ಅವರ ಪುತ್ರ ಮತ್ತು ಇತ್ತೀಚೆಗೆ ಪಕ್ಷದ ಮುಂಬೈ ಘಟಕದ ಯುವ ಘಟಕದ ಅಧ್ಯಕ್ಷ (Mumbai Youth Congress president) ಸ್ಥಾನದಿಂದ ಪದಚ್ಯುತಗೊಂಡ ಜೀಶನ್ ಸಿದ್ದಿಕ್ (Zeeshan Siddique) ಅವರು ಪಕ್ಷದಲ್ಲಿ ತಾವು ಎದುರಿಸಿದ ವಿಚಿತ್ರ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಒಮ್ಮೆ ಅವರು ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿಯಾಗಲು ಬಯಸಿದಾಗ, ʼನಿನ್ನ ಮೈತೂಕ ಹತ್ತು ಕಿಲೋದಷ್ಟು ಇಳಿಸುʼ ಎಂಬ ಆದೇಶ ರಾಹುಲ್‌ ಆಪ್ತರಿಂದ ಬಂದಿತಂತೆ!

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಕಾಂಗ್ರೆಸ್‌ನ ʼಭಾರತ್ ಜೋಡೋ ಯಾತ್ರೆ’ ನಡೆದಿದ್ದ ಸಂದರ್ಭದಲ್ಲಿ, ರಾಹುಲ್‌ ಅವರನ್ನು ಭೇಟಿಯಾಗುವ ಅವಕಾಶವನ್ನು ಸಿದ್ದಿಕ್‌ ಕೇಳಿಕೊಂಡಿದ್ದರು. ಆದರೆ ಅದಕ್ಕೆ ಮೊದಲು 10 ಕಿಲೋಗ್ರಾಂಗಳಷ್ಟು ತೂಕವನ್ನು ಇಳಿಸುವಂತೆ ರಾಹುಲ್ ಗಾಂಧಿಯ ನಿಕಟವರ್ತಿಗಳು ನನಗೆ ತಿಳಿಸಿದರು ಎಂದು ಸಿದ್ದಿಕ್ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್ ವಿರುದ್ಧದ ಸಿದ್ದಿಕ್ ಅವರ ಆರೋಪಗಳು ಇನ್ನೂ ಇವೆ. “ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ಮುಖಂಡರು ಮತ್ತು ಕಾರ್ಯಕರ್ತರನ್ನು ನಡೆಸಿಕೊಳ್ಳುತ್ತಿರುವ ರೀತಿ ದುರದೃಷ್ಟಕರ. ಕಾಂಗ್ರೆಸ್ ಮತ್ತು ಮುಂಬೈ ಯೂತ್ ಕಾಂಗ್ರೆಸ್‌ನಲ್ಲಿರುವ ಕೋಮುವಾದದ ಪ್ರಮಾಣ ಬೇರೆಲ್ಲೂ ಇಲ್ಲ. ಕಾಂಗ್ರೆಸ್‌ನಲ್ಲಿ ಮುಸ್ಲಿಂ ಆಗಿರುವುದು ಪಾಪವೇ? ಪಕ್ಷ ಉತ್ತರಿಸಬೇಕು. ನಾನು ಯಾಕೆ ಗುರಿಯಾಗುತ್ತಿದ್ದೇನೆ? ನಾನು ಮುಸ್ಲಿಂ ಎಂಬ ಕಾರಣಕ್ಕಾಗಿಯೇ?” ಎಂದು ಅವರು ಆಕ್ರೋಶಿಸಿದ್ದಾರೆ.

50 ವರ್ಷಗಳ ಕಾಲ ಪಕ್ಷದೊಂದಿಗೆ ಸಂಬಂಧ ಹೊಂದಿದ್ದ ಅವರ ತಂದೆ ಬಾಬಾ ಸಿದ್ದಿಕ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ, ಸಿದ್ದಿಕ್ ಅವರನ್ನು ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬುಧವಾರ ತೆಗೆದುಹಾಕಲಾಯಿತು. ನಂತರ ಅವರು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದ್ದಾರೆ.

ವಂಡ್ರೆ ಪೂರ್ವದ ಶಾಸಕ ಜೂನಿಯರ್ ಸಿದ್ದಿಕ್, ಮುಂಬೈ ಯುವ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ತನ್ನನ್ನು ತೆಗೆದುಹಾಕಿದ ಬಗ್ಗೆ ಅಧಿಕೃತವಾಗಿ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ. ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ.90ರಷ್ಟು ಮತಗಳನ್ನು ಪಡೆದಿದ್ದರೂ ಪಕ್ಷವು ಅವರನ್ನು ಆ ಸ್ಥಾನಕ್ಕೆ ನೇಮಿಸಲು ಒಂಬತ್ತು ತಿಂಗಳು ಬೇಕಾಯಿತು ಎಂದಿದ್ದಾರೆ.

