ನವ ದೆಹಲಿ: ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ಹಲವಾರು ಆರೋಪ ಮಾಡಿದ್ದರೂ ನಾವು ಅವರ ವಿರುದ್ಧ ಯಾವುದೇ ಆರೋಪ ಮಾಡಲು ಹೋಗುವುದಿಲ್ಲ. ಆದರೆ ನಿತೀಶ್ ಕುಮಾರ್ ಅವರನ್ನು ಮತ್ತು ಅವರ ಈ ನಿರ್ಧಾರವನ್ನು ಪ್ರಶ್ನೆ ಮಾಡುತ್ತೇವೆ ಎಂದು ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಬಿಹಾರದಲ್ಲಿನ ಬೆಳವಣಿಗೆಗಳ ಕುರಿತು ಪಕ್ಷದ ಅಧಿಕೃತ ಪ್ರತಿಕ್ರಿಯೆ ನೀಡಲು ಪತ್ರಿಕಾಗೋಷ್ಠಿ ನಡೆಸಿದ ಅವರು ಸೌಮ್ಯ ಮಾತುಗಳಲ್ಲೇ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಬಿಹಾರದ ಮತದಾರರು ನಿಮ್ಮನ್ನೆಂದೂ ಕ್ಷಮಿಸಲಾರರು ಎಂದು ನಿತೀಶ್ ಕುಮಾರ್ ಅವರನ್ನು ಎಚ್ಚರಿಸಿದ್ದಾರೆ.
ನೀವು ಮೋದಿಯ ಹೆಸರಿನಲ್ಲಿ ಗೆದ್ದಿದ್ದೀರಿ ಎಂಬುದನ್ನು ಮರೆಯಬೇಡಿ ಎಂದು ನಿತೀಶ್ ಕುಮಾರ್‌ಗೆ ಹೇಳಿದ ರವಿಶಂಕರ್ ಪ್ರಸಾದ್, ಅವರು ಸದಾ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಅವರ ಈ ಮಾತುಗಳು ಈಗ ಅಂತ್ಯಗೊಂಡಂತಾಗಿದೆ ಎಂದು ಕುಟುಕಿದರು.
ನಿತೀಶ್ ಕುಮಾರ್ ಬಿಜೆಪಿಯು ತಮ್ಮ ಪಕ್ಷವನ್ನು ನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯು ಅವರನ್ನು ಅಲವಾರು ಬಾರಿ ಕೇಂದ್ರ ಸಚಿವರನ್ನಾಗಿ ಮಾಡಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿಸಿತು. 2015ರಲ್ಲಿ ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ನಿತೀಶ್ ಕುಮಾರ್ 2017ರಲ್ಲಿ ಬಿಜೆಪಿಯೊಂದಿಗೆ ಮರಳಿ ಕೈಜೋಡಿಸಿದ್ದೇಕೆ ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದರು.
ಇದನ್ನೂ ಓದಿ| Bihar Politics | ಅಸ್ತಿತ್ವಕ್ಕೆ ಬಂದ ಮಹಾಘಟ್ ಬಂಧನ್ ಸರ್ಕಾರ; ನಾಳೆ ಮಧ್ಯಾಹ್ನ 2 ಗಂಟೆಗೆ ಪ್ರಮಾಣ