ಬೆಂಗಳೂರು: ನಿಮ್ಮ ಪ್ಯಾನ್ ನಂಬರ್ (Permanent Account Number) ಅನ್ನು ಆಧಾರ್ (Aadhaar)ನೊಂದಿಗೆ ಇನ್ನೂ ಲಿಂಕ್ ಮಾಡಿಲ್ಲವೆ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು (Aadhaar-PAN Link). ಯಾಕೆಂದರೆ ಮೇ 31ರೊಳಗೆ ಪ್ಯಾನ್ ನಂಬರ್ ಆಧಾರ್‌ನೊಂದಿಗೆ ಲಿಂಕ್ ಆಗದಿದ್ದರೆ ಟಿಡಿಎಸ್ ಅನ್ನು ದುಪ್ಪಟ್ಟು ಪ್ರಮಾಣದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ (Income tax) ತಿಳಿಸಿದೆ. ಹಾಗಾದರೆ ಆನ್‌ಲೈನ್, ಆಫ್‌ಲೈನ್‌ನಲ್ಲಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಹೇಗೆ ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹೀಗೆ ಲಿಂಕ್ ಮಾಡಿ
ಪ್ಯಾನ್ ಮತ್ತು ಆಧಾರ್ ಅನ್ನು ಹಲವು ವಿಧಗಳ ಮೂಲಕ ಲಿಂಕ್ ಮಾಡಬಹುದು. ಮೊದಲೇ ಹೇಳಿದಂತೆ ಇದಕ್ಕಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಮಾರ್ಗಗಳನ್ನು ಬಳಸಬಹುದು.
ಇನ್‌ಕಂ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ಪೋರ್ಟಲ್ ಮೂಲಕ
- ಅದಾಯ ತೆರಿಗೆ ಇಲಾಖೆಯ ವೆಬ್ಸೈಟ್ incometaxindiaefiling.gov.inಗೆ ಭೇಟಿ ನೀಡಿ.
- ಈಗ ತೆರೆದುಕೊಳ್ಳುವ ಪುಟದ ಎಡಭಾಗದಲ್ಲಿ ಕಾಣಿಸುವ ‘Quick Links’ ವಿಭಾಗದ ‘Link Aadhaar’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಈಗ ಹೊಸ ಪುಟ ತೆರೆದುಕೊಳ್ಳಲಿದ್ದು, ಅಲ್ಲಿ ಪ್ಯಾನ್, ಆಧಾರ್ ನಂಬರ್ ನಮೂದಿಸಿ. ಜತೆಗೆ ಇತರ ಅಗತ್ಯ ಮಾಹಿತಿಯನ್ನು ನೀಡಿ.
ಎಸ್‌ಎಂಎಸ್ ಮೂಲಕ
- UIDPAN 10-ಅಂಕಿಗಳ ಪ್ಯಾನ್ ಕಾರ್ಡ್ ನಂಬರ್, 12-ಅಂಕಿಗಳ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಒಂದು ಸ್ಪೇಸ್ ಕೊಟ್ಟು 567678 ಅಥವಾ 56161ಗೆ ಎಸ್‌ಎಂಎಸ್ ಕಳುಹಿಸಿ.
- ಬಳಿಕ ಪ್ಯಾನ್-ಆಧಾರ್ ಲಿಂಕ್ ಸ್ಥಿತಿಯನ್ನು ಎಸ್‌ಎಂಎಸ್ ನಿಮಗೆ ತಿಳಿಸಲಾಗುತ್ತದೆ. ಗಮನಿಸಿ ಜನ್ಮ ದಿನಾಂಕವು ಎರಡೂ ದಾಖಲೆಗಳಲ್ಲಿ ಹೊಂದಿಕೆಯಾದರೆ ಮಾತ್ರ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲಾಗುತ್ತದೆ.
ಆಧಾರ್-ಪ್ಯಾನ್ ಲಿಂಕ್ ಆಗಿದ್ಯಾ ಎನ್ನುವುದನ್ನು ಪರಿಶೀಲಿಸುವ ವಿಧಾನ
- ಅದಾಯ ತೆರಿಗೆ ಇಲಾಖೆಯ ವೆಬ್ಸೈಟ್ incometaxindiaefiling.gov.inಗೆ ಭೇಟಿ ನೀಡಿ.
- ಈಗ ತೆರೆದುಕೊಳ್ಳುವ ಪುಟದ ಎಡಭಾಗದಲ್ಲಿ ಕಾಣಿಸುವ ‘Quick Links’ ವಿಭಾಗದ ‘Link Aadhaar Status’ ಆಪ್ಶನ್ ಮೇಲೆ ಕ್ಲಿಕ್ ಮಾಡಿ.
- ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಪ್ಯಾನ್ ಮತ್ತು ಆಧಾರ್ ನಂಬರ್ ನಮೂದಿಸಿ.
- ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ಬಳಿಕ ‘View Link Aadhaar Status’ ಆಪ್ಶನ್ ಸೆಲೆಕ್ಟ್ ಮಾಡಿ.
- ಆಗ ಒಂದು ವೇಳೆ ಲಿಂಕ್ ಆಗಿದ್ದರೆ ನಿಮ್ಮ ಪ್ಯಾನ್ (ಪ್ಯಾನ್ ನಂಬರ್) ಆಧಾರ್ ನಂಬರ್ (ಆಧಾರ್ ನಂಬರ್ನ ಅಂಕಿ)ನೊಂದಿಗೆ ಲಿಂಕ್ ಆಗಿದೆ ಎನ್ನುವ ಸಂದೇಶ ಮೂಡುತ್ತದೆ.
ಕಡ್ಡಾಯ ಯಾಕೆ?
ನಕಲಿ ಪ್ಯಾನ್ ಕಾರ್ಡ್‌ಗಳನ್ನು ತಡೆಗಟ್ಟಲು, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಜಾರಿಗೆ ತರುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಕೂಡಲೇ ಲಿಂಕ್ ಮಾಡಿ.
ಇದನ್ನೂ ಓದಿ: Credit Card Safety Tips: ಕ್ರೆಡಿಟ್ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