FATF Grey List | ಬೂದು ಪಟ್ಟಿಯಿಂದ ಪಾಕ್‌ ಹೊರಗೆ, ವಿಶ್ವಸಂಸ್ಥೆಯಲ್ಲಿ ಭಾರತ ಆಕ್ಷೇಪ, ಉಗ್ರ ದಾಳಿ ಸಾಧ್ಯತೆ ಎಂದು ಎಚ್ಚರಿಕೆ - Vistara News

ದೇಶ

FATF Grey List | ಬೂದು ಪಟ್ಟಿಯಿಂದ ಪಾಕ್‌ ಹೊರಗೆ, ವಿಶ್ವಸಂಸ್ಥೆಯಲ್ಲಿ ಭಾರತ ಆಕ್ಷೇಪ, ಉಗ್ರ ದಾಳಿ ಸಾಧ್ಯತೆ ಎಂದು ಎಚ್ಚರಿಕೆ

ವಿಶ್ವಸಂಸ್ಥೆ ಉಗ್ರ ನಿಗ್ರಹ ಸಮಿತಿ (CTC)ಗೆ ಪಾಕಿಸ್ತಾನದ ಉಗ್ರ ಪೋಷಣೆ ಕುರಿತು ಭಾರತ ಮಾಹಿತಿ ನೀಡಿದೆ. ಅದರಲ್ಲೂ, ಎಫ್‌ಎಟಿಎಫ್‌ (FATF Grey List) ಬೂದುಪಟ್ಟಿಯಿಂದ ಪಾಕಿಸ್ತಾನವನ್ನು ಹೊರಗಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

VISTARANEWS.COM


on

terorist
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್‌: ಜಾಗತಿಕ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಡುವ ಹಣಕಾಸು ಕಾರ್ಯ ಪಡೆ (FATF Grey List)ಯ ಬೂದುಪಟ್ಟಿಯಿಂದ ಪಾಕಿಸ್ತಾನವನ್ನು ಮುಕ್ತಿಗೊಳಿಸಿರುವುದಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. “ಪಾಕಿಸ್ತಾನವು ಬೂದು ಪಟ್ಟಿಯಲ್ಲಿ ಇದ್ದಾಗಲೇ ಭಾರತದಲ್ಲಿ ಉಗ್ರ ಚಟುವಟಿಕೆಗಳು ಕಡಿಮೆಯಾಗಿದ್ದವು. ಈಗ ಪಟ್ಟಿಯಿಂದ ಹೊರಬಂದ ಕಾರಣ ಮತ್ತೆ ಉಗ್ರ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದೆ.

ವಿಶ್ವಸಂಸ್ಥೆಯ ಉಗ್ರ ನಿಗ್ರಹ ಸಮಿತಿ (CTC)ಗೆ ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. “ಪಾಕಿಸ್ತಾನವು ಎಫ್‌ಎಟಿಎಫ್‌ ಬೂದುಪಟ್ಟಿಯಲ್ಲಿದ್ದಾಗ ಉಗ್ರ ಚಟುವಟಿಕೆಗಳು, ಪ್ರಮುಖ ಗುರಿಗಳ ಮೇಲೆ ದಾಳಿ ಮಾಡುವುದು ಕಡಿಮೆಯಾಗಿತ್ತು. 2018ರಲ್ಲಿಯೇ ಭಾರತದ ಪ್ರಮುಖ ನೆಲೆಗಳು ಅಥವಾ ಗುರಿಗಳ ಮೇಲೆ ದಾಳಿ ಮಾಡುವುದು ಶೇ.75ರಷ್ಟು ಕಡಿಮೆಯಾಗಿತ್ತು” ಎಂದು ತಿಳಿಸಿದ್ದಾರೆ.

“ಪಾಕಿಸ್ತಾನದ ಉಗ್ರರು 2019ರಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ದಾಳಿ ನಡೆಸಿದರು. ಆದರೆ, 2020ರಲ್ಲಿ ಯಾವುದೇ ದಾಳಿ ನಡೆಯಲಿಲ್ಲ. 2018-21ರವರೆಗೆ ದಾಳಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಈಗ ಮತ್ತೆ ಉಗ್ರರ ದಾಳಿ ಜಾಸ್ತಿಯಾಗುತ್ತಿದೆ. ಬೂದುಪಟ್ಟಿಯಿಂದ ಹೊರಬಂದಿರುವ ಕಾರಣ ಮತ್ತೆ ಹೆಚ್ಚಾಗುವ ಸಾಧ್ಯತೆಗಳಿವೆ” ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನವು ಎಫ್‌ಎಟಿಎಫ್‌ ಬೂದುಪಟ್ಟಿಯಿಂದ ಹೊರಬಂದಿದೆ.

