ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಪಕ್ಷ ನೂತನ ಅಧ್ಯಕ್ಷರು ಯಾರು ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಈ ಸ್ಥಾನಕ್ಕೆ ಸೋಮವಾರ ಎಲೆಕ್ಷನ್ ನಡೆದಿತ್ತು.
ಇಂದು ಎಐಸಿಸಿ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ದೇಶಾದ್ಯಂತ ಅಕ್ಟೋಬರ್ 17ರಂದು ಮತದಾನ ನಡೆದಿದ್ದು, ಶೇ.96 ಮತದಾನ ಆಗಿತ್ತು. 9915ರ ಪೈಕಿ, 9500 ಮತಗಳು ಚಲಾವಣೆ ಆಗಿದ್ದವು. ಮತದಾನ ಬಳಿಕ ಬ್ಯಾಲೆಟ್ ಬಾಕ್ಸ್‌ಗಳು ಎಐಸಿಸಿ ಕಚೇರಿಯ ಸ್ಟ್ರಾಂಗ್ ರೂಮ್ ಸೇರಿದ್ದವು. 22 ವರ್ಷಗಳ ಬಳಿಕ ಎಐಸಿಸಿ ಕಚೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರು ಕಣದಲ್ಲಿದ್ದಾರೆ. ಇಬ್ಬರು ನಡುವೆ ಹಣಾಹಣಿ ನಡೆದಿತ್ತಾದರೂ ಶಶಿ ತರೂರ್ ಅವರಿಗೆ ವಿಶೇಷ ಬೆಂಬಲ ಇರಲಿಲ್ಲ. ಸೋನಿಯಾ ಗಾಂಧಿ ಅವರಿಗೆ ನಿಷ್ಠರಾದ ಖರ್ಗೆ ಅವರಿಗೆ ಹೆಚ್ಚು ಬೆಂಬಲ ವ್ಯಕ್ತವಾಗಿತ್ತು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಪಾಲಿಗೆ ಜಯದ ಮಾಲೆ ಎಂದು ಹೇಳಲಾಗುತ್ತಿದೆ. ಅವರು ಗೆದ್ದರೆ, ಎಸ್. ನಿಜಲಿಂಗಪ್ಪ ಬಳಿಕ ಮತ್ತೊಬ್ಬ ಕನ್ನಡಿಗರು ಎಐಸಿಸಿ ನೇತೃತ್ವ ವಹಿಸಿಕೊಂಡಂತಾಗುತ್ತದೆ.
ಇದನ್ನೂ ಓದಿ | Congress President | ಎಐಸಿಸಿ ಅಧ್ಯಕ್ಷ ಪಟ್ಟ: ಖರ್ಗೆ ನೆತ್ತಿಗೆ ಮುಳ್ಳಿನ ಕಿರೀಟ