ನವದೆಹಲಿ: ಪಾಕಿಸ್ತಾನ(Pakistan), ಅಫ್ಘಾನಿಸ್ತಾನ(Afghanistan) ಮತ್ತು ಉತ್ತರ ಭಾರತದಲ್ಲಿ (North India) ಗುರುವಾರ ಮಧ್ಯಾಹ್ನ ಭೂಮಿ ಕಂಪಿಸಿದೆ(Earthquake). ಪಾಕಿಸ್ತಾನದ ಕೆಲವು ಭಾಗಗಳಲ್ಲಿ 6.0 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ಹೇಳಿದೆ. ಅಫ್ಘಾನಿಸ್ತಾನದ ಹಿಂದು ಕುಶ್ (Hindu Kush) ಪ್ರದೇಶವು ಭೂಕಂಪದ ಕೇಂದ್ರಬಿಂದುವಾಗಿದೆ(Epicenter). ಮತ್ತೊಂದೆಡೆ, ದೆಹಲಿ (New Delhi) ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಲಘು ಭೂಕಂಪವಾಗಿದೆ. ಯಾವುದೇ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ.
6.0 ತೀವ್ರತೆಯ ಭೂಕಂಪವು ಮಧ್ಯಾಹ್ನ 2:20ಕ್ಕೆ (ಸ್ಥಳೀಯ ಕಾಲಮಾನ), ಆಫ್ಘನ್‌ನ ಹಿಂದು ಕುಶ್ ಪ್ರದೇಶದಲ್ಲಿ 213 ಕಿಮೀ ಆಳದಲ್ಲಿ ಸಂಭವಿಸಿದೆ. ಕಳೆದ ವರ್ಷ ಅಕ್ಟೋಬರ್ 6 ರಂದು ಕೂಡ ಭೂಮಿ ಕಂಪಿಸಿತ್ತು. ಅದಕ್ಕೂ ಮೊದಲು ಎರಡು ಬಾರಿ ಅಫ್ಘಾನಿಸ್ತಾನದಲ್ಲಿ ಭೂಕಂಪನವಾಗಿತ್ತು.
Earthquake of Magnitude:6.1, Occurred on 11-01-2024, 14:50:24 IST, Lat: 36.48 & Long: 70.45, Depth: 220 Km ,Location: Afghanistan for more information Download the BhooKamp App https://t.co/fN2hpmK3jO @KirenRijiju @Ravi_MoES @Dr_Mishra1966 @ndmaindia @Indiametdept pic.twitter.com/q5pkBVscsW
— National Center for Seismology (@NCS_Earthquake) January 11, 2024
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್, ಲಾಹೋರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಖೈಬರ್ ಪಖ್ತುಂಖ್ವಾದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಡಾನ್ ನ್ಯೂಸ್ ಟಿವಿ ವರಿದ ಮಾಡಿದೆ. ಕಳೆದ ವಾರ, ಕ್ವೆಟ್ಟಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 4.6 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಭೂಕಂಪನವು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಭಾರತದ ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಪೀಠೋಪಕರಣಗಳು ಕಂಪನಕ್ಕೆ ಅಲುಗಾಡಿದವು ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದಲ್ಲಿ ಮತ್ತು ದೇಶದ ಪಶ್ಚಿಮ ಮತ್ತು ಮಧ್ಯದಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ, ಅವುಗಳು ಹೆಚ್ಚಾಗಿ ಅರೇಬಿಯನ್ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳು ಪರಸ್ಪರ ವಿರುದ್ಧವಾಗಿ ಚಾಚಿಕೊಂಡಿರುವುದರಿಂದ ಕಂಪನಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣ ಅಫ್ಘಾನಿಸ್ತಾನದ ಹೆಚ್ಚಿನ ಮನೆಗಳು ಮರದ ಕಂಬಗಳು ಹಾಗೂ ಮಣ್ಣಿನಿಂದ ಮಾಡಲ್ಪಟ್ಟಿವೆ. ಉಕ್ಕು ಅಥವಾ ಕಾಂಕ್ರೀಟ್ ಬಳಸಿಕೊಂಡು ಮನೆಗಳ ನಿರ್ಮಾಣವು ಬಹಳ ಕಡಿಮೆ ಎಂದು ಹೇಳಬಹುದು. ಅವಿಭಕ್ತ ಕುಟುಂಬಗಳು ಸಾಮಾನ್ಯವಾಗಿ ಒಂದೇ ಛಾವಣಿಯಡಿಯಲ್ಲಿ ವಾಸಿಸುತ್ತವೆ. ಹಾಗಾಗಿ, ಭಾರೀ ತೀವ್ರತೆಯ ಭೂಕಂಪವು ಹೆಚ್ಚಿನ ಸಾವು ನೋವಿಗೆ ಕಾರಣವಾಗಬಹುದು. ಕಳೆದ ವರ್ಷ ಸಂಭವಿಸಿದ ಸರಣಿ ಭೂಕಂಪಕ್ಕೆ ಅಫ್ಘಾನಿಸ್ತಾನದಲ್ಲಿ ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಈ ಸುದ್ದಿಯನ್ನೂ ಓದಿ: Japan earthquake: ಜಪಾನ್ ಭೂಕಂಪದಲ್ಲಿ ಸತ್ತವರ ಸಂಖ್ಯೆ 73ಕ್ಕೆ ಏರಿಕೆ, ಅವಶೇಷಗಳಡಿ ಹುಡುಕಾಟ