Site icon Vistara News

World Bank ಮುಖ್ಯಸ್ಥನ ಸ್ಥಾನಕ್ಕೆ ಭಾರತೀಯ ಮೂಲದ ಬಂಗಾ ಅವರನ್ನು ನಾಮಿನೇಟ್ ಮಾಡಿದ ಅಮೆರಿಕದ ಅಧ್ಯಕ್ಷ ಬೈಡೆನ್

Indian-Origin Ajay Banga Set To Become World Bank President

ವಾಷಿಂಗ್ಟನ್, ಅಮೆರಿಕ: ವಿಶ್ವ ಬ್ಯಾಂಕಿನ (World Bank) ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರು ತಮ್ಮ ಹುದ್ದೆಯಿಂದ ಕೆಳಗೆ ಇಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ (USA President) ಜೋ ಬೈಡೆನ್ (Joe Biden) ಅವರು, ಮಾಸ್ಟರ್‌ಕಾರ್ಡ್ ಕಂಪನಿಯ ಮಾಜಿ ಸಿಇಒ ಆಗಿರುವ ಭಾರತೀಯ ಮೂಲದ ಅಜಯ್ ಬಂಗಾ (Ajay Banga) ಅವರನ್ನು ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮಿನೇಟ್ ಮಾಡಿದ್ದಾರೆ. ಬಹುತೇಕ ಬಂಗಾ ಅವರೇ ವರ್ಲ್ಡ್ ಬ್ಯಾಂಕ್ ಅಧ್ಯಕ್ಷರಾಗುವುದು ಖಚಿತವಾಗಿದೆ. ಇಷ್ಟಾಗಿಯೂ ಈ ಬಾರಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಅರ್ಜಿಗಳ ಸ್ವೀಕಾರ ಪ್ರಕ್ರಿಯೆಯನ್ನು ಬ್ಯಾಂಕ್ ಆರಂಭಿಸಿದ್ದು, ಈ ಪ್ರಕ್ರಿಯೆ ಮಾರ್ಜ್ 29ರ ತನಕವೂ ನಡೆಯಲಿದೆ. ಬ್ಯಾಂಕ್ ಪ್ರಕಾರ, ಈ ಬಾರಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಸಾಮಾನ್ಯವಾಗಿ ಟಿಪಿಕಲ್ ಅಮೆರಿಕನ್ನರೇ ವರ್ಲ್ಡ್ ಬ್ಯಾಂಕ್ ಅಧ್ಯಕ್ಷರಾಗುತ್ತಾರೆ. ಮತ್ತೊಂದೆಡೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌)ಗೆ ಯುರೋಪಿಯನ್ ಮುಖ್ಯಸ್ಥರಾಗಿರುತ್ತಾರೆ.

ಇದನ್ನೂ ಓದಿ: World Bank | ವಿಶ್ವ ಬ್ಯಾಂಕಿನಿಂದ ಗುಜರಾತ್‌ಕ್ಕೆ 2,832 ಕೋಟಿ ರೂ. ಸಾಲ!

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬಂಗಾ ಅವರನ್ನು ನಾಮಿನೇಟ್ ಮಾಡಿರುವುದರಿಂದ ಈ ಬಾರಿ ಅಮೆರಿಕನ್ ಹೊರತಾದ ವ್ಯಕ್ತಿ ಅಧ್ಯಕ್ಷರಾಗಬಹುದು. 63 ವರ್ಷದ ಬಂಗಾ ಸದ್ಯ ಇಕ್ವಿಟಿ ಫರ್ಮ್ ಜನರಲ್ ಅಂಟ್ಲಾಟಿಕ್‌ನ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅವರು ಮಾಸ್ಟರ್‌ಕಾರ್ಡ್ ಸಿಇಒ ಆಗಿದ್ದರು.

Exit mobile version