“ಮಲ್ಲಿಕಾರ್ಜುನ ಖರ್ಗೆ ಅಂತಹ ಹಿರಿಯ ನಾಯಕರಾದರೂ ಅವರ ಕೈ ಕೂಡ ಪಕ್ಷದಲ್ಲಿ ಕಟ್ಟಿಹಾಕಲ್ಪಟ್ಟಿದೆ. ರಾಹುಲ್ ಗಾಂಧಿ ಅವರ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಸುತ್ತಲಿನ ಜನರು ಕಾಂಗ್ರೆಸ್ ಅನ್ನು ಮುಗಿಸಲು ಇತರ ಪಕ್ಷಗಳಿಂದ ಸುಪಾರಿ ತೆಗೆದುಕೊಂಡಂತೆ ತೋರುತ್ತಿದೆ” ಎಂದ ಅವರು, ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣದ ಜೊತೆಗೆ ಕಾಂಗ್ರೆಸ್ ಪಕ್ಷದ ಮೈತ್ರಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rahul Gandhi: ಐಶ್ವರ್ಯಾ ರೈರನ್ನು ಅವಮಾನಿಸಿದ ರಾಹುಲ್‌ ಗಾಂಧಿಗೆ ಬಿಜೆಪಿ ತರಾಟೆ

Continue Reading

ವೈರಲ್ ನ್ಯೂಸ್

Viral News: ಅಂಗವೈಕಲ್ಯತೆ ಇದ್ದರೂ ಸ್ವಾಭಿಮಾನದ ಬದುಕು; ಈ ಫುಡ್‌ ಡೆಲಿವರಿ ಏಜೆಂಟ್‌ ವಿಲ್‌ ಪವರ್‌ಗೆ ನೆಟ್ಟಿಗರ ಬಹುಪರಾಕ್‌

Viral News: ವಿಶೇಷ ಚೇತನ ವ್ಯಕ್ತಿಯೊಬ್ಬರು ತಮ್ಮ ಅಂಗ ವೈಕಲ್ಯವನ್ನು ಮೆಟ್ಟಿ ನಿಂತು ಫುಡ್‌ ಡೆಲಿವರಿ ಮಾಡುವ ಮಾಡುವ ಮೂಲಕ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಸದ್ಯ ಈ ಫೋಟೊ ವೈರಲ್‌ ಆಗಿದೆ.

VISTARANEWS.COM


on

viral news
Koo

ಬೆಂಗಳೂರು: ʼಮನಸ್ಸಿದ್ದರೆ ಮಾರ್ಗʼ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಈ ವ್ಯಕ್ತಿ ಈ ಮಾತನ್ನು ನಿಜವಾಗಿಸಿದ್ದಾರೆ. ವಿಶೇಷ ಚೇತನ ವ್ಯಕ್ತಿಯೊಬ್ಬರು ತಮ್ಮ ಅಂಗ ವೈಕಲ್ಯವನ್ನು ಮೆಟ್ಟಿ ನಿಂತು ಫುಡ್‌ ಡೆಲಿವರಿ ಮಾಡುವ ಮಾಡುವ ಮೂಲಕ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇವರ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಾರಾಯಣ ಕಣ್ಣನ್‌ ಎನ್ನುವವರು ಬರೆದುಕೊಂಡಿದ್ದು, ಸದ್ಯ ಈ ವಿಚಾರ ವೈರಲ್‌ ಆಗಿದೆ. ಅವರ ವಿಲ್‌ ಪವರ್‌ಗೆ ನೆಟ್ಟಿಗರು ಜೈ ಎಂದಿದ್ದು, ಮೆಚ್ಚುಗೆ ಸೂಚಿಸಿದ್ದಾರೆ (Viral News).