ಇದನ್ನೂ ಓದಿ | FATF Grey List | ಗ್ರೇ ಲಿಸ್ಟ್‌ನಿಂದ ಹೊರ ಬಿದ್ದ ಪಾಕಿಸ್ತಾನ, ಏನೆಲ್ಲ ಲಾಭ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Viral Video: ಯೂಟ್ಯೂಬರ್‌ವೊಬ್ಬ ರಸ್ತೆ ಬದಿಯಲ್ಲಿ ದಿಗಂಬರ ಸನ್ಯಾಸಿಗಳಿಗೆ ಕಿರುಕುಳ ಕೊಡುತ್ತಿರುವುದನ್ನು ವಿಎಡಿಯೋದಲ್ಲಿ ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿ ಕುಳಿತಿದ್ದ ಮನಿಗಳ ಎದುರು ನಿಂತು ಯೂಟ್ಯೂಬರ್‌ ಸೂರಜ್‌ ಸಿಂಗ್‌, ನಿರ್ವಸ್ತ್ರರಾಗಿ ರಸ್ತೆಯಲ್ಲಿ ಏಕೆ ಓಡಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಅವರು ಉತ್ತರಿಸಿದಾಗ ಅದನ್ನು ಒಪ್ಪದ ಆತ ಅವರ ಜೊತೆ ವಿತಂಡ ವಾದಕ್ಕೆ ಮುಂದಾಗುತ್ತಾನೆ. ಆಗ ಅವರು ಸುಮ್ಮನಾಗುತ್ತಾರೆ. ಹೀಗೆ ಅವರನ್ನು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಕಿರುಕುಳ ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Viral Video
Koo

ಡೆಹ್ರಾಡೂನ್‌: ಇಬ್ಬರು ದಿಗಂಬರ ಜೈನ ಮುನಿಗಳ ಮೇಲೆ ವ್ಯಕ್ತಿಯೊಬ್ಬ ಕಿರುಕುಳ ನೀಡಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ವೈರಲ್‌(Viral Video) ಆಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಇನ್ನು ಆರೋಪಿಯನ್ನು ಯೂಟ್ಯೂಬರ್‌(Youtuber) ಸೂರಜ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ಘಟನೆ ವಿವರ:

ತೆಹ್ರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯೂಟ್ಯೂಬರ್‌ವೊಬ್ಬ ರಸ್ತೆ ಬದಿಯಲ್ಲಿ ದಿಗಂಬರ ಸನ್ಯಾಸಿಗಳಿಗೆ ಕಿರುಕುಳ ಕೊಡುತ್ತಿರುವುದನ್ನು ವಿಎಡಿಯೋದಲ್ಲಿ ಕಾಣಬಹುದಾಗಿದೆ. ರಸ್ತೆ ಬದಿಯಲ್ಲಿ ಕುಳಿತಿದ್ದ ಮನಿಗಳ ಎದುರು ನಿಂತು ಯೂಟ್ಯೂಬರ್‌ ಸೂರಜ್‌ ಸಿಂಗ್‌, ನಿರ್ವಸ್ತ್ರರಾಗಿ ರಸ್ತೆಯಲ್ಲಿ ಏಕೆ ಓಡಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಅವರು ಉತ್ತರಿಸಿದಾಗ ಅದನ್ನು ಒಪ್ಪದ ಆತ ಅವರ ಜೊತೆ ವಿತಂಡ ವಾದಕ್ಕೆ ಮುಂದಾಗುತ್ತಾನೆ. ಆಗ ಅವರು ಸುಮ್ಮನಾಗುತ್ತಾರೆ. ಹೀಗೆ ಅವರನ್ನು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಕಿರುಕುಳ ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚತ್ತುಕೊಂಡ ಪೊಲೀಸರು ಸೂರಜ್‌ ಸಿಂಗ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯಿಂದ ಜೈನ ಮುನಿಗಳ ಆಸ್ಥೆಗೆ, ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ. ಉತ್ತರಾಖಂಡ ಎಲ್ಲಾ ಧರ್ಮವನ್ನು ಸಮಾನವಾಗಿ ಗೌರವಿಸುತ್ತದೆ. ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದನ್ನು ಉತ್ತರಾಖಂಡ ಎಂದಿಗೂ ಸಹಿಸುವುದಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಸೂಕ್ತ ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ.

ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅನೇಕರು ಯುವಕನ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?

Continue Reading

ದೇಶ

Veer Savarkar: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಜೀವನದ ಕುತೂಹಲಕರ ಸಂಗತಿಗಳಿವು

ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ದೇಶಭಕ್ತ ವೀರ್ ಸಾವರ್ಕರ್ (Veer Savarkar) ಅವರ ಕುರಿತು ನಾವು ಶಾಲಾ ಪಠ್ಯ ಪುಸ್ತಕಗಳಲ್ಲಿ ಓದಿರುತ್ತೇವೆ. ಆದರೆ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಇನ್ನೂ ಹಲವಾರು ಸಂಗತಿಗಳಿವೆ. ಇಂದು ಮೇ 28 ಅವರ ಜನ್ಮದಿನ. ಈ ಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರ ಹೇಗಿತ್ತು, ಅವರ ಜೀವನದಲ್ಲಿನ ಮಹತ್ವದ ಘಟ್ಟಗಳೇನು ಎಂಬುದರ ಮೇಲಿನ ನೋಟ ಇಲ್ಲಿದೆ.

