Site icon Vistara News

All in One Insurance Policy : ಬರಲಿದೆ ಅಗ್ಗದ ದರದಲ್ಲೇ ಗೇಮ್‌ ಚೇಂಜರ್‌ ವಿಮೆ ಪಾಲಿಸಿ, ಪ್ರಯೋಜನವೇನು?

All in one insurence policy

ನವ ದೆಹಲಿ: ವಿಮೆ ಮಾರುಕಟ್ಟೆ ನಿಯಂತ್ರಕ ಐಆರ್‌ಡಿಎಐ, ಕೈಗೆಟಕುವ ದರದಲ್ಲಿ ಆರೋಗ್ಯ, ಜೀವ, ಪ್ರಾಪರ್ಟಿ ಮತ್ತು ಅಪಘಾತ ಪರಿಹಾರವನ್ನು ಒಳಗೊಂಡಿರುವ ಸಮಗ್ರ ವಿಮೆಯನ್ನು ( All in One Insurance Policy) ಬಿಡುಗಡೆಗೊಳಿಸಲಿದೆ. ಇದರ ವಿವರಗಳನ್ನು ನೋಡೋಣ.

ವಿಮೆ ನಿಯಂತ್ರಕ ಪ್ರಾಧಿಕಾರ ಐಆರ್‌ಡಿಎಐ (Insurance Regulatory and Development Authority of India) ಬಿಡುಗಡೆಗೊಳಿಸಲಿರುವ ಒಂದೇ ಪಾಲಿಸಿಯಲ್ಲಿ ಹಲವು ವಿಮೆ ಪರಿಹಾರಗಳು ಪಾಲಿಸಿದಾರರಿಗೆ ಸಿಗಲಿದೆ. ಅದೂ ಕಡಿಮೆ ದರದಲ್ಲಿ ದೊರೆಯಲಿದೆ ಎಂದು ಐಆರ್‌ಡಿಎಐ ಚೇರ್ಮನ್‌ ದೇಬಶೀಶ್‌ ಪಾಂಡಾ ತಿಳಿಸಿದ್ದಾರೆ.

ಈ ಸಂಬಂಧ ಐಆರ್‌ಡಿಎಐ ಜನರಲ್‌ ಇನ್ಷೂರೆನ್ಸ್‌ ಕೌನ್ಸಿಲ್‌ ಮತ್ತು ಲೈಫ್‌ ಇನ್ಷೂರೆನ್ಸ್‌ ಕೌನ್ಸಿಲ್‌ ಜತೆಗೆ ಕಾರ್ಯಪ್ರವೃತ್ತವಾಗಿದೆ. ನೂತನ ವಿಮೆಯ ಹೆಸರು ಬಿಮಾ ಟ್ರಿನಿಟಿ (Bima Trinity) ಎಂದಾಗಿದೆ. ಇದು ಬಿಮಾ ಸುಗಮ್‌ ಎಂಬ ಡಿಜಿಟಲ್‌ ಪ್ಲಾಟ್‌ ಫಾರ್ಮ್‌, ಬಿಮಾ ವಿಸ್ತಾರ ಎಂಬ ಗ್ರಾಮೀಣ ಜನತೆಗೆ ನೀಡುವ ಸಮಗ್ರ ವಿಮೆ, ಬಿಮಾ ವಾಹಕ್‌ ಎಂಬ ಮಹಿಳಾ ಕೇಂದ್ರಿತ ವಿತರಣೆ ಜಾಲವನ್ನು ಕೂಡ ಒಳಗೊಳ್ಳಲಿದೆ ಎಂದು ಸಿಐಐ ಕಾರ್ಯಕ್ರಮದಲ್ಲಿ ಐಆರ್‌ಡಿಎಐ ಚೇರ್ಮನ್‌ ದೇಬಶೀಶ್‌ ಪಾಂಡಾ ವಿವರಿಸಿದ್ದಾರೆ.

