ಕ್ಯಾನ್‌ಬೆರಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಆತ್ಮೀಯ ಸ್ನೇಹಿತರು. ಇತ್ತೀಚೆಗೆ ಮೋದಿ ಅವರು ಆಸ್ಟ್ರೇಲಿಯಾಗೆ ತೆರಳಿದ್ದಾಗ ಆಂಥೋನಿ ಅಲ್ಬನೀಸ್ ಅವರು ಉತ್ತಮ ಆತಿಥ್ಯ ಒದಗಿಸಿದ್ದರು. ಈಗ ಆಂಥೋನಿ ಅಲ್ಬನೀಸ್ (Anthony Albanese) ಅವರು ಆಸ್ಟ್ರೇಲಿಯಾದಲ್ಲಿರುವ ಭಾರತದ ರೆಸ್ಟೋರೆಂಟ್‌ನಲ್ಲಿ ಜಿಲೇಬಿ ಸೇರಿ ಹಲವು ತಿಂಡಿಗಳನ್ನು ಸವಿದಿದ್ದಾರೆ. ಅಲ್ಲದೆ, ಮೋದಿ ಅವರ ಸಲಹೆ ಮೇರೆಗೆ ಈ ತಿಂಡಿಗಳನ್ನು ಸವಿದಿದ್ದೇನೆ ಎಂದು ತಿಳಿಸಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಆಸ್ಟ್ರೇಲಿಯಾದ ಪರ‍್ರಾಮಟ್ಟಾ ನಗರದಲ್ಲಿರುವ ಜೈಪುರ ಸ್ವೀಟ್ಸ್ ಎಂಬ ಮಳಿಗೆಗೆ ಹೋದ ಆಂಥೋನಿ ಅಲ್ಬನೀಸ್ ಅವರು ಜಿಲೇಬಿ ಸವಿದಿದ್ದಾರೆ. ಚಾಟ್‌ಕಾಜ್ ಎಂಬ ಅಂಗಡಿಗೆ ಹೋಗಿ ಚಾಟ್ ಸವಿದಿದ್ದಾರೆ. ಜಿಲೇಬಿ ಹಾಗೂ ಚಾಟ್ ಸವಿದ ವಿಡಿಯೊ ಹಾಗೂ ಫೋಟೊಗಳನ್ನು ಆಂಥೋನಿಯವರೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ, ವಿಡಿಯೊ ಹಾಗೂ ಫೋಟೊಗಳಿಗೆ ಜನರಿಂದ ಹೆಚ್ಚಿನ ಸ್ಪಂದನೆ ದೊರೆತಿದೆ.
Great Friday night in Little India, Harris Park with @Charlton_AB. We tried out Prime Minister @narendramodi's recommendations of chaat at Chatkazz and jalebi at Jaipur Sweets – a winner! pic.twitter.com/biy3Fo4aKQ
— Anthony Albanese (@AlboMP) June 23, 2023
“ಶುಕ್ರವಾರ ರಾತ್ರಿ ನಮಗೆ ಅದ್ಭುತವಾಗಿತ್ತು. ನಾನು, ಹ್ಯಾರಿಸ್ ಪಾರ್ಕ್ ಹಾಗೂ ಆಂಡ್ರ್ಯೂ ಚಾರ್ಲ್‌ಟನ್ ಅವರು ಭಾರತದ ಚಾಟ್ ಹಾಗೂ ಜಿಲೇಬಿಯನ್ನು ಸವಿದೆವು. ಪ್ರಧಾನಿ ನರೇಂದ್ರ ಮೋದಿ ಅವರ ರೆಕಮಂಡೇಷನ್‌ನಂತೆ ನಾವು ಈ ತಿಂಡಿಗಳನ್ನು ಸವಿದೆವು. ರುಚಿ ಅದ್ಭುತವಾಗಿತ್ತು” ಎಂದು ಟ್ವಿಟರ್‌ನಲ್ಲಿ ಆಂಥೋನಿ ಅಲ್ಬನೀಸ್ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ
ಆಂಥೋನಿ ಅಲ್ಬನೀಸ್ ಅವರ ವಿಡಿಯೊಗೆ ಸಾವಿರಾರು ಭಾರತೀಯರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ, ತರಹೇವಾರಿ ಸಲಹೆಗಳನ್ನು ನೀಡಿದ್ದಾರೆ. “ಗೋಲ್‌ಗಪ್ಪಾ ಕೂಡ ತಿನ್ನಿ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಅದ್ಭುತ, ನಿಮ್ಮ ಈ ನಡೆಯಿಂದಾಗಿ ನಿಮ್ಮ ಮೇಲಿನ ಅಭಿಮಾನ ಇನ್ನಷ್ಟು ಜಾಸ್ತಿಯಾಗಿದೆ” ಎಂದು ಮತ್ತೊಬ್ಬರು ಹೇಳಿದ್ದಾರೆ. ಹೆಚ್ಚಿನ ಜನ ಪಾನಿ-ಪುರಿ ತಿನ್ನಬೇಕಿತ್ತು ಎಂದು ಸಲಹೆ ನೀಡಿದ್ದಾರೆ.