Site icon Vistara News

Ayodhya Ram Mandir: ಯುದ್ಧಪೀಡಿತ ಉಕ್ರೇನ್‌ನಲ್ಲೂ ಮಂದಿರ ಹವಾ, ಸಾಮೂಹಿಕ ರಾಮಜಪ

ram japa ukraine

ಹೊಸದಿಲ್ಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಇಂದು ನಡೆಯುತ್ತಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹವಾ ಇತರ ಹಲವು ದೇಶಗಳಲ್ಲೂ ವ್ಯಾಪಿಸಿದೆ. ಅಮೆರಿಕ, ಇಂಗ್ಲೆಂಡ್‌ ಮಾತ್ರವಲ್ಲದೆ ಯುರೋಪಿನ ಹಲವು ದೇಶಗಳಲ್ಲೂ ರಾಮ ಧ್ವನಿ ಮೊಳಗಿದೆ. ಯುದ್ಧಗ್ರಸ್ತ ಉಕ್ರೇನ್‌ನಲ್ಲೂ ಸಾಮೂಹಿಕ ರಾಮಜಪ ಮೊಳಗಿದೆ.

ಕಳೆದ ಒಂದು ವರ್ಷದಿಂದ ರಷ್ಯಾದಿಂದ ಯುದ್ಧಪೀಡಿತವಾಗಿದ್ದ ಸಾಕಷ್ಟು ಜರ್ಝರಿತವಾಗಿರುವ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಇಂದು ಮುಂಜಾನೆ ಒಟ್ಟು ಸೇರಿ ಸಾಮೂಹಿಕವಾಗಿ ರಾಮ ಜಪ ಮಾಡಿದರು. ಉಕ್ರೇನ್ ದೇಶದ ಬುಕೋವಿನಿಯ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿರುವ ಭಾರತೀಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಒಂದು ಕಡೆ ಸೇರಿ, ರಾಮನ ಫೋಟೋ ಇಟ್ಟು, ಶ್ರೀರಾಮ ಚರಿತ ಮಾನಸ ಪಠಣ ಮಾಡಿದರು.

ಸತತ 40 ಗಂಟೆಗಳ ಕಾಲ ಶ್ರೀರಾಮ ಚರಿತ ಮಾನಸ ಪಠಣ ಮಾಡಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಸಂತ ತುಳಸೀದಾಸರು ರಚಿಸಿರುವ ರಾಮಚರಿತ ಮಾನಸ ಉತ್ತರ ಭಾರತದಲ್ಲಿ ವ್ಯಾಪಕವಾಗಿ ಪಠಣ ಮಾಡಲ್ಪಡುತ್ತದೆ. ಉಕ್ರೇನ್‌ನಲ್ಲಿ ಮೆಡಿಕಲ್‌ ಓದುತ್ತಿರುವ ಕರ್ನಾಟಕ, ಹಿಮಾಚಲ, ರಾಜಸ್ಥಾನ, ಗುಜರಾತ್, ಬಿಹಾರ್ ಸೇರಿದಂತೆ ದೇಶದ ನಾನಾ ರಾಜ್ಯಗಳ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರೂ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಒಂದಾಗಿದ್ದಾರೆ.

ಅಮೆರಿಕದಲ್ಲಿರುವ ನೂರಾರು ದೇವಾಲಯಗಳಲ್ಲಿ ರಾಮಜಪ, ಶ್ರೀರಾಮನಿಗೆ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಭಾರತೀಯ ಹಿಂದೂ ಸಮುದಾಯದವರೆಲ್ಲ ಒಟ್ಟಾಗುತ್ತಿದ್ದು, ಪೂಜೆ ಅಭಿಷೇಕಗಳನ್ನು ಏರ್ಪಡಿಸಿದ್ದಾರೆ. ಇಂಗ್ಲೆಂಡ್‌ನಲ್ಲಿಯೂ ನೂರಾರು ದೇವಾಲಯಗಳಿದ್ದು, ಇಂದು ಮುಂಜಾನೆಯಿಂದಲೇ ವಿಶೇಷ ರಾಮನಾಮ ಸ್ಮರಣೆ, ಅಭಿಷೇಕ ಇತ್ಯಾದಿಗಳನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: Ayodhya Ram Mandir: ಹಳೆಯ ರಾಮ ಲಲ್ಲಾ ಮೂರ್ತಿ ಏನಾಗಲಿದೆ? ಇನ್ನೆರಡು ಮೂರ್ತಿಗಳ ಕತೆ ಏನು?

Exit mobile version