ನವದೆಹಲಿ: ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಅಂದರೆ ಬರೋಬ್ಬರಿ ಹತ್ತು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರ(Jammu-Kashmir)ದಲ್ಲಿ ವಿಧಾನಸಭೆ ಚುನಾವಣೆ(Assembly Election Date) ನಡೆಯಲಿದ್ದು, ಇಂದು ದಿನಾಂಕ ಘೋಷಣೆಯಾಗಿದೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್(Rajiv Kumar) ಇಂದು ಪತ್ರಿಕಾಗೋಷ್ಠಿ ನಡೆಸಿ, ಜಮ್ಮು-ಕಾಶ್ಮೀರ ಮತ್ತು ಹರ್ಯಾಣ(Haryana) ರಾಜ್ಯಗಳ ವಿಧಾನಸಭೆ ಚುನಾವಣಾ ದಿನಾಂಕ(Election Date announced) ಘೋಷಿಸಿದ್ದಾರೆ. ಜಮ್ಮು-ಕಾಶ್ಮೀರ ಮೂರು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಸೆ. 18, ಸೆ.15 ಮತ್ತು ಅಕ್ಟೋಬರ್ 1 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4 ಫಲಿತಾಂಶ ಪ್ರಕಟವಾಗಲಿದೆ.
#WATCH | Assembly Elections in Haryana: Chief Election Commissioner Rajiv Kumar says, "Assembly Elections will be held in one phase; voting on October 1. Counting of votes will take place on October 4" pic.twitter.com/U22qhG3uoR
— ANI (@ANI) August 16, 2024
ಜಮ್ಮು ಕಾಶ್ಮೀರದಲ್ಲಿ ಒಟ್ಟು 90 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಅಮರನಾಥ ಯಾತ್ರೆ ಮುಗಿದ ಮರುದಿನ ಆಗಸ್ಟ್ 20 ರೊಳಗೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು EC ಹೇಳಿದೆ. ಸುಮಾರು 87 ಲಕ್ಷ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದೆ ಎಂದರು. ಹರ್ಯಾಣದಲ್ಲಿ ಅ.1ರಿಂದ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅ.4ರಂದೇ ಫಲಿತಾಂಶ ಪ್ರಕಟವಾಗಲಿದೆ. ಹರ್ಯಾಣದಲ್ಲಿ 2 ಕೋಟಿ ಮತದಾರರು ಇದ್ದಾರೆ ಎಂದು ಅವರು ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
Assembly Elections in Jammu and Kashmir | Chief Election Commissioner Rajiv Kumar says, "Assembly Elections will be held in three phaseS; voting on September 18th, September 25th, and October 1st. Counting of votes will take place on October 4" pic.twitter.com/g4eqB62jjh
— ANI (@ANI) August 16, 2024
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ.
ಅದರಲ್ಲಿ 74 ಸಾಮಾನ್ಯ, ಎಸ್ಸಿ -7 ಮತ್ತು ಎಸ್ಟಿ -9 ಆಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 87.09 ಲಕ್ಷ ಮತದಾರರಿದ್ದು, ಅವರಲ್ಲಿ 44.46 ಲಕ್ಷ ಪುರುಷರು, 42.62 ಲಕ್ಷ ಮಹಿಳೆಯರು, 3.71 ಲಕ್ಷ ಮೊದಲ ಬಾರಿಗೆ ಮತದಾರರು ಮತ್ತು 20.7 ಲಕ್ಷ ಯುವ ಮತದಾರರು ಇದ್ದಾರೆ.
#WATCH | Chief Election Commissioner Rajiv Kumar says, "There are a total of 90 assembly constituencies in Haryana, of which 73 are general, SC-17 and ST-0. There will be a total of 2.01 crore voters in Haryana, of which 1.06 crore are males, 0.95 crore are females, 4.52 lakhs… pic.twitter.com/IYOrODjrrE
— ANI (@ANI) August 16, 2024
ಇದನ್ನೂ ಓದಿ: Terror Attacks: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್: ಕ್ಯಾಪ್ಟನ್ ಹುತಾತ್ಮ