ಬಿಮಾ ವಾಹಕ್‌, ಬಿಮಾ ವಿಸ್ತಾರ್‌ ಮತ್ತು ಬಿಮಾ ಸುಗುಮ್‌ ವಿನ್ಯಾಸವನ್ನು ತಜ್ಞರ ನೆರವಿನಲ್ಲಿ ಇದೀಗ ರೂಪಿಸಲಾಗುತ್ತಿದೆ. ಲಭ್ಯತೆ, ದೊರೆಯುವಿಕೆ, ಅಫರ್ಡಬಿಲಿಟಿಯನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ( Availability, Accessibility, Affordability)

ಸಮಗ್ರ ಆರೋಗ್ಯ ವಿಮೆ ಏಕೆ ಬೇಕು?

ಬಹುತೇಕ ಸಾಂಪ್ರದಾಯಿಕ ಆರೋಗ್ಯ ವಿಮೆಗಳು ಕೇವಲ ಆಸ್ಪತ್ರೆಗೆ ದಾಖಲಾದರೆ ತಗಲುವ ವೆಚ್ಚಗಳನ್ನು ಮಾತ್ರ ಭರಿಸುತ್ತದೆ. ಸಾಮಾನ್ಯ ಹೆಲ್ತ್‌ ಚೆಕ್‌, ಔಷಧಿಗಳು, ಮುನ್ನೆಚ್ಚರಿಕೆ ಕ್ರಮಗಳಿಗೆ ಅನ್ವಯವಾಗುವುದಿಲ್ಲ. ಸಮಗ್ರ ಆರೋಗ್ಯ ವಿಮೆಯಲ್ಲಿ ಇದಕ್ಕೆ ಪರಿಹಾರ ಲಭ್ಯ.

ವೈದ್ಯಕೀಯೇತರ ವೆಚ್ಚಗಳು ಸಾಂಪ್ರದಾಯಿಕ ಆರೋಗ್ಯ ವಿಮೆಯಲ್ಲಿ ಇರುವುದಿಲ್ಲ. ಸಾರಿಗೆ ವೆಚ್ಚ, ಹೋಮ್‌ ಹೆಲ್ತ್‌ ಕೇರ್‌ ಸೆಔೆ ಇತ್ಯಾದಿಗಳಿಗೆ ಸಿಗುವುದಿಲ್ಲ. ಇದಕ್ಕಾಗಿ ಸಮಗ್ರ ಆರೋಗ್ಯ ವಿಮೆ ಬೇಕು.

ಸಾಂಪ್ರದಾಯಿಕ ಆರೋಗ್ಯ ವಿಮೆಗಳು ಸಾಮಾನ್ಯವಾಗಿ ಇನ್‌ ನೆಟ್‌ ವರ್ಕ್‌ ( in network) ವ್ಯಾಪ್ತಿಯಲ್ಲಿ ಇರುತ್ತದೆ.

ನವೀನ ಚಿಕಿತ್ಸಾ ವಿಧಾನಗಳಿಗೆ, ಡಯಾಗ್ನಸ್ಟಿಕ್ಸ್‌ ಮತ್ತಿತರ ವಿಷಯಗಳಿಗೆ ಸಾಂಪ್ರದಾಯಿಕ ಆರೋಗ್ಯ ವಿಮೆಗಳು ದೊರೆಯಲಾರವು. ನಿಯಮಿತ ದಂತ ಚಿಕಿತ್ಸೆ, ಕಣ್ಣಿನ ಚಿಕಿತಸೆಯು ಸಾಮಾನ್ಯ ಆರೋಗ್ಯ ವಿಮೆಯಲ್ಲಿ ಸಿಗದು.

ಇದನ್ನೂ ಓದಿ: Insurance Policies | ವಿಮೆ ಸಂಸ್ಥೆಗಳಿಂದ 15.87 ಲಕ್ಷ ಪಾಲಿಸಿಗಳ ಇತ್ಯರ್ಥ, 45,817 ಕೋಟಿ ರೂ. ಡೆತ್‌ ಕ್ಲೇಮ್

Exit mobile version