Site icon Vistara News

Bihar Cabinet: ಬಿಜೆಪಿ ಜತೆ ಸರ್ಕಾರ ರಚನೆ ಬೆನ್ನಲ್ಲೇ ನಿತೀಶ್‌ ಸಂಪುಟ ವಿಸ್ತರಣೆ; ಇಲ್ಲಿದೆ ಪಟ್ಟಿ

Nitish Kumar

Bihar Cabinet: CM Nitish Kumar Keeps Home, Deputy Samrat Gets Finance, Health & Sports

ಪಟನಾ: ಬಿಹಾರದಲ್ಲಿ ಆರ್‌ಜೆಡಿ ಜತೆಗಿನ ಮಹಾಘಟನಬಂಧನ ಮುರಿದುಕೊಂಡು (Bihar Politics) ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿರುವ ನಿತೀಶ್‌ ಕುಮಾರ್‌ (Nitish Kumar) ಅವರು ಸಚಿವ ಸಂಪುಟ ಪುನರ್‌ರಚನೆ (Bihar Cabinet) ಮಾಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರು ಗೃಹ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡರೆ, ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿಗೆ ಅವರಿಗೆ ಹಣಕಾಸು, ಆರೋಗ್ಯ ಹಾಗೂ ಕ್ರೀಡಾ ಖಾತೆ ನೀಡಿದ್ದಾರೆ. ಒಟ್ಟು ಒಂಬತ್ತು ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ನಿತೀಶ್‌ ಕುಮಾರ್‌ ಅವರು ಗೃಹ ಖಾತೆ ಜತೆಗೆ ಸಂಪುಟ ಕಾರ್ಯದರ್ಶಿ, ಚುನಾವಣೆ, ವಿಜಿಲನ್ಸ್‌, ಸಾಮಾನ್ಯ ಆಡಳಿತ ಸೇರಿ ಹಲವು ಖಾತೆಗಳನ್ನು ತಮ್ಮ ಬಳಿಯಲ್ಲೇ ಇಟ್ಟುಕೊಂಡಿದ್ದಾರೆ. ಸಾಮ್ರಾಟ್‌ ಚೌಧರಿಗೆ ಅವರಿಗೆ ಹಣಕಾಸು ಜತೆಗೆ ವಾಣಿಜ್ಯ ತೆರಿಗೆ, ನಗರಾಭಿವೃದ್ಧಿ, ವಸತಿ, ಪಂಚಾಯತ್‌ ರಾಜ್‌, ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಖಾತೆ ನೀಡಲಾಗಿದೆ. ಮತ್ತೊಬ್ಬ ಉಪ ಮುಖ್ಯಮಂತ್ರಿ ವಿಜಯ್‌ ಕುಮಾರ್‌ ಸಿನ್ಹಾ ಅವರಿಗೆ ಕೃಷಿ, ರಸ್ತೆ, ಆದಾಯ, ಭೂ ಸುಧಾರಣೆಗಳು, ಗಣಿ, ಕಾರ್ಮಿಕ ಸಂಪನ್ಮೂಲ ಸೇರಿ ಹಲವು ಖಾತೆಗಳನ್ನು ನೀಡಲಾಗಿದೆ.

ಆರ್‌ಜೆಡಿ, ಕಾಂಗ್ರೆಸ್‌ ಜತೆಗೂಡಿ ಮಹಾಘಟಬಂಧನ ರಚಿಸಿದ್ದ ನಿತೀಶ್‌ ಕುಮಾರ್‌ ಅವರು ಒಂದೂವರೆ ವರ್ಷ ಆಡಳಿತ ನಡೆಸಿದ್ದರು. ಬಿಜೆಪಿಯನ್ನು ಸೋಲಿಸುವ ದೃಷ್ಟಿಯಿಂದ ಇಂಡಿಯಾ ಒಕ್ಕೂಟ ರಚಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಆದರೆ, ನಿತೀಶ್‌ ಕುಮಾರ್‌ ಅವರು ಅಚ್ಚರಿಯ ರೀತಿಯಲ್ಲಿ ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದ್ದಾರೆ. ಜನವರಿ 28ರಂದು ಅವರು 9ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪ್ರಬಲ

ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಮೈತ್ರಿಕೂಟ ಸೇರಿದ ಕಾರಣ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾದಂತಾಗಿದೆ. ಛತ್ತೀಸ್‌ಗಢ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈಗ ಬಿಹಾರ ಕೂಡ ಎನ್‌ಡಿಎ ಮೈತ್ರಿಕೂಟದ ಆಡಳಿತಕ್ಕೆ ಒಳಪಟ್ಟಿದೆ. ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತಿದ್ದಾರೆ.

ಇದನ್ನೂ ಓದಿ: Nitish Kumar: ಬಿಜೆಪಿ ಮೈತ್ರಿ ಬಿಡೋ ಪ್ರಶ್ನೆಯೇ ಇಲ್ಲ; ನಿತೀಶ್‌ ಕುಮಾರ್ ಶಪಥ‌

ಹಿಂದಿ ಭಾಷಿಕ ರಾಜ್ಯಗಳ ಒಟ್ಟು 218 ಲೋಕಸಭೆ ಕ್ಷೇತ್ರಗಳ ಪೈಕಿ ಈಗ 170 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರೇ ಇದ್ದಾರೆ. ಬಿಹಾರದಲ್ಲಿ ಬಿಜೆಪಿ 17 ಕ್ಷೇತ್ರಗಳನ್ನು ಹೊಂದಿದ್ದರೂ ಎನ್‌ಡಿಎ ಮೈತ್ರಿಕೂಟದ 39 ಸಂಸದರು (ಬಿಜೆಪಿ 17, ಆರ್‌ಜೆಡಿ 16, ಎಲ್‌ಜೆಪಿ 6) ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮಾತ್ರವಲ್ಲ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪರ ಒಲವಿದೆ. ರಾಜ್ಯಗಳಲ್ಲೂ ಬಿಜೆಪಿ ಆಡಳಿತವಿರುವ ಕಾರಣ ಲೋಕಸಭೆ ಚುನಾವಣೆ ಗೆಲ್ಲಲು ಈ ರಾಜ್ಯಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎನ್ನಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version