ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಸಭೆ (G20Summit) ಮಧ್ಯೆಯೇ ಭಾರತ ಸೇರಿ ಒಕ್ಕೂಟದ ರಾಷ್ಟ್ರಗಳ ನಾಯಕರು ಮ್ಯಾಂಗ್ರೋವ್ ಕಾಡಿಗೆ ತೆರಳಿ ಸಸಿ ನೆಟ್ಟಿದ್ದಾರೆ. ಅರಣ್ಯಕ್ಕೆ ಭೇಟಿ ನೀಡಿದ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿ (Biden Salutes Modi) ಅವರಿಗೆ ಸೆಲ್ಯೂಟ್ ಮಾಡಿದ್ದು, ಈ ಫೋಟೊ ಈಗ ವೈರಲ್ ಆಗಿದೆ.
ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿದ ವೇಳೆ ಮೋದಿ ಕುಳಿತಿದ್ದನ್ನು ಕಂಡ ಬೈಡೆನ್ ಸೆಲ್ಯೂಟ್ ಮಾಡಿದ್ದಾರೆ. ಇದಕ್ಕೆ ಕೂಡಲೇ ಮೋದಿ ಅವರು ಬೈಡೆನ್ ಅವರತ್ತ ಕೈ ಬೀಸಿದ್ದಾರೆ. ಈ ಫೋಟೊ ಜಾಲತಾಣದಲ್ಲಿ ವೈರಲ್ ಆಗಿದೆ. ಜಾಗತಿಕ ವೇದಿಕೆಗಳಲ್ಲಿ ಮೋದಿ ಕಂಡ ಕೂಡಲೇ ಜೋ ಬೈಡೆನ್ ಅವರು ಅವರ ಬಳಿ ತೆರಳಿ ಮಾತನಾಡುತ್ತಾರೆ. ಅಷ್ಟರಮಟ್ಟಿಗೆ ಇಬ್ಬರ ಮಧ್ಯೆ ಉತ್ತಮ ಬಾಂಧವ್ಯವಿದೆ.
ಕಳೆದ ಜೂನ್‌ನಲ್ಲಿ ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆಯೂ ಬೈಡೆನ್ ಅವರು ಮೋದಿ ಅವರ ಬಳಿ ಬಂದು ಮಾತನಾಡಿಸಿದ್ದರು. ಜಿ20 ಸಭೆಯ ವೇಳೆಯೂ ಮೋದಿ ಕುಳಿತ ಜಾಗಕ್ಕೇ ಬಂದು ಬೈಡೆನ್ ಕೈ ಕುಲುಕಿದ್ದರು. ಬಾಲಿಯಲ್ಲಿ ನಡೆಯುತ್ತಿರುವ ಜಿ20 ಸಭೆಯು ಮಂಗಳವಾರ ಮುಗಿಯಲಿದೆ. ಸಭೆಯ ಮಧ್ಯೆಯೇ ಅನಿವಾಸಿ ಭಾರತೀಯರನ್ನು ಕೂಡ ಮೋದಿ ಭೇಟಿಯಾಗಿದ್ದಾರೆ.
ಇದನ್ನೂ ಓದಿ | G20 Summit | ಇಂಡೋನೇಷ್ಯಾದಲ್ಲಿ ವಿಶ್ವ ನಾಯಕರ ಜತೆ ಮೋದಿ ಮಾತುಕತೆ, ಇಲ್ಲಿವೆ ಪ್ರಮುಖ ಫೋಟೊಗಳು