ಈ ಝೊಮಾಟೋ ಫುಡ್‌ ಡೆಲಿವರಿ ಏಜೆಂಟ್‌ ನಿಯೋಮೋಷನ್‌ (NeoMotion) ಎಲೆಕ್ಟ್ರಿಕ್‌ ವಾಹನದ ಸಹಾಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾರಾಯಣ ಕಣ್ಣನ್‌ ಇವರ ಬಗ್ಗೆ ಬರೆದುಕೊಂಡಿದ್ದು, ಝೊಮಾಟೋ ಮತ್ತು ಸಿಇಒ ದೀಪಿಂದರ್ ಗೋಯಲ್ ತಮ್ಮ ಕಂಪೆನಿಯಲ್ಲಿ ಇಂತಹ ವಿಶೇಷ ಚೇತನ ವ್ಯಕ್ತಿಯನ್ನು ನೇಮಿಸಿಕೊಂಡ ವಿಚಾರವನ್ನು ಅವರು ಶ್ಲಾಘಿಸಿದ್ದಾರೆ. “ನಾನು ಬಹಳ ಸಮಯದಿಂದ ನೋಡಿದ ಅತ್ಯುತ್ತಮ ವಿಷಯಗಳಲ್ಲಿ ಇದೂ ಒಂದು. ಕಂಪೆನಿ ವಿಶೇಷ ಚೇತನ ವ್ಯಕ್ತಿಗಳಿಗೆ ಅವಕಾಶ ನೀಡುತ್ತಿದೆ. ಆ ಮೂಲಕ ಸ್ವಾಭಿಮಾನದ ಬದುಕು ಒದಗಿಸುತ್ತಿದೆʼʼ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಅನೇಕರು ಝೊಮಾಟೋ ಕಂಪೆನಿಯ ಈ ಮಹತ್ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. “ಇದು ಅದ್ಭುತವಾಗಿದೆ. ಝೊಮಾಟೋ ತನ್ನ ನೀತಿಗಳನ್ನು ವೈವಿಧ್ಯಮಯಗೊಳಿಸಿದೆ. ಇಂತಹ ಉತ್ತಮ ಕಾರ್ಯಕ್ಕಾಗಿ ಸ್ವಸ್ತಿಕ್ ಸೌರವ್ ಮತ್ತು ದೀಪಿಂದರ್ ಗೋಯಲ್ ಅಭಿನಂದನಾರ್ಹರುʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼಈ ಫೋಟೊ ನೋಡುವಾಗ ಹೆಮ್ಮೆ ಎನಿಸುತ್ತದೆ. ಇದು ಸ್ವಾಭಿಮಾನ ಮತ್ತು ಧನಾತ್ಮಕ ನಡೆ ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಇನ್ನಷ್ಟು ಅತ್ಯುತ್ತಮ ಕಾರ್ಯಗಳನ್ನು ನಿಮ್ಮಿಂದ ನಿರೀಕ್ಷಿಸುತ್ತಿದ್ದೇವೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ಝೊಮಾಟೋ ಸಿಇಒ ದೀಪಿಂದರ್ ಗೋಯಲ್ ಈ ಫೋಟೊವನ್ನು ರಿಪೋಸ್ಟ್‌ ಮಾಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ವಿಶೇಷ ಚೇತನರಿಗೆ ವಾಹನ ಒದಗಿಸಲು ವೈದ್ಯಕೀಯ ಉಪಕರಣಗಳ ತಯಾರಕ ನಿಯೋಮೋಷನ್‌ ಕಂಪೆನಿಯೊಂದಿಗೆ ಝೊಮಾಟೋ ಪಾಲುದಾರಿಕೆ ಹೊಂದಿದೆ ಎಂದು ಗೋಯಲ್ ಘೋಷಿಸಿದ್ದರು. ಚೆನ್ನೈಯಲ್ಲಿನ ಆನ್‌ಬೋರ್ಡಿಂಗ್‌ ಡ್ರೈವ್ ಚಿತ್ರಗಳನ್ನು ಹಂಚಿಕೊಂಡಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ “ಈ ವಿಶೇಷ ವಿತರಣಾ ವಾಹನಗಳನ್ನು ವಿಶೇಷ ಚೇತನ ಫುಡ್‌ ಡೆಲಿವರಿ ಏಜೆಂಟರ್‌ಗಾಗಿ ಕಸ್ಟಮೈಸ್ ಮಾಡಲಾಗಿದೆ. ಇದು ಹೆಚ್ಚಿನ ಆರಾಮ ಒಗಿಸುತ್ತದೆ ಮತ್ತು ಗ್ರಾಹಕ ಸ್ನೇಹಿಯಾಗಿದೆ. ಅಲ್ಲದೆ ಇವು ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ಪರಿಸರ ಸ್ನೇಹಿಯೂ ಆಗಿವೆʼʼ ಎಂದು ತಿಳಿಸಿದ್ದರು.