VISTARANEWS.COM


on

By

Veer Savarkar
Koo

ಮಹಾರಾಷ್ಟ್ರದ ನಾಸಿಕ್‌ನ (nasik) ಭಾಗ್‌ಪುರ ಗ್ರಾಮದಲ್ಲಿ 1883ರ ಮೇ 28ರಂದು ಬ್ರಾಹ್ಮಣ ಹಿಂದೂ ಕುಟುಂಬದಲ್ಲಿ ಜನಿಸಿದ ವೀರ್ ಸಾವರ್ಕರ್ (Veer Savarkar) 1966ರ ಫೆಬ್ರವರಿ 26 ರಂದು ಮುಂಬಯಿನಲ್ಲಿ (mumbai) ಉಪವಾಸ ವ್ರತ ಕೈಗೊಂಡು ಕೊನೆಯುಸಿರೆಳೆದರು. ಈ ನಡುವೆ ಅವರ ಬದುಕಿನ ಪಯಣ ಸಂಪೂರ್ಣವಾಗಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ (freedom fight) ಮೀಸಲಾಗಿತ್ತು.

ಸಾವರ್ಕರ್ ಅವರ ಪೂರ್ಣ ಹೆಸರು ವಿನಾಯಕ ದಾಮೋದರ್ ಸಾವರ್ಕರ್. ಅವರು ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ, ವಕೀಲ, ಸಮಾಜ ಸುಧಾರಕ ಮತ್ತು ಹಿಂದುತ್ವದ ಪ್ರತಿಪಾದಕರಾಗಿದ್ದರು.

ತಂದೆಯ ಹೆಸರು ದಾಮೋದರಪಂತ್ ಸಾವರ್ಕರ್ ಮತ್ತು ತಾಯಿ ರಾಧಾಬಾಯಿ. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಸಾವರ್ಕರ್ ಅವರು ಹಿರಿಯ ಸಹೋದರ ಗಣೇಶ್ (ಬಾಬಾರಾವ್) ಅವರಿಂದ ಬಲವಾಗಿ ಪ್ರಭಾವಿತರಾಗಿದ್ದರು.

ಮಹಾರಾಷ್ಟ್ರದ ಪುಣೆಯ ಫರ್ಗುಸನ್ ಕಾಲೇಜಿನಿಂದ ಕಲಾ ಪದವಿ ಪಡೆದ ಅವರು ವಕೀಲ, ರಾಜಕಾರಣಿ, ಬರಹಗಾರ ಮತ್ತು ಕಾರ್ಯಕರ್ತನಾಗಿ ಹೆಸರು ಗಳಿಸಿದ್ದರು.

ವೀರ ಸಾವರ್ಕರ್ ತಮ್ಮ ಜೀವನದ ಹಲವು ವರ್ಷಗಳನ್ನು ಜೈಲುವಾಸದಲ್ಲಿ ಕಳೆದಿದ್ದರು. ಅವರನ್ನು ಬ್ರಿಟಿಷರು ಸೆಲ್ಯುಲಾರ್ ಜೈಲು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸ್ಥಳಾಂತರಿಸಿದ್ದರು.


ದೇಶದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆ

ಶೌರ್ಯಕ್ಕೆ ಹೆಸರುವಾಸಿಯಾಗಿದ್ದ ಸಾವರ್ಕರ್ ಗೆ ಇದರಿಂದಲೇ ವೀರ್ ಸಾವರ್ಕರ್ ಎಂಬ ಹೆಸರು ಪಡೆದರು. ಕ್ರಾಂತಿಕಾರಿ ಯುವಕರಾಗಿದ್ದ ಅವರು ಚಿಕ್ಕವರಿದ್ದಾಗ ‘ಮಿತ್ರ ಮೇಳ’ ಎಂಬ ಯುವ ಸಮೂಹವನ್ನು ಆಯೋಜಿಸಿದ್ದರು. ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ ಅವರಂತಹ ಮೂಲಭೂತ ರಾಜಕೀಯ ನಾಯಕರಿಂದ ಸ್ಫೂರ್ತಿ ಪಡೆದಿದ್ದರು.

