ಅಯೋಧ್ಯೆ: ಇಂದು (ಏಪ್ರಿಲ್ 17) ರಾಮ ನವಮಿ (Ram Navami). ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇದು ಮೊದಲ ಶ್ರೀ ರಾಮ ನವಮಿ (Ayodhya Ram Mandir). ಹೀಗಾಗಿ ಈ ಬಾರಿಯ ಹಬ್ಬ ಇನ್ನೂ ವಿಶೇಷ ಎನಿಸಿಕೊಂಡಿದೆ. ಜತೆಗೆ ರಾಮನಿಗೆ ‘ಸೂರ್ಯ ಅಭಿಷೇಕ / ಸೂರ್ಯ ತಿಲಕʼವೂ ಇಂದು ನೆರವೇರಲಿದೆ.
ಏನಿದು ಸೂರ್ಯ ತಿಲಕ ?
ಈ ಸುಂದರ ರಾಮ ವಿಗ್ರಹದ ಹಣೆಯ ಮೇಲೆ 3ರಿಂದ 5 ನಿಮಿಷಗಳ ಕಾಲ ಸೂರ್ಯನ ಕಿರಣಗಳು ಮಧ್ಯಾಹ್ನ 12. 16ಕ್ಕೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಮೊದಲ ಬಾರಿಗೆ ಬಾಲರಾಮನ ಹಣೆಯಲ್ಲಿ ಸೂರ್ಯ ತಿಲಕ ಕಂಗೊಳಿಸಲಿದ್ದು, ಇದಕ್ಕೆ ಬೇಕಾದ ವಿಶಿಷ್ಟ ವೈಜ್ಞಾನಿಕ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿ ವರ್ಷ ರಾಮ ನವಮಿಯಂದು ಈ ಚಮತ್ಕಾರ ನಡೆಯಲಿದೆ.
ಹೀಗೆ ಕಣ್ತುಂಬಿಕೊಳ್ಳಿ
‘ಸೂರ್ಯತಿಲಕ’ ಏಪ್ರಿಲ್ 17ರ ಬೆಳಗ್ಗೆ 11.58ಕ್ಕೆ ಪ್ರಾರಂಭವಾಗಲಿದೆ ಮತ್ತು ಮಧ್ಯಾಹ್ನ 12.03ರ ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ರಾಮ ಭಕ್ತರಿಗಾಗಿ ಪ್ರಸಾರ ಭಾರತಿ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದ್ದು, ಮನೆಯಲ್ಲೇ ವೀಕ್ಷಿಸಬಹುದು. ರಾಮ ನವಮಿಯಂದು ನೀವು ಮನೆಯಲ್ಲಿ ಕುಳಿತೇ ಈ ಸೂರ್ಯ ಅಭಿಷೇಕವನ್ನು ವೀಕ್ಷಿಸಬಹುದು. ಈ ಸಂಪೂರ್ಣ ಕಾರ್ಯಕ್ರಮ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಅಯೋಧ್ಯೆ ಸೇರಿದಂತೆ ಹಲವು ನಗರಗಳಲ್ಲಿ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಡಿಡಿ ನ್ಯೂಸ್ ಮತ್ತು ಡಿಡಿ ನ್ಯಾಷನಲ್ ಯೂಟ್ಯೂಬ್ ಚಾನಲ್‌ನಲ್ಲಿಯೂ ಲೈವ್ ಕವರೇಜ್ ಲಭ್ಯ. ಹೆಚ್ಚುವರಿಯಾಗಿ ಪಿವಿಆರ್ ಐನಾಕ್ಸ್, ಮಾಧ್ಯಮ ಚಾನಲ್‌ಗಳ ಸಹಯೋಗದೊಂದಿಗೆ ಭಾರತದ 70ಕ್ಕೂ ಹೆಚ್ಚು ನಗರಗಳಲ್ಲಿ ತನ್ನ 160+ ಚಿತ್ರಮಂದಿರಗಳಲ್ಲಿ ಸಮಾರಂಭವನ್ನು ನೇರ ಪ್ರಸಾರ ಮಾಡಲಿದೆ.
