ಇಸ್ಲಾಮಾಬಾದ್: ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನಿಗಾಗಿ ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ತೆರಳಿರುವ ಅಂಜು ಮದುವೆಯಾಗಿದ್ದಾರೆ (Anju Love Story) ಎಂಬ ಸುದ್ದಿ ಹರಡಿದೆ. ಗೆಳೆಯ ನಸ್ರುಲ್ಲಾನನ್ನು ವರಿಸುವ ಮುನ್ನ ಅಂಜು ಇಸ್ಲಾಂಗೆ ಮತಾಂತರವಾಗಿದ್ದು, ಫಾತಿಮಾ ಎಂದು ಹೆಸರಿಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ಬೆನ್ನಲ್ಲೇ, ಅಂಜು ತಮ್ಮ ತಂದೆಗೆ ಕರೆ ಮಾಡಿದ್ದು, “ನಾನು ಮದುವೆಯಾಗಿರುವ ಕುರಿತು ಹರಡಿರುವ ಸುದ್ದಿ ಸುಳ್ಳು” ಎಂಬುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಗಯಾ ಪ್ರಸಾದ್ ಥಾಮಸ್ ಅವರಿಗೆ ವಿಡಿಯೊ ಕಾಲ್ ಮಾಡಿದ ಅಂಜು ಅವರ ಆರೋಗ್ಯ, ಕುಟುಂಬಸ್ಥರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಇದೇ ವೇಳೆ ಮದುವೆ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ನಾನು ನಸ್ರುಲ್ಲಾನನ್ನು ಮದುವೆಯಾಗಿಲ್ಲ. ನಾನು ಮದುವೆಯಾಗಿರುವ ಕುರಿತು ನೀವು ಕೇಳಿದ ಸುದ್ದಿ ಸುಳ್ಳು. ಯಾವುದೇ ಆಧಾರವಿಲ್ಲದೆ ನನ್ನ ಮದುವೆಯಾಗಿದೆ ಎಂಬ ಕುರಿತು ವದಂತಿ ಹರಡಿಸಲಾಗಿದೆ” ಎಂಬುದಾಗಿ ತಂದೆಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಮ್ಮ ಪಾಲಿಗೆ ಸತ್ತಂತೆ ಎಂದಿದ್ದ ತಂದೆ
ಗಂಡ-ಮಕ್ಕಳಿದ್ದರೂ ಪ್ರೀತಿಗಾಗಿ ಪಾಕಿಸ್ತಾನಕ್ಕೆ ಪರಾರಿಯಾದ ಅಂಜುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ಪಾಲಿಗೆ ಅವಳು ಸತ್ತುಹೋಗಿದ್ದಾಳೆ. ಅವಳ ಬಗ್ಗೆ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ. ಅವಳ ಜತೆ ಒಂದು ವರ್ಷದಿಂದ ಮಾತನಾಡುವುದನ್ನೇ ಬಿಟ್ಟಿದ್ದೆ. ನನಗೆ ಅವಳ ಬಗ್ಗೆ ಏನೂ ಗೊತ್ತಿಲ್ಲ. ನಮ್ಮನ್ನು ಬಿಡಿ, ಇಬ್ಬರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಓಡಿಹೋದಾಕೆ ಬಗ್ಗೆ ನನಗೆ ಯಾವ ಕಾಳಜಿಯೂ ಇಲ್ಲ” ಎಂದು ಇತ್ತೀಚೆಗೆ ಗಯಾ ಪ್ರಸಾದ್ ಥಾಮಸ್ ಹೇಳಿದ್ದರು.
ಇದನ್ನೂ ಓದಿ: Anju Love Story: ಭಾರತದ ಹಿಂದು ಮಹಿಳೆ ಪಾಕ್‌ಗೆ ಬಂದು ಇಸ್ಲಾಂಗೆ ಮತಾಂತರವಾಗಿದ್ದಕ್ಕೆ ಭರ್ಜರಿ ಬಹುಮಾನ!
34 ವರ್ಷದ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಅವರ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಅವರು 2019ರಲ್ಲಿ ಫೇಸ್ಬುಕ್ ಮೂಲಕ ಪರಿಚಿತರಾಗಿ ಪ್ರೀತಿಸಲು ಆರಂಭಿಸಿದ್ದರು. ನಸ್ರುಲ್ಲಾ ಮತ್ತು ಫಾತಿಮಾ ವಿವಾಹ ಕೂಡ ನಡೆದಿದ್ದು, ಪ್ರಿ ವೆಡ್ಡಿಂಗ್ ವಿಡಿಯೊ ಭಾರಿ ವೈರಲ್ ಆಗಿತ್ತು. ಅಂಜು ಇಸ್ಲಾಂಗೆ ಮತಾಂತರಗೊಂಡ ಬಳಿಕವೇ ಇಬ್ಬರ ಮದುವೆ ನೆರವೇರಿದೆ. ಅಲ್ಲದೆ, ಫಾತಿಮಾಗೆ ಪಾಕಿಸ್ತಾನದಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.