ಇಂಗ್ಲೆಂಡ್‌ನಲ್ಲಿ ಕಾನೂನು ಅಧ್ಯಯನ ಮಾಡಲು ಶ್ಯಾಮ್‌ಜಿ ಕೃಷ್ಣ ವರ್ಮಾ ಅವರು ಸಹಾಯ ಮಾಡಿದರು. ಸಾವರ್ಕರ್ ಅಲ್ಲಿ ‘ಗ್ರೇಸ್ ಇನ್ ಲಾ ಕಾಲೇಜ್’ ಗೆ ಸೇರಿಕೊಂಡು ‘ಇಂಡಿಯಾ ಹೌಸ್’ ನಲ್ಲಿ ಆಶ್ರಯ ಪಡೆದರು. ಇದು ಉತ್ತರ ಲಂಡನ್‌ನಲ್ಲಿ ವಿದ್ಯಾರ್ಥಿಗಳ ನಿವಾಸವಾಗಿತ್ತು. ಲಂಡನ್‌ನಲ್ಲಿ, ವೀರ್ ಸಾವರ್ಕರ್ ಅವರು ತಮ್ಮ ಸಹ ಭಾರತೀಯ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು ಮತ್ತು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ‘ಫ್ರೀ ಇಂಡಿಯಾ ಸೊಸೈಟಿ’ ಎಂಬ ಸಂಘಟನೆಯನ್ನು ರಚಿಸಿದರು.

1857ರ ದಂಗೆಯ ರೀತಿಯಲ್ಲಿ ವೀರ್ ಸಾವರ್ಕರ್ ಅವರು ಸ್ವಾತಂತ್ರ್ಯವನ್ನು ಪಡೆಯಲು ಗೆರಿಲ್ಲಾ ಯುದ್ಧದ ಬಗ್ಗೆ ಯೋಚಿಸಿದರು. ಅವರು ಬರೆದ “ಭಾರತೀಯ ಸ್ವಾತಂತ್ರ್ಯದ ಯುದ್ಧದ ಇತಿಹಾಸ” ಎಂಬ ಪುಸ್ತಕವನ್ನು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಬಹಳಷ್ಟು ಭಾರತೀಯರನ್ನು ಪ್ರೇರೇಪಿಸಿತು. ಈ ಪುಸ್ತಕವನ್ನು ಬ್ರಿಟಿಷರು ನಿಷೇಧಿಸಿದ್ದರೂ ಹಲವಾರು ದೇಶಗಳಲ್ಲಿ ಇದು ಜನಪ್ರಿಯತೆಯನ್ನು ಗಳಿಸಿತು.


ಜೈಲು ಶಿಕ್ಷೆ ಏಕೆ?

ವೀರ್ ಸಾವರ್ಕರ್ ಅವರ ಹಿರಿಯ ಸಹೋದರ ಮಿಂಟೋ-ಮಾರ್ಲೆ ರಿಫಾರ್ಮ್ ಎಂದು ಕರೆಯಲ್ಪಡುವ ‘ಇಂಡಿಯನ್ ಕೌನ್ಸಿಲ್ ಆಕ್ಟ್ 1909’ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೀರ್ ಸಾವರ್ಕರ್ ಅವರು ಅಪರಾಧದ ಸಂಚು ಹೂಡಿದ್ದಾರೆ ಎಂದು ಆರೋಪಿಸಿ ಅವರನ್ನು ಪ್ಯಾರಿಸ್ ನಲ್ಲಿ ಬಂಧಿಸಿ 50 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಅಲ್ಲಿಂದ ಅವರನ್ನು ಮುಂಬಯಿಗೆ ಕರೆದುಕೊಂಡು ಬಂದು 1911ರ ಜುಲೈ 4ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಕಾಲಾಪಾನಿ ಎಂದು ಪ್ರಸಿದ್ಧವಾದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಲಾಯಿತು.

ಅಲ್ಲೂ ಅವರ ರಾಷ್ಟ್ರೀಯ ಸ್ವಾತಂತ್ರ್ಯದ ಉತ್ಸಾಹ ಮುಂದುವರೆಯಿತು. ಅವರು ತಮ್ಮ ಸಹ ಕೈದಿಗಳಿಗೆ ಓದಲು ಮತ್ತು ಬರೆಯಲು ಕಲಿಸಲು ಪ್ರಾರಂಭಿಸಿದರು. ಜೈಲಿನಲ್ಲಿ ಗ್ರಂಥಾಲಯವನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ಪಡೆದರು.

ಜೈಲಿನಲ್ಲಿ ಇದ್ದು ಮಾಡಿದ ಕೆಲಸ ಅಮೋಘ

ಜೈಲಿನಲ್ಲಿದ್ದಾಗ ಅವರು ಹಿಂದುತ್ವ ಎಂಬ ಸೈದ್ಧಾಂತಿಕ ಕರಪತ್ರವನ್ನು ಬರೆದರು. ಈ ಕರಪತ್ರದಲ್ಲಿ ಅವರು ಹಿಂದೂವನ್ನು ‘ಭಾರತವರ್ಷ’ (ಭಾರತ) ದ ದೇಶಭಕ್ತ ಮತ್ತು ಹೆಮ್ಮೆಯ ನಿವಾಸಿ ಎಂದು ವಿವರಿಸಿದರು. ಇದು ಹಲವಾರು ಹಿಂದೂಗಳ ಮೇಲೆ ಪ್ರಭಾವ ಬೀರಿತ್ತು.

