Site icon Vistara News

Amit Malaviya: ಸರ್ಕಾರಿ ನೌಕರರೂ RSS ಸೇರಬಹುದು; 58 ವರ್ಷಗಳ ಹಿಂದೆ ಇಂದಿರಾ ಗಾಂಧಿ ಹೇರಿದ್ದ ನಿಷೇಧ ರದ್ದು!

ಹೊಸದಿಲ್ಲಿ: ಸರ್ಕಾರಿ ನೌಕರರು(Government Employees) ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ಚಟುವಟಿಕೆಯಲ್ಲಿ ಭಾಗಿಯಾಗುವುದನ್ನು ನಿಷೇಧಿಸಿ ಜಾರಿಗೊಳಿಸಲಾಗಿದ್ದ ಕಾನೂನನ್ನು ಹಿಂಪಡೆಯಲಾಗಿದೆ ಎಂದು ಬಿಜೆಪಿ ಮುಖಂಡ ಅಮಿತ್‌ ಮಾಳವಿಯಾ(Amit Malaviya) ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಮಾಳವಿಯಾ, ನ. 7, 1966ರಂದು ಸರ್ಕಾರಿ ನೌಕರರ ಮೇಲೆ ಸಂವಿಧಾನಿಕ ರೀತಿಯಲ್ಲಿ ಈ ನಿರ್ಬಂಧ ವಿಧಿಸಲಾಗಿತ್ತು. ಅಂದು ಗೋಹತ್ಯೆ ವಿರುದ್ಧ ಸಂಸತ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಆರೆಸ್ಸೆಸ್-ಜನಸಂಘ ಲಕ್ಷಾಂತರ ಜನರ ಬೆಂಬಲ ಸಂಗ್ರಹಿಸಿತ್ತು. ಪೋಲೀಸರ ಗುಂಡಿನ ದಾಳಿಯಲ್ಲಿ ಹಲವರು ಸತ್ತರು. 30 ನವೆಂಬರ್ 1966 ರಂದು, ಆರ್‌ಎಸ್‌ಎಸ್-ಜನಸಂಘದ ಪ್ರಭಾವಕ್ಕೆ ಸರ್ಕಾರವೇ ನಲುಗಿತ್ತು. ಇದಾದ ಬಳಿಕ ಇಂದಿರಾ ಗಾಂಧಿ ಸರ್ಕಾರಿ ಸಿಬ್ಬಂದಿಯನ್ನು ಆರ್‌ಎಸ್‌ಎಸ್‌ಗೆ ಸೇರುವುದನ್ನು ನಿಷೇಧಿಸಿದರು. ಇಂದಿರಾ ಗಾಂಧಿಯವರು ಫೆಬ್ರವರಿ 1977 ರಲ್ಲಿ RSS ಮುಖಂಡರನ್ನು ಭೇಟಿ ಮಾಡಿ, ತಮ್ಮ ಚುನಾವಣಾ ಪ್ರಚಾರಕ್ಕೆ ಬೆಂಬಲ ನೀಡಬೇಕಾಗಿ ಮನವಿ ಮಾಡಿದರು. ಇದಕ್ಕೆ ಬದಲಾಗಿ ನಿಷೇಧವನ್ನು ತೆಗೆದುಹಾಕುವ ಪ್ರಸ್ತಾಪವನ್ನಿಟ್ಟಿದ್ದರು.

ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಈ ಹಿಂದೆ ಇದರ ಬಗ್ಗೆ ಮಾತನಾಡಿದ್ದು, ಮಹಾತ್ಮಾ ಗಾಂಧಿಯವರ ಹತ್ಯೆಯ ನಂತರ 1948 ರ ಫೆಬ್ರವರಿಯಲ್ಲಿ ದೇಶದ ಮೊದಲ ಗೃಹ ಸಚಿವ ವಲ್ಲಭಭಾಯಿ ಪಟೇಲ್ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದರು ಎಂದು ಹೇಳಿದ್ದಾರೆ. ನಂತರ ಉತ್ತಮ ನಡವಳಿಕೆಯ ಭರವಸೆಯ ಮೇರೆಗೆ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು. ಇದಾದ ನಂತರವೂ ಆರ್‌ಎಸ್‌ಎಸ್ ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಲಿಲ್ಲ. 1996 ರಲ್ಲಿ, RSS ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧವನ್ನು ಹೇರಲಾಯಿತು ಮತ್ತು ಜುಲೈ 9, 2024 ರಂದು, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜಾರಿಯಲ್ಲಿದ್ದ 58 ವರ್ಷಗಳ ನಿಷೇಧವನ್ನು ತೆಗೆದುಹಾಕಲಾಯಿತು, ಎಂದು ರಮೇಶ್ X ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: PM Narendra Modi: “ಅಧಿವೇಶನ ದೇಶಕ್ಕಾಗಿಯೇ ಹೊರತು ಪಕ್ಷಗಳಿಗಾಗಿ ಅಲ್ಲ”: ಪ್ರತಿಪಕ್ಷಗಳಿಗೆ ತಿವಿದ ಪ್ರಧಾನಿ ಮೋದಿ

Exit mobile version