Site icon Vistara News

Assembly Election Date: ಹರಿಯಾಣ ವಿಧಾನಸಭೆ ಚುನಾವಣೆಗೂ ದಿನಾಂಕ ಘೋಷಣೆ; ಇಲ್ಲಿದೆ ಡಿಟೇಲ್ಸ್‌

Assembly election date

ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌(Rajiv Kumar) ಇಂದು ಪತ್ರಿಕಾಗೋಷ್ಠಿ ನಡೆಸಿ, ಜಮ್ಮು-ಕಾಶ್ಮೀರ ಮತ್ತು ಹರಿಯಾಣ(Haryana) ರಾಜ್ಯಗಳ ವಿಧಾನಸಭೆ ಚುನಾವಣಾ ದಿನಾಂಕ(Assembly Election Date) ಘೋಷಿಸಿದ್ದಾರೆ. ಹರಿಯಾಣದಲ್ಲಿ ಅ.1ರಿಂದ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅ.4ರಂದೇ ಫಲಿತಾಂಶ ಪ್ರಕಟವಾಗಲಿದೆ. ಹರಿಯಾಣದಲ್ಲಿ 2 ಕೋಟಿ ಮತದಾರರು ಇದ್ದಾರೆ ಎಂದು ಅವರು ರಾಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತನಾಡಿ, ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ, ಅದರಲ್ಲಿ 73 ಸಾಮಾನ್ಯ, ಎಸ್ಸಿ -17 ಮತ್ತು ಎಸ್ಟಿ -0 ಆಗಿದೆ. ಹರಿಯಾಣದಲ್ಲಿ ಒಟ್ಟು 2.01 ಕೋಟಿ ಮತದಾರರಿದ್ದು, ಅವರಲ್ಲಿ 1.06 ಕೋಟಿ ಪುರುಷರು, 0.95 ಕೋಟಿ ಮಹಿಳೆಯರು, 4.52 ಲಕ್ಷ ಮೊದಲ ಬಾರಿಗೆ ಮತದಾರರು ಮತ್ತು 40.95 ಲಕ್ಷ ಯುವ ಮತದಾರರು ಇದ್ದಾರೆ. ಹರಿಯಾಣದ ಮತದಾರರ ಪಟ್ಟಿಯನ್ನು 2024 ರ ಆಗಸ್ಟ್ 27 ರಂದು ಪ್ರಕಟಿಸಲಾಗುವುದು ಎಂದರು.

ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ ದಿನಾಂಕ ಘೋಷಣೆ ಆಗಿಲ್ಲ

ಸಿಇಸಿ ರಾಜೀವ್ ಕುಮಾರ್ ಮಾತನಾಡಿ, ಕಳೆದ ಬಾರಿ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆದಿತ್ತು. ಆ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರ ಅಂಶವಾಗಿರಲಿಲ್ಲ. ಅಲ್ಲದೇ ಭದ್ರತಾ ಪಡೆಗಳ ಅಗತ್ಯವನ್ನು ಅವಲಂಬಿಸಿ, ನಾವು 2 ಚುನಾವಣೆಗಳನ್ನು ಒಟ್ಟಿಗೆ ನಡೆಸಲು ನಿರ್ಧರಿಸಿದ್ದೇವೆ. ಇನ್ನೊಂದು ಅಂಶವೆಂದರೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದೆ ಮತ್ತು ಹಲವಾರು ಹಬ್ಬಗಳು ಕೂಡ ಸಾಲು ಸಾಲು ಇರುವುದರಿಂದ ಈ ಚುನಾವಣೆಗಳ ಜತೆ ಮಹಾರಾಷ್ಟ್ರ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಮತ್ತೊಂದೆಡೆ ಇದರ ಜೊತೆ ನಡೆಯಬೇಕಿದ್ದ ಜಾರ್ಖಂಡ್‌ ವಿಧಾನಸಭೆ ಚುನಾವಣಾ ದಿನಾಂಕವೂ ನಿಗದಿಯಾಗಿಲ್ಲ.

ಮಹಾರಾಷ್ಟ್ರದಲ್ಲಿ ಚುನಾವಣೆ ಘೋಷಣೆಯಾಗದಿರುವ ಬಗ್ಗೆ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ನಾಯಕ ಆದಿತ್ಯಾ ಠಾಕ್ರೆ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ. ಬಾಸ್‌ ಇನ್ನೂ ಅನುಮತಿ ಕೊಟ್ಟಿಲ್ಲವೇ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Assembly Election Date: ಆರ್ಟಿಕಲ್‌ 370 ರದ್ಧತಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮೊದಲ ಚುನಾವಣೆಗೆ ಮುಹೂರ್ತ ಫಿಕ್ಸ್‌; ದಿನಾಂಕ ಘೋಷಿಸಿದ EC

Exit mobile version