ಸ್ವಯಂ ಘೋಷಿತ ನಾಸ್ತಿಕರಾಗಿದ್ದ ಅವರು 1924ರ ಜನವರಿ 6ರಂದು ಜೈಲಿನಿಂದ ಬಿಡುಗಡೆಯಾದರು.
1937ರಲ್ಲಿ ವೀರ್ ಸಾವರ್ಕರ್ ಅವರು ‘ಹಿಂದೂ ಮಹಾಸಭಾ’ದ ಅಧ್ಯಕ್ಷರಾದರು. ಮತ್ತೊಂದೆಡೆ ಮತ್ತು ಅದೇ ಸಮಯದಲ್ಲಿ ಮುಹಮ್ಮದ್ ಅಲಿ ಜಿನ್ನಾ ಕಾಂಗ್ರೆಸ್ ಆಡಳಿತವನ್ನು ‘ಹಿಂದೂ ರಾಜ್’ ಎಂದು ಘೋಷಿಸಿದರು. ಇದು ಈಗಾಗಲೇ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಇನ್ನಷ್ಟು ಹದಗೆಡಿಸಿತು.

ಇದನ್ನೂ ಓದಿ: Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

ಸಾವರ್ಕರ್ ಕುರಿತ ಚಲನಚಿತ್ರ

ವೀರ್ ಸಾವರ್ಕರ್ ಅವರ ಕುರಿತು 1996ರಲ್ಲಿ ಪ್ರಿಯದರ್ಶನ್ ಅವರು ಮಲಯಾಳಂ ನಲ್ಲಿ ಕಾಲಾ ಪಾನಿ ಚಲನಚಿತ್ರವನ್ನು ನಿರ್ದೇಶಿಸಿದ್ದರು. ಇದರಲ್ಲಿ ಅನ್ನು ಕಪೂರ್ ಅವರು ವೀರ್ ಸಾವರ್ಕರ್ ಅವರ ಪಾತ್ರವನ್ನು ಮಾಡಿದ್ದರು. ವೀರ್ ಸಾವರ್ಕರ್ ಜೀವನ ಚರಿತ್ರೆಯನ್ನು ಸುಧೀರ್ ಫಡ್ಕೆ ಮತ್ತು ವೇದ್ ರಾಹಿ ಅವರು ರಚಿಸಿದ್ದು, ಈ ಚಿತ್ರದಲ್ಲಿ ಶೈಲೇಂದ್ರ ಗೌರ್ ವೀರ್ ಸಾವರ್ಕರ್ ಪಾತ್ರವನ್ನು ನಿರ್ವಹಿಸಿದ್ದಾರೆ.

ವೀರ್ ಸಾವರ್ಕರ್ ಬರೆದ ಪುಸ್ತಕಗಳು

1857ಚೆ ಸ್ವತಂತ್ರ್ಯ ಸಮರ್, ಹಿಂದೂಪಾದಪಾತ್ಶಾಹಿ, ಹಿಂದುತ್ವ, ಜಾತ್ಯೋಛೇದಕ್ ನಿಬಂಧ, ಮೊಪ್ಲ್ಯಾಂಚೆ ಬಂದಾ, ಮಾಝಿ ಜನ್ಮತೇಪ್, ಕಾಲೆ ಪಾನಿ, ಶತ್ರುಚ್ಯಾ ಶಿಬಿರಾತ್, ಲಂಡನ್ಚಿ ಬತಾಮಿಪತ್ರೆ, ಅಂದಮಾಂಚ್ಯಾ ಅಂಧೇರಿತುನ್, ವಿದ್ಯಾನ ನಿಷ್ಠ ನಿಬಂಧ, ಜೋಸೆಫ್ ಮಜ್ಜಿನಿ, ಹಿಂದೂರಾಷ್ಟ್ರ ದರ್ಶನ, ಹಿಂದುತ್ವಚೆ ಪಂಚಪ್ರಾಣ, ಕಮಲಾ, ಸಾವರ್ಕಾರಾಂಚ್ಯಾ ಕವಿತಾ, ಸನ್ಯಾಸ್ತಾ ಖಡ್ಗ್ ಇತ್ಯಾದಿ.

