ನ್ಯೂಯಾರ್ಕ್: ಜಾಗತಿಕ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಡುವ ಹಣಕಾಸು ಕಾರ್ಯ ಪಡೆ (FATF Grey List)ಯ ಬೂದುಪಟ್ಟಿಯಿಂದ ಪಾಕಿಸ್ತಾನವನ್ನು ಮುಕ್ತಿಗೊಳಿಸಿರುವುದಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. “ಪಾಕಿಸ್ತಾನವು ಬೂದು ಪಟ್ಟಿಯಲ್ಲಿ ಇದ್ದಾಗಲೇ ಭಾರತದಲ್ಲಿ ಉಗ್ರ ಚಟುವಟಿಕೆಗಳು ಕಡಿಮೆಯಾಗಿದ್ದವು. ಈಗ ಪಟ್ಟಿಯಿಂದ ಹೊರಬಂದ ಕಾರಣ ಮತ್ತೆ ಉಗ್ರ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದೆ.
ವಿಶ್ವಸಂಸ್ಥೆಯ ಉಗ್ರ ನಿಗ್ರಹ ಸಮಿತಿ (CTC)ಗೆ ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. “ಪಾಕಿಸ್ತಾನವು ಎಫ್‌ಎಟಿಎಫ್ ಬೂದುಪಟ್ಟಿಯಲ್ಲಿದ್ದಾಗ ಉಗ್ರ ಚಟುವಟಿಕೆಗಳು, ಪ್ರಮುಖ ಗುರಿಗಳ ಮೇಲೆ ದಾಳಿ ಮಾಡುವುದು ಕಡಿಮೆಯಾಗಿತ್ತು. 2018ರಲ್ಲಿಯೇ ಭಾರತದ ಪ್ರಮುಖ ನೆಲೆಗಳು ಅಥವಾ ಗುರಿಗಳ ಮೇಲೆ ದಾಳಿ ಮಾಡುವುದು ಶೇ.75ರಷ್ಟು ಕಡಿಮೆಯಾಗಿತ್ತು” ಎಂದು ತಿಳಿಸಿದ್ದಾರೆ.
“ಪಾಕಿಸ್ತಾನದ ಉಗ್ರರು 2019ರಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ದಾಳಿ ನಡೆಸಿದರು. ಆದರೆ, 2020ರಲ್ಲಿ ಯಾವುದೇ ದಾಳಿ ನಡೆಯಲಿಲ್ಲ. 2018-21ರವರೆಗೆ ದಾಳಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಈಗ ಮತ್ತೆ ಉಗ್ರರ ದಾಳಿ ಜಾಸ್ತಿಯಾಗುತ್ತಿದೆ. ಬೂದುಪಟ್ಟಿಯಿಂದ ಹೊರಬಂದಿರುವ ಕಾರಣ ಮತ್ತೆ ಹೆಚ್ಚಾಗುವ ಸಾಧ್ಯತೆಗಳಿವೆ” ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನವು ಎಫ್‌ಎಟಿಎಫ್ ಬೂದುಪಟ್ಟಿಯಿಂದ ಹೊರಬಂದಿದೆ.
ಇದನ್ನೂ ಓದಿ | FATF Grey List | ಗ್ರೇ ಲಿಸ್ಟ್‌ನಿಂದ ಹೊರ ಬಿದ್ದ ಪಾಕಿಸ್ತಾನ, ಏನೆಲ್ಲ ಲಾಭ?