Surya Tilak for #RamNavmi trial has been successfully conducted in Shri Ram Janmabhoomi Mandir, #Ayodhya.#RamMandir, Jai Shri Ram 🙏🏻🚩 pic.twitter.com/fyQMIpmeX5
— Pooja Sangwan ( Modi Ka Parivar ) (@ThePerilousGirl) April 13, 2024
ಪ್ರಯೋಗ ಯಶಸ್ವಿ
ರಾಮ ನವಮಿಗೆ ಮುಂಚಿತವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಯೋಧ್ಯೆಯೊಳಗಿನ ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಎರಡನೇ ಬಾರಿ ಯಶಸ್ವಿಯಾಗಿ ಸೂರ್ಯ ತಿಲಕ ಅಥವಾ ಸೂರ್ಯಾಭಿಷೇಕವನ್ನು ನಡೆಸಿದೆ. ಈ ಹಿಂದೆ ಏಪ್ರಿಲ್ 8ರಂದು ಮೊದಲ ಬಾರಿಗೆ ಇದರ ಪ್ರಯೋಗ ನಡೆಸಲಾಗಿತ್ತು. ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ದೇವರ ಮೇಲೆ ಎರಡರಿಂದ ಎರಡೂವರೆ ನಿಮಿಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಬೀಳಲಿದೆ. ಬಳಿಕ ಮತ್ತೆ ಎರಡೂವರೆ ನಿಮಿಷ ಭಾಗಶಃ ಬೀಳುತ್ತದೆ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಗೋವಿಂದ್ ರಾವ್ ತಿಳಿಸಿದ್ದಾರೆ.
ಏನಿದು ತಂತ್ರಜ್ಞಾನ?
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಹಭಾಗಿತ್ವದಲ್ಲಿ ಒಪ್ಟಿಕಾ ಎಂಬ ಕಂಪನಿ ಈ ಯೋಜನೆಯನ್ನು ರೂಪಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಒಂದಿಷ್ಟು ನಿಮಿಷ ರಾಮನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲಿದೆ. ಇಲ್ಲಿ ಅಳವಡಿಸಲಾದ ಆಪ್ಟೋಮೆಕಾನಿಕಲ್ ಸಿಸ್ಟಮ್ ಅತಿಗೆಂಪು ಫಿಲ್ಟರ್‌ನಿಂದ ಮಾಡಲ್ಪಟ್ಟಿದೆ. ಇದಕ್ಕೆ ನಿಖರ ಮಸೂರ ಮತ್ತು ಕನ್ನಡಿಗಳನ್ನು ಬಳಸಿ ವಿಶಿಷ್ಟ ವಿನ್ಯಾಸವನ್ನು ಒದಗಿಸಲಾಗಿದೆ. ಈ ಅಂಶಗಳು ನೈಸರ್ಗಿಕ ಸೂರ್ಯನ ಬೆಳಕನ್ನು ಬಳಸಿಕೊಂಡು ದೈವಿಕ ಸಂಕೇತವಾಗಿ ತಿಲಕವನ್ನು ಉಂಟು ಮಾಡುತ್ತವೆ.
ತಜ್ಞರ ಉಪಸ್ಥಿತಿ
ಸೂರ್ಯ ತಿಲಕದ ಪ್ರಯೋಗವನ್ನು ನಡೆಸಿದ ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ತಜ್ಞರು ರಾಮ ನವಮಿಯಂದು ‘ಸೂರ್ಯ ಅಭಿಷೇಕ’ ಯಶಸ್ವಿ ನೆರವೇರಿಸಲು ಅಯೋಧ್ಯೆಯಲ್ಲೇ ಉಪಸ್ಥಿತರಿದ್ದಾರೆ. ಸಿಬಿಆರ್ ಐ ಯ ನಿರ್ದೇಶಕ ರೂರ್ಕಿ, ಪ್ರೊ. ಪ್ರದೀಪ್ ಕುಮಾರ್ ರಾಮಂಚಾರ್ಲಾ ಮತ್ತು ಪ್ರೊ. ದೇವದತ್ ಘೋಷ್ ಸೂರ್ಯ ತಿಲಕ ಯೋಜನೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!