Continue Reading

ದೇಶ

Drain Pipe collapse: 700 ಮೀಟರ್‌ ಉದ್ದದ ಕಬ್ಬಿಣದ ಪೈಪ್ ಕುಸಿತ; ವಾಹನಗಳು ಸಂಪೂರ್ಣ ಜಖಂ; ವಿಡಿಯೋ ವೈರಲ್‌

Drain Pipe collapse: ಪಾನಿಪತ್‌-ಚಂಡೀಗಡ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮೇಲ್ಸೇತುವೆಗೆ ಅಳವಡಿಸಲಾಗಿದ್ದ ಪೈಪ್‌ ಲೈನ್‌ ಏಕಾಏಕಿ ಕುಸಿದುಬಿದ್ದಿದೆ. ಪರಿಣಾಮವಾಗಿ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಸುಮಾರು 50ಮೀಟರ್‌ ಎತ್ತರದಿಂದ ಈ ಪೈಪ್‌ ಕುಸಿದು ಬಿದ್ದಿದೆ. ಇನ್ನು ಅತ್ಯಂತ ಹಳೆಯ ಪೈಪ್‌ಗಳನ್ನು ಅಳವಡಿಸಲಾಗಿತ್ತು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದುವರೆಗೆ ಸಾವು ನೋವಿನ ಬಗ್ಗೆ ವರದಿ ಆಗಿಲ್ಲ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

VISTARANEWS.COM


on

Drain pipe collapse
Koo

ಚಂಢೀಗಡ: ರಾಷ್ಟ್ರೀಯ ಹೆದ್ದಾರಿ(National Highway)ಯಲ್ಲಿ ಡ್ರೈನೇಜ್‌ ಪೈಪ್‌(Drain Pipe collapse) ಕುಸಿದು ಅನೇಕರು ಗಾಯಗೊಂಡಿದ್ದು, ನೂರಾರು ವಾಹನಗಳು ಜಖಂಗೊಂಡಿರುವ ಘಟನೆ ಹರ್ಯಾಣ(Haryana)ದ ಕರ್ನಾಲ್‌ ಪ್ರದೇಶದಲ್ಲಿ ನಡೆದಿದೆ. ಸುಮಾರು 700 ಮೀಟರ್‌ ಉದ್ದದ ಕಬ್ಬಿಣದ ಪೈಪ್‌ ಏಕಾಏಕಿ ವಾಹನಗಳ ಮೇಲೆ ಬಿದ್ದಿದೆ. ಘಟನೆಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌(Traffic Jam) ಉಂಟಾಗಿದೆ.

ಘಟನೆ ವಿವರ:

ಪಾನಿಪತ್‌-ಚಂಡೀಗಡ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮೇಲ್ಸೇತುವೆಗೆ ಅಳವಡಿಸಲಾಗಿದ್ದ ಪೈಪ್‌ ಲೈನ್‌ ಏಕಾಏಕಿ ಕುಸಿದುಬಿದ್ದಿದೆ. ಪರಿಣಾಮವಾಗಿ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಸುಮಾರು 50ಮೀಟರ್‌ ಎತ್ತರದಿಂದ ಈ ಪೈಪ್‌ ಕುಸಿದು ಬಿದ್ದಿದೆ. ಇನ್ನು ಅತ್ಯಂತ ಹಳೆಯ ಪೈಪ್‌ಗಳನ್ನು ಅಳವಡಿಸಲಾಗಿತ್ತು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದುವರೆಗೆ ಸಾವು ನೋವಿನ ಬಗ್ಗೆ ವರದಿ ಆಗಿಲ್ಲ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಕಳೆದ ವರ್ಷ ಬೆಂಗಳೂರಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ, ಮಗಳ ಮೇಲೆಯೇ ಉರುಳಿ ಬಿದ್ದಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರೂ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು.

ಹೈದರಾಬಾದ್‌ನಲ್ಲಿ ಎರಡು ವಾರಗಳ ಹಿಂದೆ ಇಂತಹದ್ದೇ ಒಂದು ಘಟನೆ ಈ ಹಿಂದೆ ನಡೆದಿತ್ತು. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಇದ್ದಕ್ಕಿದ್ದಂತೆ ಮರವೊಂದು ಉರುಳಿ ಬಿದ್ದಿದ್ದು, ಸ್ಥಳದಲ್ಲೇ ಪತಿ ಕೊನೆಯುಸಿರೆಳೆದಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಈ ವಿಡಿಯೋ ಸಿಸಿಟಿವಿ ಕ್ಯಾಮೆರಾ(CCTV)ದಲ್ಲಿ ರೆಕಾರ್ಡ್‌ ಆಗಿದ್ದು, ಎಲ್ಲೆಡೆ ವೈರಲ್‌ ಆಗಿತ್ತು.