ಇದನ್ನೂ ಓದಿ: Viral News: ಮದುವೆಯಾಗಿ 2 ವರ್ಷವಾದರೂ ಸರಸವಾಡದ ಗಂಡ; ಪತ್ನಿ ಕಾದು ಕೆಂಡ; ಈಗ ಪೊಲೀಸರ ದಂಡ

2019ರಲ್ಲಿ ರಾಮು ಎಂಬ ಝೊಮಾಟೋ ಉದ್ಯೋಗಿ ಫುಡ್‌ ಡೆಲಿವರಿ ಮಾಡಲು ಕೈಯಿಂದ ಚಾಲಿತ ಟ್ರೈ ಸೈಕಲ್ ಅನ್ನು ಬಳಸುತ್ತಿರುವುದನ್ನು ತೋರಿಸುವ ವಿಡಿಯೊ ವೈರಲ್ ಆಗಿತ್ತು. ಗೋಯಲ್ ಈ ವಿಡಿಯೊವನ್ನು ಗಮನಿಸಿ ರಾಮು ಅವರಿಗೆ ಝೊಮಾಟೋ ಕಡೆಯಿಂದ ಎಲೆಕ್ಟ್ರಿಕ್ ವಾಹನವನ್ನು ಒದಗಿಸಿದ್ದರು. ಒಟ್ಟಿನಲ್ಲಿ ಝೊಮಾಟೋ ಸಂಸ್ಥೆಯ ಉದ್ಯೋಗಿ ಸ್ನೇಹಿಯಾಗಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Elderly woman dies after road Accident Five seriously injured
ಕ್ರೈಂ14 mins ago

Road Accident : ಟಂಟಂ ಪಲ್ಟಿಯಾಗಿ ವೃದ್ಧೆ ಸಾವು; ಐವರು ಗಂಭೀರ ಗಾಯ

R Ashwin
ಪ್ರಮುಖ ಸುದ್ದಿ21 mins ago

R Ashwin : ಈ ಸಾಧನೆ ಮಾಡಿದ ಮೊಟ್ಟ ಮೊದಲ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾದ ರವಿಚಂದ್ರನ್ ಅಶ್ವಿನ್​

Shah Rukh Khan Friend BREAKS Silence on Rumour of Him Dating
ಸಿನಿಮಾ27 mins ago

Shah Rukh Khan: ಪ್ರಿಯಾಂಕಾ ಜತೆ ರಹಸ್ಯವಾಗಿ ಡೇಟಿಂಗ್ ಮಾಡ್ತಿದ್ರಾ ಶಾರುಖ್‌?

Namma Metro
ಬೆಂಗಳೂರು54 mins ago

Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

Talibans
ವಿದೇಶ59 mins ago

Taliban: ತುಂಬಿದ ಸ್ಟೇಡಿಯಂನಲ್ಲಿ ಇಬ್ಬರನ್ನು ಗುಂಡಿಕ್ಕಿ ಸಾಯಿಸಿದ ತಾಲಿಬಾನಿಗಳು; ಯಾಕೆ?

dks
ಕರ್ನಾಟಕ1 hour ago

ನೀರಾ ಕುಡಿದಾಗ ನನಗೆ ಅಮಲಾಗಲಿಲ್ಲ: ಅನುಭವ ಮೆಲುಕು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್

s jaishankar raisina dialogue
ಪ್ರಮುಖ ಸುದ್ದಿ2 hours ago

S Jaishankar: ವಿಶ್ವ ಸಂಸ್ಥೆಯಲ್ಲಿ ಸುಧಾರಣೆ ಅಗತ್ಯ: ವಿದೇಶಾಂಗ ಸಚಿವ ಜೈಶಂಕರ್‌ ಪ್ರತಿಪಾದನೆ

Sumalatha Ambareesh and Pralhad Joshi
ಧಾರವಾಡ2 hours ago

Sumalatha Ambareesh: ಸ್ಪರ್ಧೆ ಖಚಿತ ಎಂದ ಸುಮಲತಾ; ‌ಅವರು ಬಿಜೆಪಿಯೊಳಗೆ ಇರ್ತಾರೆ ಎಂದ ಜೋಶಿ

Fire breaks out in auto shed Burnt autos
ಬೆಂಗಳೂರು2 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

Rahul Gandhi
ದೇಶ2 hours ago

ಶಾ ವಿರುದ್ಧ ಹೇಳಿಕೆ; ಮಾನಹಾನಿ ಕೇಸ್‌ ರದ್ದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿ ವಜಾ, ಮತ್ತೆ ಸಂಕಷ್ಟ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Fire breaks out in auto shed Burnt autos
ಬೆಂಗಳೂರು2 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

read your daily horoscope predictions for february 23 2024
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು23 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ1 day ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ6 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ6 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಟ್ರೆಂಡಿಂಗ್‌