Site icon Vistara News

RBI Balance Sheet: ಪಾಕಿಸ್ತಾನದ ಜಿಡಿಪಿಗಿಂತ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಎರಡೂವರೆ ಪಟ್ಟು ಹೆಚ್ಚು; ಹೀಗಿದೆ ವರದಿ

RBI Balance Sheet

At Rs 70.48 lakh crore, RBI's balance sheet is more than Pakistan, Bangladesh's GDPs put together

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ತನ್ನ ವಾರ್ಷಿಕ ಹಣಕಾಸು ವರದಿ ಬಿಡುಗಡೆ ಮಾಡಿದೆ. 2024ರ ಮಾರ್ಚ್‌ 31ಕ್ಕೆ ಅಂತ್ಯವಾದ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ (ಹಣಕಾಸು ವರದಿ) ಕಳೆದ ಹಣಕಾಸು ವರ್ಷಕ್ಕಿಂತ ಶೇ.11ರಷ್ಟು ಏರಿಕೆಯಾಗಿದೆ. ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ (RBI Balance Sheet) ಈಗ 70.48 ಲಕ್ಷ ಕೋಟಿ ರೂ. ಮೌಲ್ಯಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯವು ಪಾಕಿಸ್ತಾನದ ಒಟ್ಟು ಜಿಡಿಪಿಯ (Pakistan GDP) ಎರಡೂವರೆ ಪಟ್ಟು ಜಾಸ್ತಿ ಇದೆ ಎಂದು ತಿಳಿದುಬಂದಿದೆ. ಇದು ಭಾರತದ ಕೇಂದ್ರೀಯ ಬ್ಯಾಂಕ್‌ನ ಆರ್ಥಿಕ ಸುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ವರದಿ ಪ್ರಕಾರ, ಪಾಕಿಸ್ತಾನದ ಒಟ್ಟು ಜಿಡಿಪಿ ಮೌಲ್ಯವು 338 ಬಿಲಿಯನ್‌ ಡಾಲರ್‌ (ಸುಮಾರು 28 ಲಕ್ಷ ಕೋಟಿ ರೂ.) ಇದೆ. ಆದರೆ, ಭಾರತದ ಕೇಂದ್ರೀಯ ಬ್ಯಾಂಕ್‌ನ ಬ್ಯಾಲೆನ್ಸ್‌ ಶೀಟೇ ಪಾಕಿಸ್ತಾನದ ಜಿಡಿಪಿಗಿಂತ ಎರಡೂವರೆ ಪಟ್ಟು ಜಾಸ್ತಿ ಇದೆ. 2023ರ ಹಣಕಾಸು ವರ್ಷದಲ್ಲಿ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯವು 63.44 ಲಕ್ಷ ಕೋಟಿ ರೂ. ಆಗಿತ್ತು. ಅಷ್ಟೇ ಅಲ್ಲ, ಬಾಂಗ್ಲಾದೇಶದ ಒಟ್ಟು ಜಿಡಿಪಿ ಮೌಲ್ಯಕ್ಕಿಂತಲೂ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಮೌಲ್ಯ ಜಾಸ್ತಿ ಇದೆ ಎಂದು ತಿಳಿದುಬಂದಿದೆ.

ಟಿಸಿಎಸ್‌ ಮಹತ್ವದ ಮೈಲುಗಲ್ಲು

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (TCS) ಮಹತ್ವದ ಮೈಲುಗಲ್ಲು ಸಾಧಿಸಿದೆ. ಟಿಸಿಎಸ್‌ನ ಬ್ಯಾಲೆನ್ಸ್‌ ಶೀಟ್‌ 15 ಲಕ್ಷ ಕೋಟಿ ರೂ. ಆಗಿದೆ. ಇದು ದೇಶದಲ್ಲೇ ಆರ್‌ಬಿಐ ನಂತರ ಬೃಹತ್‌ ಮೊತ್ತದ ಬ್ಯಾಲೆನ್ಸ್‌ ಶೀಟ್‌ ಹೊಂದಿರುವ ಕಂಪನಿ ಎನಿಸಿದೆ. ಪಾಕಿಸ್ತಾನದ ಒಟ್ಟು ಜಿಡಿಪಿಯ ಅರ್ಧದಷ್ಟು ಮೌಲ್ಯವನ್ನು ಟಿಸಿಎಸ್‌ ಬ್ಯಾಲೆನ್ಸ್‌ ಶೀಟ್‌ ಹೊಂದಿದೆ ಎಂಬುದು ಗಮನಾರ್ಹವಾಗಿದೆ. ಉಗ್ರವಾದದ ಪೋಷಣೆ, ಚೀನಾ ಯೋಜನೆಗಳಿಗೆ ಹಣ ವಿನಿಯೋಗ, ಅಸಮರ್ಥ ನಾಯಕತ್ವ, ವಿತ್ತೀಯ ಸುಧಾರಣೆಗಳ ಕೊರತೆಯಿಂದಾಗಿ ಪಾಕಿಸ್ತಾನವು ದಿವಾಳಿಯಾಗಿದೆ.

ಬ್ಯಾಲೆನ್ಸ್‌ ಶೀಟ್‌ ಎಂದರೇನು?

ನಿರ್ದಿಷ್ಟ ಸಮಯದಲ್ಲಿ ಯಾವುದೇ ಕಂಪನಿಯು ತನ್ನ ಸ್ವತ್ತುಗಳು, ಷೇರುದಾರರ ಈಕ್ವಿಟಿಯ ಒಂದು ವರದಿ ಅಥವಾ ಸ್ಟೇಟ್‌ಮೆಂಟ್‌ ಆಗಿದೆ. ಹೂಡಿಕೆದಾರರಿಗೆ ಸಿಗುತ್ತಿರುವ ಲಾಭ (Returns) ಹಾಗೂ ಕಂಪನಿಯ ಬಂಡವಾಳದ ಸ್ಥಿತಿಗತಿಯನ್ನು ಬ್ಯಾಲೆನ್ಸ್‌ ಶೀಟ್‌ ವಿವರಿಸುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಯಾವುದೇ ಸಂಸ್ಥೆ ಅಥವಾ ಕಂಪನಿಯ ಹಣಕಾಸು ವಹಿವಾಟು, ಆಸ್ತಿಯ ಮೌಲ್ಯ, ಷೇರುಗಳ ಏರಿಳಿತದ ಲೆಕ್ಕಾಚಾರವಾಗಿದೆ. ಇದು ಆ ಕಂಪನಿಯ ಸುಸ್ಥಿತಿ ಅಥವಾ ದುಸ್ಥಿತಿಯನ್ನು ತಿಳಿಸುತ್ತದೆ.

ಇದನ್ನೂ ಓದಿ: RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ.‌ ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!

Exit mobile version