ಇದನ್ನೂ ಓದಿ:Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

ಹೈದರಾಬಾದ್‌ನ ಸಿಕಂದರಬಾದ್‌ನಲ್ಲಿ ಮಂಗಳವಾರ ಈ ದುರ್ಘಟನೆ ಸಂಭವಿಸಿದ್ದು, ಆಸ್ಪತ್ರೆಗೆಂದು ದಂಪತಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬೊಲ್ಲಾರಾಮ್‌ ಕಂಟೋನ್ಮೆಂಟ್‌ ಆಸ್ಪತ್ರೆಗೆ ಬರುತ್ತಿದ್ದ ಸ್ಕೂಟರ್‌ನಲ್ಲಿ ದಂಪತಿ ಬರುತ್ತಿದ್ದರು. ದಂಪತಿ ಆಸ್ಪತ್ರೆ ಗೇಟ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ದೈತ್ಯ ಮರವೊಂದು ಸ್ಕೂಟರ್‌ ಮೇಲೆ ಉರುಳಿಬಿದ್ದಿದೆ. ಅದೃಷ್ಟವಶಾತ್‌ ಮತ್ತೊಂದು ಬೈಕ್‌ ತಕ್ಷಣ ಬ್ರೇಕ್‌ ಹಾಕಿ ನಿಲ್ಲುತ್ತೆ. ಅದರಲ್ಲಿದ್ದ ಸವಾರ ಅಪಾಯದಿಂದ ಪಾರಾಗುತ್ತಾನೆ. ಇದಾದ ತಕ್ಷಣ ಸೆಕ್ಯೂಟಿ ಗಾರ್ಡ್‌ ಹಾಗೂ ಇತರರು ಓಡಿ ಹೋಗಿ ದಂಪತಿ ರಕ್ಷಣೆಗೆ ಮುಂದಾಗುತ್ತಾರೆ. ಅಷ್ಟರಲ್ಲಿ ಪತಿ ಕೊನೆಯುಸಿರೆಳೆದಿದ್ದರು. ತಲೆಗೆ ಏಟು ಬಿದ್ದು ನರಳುತ್ತಿದ್ದಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

ದೇಶ

Umar Khalid: ದೆಹಲಿ ಗಲಭೆಯ ‘ಮಾಸ್ಟರ್‌ ಮೈಂಡ್‌ʼ ಉಮರ್ ಖಾಲಿದ್ ಜಾಮೀನು ಅರ್ಜಿ ವಜಾ

Umar Khalid: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣ ಆರೋಪಿಯಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಉಮರ್ ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ. 2024ರ ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡ ನಂತರ ಖಾಲಿದ್ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಫೆಬ್ರವರಿ 14ರಂದು ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಿತ್ತು. ಆ ವೇಳೆ ಖಾಲಿದ್ ಅವರ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

VISTARANEWS.COM


on

Umar Khalid
Koo

ನವದೆಹಲಿ: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣ ಆರೋಪಿಯಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಹಳೆ ವಿದ್ಯಾರ್ಥಿ ಉಮರ್ ಖಾಲಿದ್ (Umar Khalid) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಕರ್ಕರ್ದೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರು ಖಾಲಿದ್ ಅವರ ಮನವಿಯನ್ನು ತಿರಸ್ಕರಿಸಿದರು. 2024ರ ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡ ನಂತರ ಖಾಲಿದ್ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಫೆಬ್ರವರಿ 14ರಂದು ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಿತ್ತು. ಆ ವೇಳೆ ಖಾಲಿದ್ ಅವರ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

“ಸನ್ನಿವೇಶಗಳ ಬದಲಾವಣೆಯಿಂದಾಗಿ ಅರ್ಜಿಯನ್ನು ವಾಪಸ್‌ ಪಡೆದುಕೊಳ್ಳಲಾಗುತ್ತಿದೆ ಹಾಗೂ ತನ್ನ ಕಕ್ಷಿಗಾರ ವಿಚಾರಣಾ ನ್ಯಾಯಾಲಯದಿಂದ ಮತ್ತೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸುತ್ತಾರೆ” ಎಂದು ಅಂದು ಕಪಿಲ್‌ ಸಿಬಲ್ ಹೇಳಿದ್ದರು. ಜತೆಗೆ ಖಾಲಿದ್‌ ವಿರುದ್ಧ ಹೇರಲಾದ ಯುಎಪಿಎ (Unlawful Activities Prevention Act-UAPA)ಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಂದುವರಿಸುವುದಾಗಿ ತಿಳಿಸಿದ್ದರು.

ಏನಿದು ಪ್ರಕರಣ?

2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಖಾಲಿದ್‌ನಲ್ಲಿ ಬಂಧಿಸಲಾಗಿತ್ತು. ಸಿಎಎ ವಿರೋಧಿಸಿ 2020ರಲ್ಲಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಅದೇ ರೀತಿ ದಿಲ್ಲಿಯಲ್ಲೂ ಹೋರಾಟಗಳು ಆರಂಭವಾಗಿದ್ದವು. ಜತೆಗೆ ಈಶಾನ್ಯ ದಿಲ್ಲಿಯಲ್ಲಿ ಭಾರೀ ಪ್ರಮಾಣದಲ್ಲಿ ದಂಗೆ ಸಂಭವಿಸಿತ್ತು. ಈ ದಂಗೆಗೆ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಪಿತೂರಿ ಕೂಡ ಪಿತೂರಿ ನಡೆಸಿದ್ದಾರೆಂಬ ಆರೋಪ ಇದೆ. ಉಮರ್ ಖಾಲಿದ್ ಜತೆಗೆ ಶರ್ಜೀಲ್ ಇಮಾಮ್ ಮತ್ತು ಹಲವರ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ಹಲವಾರು ನಿಬಂಧನೆಗಳ ಅಡಿಯಲ್ಲಿ ‘ಮಾಸ್ಟರ್‌ ಮೈಂಡ್‌ಗಳು’ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ 53 ಜನರು ಸಾವಿಗೀಡಾಗಿ, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಉಮರ್ ಖಾಲಿದ್ ಮತ್ತಿತರರು ಮಾಡಿದ ಭಾಷಣವು ‘ಪೂರ್ವ ನಿಯೋಜಿತ’ ಮತ್ತು ಅವರು ಬಾಬರಿ ಮಸೀದಿ, ತ್ರಿವಳಿ ತಲಾಖ್, ಕಾಶ್ಮೀರ, ಮುಸ್ಲಿಮರ ನಿಗ್ರಹ ಮತ್ತು ಸಿಎಎ ಮತ್ತು ಎನ್‌ಆರ್‌ಸಿಯಂತಹ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.

ಇದನ್ನೂ ಓದಿ: Delhi Riots | ಶಾರ್ಜೀಲ್ ಜಾಮೀನು ವಿಚಾರಣೆ ಮುಂದೂಡಿಕೆ, ಖಾಲಿದ್ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್

ವಿಚಾರಣಾ ನ್ಯಾಯಾಲಯವು 2022ರ ಮಾರ್ಚ್‌ನಲ್ಲಿ ಖಾಲಿದ್‌ಗೆ ಜಾಮೀನು ನಿರಾಕರಿಸಿತ್ತು. ನಂತರ ಅವರು ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ಹೈಕೋರ್ಟ್‌ನಲ್ಲಿಯೂ ಜಾಮೀನು ಲಭಿಸಿರಲಿಲ್ಲ. ಇದರಿಂದ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು. ನಂತರ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ ಮನವಿಯನ್ನು 14 ಬಾರಿ ಮುಂದೂಡಲಾಗಿತ್ತು.

Continue Reading
Advertisement
car care tips
ಆಟೋಮೊಬೈಲ್16 mins ago

Car Care Tips : ಕಾಸು ಉಳಿಸಿ ಎಂಜಿನ್ ಬೆಳಗಿಸಿ, ಕಾರಿನ ಎಂಜಿನ್ ನೀವೇ ​ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್​​​

Viral Video
ವೈರಲ್ ನ್ಯೂಸ್38 mins ago

Viral Video: ದಿಗಂಬರ ಜೈನ ಮುನಿಗಳಿಗೆ ಈ ಪಾಪಿ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case
ಕರ್ನಾಟಕ40 mins ago

Prajwal Revanna Case: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

assault case
ದಕ್ಷಿಣ ಕನ್ನಡ49 mins ago

Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

T20 World Cup 2024
ಕ್ರೀಡೆ1 hour ago

T20 World Cup 2024: 2ನೇ ಬ್ಯಾಚ್​ನಲ್ಲಿ ನ್ಯೂಯಾರ್ಕ್​ಗೆ ತೆರಳಿದ ಭಾರತದ ಮೂವರು ಆಟಗಾರರು

namaz in road mangalore
ದಕ್ಷಿಣ ಕನ್ನಡ1 hour ago

Namaz: ಸಾರ್ವಜನಿಕ ನಮಾಜ್‌ ನಿಲ್ಲಿಸದಿದ್ದರೆ ಹನುಮಾನ್‌ ಚಾಲೀಸಾ ಪಠನ: ವಿಹಿಂಪ ಎಚ್ಚರಿಕೆ

Veer Savarkar
ದೇಶ1 hour ago

Veer Savarkar: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಜೀವನದ ಕುತೂಹಲಕರ ಸಂಗತಿಗಳಿವು

Drain pipe collapse
ದೇಶ1 hour ago

Drain Pipe collapse: 700 ಮೀಟರ್‌ ಉದ್ದದ ಕಬ್ಬಿಣದ ಪೈಪ್ ಕುಸಿತ; ವಾಹನಗಳು ಸಂಪೂರ್ಣ ಜಖಂ; ವಿಡಿಯೋ ವೈರಲ್‌

Umar Khalid
ದೇಶ1 hour ago

Umar Khalid: ದೆಹಲಿ ಗಲಭೆಯ ‘ಮಾಸ್ಟರ್‌ ಮೈಂಡ್‌ʼ ಉಮರ್ ಖಾಲಿದ್ ಜಾಮೀನು ಅರ್ಜಿ ವಜಾ

Physical Abuse
ಚಿಕ್ಕಬಳ್ಳಾಪುರ1 hour ago

Physical Abuse: 7ನೇ ಕ್ಲಾಸ್‌ ಹುಡುಗಿ 3 ತಿಂಗಳ ಗರ್ಭಿಣಿ! ಅತ್ಯಾಚಾರವೆಸಗಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅರೆಸ್ಟ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ23 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